Bigg Boss 8 Kannada: ಬಿಗ್​ ಬಾಸ್​ ಮನೆಯಲ್ಲಿ ಕ್ಯಾಪ್ಟನ್​ ಬಿಟ್ಟು ಉಳಿದವರೆಲ್ಲ ಮತ್ತೆ ನಾಮಿನೇಟ್ ಆದ್ರು..!

Bigg Boss Kannada Season 8: ಮೊನ್ನೆ ನಡೆದಿರುವ ಮಿಡ್ ನೈಟ್ ಎಲಿಮಿನೇಷನ್ ನಂತರ ಬಿಗ್ ಬಾಸ್ ಮನೆಯಲ್ಲಿ ಎಲ್ಲರೂ ಕೊಂಚ ನೆಮ್ಮದಿಯಿಂದ ಉಸಿರು ಬಿಡುವಷ್ಟರಲ್ಲೇ ಮತ್ತೊಂದು ಶಾಕ್​ ಕಾದಿತ್ತು. ಹೌದು, ಮನೆಯ ಕ್ಯಾಪ್ಟನ್ ಅವರನ್ನು ಬಿಟ್ಟು ಉಳಿದವರನ್ನೆಲ್ಲ ಬಿಗ್​ ಬಾಸ್​ ನೇರವಾಗಿ ನಾಮಿನೇಟ್ ಮಾಡಿದ್ದಾರೆ.

ಚಕ್ರವರ್ತಿ ಹೊರ ಹೋದ ದಿನವೇ ನಡೆಯಿತು ನಾಮಿನೇಷನ್ ಪ್ರಕ್ರಿಯೆ

ಚಕ್ರವರ್ತಿ ಹೊರ ಹೋದ ದಿನವೇ ನಡೆಯಿತು ನಾಮಿನೇಷನ್ ಪ್ರಕ್ರಿಯೆ

 • Share this:
  ಬಿಗ್ ಬಾಸ್​ ಕನ್ನಡ ಸೀಸನ್​ 8ರ ಗ್ರ್ಯಾಂಡ್​ ಫಿನಾಲೆಗೆ ಇನ್ನು ಕೆಲವೇ ಕೆಲವು ದಿನಗಳು ಬಾಕಿ ಇವೆ. ದಿನದಿಂದ ದಿನಕ್ಕೆ ಮನೆಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗುತ್ತಿದೆ. ಎಲ್ಲರೂ ತಮ್ಮ ತಮ್ಮ ಆಟ ಆಡಲಾರಂಭಿಸಿದ್ದಾರೆ. ಎಲ್ಲರಿಗೂ ಮನೆಯಲ್ಲಿ ಉಳಿದುಕೊಳ್ಳುವ ಆಸೆ. ಅದಕ್ಕಾಗಿಯೇ  ಪ್ರತಿಯೊಬ್ಬರೂ ಪ್ರಯತ್ನಿಸುತ್ತಿದ್ದಾರೆ. ಇದರ ನಡುವೆಯೇ ಮನೆಯಲ್ಲಿ ನಡೆಯುತ್ತಿದ್ದ ಚಟುವಟಿಕೆಗಳು ಹಾಗೂ ನಾಮಿನೇಷನ್ ಪ್ರಕ್ರಿಯೆಯಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಲಾಗಿದೆ.ಕಳೆದ ವಾರಾಂತ್ಯ ನಡೆಯಬೇಕಿದ್ದ ಎಲಿಮಿನೇಷನ್​ ಅನ್ನು ವಾರದ ನಡುವೆ ಮಾಡಲಾಯಿತು. ಮೊನ್ನೆ ಮಧ್ಯರಾತ್ರಿ ಬಿಗ್ ಬಾಸ್ ಮನೆಯಲ್ಲಿ ನಡೆದ ಮಿಡ್​ ನೈಟ್ ಎಲಿಮಿನೇಷನ್​ನಲ್ಲಿ ಚಕ್ರವರ್ತಿ ಚಂದ್ರಚೂಡ ಮನೆಯಿಂದ ಹೊರ ಬಂದಿದ್ದಾರೆ. 

  ಮನೆಯಲ್ಲಿ ಉಳಿದಿದ್ದ 9 ಮಂದಿ ಸ್ಪರ್ಧಿಗಳಲ್ಲಿ ಈಗ ಒಬ್ಬರು ಮನೆಯಿಂದ ಹೊರ ಬಂದಿದ್ದಾರೆ. ಫಿನಾಲೆಗೆ ಇವರಲ್ಲಿ ಕೇವಲ ಐದು ಜನರು ಬರಲಿದ್ದಾರೆ. ಮನೆಯ ಕ್ಯಾಪ್ಟನ್ ಆಗಿರುವ ದಿವ್ಯಾ ಉರುಡುಗ ಈ ವಾರಾಂತ್ಯದ ಎಲಿಮಿನೇಷನ್​ನಿಂದ ಪಾರಾಗಿದ್ದಾರೆ. ಅಂದರೆ ಶನಿವಾರದವರೆಗಿನ ಎಲಿಮಿನೇಷನ್​ನಲ್ಲಿ ದಿವ್ಯಾ ಅವರ ಹೆಸರು ಇರುವುದಿಲ್ಲ ಎಂದು ಬಿಗ್ ಬಾಸ್​ ಹೇಳಿದ್ದಾರೆ. ಅಂದರೆ ಶನಿವಾರದ ನಂತರ ನಡೆಯಲಿರುವ ಎಲಿಮಿನೇಷನ್​ ಬಗ್ಗೆ ಪರೋಕ್ಷವಾಗಿ ಸುಳಿವು ನೀಡಿದ್ದಾರೆ.
  ಕ್ಯಾಪ್ಟನ್​ ಬಿಟ್ಟು ಉಳಿದವರೆಲ್ಲ ಆದ್ರು ನಾಮಿನೇಟ್​ 

  ಮೊನ್ನೆ ನಡೆದಿರುವ ಮಿಡ್ ನೈಟ್ ಎಲಿಮಿನೇಷನ್ ನಂತರ ಬಿಗ್ ಬಾಸ್ ಮನೆಯಲ್ಲಿ ಎಲ್ಲರೂ ಕೊಂಚ ನೆಮ್ಮದಿಯಿಂದ ಉಸಿರು ಬಿಡುವಷ್ಟರಲ್ಲೇ ಮತ್ತೊಂದು ಶಾಕ್​ ಕಾದಿತ್ತು. ಹೌದು, ಮನೆಯ ಕ್ಯಾಪ್ಟನ್ ಅವರನ್ನು ಬಿಟ್ಟು ಉಳಿದವರನ್ನೆಲ್ಲ ಬಿಗ್​ ಬಾಸ್​ ನೇರವಾಗಿ ನಾಮಿನೇಟ್ ಮಾಡಿದ್ದಾರೆ. ಇದರಲ್ಲಿ ಶುಭಾ ಪೂಂಜಾ ಕಳೆದ ವಾರ ಟಾಸ್ಕ್​ನಲ್ಲಿ ಸೋಲುವ ಮೂಲಕ ಆಗಲೇ ಈ ವಾರಕ್ಕೆ ನೇರವಾಗಿ ನಾಮಿನೇಟ್ ಆಗಿದ್ದರು.

  ಇದನ್ನೂ ಓದಿ: ಜಾಕ್ವೆಲಿನ್ ಫಸ್ಟ್​ ಲುಕ್​: ಈ ನಟಿಗಾಗಿ ಐದು ಕೋಟಿ ಖರ್ಚು ಮಾಡಿದ ವಿಕ್ರಾಂತ್​ ರೋಣ ಚಿತ್ರತಂಡ

  ಇನ್ನು ಈ ವಾರ ಮನೆಯಿಂದ ಮೂರು ಮಂದಿ ಸ್ಪರ್ಧಿಗಳು ಎಲಿಮಿನೇಟ್ ಆಗಲಿದ್ದಾರೆ ಎಂದೂ ಹೇಳಲಾಗುತ್ತಿದೆ. ಇದು ಯಾವಾಗ ಹಾಗೂ ಹೇಗೆ ಅನ್ನೋದು ಮಾತ್ರ ಇನ್ನು ರಹಸ್ಯವಾಗಿದೆ. ಈಗ ಮನೆಯಲ್ಲಿ ಎಲಿಮಿನೇಷನ್​ ಸಹ ಕುತೂಹಲ ಕೆರಳಿಸಿದೆ. ಯಾರು-ಯಾವಾಗ ಹಾಗೂ ಹೇಗೆ ಹೊರ ನಡೆಯಲಿದ್ದಾರೆ ಅನ್ನೋದು ಪ್ರೇಕ್ಷಕರಲ್ಲಿರುವ ಕುತೂಹಲವನ್ನು ಹೆಚ್ಚಿಸಿದೆ.

  ಎಲಿಮಿನೇಟ್ ಆದ ಚಕ್ರವರ್ತಿ

  ಚಕ್ರವರ್ತಿ ಚಂದ್ರಚೂಡ ಅವರು ಕಡೆಯ ಎಲಿಮಿನೇಷನ್ ಪ್ರಕ್ರಿಯೆ ನಡೆದಾಗ ಪ್ರಿಯಾಂಕಾ ತಿಮ್ಮೇಶ್ ಅವರ ಜೊತೆ ಅಸಭ್ಯವಾಗಿ ವರ್ತಿಸಿದ್ದರು. ಪ್ರಿಯಾಂಕಾ ತಿಮ್ಮೇಶ್​ ಮನೆಯಿಂದ ಹೊರ ಹೋಗುವಾಗ ಸಿಕ್ಕಿದ್ದ ವಿಶೇಷ ಅಧಿಕಾರ ಚಕ್ರವರ್ತಿ ಚಂದ್ರಚೂಡ ಅವರನ್ನು ಮನೆಯಿಂದ ಮುಂದಿನ ವಾರ ಹೊರ ಹೋಗಲು ನೇರವಾಗಿ ನಾಮಿನೇಟ್​ ಮಾಡಿದ್ದರು.

  ಪ್ರಿಯಾಂಕಾ ನಾಮಿನೇಟ್ ಮಾಡುತ್ತಿದ್ದಂತೆಯೇ ಚಕ್ರವರ್ತಿ ಅವರು ಪ್ರಿಯಾಂಕಾ ತಿಮ್ಮೇಶ್ ಅವರಿಗೆ ಮಧ್ಯದ ಬೆರಳು ತೋರಿಸುತ್ತಾರೆ. ಚಕ್ರವರ್ತಿ ಅವರ ಈ ವರ್ತನೆಗೆ ಆಕ್ರೋಶ ವ್ಯಕ್ತವಾಗಿತ್ತು. ಇದರಿಂದಾಗಿ ತುಂಬಾ ಜನ ನೆಟ್ಟಿಗರು ಚಕ್ರವರ್ತಿ ಅವರನ್ನು ಬಿಗ್ ಬಾಸ್​ ಮನೆಯಿಂದ ಹೊರ ಹಾಕಿ ಎಂದು ಆಗರಹಿಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ಸುದೀಪ್ ಹಾಗೂ ಕಾರ್ಯಕ್ರಮದ ನಿರ್ಮಾಪಕರಿಗೆ ಟ್ಯಾಗ್ ಮಾಡುವ ಮೂಲಕ ಚಕ್ರವರ್ತಿ ಅವರನ್ನು ಮನೆಯಿಂದ ಹೊರ ಹಾಕಿ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು.

  ಇದನ್ನೂ ಓದಿ: Alia Bhatt: ರಣಬೀರ್ ಕಪೂರ್​ರನ್ನು ಮಿಸ್​ ಮಾಡಿಕೊಳ್ಳುತ್ತಿರುವ ಆಲಿಯಾ ಭಟ್​ ಮಾಡಿದ್ದೇನು ಗೊತ್ತಾ..?

  ನಂತರ ಕಳೆದ ವಾರ ಸುದೀಪ್ ಸಹ ಚಕ್ರವರ್ತಿ ಅವರನ್ನು ಸರಿಯಾಗಿಯೇ ತರಾಟೆಗೆ ತೆಗೆದುಕೊಂಡಿದ್ದರು. ಸುದೀಪ್ ಅವರು ಕ್ಲಾಸ್ ತೆಗೆದುಕೊಂಡ ನಂತರ ಅಂದರೆ ನಿನ್ನೆಯ ಸಂಚಿಕೆಯಲ್ಲಿ ಚಕ್ರವರ್ತಿ ಅವರು ಕ್ಯಾಮೆರಾ ಮುಂದೆ ಬಂದು ತಲೆ ಬಗ್ಗಿಸಿ ಪ್ರಿಯಾಂಕಾ ಬಳಿ ಕ್ಷಮೆ ಯಾಚಿಸುತ್ತಾರೆ. ಆದರೂ ಸಹ ಚಕ್ರವರ್ತಿ ಅವರು ಮನೆಯಿಂದ ಹೊರ ಬಂದಿದ್ದಾರೆ. ಈ ಸಲ ಅವರಿಗೆ ಕಡಿಮೆ ಮತ ಸಿಗಲು ಇದೇ ಪ್ರಮುಖ ಕಾರಣ ಎಂದೂ ಹೇಳಲಾಗುತ್ತಿದೆ.
  Published by:Anitha E
  First published: