ಬಿಗ್ ಬಾಸ್ ಸೀಸನ್ 8ರ ಸೆಕೆಂಡ್ ಇನ್ನಿಂಗ್ಸ್ನಲ್ಲಿ ಈ ವಾರ ಸಾಕಷ್ಟು ಟ್ವಿಸ್ಟ್ ಹಾಗೂ ಟರ್ನ್ಗಳಿಂದ ಕೂಡಿತ್ತು. ಬಿಗ್ ಬಾಸ್ ಮನೆಯಲ್ಲಿ ಈ ವಾರ ನಾಮಿನೇಷನ್ ಪ್ರಕ್ರಿಯೆ ನಡೆಯಲೇ ಇಲ್ಲ. ಬದಲಾಗಿ ಮನೆಯ ಕ್ಯಾಪ್ಟನ್ ಆಗಿ ಅರವಿಂದ್ ಅವರು ಆಯ್ಕೆಯಾಗುತ್ತಿದ್ದಂತೆಯೇ ಮನೆಯಲ್ಲಿ ನಾಮಿನೇಷನ್ ಪ್ರಕ್ರಿಯೆ ಆತಂಕದಲ್ಲಿ ಮನೆಯವರಿದ್ದರು. ಆಗಲೇ ಬಿಗ್ ಬಾಸ್ ಮನೆಯ ಸ್ಪರ್ಧಿಗಳಿಗೆ ಸಿಕ್ಕಿತ್ತು ಒಂದು ಶಾಕಿಂಗ್ ಸುದ್ದಿ. ಅದು ಈ ವಾರ ಮನೆಯಿಂದ ಹೊರ ಹೋಗಲು ಕ್ಯಾಪ್ಟನ್ ಅರವಿಂದ್ ಹಾಗೂ ರಘು ಸೇವ್ ಮಾಡಿರುವ ಶಮಂತ್ ಅವರನ್ನು ಹೊರತು ಪಡಿಸಿ, ಉಳಿದವರೆಲ್ಲ ನಾಮಿನೇಟ್ ಆಗಿದ್ದಾರೆ ಅನ್ನೋದು. ಹೌದು, ಅದರ ಜೊತೆಗೇ ಮನೆಯವರಿಗೆ ಬಿಗ್ ಬಾಸ್ ಈ ನಾಂಇನೇಷನ್ ಪ್ರಕ್ರಿಯೆಯಿಂದ ಪಾರಾಗಲು ಒಂದು ಅವಕಾಶವನ್ನೂ ಕೊಟ್ಟರು. ಆಗ ಸ್ಪರ್ಧಿಗಳಿಗೆ ಕೊಂಚ ನಿರಾಳವಾಗಿತ್ತು. ಒಂದು ಕಡೆ ಮನೆಯ ಕ್ಯಾಪ್ಟನ್ಸಿ ಟಾಸ್ಕ್ ಜೊತೆಗೆ ನಾಮಿನೇಷನ್ನಿಂದ ಪಾರಾಗಲು ಕೊಟ್ಟಿರುವ ಟಾಸ್ಕ್.
ಅರವಿಂದ್ ಹಾಗೂ ಶಮಂತ್ ಅವರನ್ನು ಹೊರತು ಪಡಿಸಿ ನಾಮಿನೇಟ್ ಆಗಿದ್ದ ಸ್ಪರ್ಧಿಗಳು ಹೇಗಾದರೂ ಮಾಡಿ ಈ ಟಾಸ್ಕ್ನಲ್ಲಿ ಗೆದ್ದು ಇಮ್ಯುನಿಟಿ ಪಡೆಯಬೇಕೆಂಬ ಹಂಬಲದಲ್ಲಿದ್ದರು. ಅರವಿಂದ್ ಹಾಗೂ ಮಂಜು ಪಾವಗಡ ನೇತೃತ್ವದಲ್ಲಿ ಎರಡು ತಂಡಗಳನ್ನು ಮಾಡಲಾಯಿತು. ಅರವಿಂದ್ ಅವರ ತಂಡ ವಿಜಯಯಾತ್ರೆ ಹಾಗೂ ಮಂಜು ಅವರ ತಂಡ ನಿಂಗೈತೆ ಇರು ಎಂಬ ಹೆಸರುಗಳನ್ನು ತಮ್ಮ ತಂಡಗಳಿಗೆ ಆಯ್ಕೆ ಮಾಡಿಕೊಂಡರು.
View this post on Instagram
ಇದನ್ನೂ ಓದಿ: ಜಾಕ್ವೆಲಿನ್ ಫರ್ನಾಂಡಿಸ್ ಜತೆಗಿನ ತನ್ನಿಷ್ಟದ ಎರಡು ಫೋಟೋಗಳನ್ನು ಹಂಚಿಕೊಂಡ ಕಿಚ್ಚ ಸುದೀಪ್
ಇನ್ನು ವಿಜಯ ಯಾತ್ರೆ ತಂಡ ದಂಡ ಯಾತ್ರೆ ಟಾಸ್ಕ್ನಲ್ಲಿ ಒಂದು ದಂಡವನ್ನು ಕಡಿಮೆ ಪಡೆಯುವ ಮೂಲಕ ಸೋಲನ್ನು ಅನುಭವಿಸಿ, ಈ ವಾರ ಮನೆಯಿಂದ ಹೊರ ಹೋಗಲು ನಾಮಿನೇಟ್ ಆಯಿತು. ಇದರಲ್ಲಿ ಅರವಿಂದ್ ಕೆ.ಪಿ, ವೈಷ್ಣವಿ, ಪ್ರಶಾಂತ್ ಸಂಬರಗಿ, ಶುಭಾ ಪೂಂಹಾ ಹಾಗೂ ಪ್ರಿಯಾಂಕಾ ತಿಮ್ಮೇಶ್ ಇದ್ದರು. ಇದರಲ್ಲಿ ಅರವಿಂದ್ ಮನೆಯ ಕ್ಯಾಪ್ಟನ್ ಆಗಿದ್ದ ಕಾರಣ ಅವರು ಸೇಫ್ ಆಗಿದ್ದಾರೆ. ಇನ್ನು ಉಳಿದವರಲ್ಲಿ ನಿನ್ನೆಯ ಸಂಚಿಕೆಯಲ್ಲಿ ಅತಿ ಹೆಚ್ಚು ಮತಗಳನ್ನು ಪಡೆಯುವ ಮೂಲಕ ನಾಮಿನೇಷನ್ ಪ್ರಕ್ರಿಯೆಯಿಂದ ಪಾರಾಗಾಗಿದ್ದಾರೆ.
ಇಂದು ಮನೆಯಿಂದ ಹೋಗುವುದು ಯಾರು..?
ಇನ್ನು ಉಳಿದಿರುವ ವಿಜಯ ಯಾತ್ರೆ ಸ್ಪರ್ಧಿಗಳಲ್ಲಿ ಪ್ರಶಾಂತ್ ಸಂಬರಗಿ, ಶುಭಾ ಪೂಂಜಾ ಹಾಗೂ ಪ್ರಿಯಾಂಕಾ ತಿಮ್ಮೇಶ್ ಅವರಲ್ಲಿ ಯಾರು ಮನೆಯಿಂದ ಹೊರ ಹೋಗಲಿದ್ದಾರೆ ಅನ್ನೋ ಕುತೂಹಲ ವೀಕ್ಷಕರಲ್ಲಿ ಮನೆ ಮಾಡಿದೆ.
ಸದ್ಯಕ್ಕೆ ಲಭ್ಯವಾಗಿರುವ ಮಾಹಿತಿ ಹಾಗೂ ಲೆಕ್ಕಾಚಾರಗಳ ಪ್ರಕಾರ ಈ ವಾರ ಪ್ರಿಯಾಂಕಾ ತಿಮ್ಮೇಶ್ ಅವರು ಮನೆಯಿಂದ ಹೊರ ಹೋಗಲಿದ್ದಾರೆ ಎನ್ನಲಾಗುತ್ತಿದೆ. ಈ ನಾಮಿನೇಷನ್ ತೂಗುಗತ್ತಿಯಿಂದ ಯಾರು ತಪ್ಪಿಸಿಕೊಳ್ಳಲಿದ್ದಾರೆ ಹಾಗೂ ಯಾರ ಬಿಗ್ ಬಾಸ್ ಜರ್ನಿ ಅಂತ್ಯವಾಗಲಿದೆ ಅನ್ನೋದು ಇಂದಿನ ರಾತ್ರಿಯ ಸಂಚಿಕೆಯಲ್ಲಿ ತಿಳಿಯಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ