Bigg Boss Kannada 8 Elimination: ಮಧ್ಯರಾತ್ರಿ ನಡೆದ ಎಲಿಮಿನೇಷನ್​ನಲ್ಲಿ ಬಿಗ್ ಬಾಸ್​ ಮನೆಯಿಂದ ಹೊರ ನಡೆದ ಸ್ಪರ್ಧಿ ಇವರೇ..!

BBK8 Chakravathy Chandrachud: ಸಾಕಷ್ಟು ತಿರುವುಗಳಿಂದ ಕೂಡಿದ್ದ ಈ ಮಿಡ್​ ವೀಕ್​ ಹಾಗೂ ಮಿಡ್ ನೈಟ್ ಎಲಿಮಿನೇಷನ್​ ಕೊನೆಗೂ ಆಗಿದೆ. ಬಿಗ್ ಬಾಸ್​ ಸೀಸನ್ 8ರ ಸೆಕೆಂಡ್​ ಇನ್ನಿಂಗ್ಸ್​ನ ನಾಲ್ಕನೇ ಎಲಿಮಿನೇಷನ್​ ಕುತೂಹಲದಿಂದ ಕೂಡಿತ್ತು. ನಾಮಿನೇಟ್ ಆಗಿದ್ದ ಐವರಲ್ಲಿ ಒಬ್ಬರು ಮನೆಯಿಂದ ಹೊರ ಬಂದಿದ್ದಾರೆ.

BBK8 Chakravathy Chandrachud: ಸಾಕಷ್ಟು ತಿರುವುಗಳಿಂದ ಕೂಡಿದ್ದ ಈ ಮಿಡ್​ ವೀಕ್​ ಹಾಗೂ ಮಿಡ್ ನೈಟ್ ಎಲಿಮಿನೇಷನ್​ ಕೊನೆಗೂ ಆಗಿದೆ. ಬಿಗ್ ಬಾಸ್​ ಸೀಸನ್ 8ರ ಸೆಕೆಂಡ್​ ಇನ್ನಿಂಗ್ಸ್​ನ ನಾಲ್ಕನೇ ಎಲಿಮಿನೇಷನ್​ ಕುತೂಹಲದಿಂದ ಕೂಡಿತ್ತು. ನಾಮಿನೇಟ್ ಆಗಿದ್ದ ಐವರಲ್ಲಿ ಒಬ್ಬರು ಮನೆಯಿಂದ ಹೊರ ಬಂದಿದ್ದಾರೆ.

BBK8 Chakravathy Chandrachud: ಸಾಕಷ್ಟು ತಿರುವುಗಳಿಂದ ಕೂಡಿದ್ದ ಈ ಮಿಡ್​ ವೀಕ್​ ಹಾಗೂ ಮಿಡ್ ನೈಟ್ ಎಲಿಮಿನೇಷನ್​ ಕೊನೆಗೂ ಆಗಿದೆ. ಬಿಗ್ ಬಾಸ್​ ಸೀಸನ್ 8ರ ಸೆಕೆಂಡ್​ ಇನ್ನಿಂಗ್ಸ್​ನ ನಾಲ್ಕನೇ ಎಲಿಮಿನೇಷನ್​ ಕುತೂಹಲದಿಂದ ಕೂಡಿತ್ತು. ನಾಮಿನೇಟ್ ಆಗಿದ್ದ ಐವರಲ್ಲಿ ಒಬ್ಬರು ಮನೆಯಿಂದ ಹೊರ ಬಂದಿದ್ದಾರೆ.

  • Share this:
ಬಿಗ್ ಬಾಸ್​ ಮನೆಯಲ್ಲಿ ಒಂದು ಕಡೆ ಎಲಿಮಿನೇಷನ್ ಆಗುತ್ತಿಲ್ಲ. ಜೊತೆಗೆ ಟಾಸ್ಕ್​ ಸಹ ಕೊಟ್ಟಿಲ್ಲ ಅಂತ ಸ್ಪರ್ಧಿಗಳಲ್ಲಿ ಕೆಲವರು ತಲೆ ಕೆಡಿಸಿಕೊಂಡಿದ್ದಾರೆ. ಬಿಗ್ ಬಾಸ್​ ಮನೆಯಲ್ಲಿ ಕೂಡಿ ಬಾಳುವ ಪಾಠ ಮಾಡಲು ಬಿಗ್ ಬಾಸ್​ ಜೀವ ಸರಪಳಿಯ ಆಟವನ್ನು ಕೊಟ್ಟಿದ್ದರು. ಎಲ್ಲರೂ ಬಿಗ್ ಬಾಸ್ ಮನೆಯಲ್ಲಿ ಕೈ ಕೈ ಹಿಡಿದೇ ಎಲ್ಲ ಕೆಲಸಗಳನ್ನು ಮಾಡಬೇಕಿತ್ತು. ಇದು ಮೊದಲು ಹೇಳಿದಾಗ ಚೆನ್ನಾಗಿದೆ ಎನಿಸಿದರೂ, ನಂತರ ಅದರ ಕಷ್ಟ ಅರ್ಥವಾಗಿತ್ತು. ಈ ಚಟುವಟಿಕೆ ಮುಗಿದ ನಂತರ ಬಿಗ್ ಬಾಸ್​ ಮನೆಯಲ್ಲಿ ಎಲಿಮಿನೇಷನ್ ಪ್ರಕ್ರಿಯೆ ಆರಂಭವಾಯಿತು. ಬಿಗ್ ಬಾಸ್​ ಮನೆಯಲ್ಲಿರುವ ಫೋನ್ ಬೂತ್​ಗೆ ಕರೆ ಮಾಡಿದ ಬಿಗ್ ಬಾಸ್​ ಇದರ ಬಗ್ಗೆ ಸೂಚನೆ ನೀಡುತ್ತಾರೆ. ಕರೆ ರಿಸೀವ್ ಮಾಡಿದ ಮಂಜು ಪಾವಗಡ ನಾಮಿನೇಟ್ ಆಗಿರುವ ಸ್ಪರ್ಧಿಗಳಿಗೆ ಬಿಗ್ ಬಾಸ್​ ಸೂಚನೆಯಂತೆ ಲಗೇಜ್ ಪ್ಯಾಕ್ ಮಾಡಿ ಇಡುವಂತೆ ಹೇಳುತ್ತಾರೆ. ಮಂಜು ಆ ಮಾತನ್ನು ಹೇಳಿದಂತೆಯೇ ಮನೆಯಲ್ಲಿ ಒಂದು ರೀತಿಯ ಮೌನ. ನಗುತ್ತಾ ತಮಾಷೆ ಮಾಡುತ್ತಿದ್ದ ಪ್ರಶಾಂತ್ ಸಂಬರಗಿ ಅವರು ಫುಲ್ ಸೈಲೆಂಟ್​ ಆಗುತ್ತಾರೆ. 

ಇನ್ನು ಶಮಂತ್ ಗೌಡ, ಎಂದಿನಂತೆ ಲಗೇಜ್ ಪ್ಯಾಕ್ ಮಾಡಿ ಒಂದು ಹಾಡು ಸಹ ಹಾಡುತ್ತಾರೆ. ನಂತರ ದಿವ್ಯಾ ಸುರೇಶ್​ ಜತೆ ಫೋಟೋ ತೆಗೆಸಿಕೊಳ್ಳಲು ಕರೆಯುತ್ತಾರೆ. ಅಲ್ಲಿಗೆ ಒಂದು ವೇಳೆ ಹೊರಗೆ ಹೋಗಲು ಹೇಳಿದರೆ, ಆಗ ಅವಕಾಶ ಸಿಗುತ್ತೋ ಇಲ್ಲವೋ ಎಂದು ಹೀಗೆ ಮಾಡುತ್ತಾರೆ.









ಎಲಿಮಿನೇಷನ್​ ಪ್ರಕ್ರಿಯೆ ಶುರುವಾದ ನಂತರ ಬಿಗ್ ಬಾಸ್​ ಪದೇ ಪದೇ ಕರೆ ಮಾಡಿ, ನಾಮಿನೇಟ್ ಆಗಿರುವ ಪ್ರತಿ ಸ್ಪರ್ಧಿಯನ್ನು ಪೋನ್​ ಬೂತ್​ಗೆ ಕರೆದು ಮಾತನಾಡಿಸುತ್ತಾರೆ. ಜೊತೆಗೆ ಬಿಗ್ ಬಾಸ್​ ಮನೆಯಲ್ಲಿ ಆ ಸ್ಪರ್ಧಿಯ ಜರ್ನಿ ಬಗ್ಗೆ ಕೇಳುತ್ತಾರೆ. ಕೊನೆಯಲ್ಲಿ ಮನೆಯ ಮುಖ್ಯ ದ್ವಾರ 2 ನಿಮಿಷಗಳಲ್ಲಿ ತೆರೆದರೆ ನೀವು ಎಲಿಮಿನೇಟ್ ಆಗಿದ್ದೀರಿ ಎಂದು ಹೇಳುತ್ತಾರೆ.

ಇದನ್ನೂ ಓದಿ: Rashmika Mandanna: ರಶ್ಮಿಕಾ ಕೈಯಲ್ಲಿ ಮತ್ತೊಂದು ಸಿನಿಮಾ: ಅಭಿಮಾನಿಗಳಿಗೆ ಸಿಕ್ತು ಸಿಹಿ ಸುದ್ದಿ..!

ಕರೆ ರಿಸೀವ್ ಮಾಡುವ ಪ್ರತಿ ಸ್ಪರ್ಧಿಯೂ ಈ ಘಟ್ಟದ ಮೂಲಕವೇ ಸಾಗುತ್ತಾರೆ. ಈ ಘಟ್ಟದಲ್ಲಿ ಶುಭಾ ಪೂಂಜಾ ಮೊದಲಿಗೆ ಸೇಫ್​ ಆಗುತ್ತಾರೆ.  ನಂತರ ಪ್ರಶಾಂತ್ ಸಂಬರಿ ಕರೆ ರಿಸೀವ್ ಮಾಡುತ್ತಾರೆ. ಅವರಿಗೂ ಅದನ್ನೇ ಹೇಳಲಾಗುತ್ತದೆ. ಮುಖ್ಯ ದ್ವಾರದ ಕಡೆ ನೋಡುತ್ತಾ ಭಾವುಕರಾಗಿ ಬಿಕ್ಕಿ ಬಿಕ್ಕಿ ಅಳುತ್ತಾರೆ. ಕೆಲವು ನಿಮಿಷಗಳ ನಂತರ ಮತ್ತೆ ಕರೆ ಮಾಡುವ ಬಿಗ್ ಬಾಸ್​ ಪ್ರಶಾಂತ್ ಅವರನ್ನು ಸೇಫ್ ಎಂದು ಹೇಳುತ್ತಾರೆ.

ಇದನ್ನೂ ಓದಿ: Amrutha Ramamoorthy: ಕಸ್ತೂರಿ ನಿವಾಸ ಧಾರಾವಾಹಿಯಲ್ಲಿ ಮತ್ತೆ ಕಾಣಿಸಿಕೊಳ್ಳಲಿದ್ದಾರೆ ಗರ್ಭಿಣಿ ಅಮೃತಾ ರಾಮಮೂರ್ತಿ..!

ನಂತರ ಶಮಂತ್, ದಿವ್ಯಾ ಉರುಡುಗ ಹಾಗೂ ಚಕ್ರವರ್ತಿ ಅವರಲ್ಲಿ ಯಾರಾದರೂ ಒಬ್ಬರು ಮನೆಯಿಂದ ಹೊರ ಹೋಗುತ್ತಿದ್ದೀರಿ ಎಂದು ಬಿಗ್​ ಬಾಸ್​ ಹೇಳುತ್ತಾರೆ. ಮೊದಲಿಗೆ ದಿವ್ಯಾ ಉರುಡುಗ ಸೇಫ್ ಆಗುತ್ತಾರೆ. ನಂತರ ಶಮಂತ್ ಹಾಗೂ ಚಕ್ರವರ್ತಿ ಅವರನ್ನು ಒಟ್ಟಿಗೆ ಕರೆಸಿ ಈ ಎಲಿಮಿನೇಷನ್​ ಅನ್ನು ಪ್ರಕಟಿಸಲಾಗುತ್ತದೆ. ಇದರಲ್ಲಿ ಚಕ್ರವರ್ತಿ ಅವರು ಮನೆಯಿಂದ ಹೊರ ಹೋಗುತ್ತಾರೆ. ಈ ಎಲಿಮಿನೇಷನ್ ಪ್ರಕ್ರಿಯೆ ನಿನ್ನೆ ರಾತ್ರಿಯೇ ನಡೆದಿದ್ದು, ಆಗಲೇ ಚಕ್ರವರ್ತಿ ಅವರು ಹೊರ ಹೋಗಿದ್ದಾರೆ.

ಎಲಿಮಿನೇಟ್ ಆದ ಚಕ್ರವರ್ತಿ

ಚಕ್ರವರ್ತಿ ಚಂದ್ರಚೂಡ ಅವರು ಕಡೆಯ ಎಲಿಮಿನೇಷನ್ ಪ್ರಕ್ರಿಯೆ ನಡೆದಾಗ ಪ್ರಿಯಾಂಕಾ ತಿಮ್ಮೇಶ್ ಅವರ ಜೊತೆ ಅಸಭ್ಯವಾಗಿ ವರ್ತಿಸಿದ್ದರು. ಪ್ರಿಯಾಂಕಾ ತಿಮ್ಮೇಶ್​ ಮನೆಯಿಂದ ಹೊರ ಹೋಗುವಾಗ ಸಿಕ್ಕಿದ್ದ ವಿಶೇಷ ಅಧಿಕಾರ ಚಕ್ರವರ್ತಿ ಚಂದ್ರಚೂಡ ಅವರನ್ನು ಮನೆಯಿಂದ ಮುಂದಿನ ವಾರ ಹೊರ ಹೋಗಲು ನೇರವಾಗಿ ನಾಮಿನೇಟ್​ ಮಾಡಿದ್ದರು.






ಪ್ರಿಯಾಂಕಾ ನಾಮಿನೇಟ್ ಮಾಡುತ್ತಿದ್ದಂತೆಯೇ ಚಕ್ರವರ್ತಿ ಅವರು ಪ್ರಿಯಾಂಕಾ ತಿಮ್ಮೇಶ್ ಅವರಿಗೆ ಮಧ್ಯದ ಬೆರಳು ತೋರಿಸುತ್ತಾರೆ. ಚಕ್ರವರ್ತಿ ಅವರ ಈ ವರ್ತನೆಗೆ ಆಕ್ರೋಶ ವ್ಯಕ್ತವಾಗಿತ್ತು. ಇದರಿಂದಾಗಿ ತುಂಬಾ ಜನ ನೆಟ್ಟಿಗರು ಚಕ್ರವರ್ತಿ ಅವರನ್ನು ಬಿಗ್ ಬಾಸ್​ ಮನೆಯಿಂದ ಹೊರ ಹಾಕಿ ಎಂದು ಆಗರಹಿಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ಸುದೀಪ್ ಹಾಗೂ ಕಾರ್ಯಕ್ರಮದ ನಿರ್ಮಾಪಕರಿಗೆ ಟ್ಯಾಗ್ ಮಾಡುವ ಮೂಲಕ ಚಕ್ರವರ್ತಿ ಅವರನ್ನು ಮನೆಯಿಂದ ಹೊರ ಹಾಕಿ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು.

ನಂತರ ಕಳೆದ ವಾರ ಸುದೀಪ್ ಸಹ ಚಕ್ರವರ್ತಿ ಅವರನ್ನು ಸರಿಯಾಗಿಯೇ ತರಾಟೆಗೆ ತೆಗೆದುಕೊಂಡಿದ್ದರು. ಸುದೀಪ್ ಅವರು ಕ್ಲಾಸ್ ತೆಗೆದುಕೊಂಡ ನಂತರ ಅಂದರೆ ನಿನ್ನೆಯ ಸಂಚಿಕೆಯಲ್ಲಿ ಚಕ್ರವರ್ತಿ ಅವರು ಕ್ಯಾಮೆರಾ ಮುಂದೆ ಬಂದು ತಲೆ ಬಗ್ಗಿಸಿ ಪ್ರಿಯಾಂಕಾ ಬಳಿ ಕ್ಷಮೆ ಯಾಚಿಸುತ್ತಾರೆ. ಆದರೂ ಸಹ ಚಕ್ರವರ್ತಿ ಅವರು ಮನೆಯಿಂದ ಹೊರ ಬಂದಿದ್ದಾರೆ. ಈ ಸಲ ಅವರಿಗೆ ಕಡಿಮೆ ಮತ ಸಿಗಲು ಇದೇ ಪ್ರಮುಖ ಕಾರಣ ಎಂದೂ ಹೇಳಲಾಗುತ್ತಿದೆ.
Published by:Anitha E
First published: