ಬಿಗ್ ಬಾಸ್ ಕನ್ನಡ ಸೀಸನ್ 8ರ ಸೆಕೆಂಡ್ ಇನ್ನಿಂಗ್ಸ್ನ ಮೊದಲ ವಾರದಲ್ಲಿ ಕ್ಯಾಪ್ಟನ್ಸಿ ಟಾಸ್ಕ್ ನಡೆದು, ಅದರಲ್ಲಿ ಮತ್ತೆ ಹುಡುಗರೇ ಮೇಲುಗೈ ಸಾಧಿಸಿದ್ದರು. ಈ ಮೂಲಕ ಸೆಕೆಂಡ್ ಇನ್ನಿಂಗ್ಸ್ನ ಮೊದಲ ವಾರವೂ ಯಾವೊಬ್ಬ ಹುಡುಗಿಯೂ ಕ್ಯಾಪ್ಟನ್ ಆಗಿ ಆಯ್ಕೆಯಾಗಲಿಲ್ಲ. ಮಂಜು ಪಾವಗಡ ಕ್ಯಾಪ್ಟನ್ ಆಗಿ ಆಯ್ಕೆಯಾದ ನಂತರ ವಾರತ ಕತೆ ಕಿಚ್ಚ ಜೊತೆ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಸಹ ಹೆಣ್ಣು ಮಕ್ಕಳು ಕ್ಯಾಪ್ಟನ್ ಆಗಿ ಆಯ್ಕೆಯಾಗದ ಬಗ್ಗೆ ಚರ್ಚಿಸಿದ್ದರು. ಹೆಣ್ಣು ಮಕ್ಕಳು ಆಯ್ಕೆಯಾಗದಕ್ಕೆ ನೀಡಿದ್ದ ಕಾರಣ ಸಂಜಸವಲ್ಲ ಎಂದೂ ಹೇಳಿದ್ದರು. ಆದರೆ ಸೆಕೆಂಡ್ ಇನ್ನಿಂಗ್ಸ್ನ ಎರಡನೇ ವಾರ ಸಹ ಮನೆಯಲ್ಲಿ ಕ್ಯಾಪ್ಟನ್ಸಿಗಾಗಿ ಸಾಕಷ್ಟು ಟಾಸ್ಕ್ಗಳು ನಡೆದಿದ್ದು, ಅದರಲ್ಲಿ ಪ್ರತಿ ವಾರದಂತೆ ಎಲ್ಲರೂ ಭಾಗಿಯಾಗಿದ್ದರು. ಆದರೆ ಮೊದಲ ಬಾರಿಗೆ ದಿವ್ಯಾ ಉರುಡುಗ ಅವರು ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದರು. ಈಗ ಮತ್ತೆ ಈ ವಾರ ದಿವ್ಯಾ ಸುರೇಶ್ ಕ್ಯಾಪ್ಟನ್ಸಿ ಟಾಸ್ಕ್ನಲ್ಲಿ ಜಯಗಳಿಸುವ ಮೂಲಕ 2ನೇ ಮಹಿಳಾ ಕ್ಯಾಪ್ಟನ್ ಆಗಿದ್ದಾರೆ.
ಬಿಗ್ ಬಾಸ್ 8ನೇ ಸೀಸನ್ನ ಎರಡನೇ ಮಹಿಳಾ ಕ್ಯಾಪ್ಟನ್ ಆಗಿ ದಿವ್ಯಾ ಸುರೇಶ್ ಅವರು ಆಯ್ಕೆಯಾಗಿದ್ದಾರೆ. ನಿಂಗೈತೆ ಇರು ತಂಡದ ವಿಜಯ ಯಾತ್ರೆ ತಂಡವನ್ನು ಸೋಲಿಸಿ ಕ್ಯಾಪ್ಟನ್ಸಿ ಟಾಸ್ಕ್ನಲ್ಲಿ ಭಾಗಿಯಾಗಲು ಅರ್ಹತೆ ಪಡೆದಿತ್ತು. ಇನ್ನು ಗೆದಿದ್ದ ನಿಂಗೈತೆ ಇರು ತಂಡದಲ್ಲಿ ಮಂಜು ಪಾವಗಡ, ಶಮಂತ್, ದಿವ್ಯಾ ಉರುಡುಗ ಹಾಗೂ ಚಕ್ರವರ್ತಿ ಅವರೊಂದಿಗೆ ಕೊನೆಯದಾಗಿ ಟಾಸ್ಕ್ ಒಂದನ್ನು ಆಡಿದ ದಿವ್ಯಾ ಸುರೇಶ್ ಅವರು ಜಯಗಳಿಸಿದ್ದಾರೆ.
ದಿವ್ಯಾ ಸುರೇಶ್ ಸೇರಿದಂತೆ ನಿಂಗೈತೆ ಇರು ತಂಡದ ಇತರೆ ಸದಸ್ಯರು ಚೇರ್ ಮೇಲೆ ಕುಳಿತು ಮುಖವನ್ನು ಮೇಲೆ ಮಾಡಿ ಹಣೆಯ ಮೇಲೆ ಕೊಟ್ಟಿದ್ದ ಕಾಯಿನ್ಗಳನ್ನು ಜೋಡಿಸಿಕೊಂಡು 5 ಸೆಕೆಂಡ್ ಇರಬೇಕಾಗಿತ್ತು. ಈ ಟಾಸ್ಕ್ನಲ್ಲಿ ಎಲ್ಲರಿಗಿಂತ ಮೊಲದು ಕಾಯಿನ್ ಜೋಡಿಸಿಕೊಂಡ ದಿವ್ಯಾ ಸುರೇಶ್ 10 ಸೆಕೆಂಡ್ ಅವುಗಳನ್ನು ಬೀಳಿಸದಂತೆ ನೋಡಿಕೊಂಡರು. ಈ ಮೂಲಕ ಈ ಟಾಸ್ಕ್ನಲ್ಲಿ ಜಯಗಳಿಸ ಈ ವಾರದ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾರೆ.
ಕ್ಯಾಪ್ಟನ್ ಆದ ದಿವ್ಯಾ ಸುರೇಶ್ಗೆ ಸಿಕ್ತು ಭರ್ಜರಿ ಉಡುಗೊರೆ
ದಿವ್ಯಾ ಸುರೇಶ್ ಕ್ಯಾಪ್ಟನ್ಸಿ ಟಾಸ್ಕ್ನಲ್ಲಿ ಭಾಗಿಯಾಗುವ ಮೊದಲು ಮೇಕಪ್ ರೂಮ್ನಲ್ಲಿ ಕುಳಿತುಕೊಂಡು ಬಿಗ್ ಬಾಸ್ ಒಮ್ಮೆ ನನಗೆ ಕ್ಯಾಪ್ಟನ್ ಆಗಿದ್ದಕ್ಕೆ ಶುಭ ಕೋರಿ ಎಂದು ಹೇಳುತ್ತಾರೆ. ಆದಾದ ನಂತರ ದಿವ್ಯಾ ಸುರೇಶ್ ಹೇಳಿದಂತೆಯೇ ಆಗುತ್ತದೆ. ಇದಕ್ಕಿಂತ ಹೆಚ್ಚಾಗಿ ಕ್ಯಾಪ್ಟನ್ ಆಗಿದ್ದಕ್ಕೆ ದಿವ್ಯಾ ಅವರ ತಾಯಿ ಮಾತನಾಡಿರುವ ಆಡಿಯೋ ಕ್ಲಿಪ್ ಪ್ಲೇ ಆಗುತ್ತದೆ. ಇದು ದಿವ್ಯಾ ಅವರಿಗೆ ಸಿಕ್ಕ ಅಮೂಲ್ಯವಾದ ಉಡುಗೊರೆಯಾಗಿದೆ.
ಇದನ್ನೂ ಓದಿ: Bigg Boss Kannada Season 8: ಬಿಗ್ ಬಾಸ್ ಮನೆಯಲ್ಲಿ ಹೊಸ ಅವತಾರದಲ್ಲಿ ಕಾಣಿಸಿಕೊಂಡ ಪ್ರಶಾಂತ್ ಸಂಬರಗಿ..!
ಪ್ರಶಾಂತ್ ಸಂಬರಗಿ ಅವರು ದಿವ್ಯಾ ಸುರೇಶ್ ಅವರ ತಾಯಿಯ ಹೆಸರು ಕೇಳುತ್ತಿರುತ್ತಾರೆ. ಆಗಲೇ ಈ ಆಡಿಯೋ ಕ್ಲಿಪ್ ಪ್ಲೇ ಆಗುತ್ತದೆ. ಮಗಳು ಕ್ಯಾಪ್ಟನ್ ಆಗಿದ್ದಕ್ಕೆ ತುಂಬಾ ಖುಷಿಯಾಗಿದೆ ಎಂದಿದ್ದಾರೆ. ಇನ್ನು ಫೈನಲ್ನಂದು ಸಿಗೋಣ ಎಂದು ಮಗಳಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ ಮಾತುಗಳನ್ನಾಡಿದ್ದಾರೆ.
ಇದನ್ನೂ ಓದಿ: Bigg Boss Kannada Season 8: ಬಿಗ್ ಬಾಸ್ ಮನೆಯಲ್ಲಿ ಪ್ರತಿಭಟನೆ ಆರಂಭಿಸಿದ ಚಕ್ರವರ್ತಿ ಚಂದ್ರಚೂಡ..!
ಇನ್ನು ಕ್ಯಾಪ್ಟನ್ ಆಗಿದ್ದು ದಿವ್ಯಾ ಅವರಿಗೆ ಎಷ್ಟು ಖುಷಿಯಾಗಿದೆ ಎಂದರೆ ಅವರಿಗೆ ಫೈನಲ್ವರೆಗೂ ಹೋಗದಿದ್ದರೂ ಪರವಾಗಿಲ್ಲವಂತೆ. ಈ ಮನೆಯಲ್ಲಿ ಒಮ್ಮೆ ಕ್ಯಾಪ್ಟನ್ ಆದರೆ ಸಾಕು ಅಂತ ದಿವ್ಯಾ ಸುರೇಶ್ ಪ್ರಿಯಾಂಕಾ ತಿಮ್ಮೇಶ್ ಬಳಿ ಹೇಳಿಕೊಂಡಿದ್ದಾರೆ.ಇನ್ನು ಪ್ರಿಯಾಂಕಾ ತಿಮ್ಮೇಶ್ ಸಹ ದಿವ್ಯಾ ಅವರಿಗೆ ಕ್ಯಾಪ್ಟನ್ ಆಗಿ ಹೇಗೆ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ