Bigg Boss Kannada 8: ಕೊನೆಗೂ ಮನದ ಮಾತು ಹೇಳಿಕೊಂಡ ದಿವ್ಯಾ ಸುರೇಶ್: ಮೂಕವಿಸ್ಮಿತರಾದ ಮಂಜು ಪಾವಗಡ..!

ದಿವ್ಯಾ ಸುರೇಶ್​ ಬಿಗ್ ಬಾಸ್​ ಮನೆಯಿಂದ ಹೊರ ಬರುವ ಮುನ್ನ ಮಂಜು ಪಾವಗಡ ಅವರ ಮುಂದೆ ತಮ್ಮ ಮನದಾಳದ ಮಾತನ್ನು ಹೇಳಿದ್ದಾರೆ. ದಿವ್ಯಾ ಹೇಳಿದ್ದನ್ನು ಕೇಳಿದ ಮಂಜು ಮೂಕವಿಸ್ಮಿತರಾಗಿದ್ದಾರೆ.

ದಿವ್ಯಾ ಸುರೇಶ್ ಹಾಗೂ ಮಂಜು ಪಾವಗಡ

ದಿವ್ಯಾ ಸುರೇಶ್ ಹಾಗೂ ಮಂಜು ಪಾವಗಡ

  • Share this:
ಬಿಗ್ ಬಾಸ್​ ಕನ್ನಡ ಸೀಸನ್​ 8 ಕಡೆಗೂ ಅಂತಿಮ ಘಟ್ಟ ತಲುಪಿದೆ. ಕೊರೋನಾ ಎರಡನೇ ಅಲೆಯಿಂದಾಗಿ ಮೊದಲ ಇನ್ನಿಂಗ್ಸ್​ ಅನ್ನು ಅರ್ಧಕ್ಕೆ ನಿಲ್ಲಿಸಿ, ಸ್ಪರ್ಧಿಗಳನ್ನು ಮನೆಗೆ ಕಳುಹಿಸಲಾಗಿತ್ತು.  ಮತ್ತೆ ಲಾಕ್​ಡೌನ್​ ಸಡಿಲಗೊಂಡು ಚಿತ್ರೀಕರಣಕ್ಕೆ ಅನುಮತಿ ನೀಡುತ್ತಿದ್ದಂತೆಯೇ ಮತ್ತೆ ಇದೇ ಮೊದಲ ಬಾರಿಗೆ ಅರ್ಧಕ್ಕೆ ನಿಂತಿದ್ದ ಬಿಗ್ ಬಾಸ್​ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಬಿಗ್ ಬಾಸ್​ ಸೆಕೆಂಡ್ ಇನ್ನಿಂಗ್ಸ್​ ಈಗ ಕೊನೆಯ ಹಂತಕ್ಕೆ ಬಂದಿದೆ. ಬರಲಿರುವ ಶನಿವಾರ ಹಾಗೂ ಭಾನುವಾರ ಗ್ರ್ಯಾಂಡ್​ ಫಿನಾಲೆ ನಡೆಯಲಿದೆ. ಅದ್ದೂರಿಯಾಗಿ ನಡಯಲಿರುವ ಫಿನಾಲೆಯಲ್ಲಿ ಐದು ಮಂದಿ ಸ್ಪರ್ಧಿಗಳು ಮಾತ್ರ ಇರಲಿದ್ದಾರೆ. ಹೌದು, ನಿನ್ನೆ ನಡೆದ ಈ ಸೀಸನ್​ನ ಕಡೆಯ ಎಲಿಮಿನೇಷನ್​ನಲ್ಲಿ ದಿವ್ಯಾ ಸುರೇಶ್​ ಎವಿಕ್ಟ್​ ಆಗಿ ಮನೆಯಿಂದ ಹೊರ ಬಂದಿದ್ದಾರೆ. ಆದರೆ, ಮನೆಯಿಂದ ಹೊರ ಬರುವ ಮುನ್ನ ದಿವ್ಯಾ ಸುರೇಶ್​ ಕಡೆಗೂ ತಮ್ಮ ಮನದ ಮಾತನ್ನು ಮಂಜು ಮುಂದೆ ಹೇಳಿಕೊಂಡಿದ್ದಾರೆ. 

ದಿವ್ಯಾ ಸುರೇಶ್​ ಬಿಗ್ ಬಾಸ್​ ಮನೆಯಲ್ಲಿ ಫಿನಾಲೆ ವಾರದಲ್ಲಿ ಮುಂದುವರೆಯೋದಿಲ್ಲ ಅಂತ ಸಾಕಷ್ಟು ಮಂದಿ ಊಹಿಸಿದ್ದರು. ಅದರಂತೆಯೇ ದಿವ್ಯಾ ನಿನ್ನೆ ಎಲಿಮಿನೇಷನ್​ನಲ್ಲಿ ಎವಿಕ್ಟ್​ ಆಗಿ ಹೊರ ಬಂದಿದ್ದಾರೆ. ಬರುವ ಮುನ್ನ ದಿವ್ಯಾ ಸುರೇಶ್​ ಅವರ ಆಸೆಯನ್ನು ಬಿಗ್ ಬಾಸ್​ ಈಡೇರಿಸಿದ್ದಾರೆ.






ದಿವ್ಯಾ ಸುರೇಶ್​ ಬಿಗ್ ಬಾಸ್​ ಮನೆಯಿಂದ ಹೊರ ಬರುವ ಮುನ್ನ ಮಂಜು ಪಾವಗಡ ಅವರ ಮುಂದೆ ತಮ್ಮ ಮನದಾಳದ ಮಾತನ್ನು ಹೇಳಿದ್ದಾರೆ. ದಿವ್ಯಾ ಸುರೇಶ್​ ಅವರು ತಮ್ಮ ಮನಸ್ಸಿನಲ್ಲಿರುವ ಮಾತನ್ನು ಮಂಜು ಮುಂದೆ ಹೇಳಿಕೊಳ್ಳಲು ಒಂದು ರೀತಿಯ ಆತ್ಮೀಯವಾದ ವಾತಾವರಣ ನಿರ್ಮಿಸುವಂತೆ ದಿವ್ಯಾ ಸುರೇಶ್ ಅವರು ಕಿವಿಯ ಮಾತಿನ ಮೂಲಕ ಕೇಳಿ ಕೊಂಡಿದ್ದರು.

ಇದನ್ನೂ ಓದಿ: BBK8-Divya Suresh: ಮಧ್ಯರಾತ್ರಿ ಮನೆಯಿಂದ ಹೊರ ನಡೆದ ದಿವ್ಯಾ ಸುರೇಶ್: ಕಣ್ಣೀರಿಟ್ಟ ಮಂಜು ಪಾವಗಡ​..!

ಬಿಗ್ ಬಾಸ್​ ದಿವ್ಯಾ ಸುರೇಶ್ ಹೇಳಿದಂತೆಯೇ, ಈ ಇಬ್ಬರ ಹ್ಯಾಪಿ ಮೂಮೆಂಟ್​ ನೆನಪಿಸುವ ಫೋಟೋಗಳು ಹಾಗೂ ಮನೆಯ ಗಾರ್ಡನ್ ಏರಿಯಾದಲ್ಲಿ ಒಂದು ಪುಟ್ಟ ಟೇಬರ್​, ಎರಡು ಚೇರ್​ ಹಾಗೂ ಸುತ್ತಲೂ ಬಲೂನ್​ಗಳಿಂದ ಅಲಂಕರಿಸಿ ಒಂದು ರೆಡ್​ ವೆಲ್ವೆಟ್​ ಕೇಕ್​ ಅನ್ನು ಇರಿಸಲಾಗಿತ್ತು. ಕ್ಯಾಂಡಲ್​ ಲೈಟ್​ ಡಿನ್ನರ್​ಗೆ ಮಾಡುವಂತ ಸೆಟ್​ನಲ್ಲಿ ದಿವ್ಯಾ ಮಂಜು ಅವರ ಮುಂದೆ ತಮ್ಮ ಮನಸ್ಸಿನಲ್ಲಿದ್ದ ಮಾತನ್ನು ಭಾವುಕರಾಗಿ ಹೇಳಿಕೊಂಡಿದ್ದಾರೆ.

ನೀನು ನನಗೆ ಸಿಕ್ಕಿರುವ ನಿಜವಾದ ಸ್ನೇಹಿತ. ಮೊದಲ ಇನ್ನಿಂಗ್ಸ್​ನಲ್ಲಿ ನಾನು ತುಂಬಾ ಡಾಮಿನೇಟ್​ ಆಗಿದ್ದೆ. ಇದರಿಂದಾಗಿ ನಿನಗೆ ಆಟದಲ್ಲಿ ಹಿನ್ನಡೆಯಾಗಿತ್ತು. ಅದಕ್ಕೆ ಮನಸ್ಸಿನಿಂದ ಕ್ಷಮೆ ಕೇಳುತ್ತೇಮೆ. ನಿನ್ನ ಸ್ನೇಹ ಕಳೆದುಕೊಳ್ಳುವ ಇಷ್ಟ ಇಲ್ಲ. ಅದಕ್ಕಾಗಿಯೇ ಇದೇ ವೇದಿಕೆ ಮೇಲೆ ನಾನು ನನ್ನ ತಪ್ಪಿಗೆ ಕ್ಷಮೆ ಕೇಳುವ ಸಲುವಾಗಿ ಇಷ್ಟಲ್ಲ ಮಾಡಿದೆ ಎಂದು ದಿವ್ಯಾ ಕಣ್ಣೀರಿಟ್ಟಿದ್ದಾರೆ. ದಿವ್ಯಾ ಸುರೇಶ್ ಅವರ ಮನಸ್ಸಿನ ಮಾತು ಕೇಳಿದ ಮಂಜು ಮೂಕವಿಸ್ಮಿತರಾಗಿದ್ದರು.

ಇದನ್ನೂ ಓದಿ: ಸಿಂಪಲ್ಲಾಗಿ ಹುಟ್ಟುಹಬ್ಬ ಆಚರಿಸಿಕೊಂಡ ನಟಿ ಆಶಿಕಾ ರಂಗನಾಥ್​

ನಾನು ನಿನ್ನ ಜೊತೆ ಜೀವನದ ಉದ್ದಕ್ಕೂ ಇರುತ್ತೇನೆ. ನಾನು ನಿನ್ನ ಬೆಸ್ಟ್​ ಫ್ರೆಂಡ್​ ಎಂದು ದಿವ್ಯಾ ಸುರೇಶ್ ಅವರನ್ನು ಸಮಾಧಾನ ಮಾಡುತ್ತಾರೆ. ಅಂತಿ ಇಂತೂ ಇಬ್ಬರು ಸ್ನೇಹಿತರ ನಡುವೆ ಇದ್ದ ಮನಸ್ತಾಪ ಹ್ಯಾಪಿ ಎಂಡಿಂಗ್​ ಆಯಿತು. ಇದಾದ ನಂತರ ನಡೆದ ಎಲಿಮಿನೇಷನ್​ನಲ್ಲಿ ದಿವ್ಯಾ ಸುರೇಶ್​ ಮನೆಯಿಂದ ಹೊರ ನಡೆಯುತ್ತಾರೆ. ದಿವ್ಯಾ ಸುರೇಶ್ ಎಲಿಮಿನೇಟ್ ಆದ ನಂತರ, ಮಂಜು ವಾಲ್​ನಲ್ಲಿದ್ದ ದಿವ್ಯಾ ಸುರೇಶ್ ಅವರಿದ್ದ ಫೋಟೋ ನೋಡಿ ಮಿಸ್​ ಯು ಎಂದು ಕಣ್ಣೀರಿಡುತ್ತಾರೆ.
Published by:Anitha E
First published: