Bigg Boss Kannada Season 8: ದಿವ್ಯಾಗೆ ತಲೆ ಬಾಚಿ ಜಡೆ ಹಾಕಿದ ಚಕ್ರವರ್ತಿ: ಕ್ಯಾಪ್ಟನ್​ ಜತೆ ಹೆಚ್ಚಿನ ಸಮಯ ಕಳೆಯುತ್ತಿರುವ ಚಂದ್ರಚೂಡ..!

ದಿವ್ಯಾ ಉರುಡುಗ ಅವರಿಗೆ ತಲೆಆಚಿ ಜಡೆ ಹಾಕಿದ್ದಾರೆ ಚಕ್ರವರ್ತಿ. ದಿವ್ಯಾ ಸುರೇಶ್ ಅವರನ್ನು ಮಗಳು ಎನ್ನುತ್ತಿದ್ದ ಇದೇ ಚಕ್ರವರ್ತಿ ಈಗ ದಿವ್ಯಾ ಉರುಡುಗ ಅವರನ್ನು ಮಗಳೇ ಎನ್ನುತ್ತಾ ಅವರೊಂದಿಗೆ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ.

ಚಕ್ರವರ್ತಿ ಹಾಗೂ ದಿವ್ಯಾ ಉರುಡುಗ

ಚಕ್ರವರ್ತಿ ಹಾಗೂ ದಿವ್ಯಾ ಉರುಡುಗ

  • Share this:
ಚಕ್ರವರ್ತಿ ಚಂದ್ರಚೂಡ ಈ ಬಿಗ್ ಬಾಸ್​ ಮನೆಯಲ್ಲಿ ಹೇಗೆ ಇರಬೇಕು ಅಂತ ನಿರ್ಧರಿಸಿಕೊಂಡಿದ್ದಾರೆ. ಅದರಲ್ಲೂ ಪ್ರತಿ ವಾರ ಚಕ್ರವರ್ತಿ ಚಂದ್ರಚೂಡ ಅವರಿಗೆ ವಾರಾಂತ್ಯದಲ್ಲಿ ಪ್ರತಿ ಸಲ ಕಿಚ್ಚ ಸುದೀಪ್​ ಒಂದಲ್ಲಾ ಒಂದು ಕಾರಣಕ್ಕೆ ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ. ಒಮ್ಮೆ ಚಕ್ರವರ್ತಿ ಹೇಳಿದ ಸುಳ್ಳಿಗೆ, ಮತ್ತೊಮ್ಮೆ ಸಹ ಸ್ಪರ್ಧಿಗಳಿಗೆ ಚುಚ್ಚು ಮಾತುಗಳಿ ಮನ ನೋಯಿಸಿದ್ದಕ್ಕೆ.  ಅದರಲ್ಲೂ ಪರಿಯಾಂಕಾ ಅವರು ಮನೆಯಿಂದ ಹೊರ ಹೋಗುವಾಗ ನಾಮಿನೇಟ್​ ಮಾಡಿದರು ಎನ್ನುವ ಕಾರಣಕ್ಕೆ ಚಕ್ರವರ್ತಿ ಬಿಗ್ ಬಾಸ್​ ನಂತಹ ಸಾರ್ವಜನಿಕ ವೇದಿಕೆಯಲ್ಲಿ ತುಂಬಾ ಕೆಟ್ಟದಾಗಿ ನಡೆದುಕೊಂಡಿದ್ದರು. ಪ್ರಿಯಾಂಕಾ ಅವರಿಗೆ ಮಧ್ಯದ ಬೆರಳು ತೋರಿಸುವ ಮೂಲಕ ವೀಕ್ಷಕರ  ಕೆಂಗಣ್ಣಿಗೆ ಗುರಿಯಾಗಿದ್ದರು. ಶನಿವಾರ ಈ ವಿಷಯವಾಗಿಯೇ ಸುದೀಪ್​ ಅವರು ಚಕ್ರವರ್ತಿ ಅವರನ್ನು ಸರಿಯಾಗಿ ತರಾಟೆಗೆ ತೆಗೆದುಕೊಂಡಿದ್ದರು. ಇದರಿಂದಾಗಿ ಈಗ ಚಕ್ರವರ್ತಿ ಇನ್ನು ಮುಂದೆ ಬೆರಳಿನ ಸುದ್ದಿಗೇ ಹೋಗುವುದಿಲ್ಲ ಅನ್ನೋ ನಿರ್ಧಾರಕ್ಕೆ ಬಂದಿದ್ದಾರೆ. 

ವಾರಾಂತ್ಯದ ಸಂಚಿಕೆ ಆದ ನಂತರ ಚಕ್ರವರ್ತಿ ಅವರ ವರ್ತನೆಯಲ್ಲಿ ತುಂಬಾ ಬದಲಾವಣೆ ಆಗಿದೆ. ಚಕ್ರವರ್ತಿ ಅವರು ಮನೆಯಲ್ಲಿ ಎಲ್ಲರ ಜೊತೆ ಬೆರೆಯಲು ಪ್ರಯತ್ನಿಸುತ್ತಿದ್ದಾರೆ. ಆದರೆ ಮನೆಯಲ್ಲಿ ಅವರಿಗೆ ಕೆಲವೇ ಕೆಲವು ಮಂದಿ ಮಾತ್ರ ನಿಜ ಜೀವನದಲ್ಲಿ ಇರುವಂತೆಯೇ ಇದ್ದಾರೆ ಎಂದೆನಿಸಿದೆ. ಇದನ್ನು ದಿವ್ಯಾ ಉರುಡುಗ ಬಳಿ ಹಂಚಿಕೊಂಡಿದ್ದಾರೆ.


ಬಿಗ್ ಬಾಸ್​ ಮನೆಯಲ್ಲಿ ನಾಮಿನೇಟ್ ಆಗಿರುವ ಸ್ಪರ್ಧಿಗಳಲ್ಲಿ ಮನೆಯಿಂದ ಎಲಿಮಿನೇಟ್ ಆಗುವ ಭಯದಿಂದ ಅವರ ಮನಗಳಲ್ಲಿಆತಂಕ ಮನೆ ಮಾಡಿದೆ. ಅವರು ಮನೆಯಲ್ಲಿ ಯಾವಾಗ ಏನಾಗಲಿದೆ ಎಂದು ತಲೆ ಕಡೆಸಿಕೊಂಡಿದ್ದಾರೆ. ಇದರ ನಡುವೆಯೇ ಚಕ್ರವರ್ತಿ ಚಂದ್ರಚೂಡ ಅವರು ದಿವ್ಯಾ ಉರುಡುಗ ಅವರಿಗೆ ತಲೆ ಬಾಚಿ ಜಡೆ ಹಾಕಿದ್ದಾರೆ. ಇನ್ನು ಚಕ್ರವರ್ತಿ ಈಗ ದಿವ್ಯಾ ಉರುಡುಗ ಅವರನ್ನು ಮಗಳೇ ಎನ್ನುತ್ತಾ ಹೆಚ್ಚಿನ ಸಮಯ ಅವರೊಂದಿಗೆ ಕಳೆಯುತ್ತಿದ್ದಾರೆ.

ಇದನ್ನೂ ಓದಿ: ಒಟಿಟಿ ವೇದಿಕೆಯಲ್ಲಿ ಲಾಂಚ್ ಆಗಲಿದೆ​ ಹಿಂದಿ ಬಿಗ್ ಬಾಸ್​ ಸೀಸ್​ನ್​ 15: ನಿರೂಪಣೆ ಮಾಡಲಿದ್ದಾರೆ ಕರಣ್​ ಜೋಹರ್​

ಚಕ್ರವರ್ತಿ ಚಂದ್ರಚೂಡ ಅವರು ಕ್ಯಾಪ್ಟನ್​ ದಿವ್ಯಾ ಉರುಡುಗ ಅವರಿಗೆ ಜಡೆ ಹಾಕುತ್ತಿದ್ದಂತೆಯೇ ಶುಭಾ ಪೂಂಜಾ ಎಂದಿನಂತೆ ಸಖತ್ ಕಮೆಂಟ್​ ಪಾಸ್ ಮಾಡುತ್ತಾರೆ. ನೀನು ಇವತ್ತೇ ಈ ಮನೆಯಲ್ಲಿ ತುಂಬಾ ಚೆನ್ನಾಗಿ ಕಂಡಿದ್ದು ಎನ್ನುತ್ತಾರೆ. ಅಲ್ಲದೆ ಈಗ ಮಂಜು ಅಂತೆಯೇ ಕಾಣಿಸುತ್ತಿದ್ದೀಯಾ. ಸಾಲದಕ್ಕೆ ಮಂಜು ಹಾಗೂ ನೀನು ಇಬ್ಬರೂ ಒಂದೇ ಬಣ್ಣದ ಬಟ್ಟೆ ತೊಟ್ಟಿದ್ದೀರಾ ಎಂದು ಕಾಲೆಳೆಯಲಾರಂಭಿಸುತ್ತಾರೆ.

ಇದನ್ನೂ ಓದಿ:Bigg Boss Kannada Season 8: ಇದ್ದಕ್ಕಿದ್ದಂತೆ ಬಿಗ್ ಬಾಸ್ ಮನೆಯಿಂದ ನಾಪತ್ತೆಯಾದ ಶುಭಾ ಪೂಂಜಾ: ಏನಿದು ಮಿಡ್​ ವೀಕ್ ಟ್ವಿಸ್ಟ್..!

ಶುಭಾ ಪೂಂಜಾ ಬಹಳ ಹಿಂದಿನಿಂದ ದಿವ್ಯಾ ಉರುಡುಗ ಹಾಗೂ ಮಂಜು ಅವರ ಮುಖದಲ್ಲಿ ಹೋಲಿಕೆ ಇದೆ ಎಂದು ಹೇಳುತ್ತಲೇ ಬಂದಿದ್ದಾರೆ. ಶುಭಾ ಪೂಂಜಾ ಅವರು ಮಂಜು ಅವರಿಗೆ ಹೋಲಿಸಿದಾಗಲೆಲ್ಲ ದಿವ್ಯಾ ಉರುಡುಗ ಅವರಿಗೆ ಕೊಂಚ ಇರಿಸುಮುರಿಸಾಗುತ್ತದೆ. ಇನ್ನು ನಿನ್ನೆಯ ಸಂಚಿಕೆಯಲ್ಲಿ ಪ್ರಶಾಂತ್ ಅವರಿಗೆ ಕಿಚ್ಚನ ಚಪ್ಪಾಳೆ ಸಿಗುತ್ತಿದ್ದಂತೆಯೇ, ಅವರ ಇಮೇಜ್​ ಮನೆಯಲ್ಲಿ ಸಂಪೂರ್ಣ ಬದಲಾಗಿದೆ. ಮನೆಯ ಸ್ಪರ್ಧಿಗಳು ಅವರೊಂದಿಗೆ ನಡೆದುಕೊಳ್ಳುತ್ತಿರುವ ರೀತಿಯೇ ಬದಲಾಗಿದೆ.
ಇನ್ನು ಬಿಗ್ ಬಾಸ್​ ಮನೆಯಲ್ಲಿ ಈಗ ಟೆಲಿಫೋನ್​ ಬೂತ್ ಸಹ ಬಂದಿದೆ. ಮನೆಯ ಸ್ಪರ್ಧಿಗಳಿಗೆ ಆಗಾಗ ಕರೆ ಮಾಡುವ ಬಿಗ್ ಬಾಸ್​ ಸಖತ್ ಮನರಂಜನೆ ಕೊಡುತ್ತಿದ್ದಾರೆ. ಪ್ರತಿ ಸಲ ಕರೆ ಬಂದಾಗಲೂ ಒಬ್ಬರು ಬಂದು ಕಾಲ್​ ರಿಸೀವ್ ಮಾಡುತ್ತಾರೆ. ಈ ವಾರ ಮನೆಗೆ ಕೊಡಲಾಗುವು ಸೂಚನೆ ಹಾಗೂ ಸಂದೇಶಗಳನ್ನು ಫೋನ್ ಕಾಲ್​ ಮೂಲಕವೇ ಕೊಡಲಾಗುವುದು ಎಂದು ಬಿಗ್ ಬಾಸ್ ತಿಳಿಸಿದ್ದಾರೆ.
Published by:Anitha E
First published: