Bigg Boss 8 Elimination: ಬಿಗ್​ ಬಾಸ್​ ಮನೆಯಲ್ಲಿ ಮಿಡ್​ ನೈಟ್​ ಎಲಿಮಿನೇಷನ್​: ಕಣ್ಣೀರಿಟ್ಟ ಪ್ರಶಾಂತ್ ಸಂಬರಗಿ..!

Bigg Boss Kannada Season 8: ಎಲಿಮಿನೇಷನ್​ಗೆ ಟ್ವಿಸ್ಟ್ ಕೊಟ್ಟ ಬಿಗ್ ಬಾಸ್​ ವಾರದ ಮಧ್ಯದಲ್ಲಿ ಈ ಎಲಿಮಿನೇಷನ್ ನಡೆಯಲಿದೆ ಎಂದಿದ್ದರು. ಈಗಾಗಲೇ ನಾಮಿನೇಟ್ ಆಗಿರುವ ಈ ಐವರಲ್ಲಿ ಒಬ್ಬರು ಮನೆಯಿಂದ ಹೊರ ಬಂದಿದ್ದಾರೆ. ಮಧ್ಯ ರಾತ್ರಿ ನಡೆದಿರುವ ಎಲಿಮಿನೇಷನ್​ನಲ್ಲಿ ಒಬ್ಬರನ್ನು ಎಲಿಮಿನೇಟ್​ ಮಾಡಲಾಗಿದೆ.

ಪ್ರಶಾಂತ್​ ಸಂಬರಗಿ ಹಾಗೂ ದಿವ್ಯಾ ಉರುಡುಗ

ಪ್ರಶಾಂತ್​ ಸಂಬರಗಿ ಹಾಗೂ ದಿವ್ಯಾ ಉರುಡುಗ

  • Share this:
ಬಿಗ್​ ಬಾಸ್ ಕನ್ನಡ ಸೀಸನ್​ 8ರ ಗ್ರ್ಯಾಂಡ್​ ಫಿನಾಲೆಗೆ ಕೆಲವು ದಿನಗಳು ಬಾಕಿ ಇವೆ. ಮನೆಯಲ್ಲಿ ಎಲಿಮಿನೇಷನ್ ಟೆನ್ಷನ್​ ಕೊಂಚ ಹೆಚ್ಚಾಗಿಯೇ ಇದೆ. ನಾಮಿನೇಟ್​ ಆಗಿರುವ ಐದು ಮಂದಿಯಲ್ಲಿ ಶುಭಾ ಪೂಂಜಾ ಮಾತ್ರ ಹೊರ ಹೋಗುವುದರ ಬಗ್ಗೆ ಯೋಚಿಸದೆ ಆರಾಮಾಗಿ ಸುದೀಪ್​ ಅವರು ಹೇಳಿದಂತೆ ಮನೆತಯಲ್ಲಿರುವ ಪ್ರತಿ ಕ್ಷಣವನ್ನೂ ಎಂಜಾಯ್​ ಮಾಡುತ್ತಾ ಜೀವಿಸುತ್ತಿದ್ದಾರೆ. ಇನ್ನು ಉಳಿದವರು ಯಾವಾಗ ಏನಾಗುತ್ತದೆಯೋ, ಯಾವ ಬಿಗ್​ ಬಾಸ್​ ಕಾಲ್​ ಮಾಡಿ ಏನು ಹೇಳುತ್ತಾರೋ ಅಂತ ಆತಂಕದಲ್ಲೇ ಇದ್ದಾರೆ. ಇನ್ನು ಬಿಗ್ ಬಾಸ್​ ಮನೆಯಲ್ಲಿರುವ ಫೋನ್​ ಬೂತ್​ನಿಂದ ಟ್ರಿಣ್​ ಟ್ರಿಣ್​ ಸದ್ದು ಬಂದರೆ ಸಾಕು ಸ್ಪರ್ಧಿಗಳ ಎದೆ ಬಡಿತ ಜೋರಾಗುತ್ತದೆ. ಇನ್ನು ಬಿಗ್ ಬಾಸ್​ ಮನೆಯಲ್ಲಿ ಈ ಹಿಂದೆ ನಡೆಯುತ್ತಿದ್ದ ಟಾಸ್ಕ್​ ಹಾಗೂ ಆ್ಯಕ್ಟಿವಿಟಿಗಳು ಈಗ ಕಡಿಮೆಯಾಗಿವೆ. ನಿನ್ನೆ ಕೇವಲ ನಾಮಿನೇಟ್​ ಆಗಿರುವ ಸ್ಪರ್ಧಿಗಳ ಮೂಡ್​ ಸರಿ ಮಾಡಲು ತಮಾಷೆಗಾಗಿ ಒಂದು ಚಟುವಟಿಕೆಯನ್ನು ಮಾಡಿಸಲಾಗಿತ್ತು. 

ಇದರ ನಡುವೆಯೇ ಬಿಗ್ ಬಾಸ್​ ಮನೆಯಲ್ಲಿ ಎಲಿಮಿನೇಷನ್​ ನಡೆದೆಉ ಹೋಗಿದೆ. ಬಿಗ್ ಬಾಸ್​ ಮನೆಯಲ್ಲಿ ಈಗ ಒಟ್ಟು 9 ಮಂದಿ ಸ್ಪರ್ಧಿಗಳಿದ್ದಾರೆ. ಇವರಲ್ಲಿ ಐವರು ನಾಮಿನೇಟ್ ಆಗಿದ್ದಾರೆ. ಅವರೇ ಪ್ರಶಾಂತ್ ಸಂಬರಗಿ, ಶುಭಾ ಪೂಂಜಾ, ಶಮಂತ್​ ಗೌಡ, ದಿವ್ಯಾ ಉರುಡುಗ ಹಾಗೂ ಚಕ್ರವರ್ತಿ ಚಂದ್ರಚೂಡ. ಇವರಲ್ಲಿ ಒಬ್ಬರು ಕಳೆದ ವಾರಾಂತ್ಯದಲ್ಲೇ ಎಲಿಮಿನೇಟ್ ಆಗಬೇಕಿತ್ತು.


ಆದರೆ, ಎಲಿಮಿನೇಷನ್​ಗೆ ಟ್ವಿಸ್ಟ್ ಕೊಟ್ಟ ಬಿಗ್ ಬಾಸ್​ ವಾರದ ಮಧ್ಯದಲ್ಲಿ ಈ ಎಲಿಮಿನೇಷನ್ ನಡೆಯಲಿದೆ ಎಂದಿದ್ದರು. ಈಗಾಗಲೇ ನಾಮಿನೇಟ್ ಆಗಿರುವ ಈ ಐವರಲ್ಲಿ ಒಬ್ಬರು ಮನೆಯಿಂದ ಹೊರ ಬಂದಿದ್ದಾರೆ. ಮಧ್ಯ ರಾತ್ರಿ ನಡೆದಿರುವ ಎಲಿಮಿನೇಷನ್​ನಲ್ಲಿ ಒಬ್ಬರನ್ನು ಎಲಿಮಿನೇಟ್​ ಮಾಡಲಾಗಿದೆ. ಆ ಎಲಿಮಿನೇಷನ್ ಸಂಚಿಕೆ ಇಂದು ರಾತ್ರಿ ಪ್ರಸಾರವಾಗಲಿದೆ.

ಇದನ್ನೂ ಓದಿ: Bigg Boss Kannada 8: ಹೇಳಿದಂತೆಯೇ ಸ್ಪರ್ಧಿಗಳ ನಿದ್ದೆಗೆಡಿಸಿದ ಬಿಗ್ ಬಾಸ್​: ಟ್ರಿಣ್​ ಟ್ರಿಣ್​ ಸದ್ದು ಕೇಳಿದೊಡಣೆ ಅರಳುತ್ತೆ ಮುಖ..!

ಸದ್ಯ ಕಲರ್ಸ್​ ಕನ್ನಡ ತನ್ನ ಇನ್​ಸ್ಟಾಗ್ರಾಂ ಖಾತೆಲ್ಲಿ ಹಂಚಿಕೊಂಡಿರುವ ಪ್ರೋಮೋದಲ್ಲಿ ಈ ಎಲಿಮಿನೇಷನ್​ ಬಗ್ಗೆ ಸುಳಿವು ನೀಡಲಾಗಿದೆ. ಇದರಲ್ಲಿ ಬಿಗ್ ಬಾಸ್​ ನಾಮಿನೇಟ್ ಆಗಿರುವವರಿಗೆ ಕಾಲ್ ಮಾಡುತ್ತಾರೆ. ಮುಖ್ಯ ದ್ವಾರ ತೆರೆಯುತ್ತಿದ್ದಂತೆಯೇ ಎಲಿಮಿನೇಟ್ ಆದವರು ಹೊರ ಬರಬೇಕೆಂದು ಬಿಗ್ ಬಾಸ್​ ಹೇಳುತ್ತಾರೆ. ಜೊತೆ ಪ್ರಶಾಂತ್ ಕಣ್ಣೀರಿಡುವ ದೃಶ್ಯ ದಹ ಈ ಪ್ರೋಮೋದಲ್ಲಿದೆ. ಈ ಪ್ರೋಮೋ ನೋಡಿದರೆ ಮನೆಯಿಂದ ಯಾರು ಹೋಗಲಿದ್ದಾರೆ ಅನ್ನೋದು ಮಾತ್ರ ತಿಳಿಯೋದಿಲ್ಲ. ಆದರೆ ಸದ್ಯಕ್ಕೆ ಎಲ್ಲರೂ ಅಂದಾಜು ಮಾಡುತ್ತಿರುವ ಪ್ರಕಾರ ಶುಭಾ ಅಥವಾ ಚಂದ್ರಚೂಡ ಅವರಲ್ಲಿ ಒಬ್ಬರು ಮನೆಯಿಂದ ಎಲಿಮಿನೇಟ್ ಆಗಲಿದ್ದಾರಂತೆ.

ಇದನ್ನೂ ಓದಿ:Happy Birthday Kavitha Gowda: ಮದುವೆಯಾದ ಮೇಲೆ ಗಂಡ ಚಂದನ್ ಜತೆ ಹುಟ್ಟುಹಬ್ಬ ಆಚರಿಸಿಕೊಂಡ ಕವಿತಾ ಗೌಡ..!

ಚಕ್ರವರ್ತಿ ಅವರು ಪ್ರಿಯಾಂಕಾ ಜತೆ ನಡೆದುಕೊಂಡ ರೀತಿಯಿಂದಾಗಿ ಅವರಿಗೆ ಕಡಿಮೆ ಮತಗಳು ಸಿಕ್ಕಿರ ಬಹುದು ಎಂದು ಹೇಳಲಾಗುತ್ತಿದೆ. ಇನ್ನು ಶುಭಾ ಟಾಸ್ಕ್​ಗಳಲ್ಲಿ ಹಿಂದಿದ್ದರೂ ಮನರಂಜಿಸುವ ವಿಷಯದಲ್ಲಿ ಮುಂದಿದ್ದಾರೆ. ಹೀಗಾಗಿಯೇ ಈ ಸಲ ದಿವ್ಯಾ ಶಮಂತ್ ಮನೆಯಿಂದ ಹೊರ ಹೋಗಬಹುದು ಅನ್ನೋದು ಮತ್ತೆ ಕೆಲವ ಅಭಿಪ್ರಾಯ. ಎಲ್ಲರ ಊಹೆಗೆ ನಿಲುಕದ ನಿರ್ಧಾರವನ್ನೇ ಬಿಗ್ ಬಾಸ್​ ಯಾವಾಗಲೂ ತೆಗೆದುಕೊಳ್ಳುತ್ತಾರೆ. ಒಟ್ಟಾರೆ ಇಂದು ರಾತ್ರಿ ಪ್ರಸಾರವಾಗಲಿರುವ ಸಂಚಿಕೆಯಲ್ಲಿ ಯಾರು ಮನೆಯಿಂದ ಎಲಿಮಿನೇಟ್​ ಆಗಿದ್ದಾರೆ ಅನ್ನೋದು ತಿಳಿಯಲಿದೆ.
Published by:Anitha E
First published: