Bigg Boss Kannada 8: ಹೇಳಿದಂತೆಯೇ ಸ್ಪರ್ಧಿಗಳ ನಿದ್ದೆಗೆಡಿಸಿದ ಬಿಗ್ ಬಾಸ್​: ಟ್ರಿಣ್​ ಟ್ರಿಣ್​ ಸದ್ದು ಕೇಳಿದೊಡಣೆ ಅರಳುತ್ತೆ ಮುಖ..!

ಬಿಗ್ ಬಾಸ್​ ಮನೆಯಲ್ಲಿ ಫೋನ್ ಬೂತ್​. ಹೇಳಿದಂತೆಯೇ ಮೊದಲ ದಿನವೇ ಸ್ಪರ್ಧಿಗಳ ನಿದ್ದೆಗೆಡಿಸಿದ ಬಿಗ್ ಬಾಸ್​. ನಿದ್ದೆ ಹಾಳಾದ್ರೂ ಪರವಾಗಿಲ್ಲ ಟ್ರಿಣ್ ಟ್ರಿಣ್​ ಸದ್ದು ಬಂದ ಕೂಡಲೇ ಸ್ಪರ್ಧಿಗಳ ಮುಖದಲ್ಲಿ ನಗು ಮೂಡುತ್ತದೆ.

ಬಿಗ್​ ಬಾಸ್​ ಜತೆ ಫೋನ್​ನಲ್ಲಿ ಮಾತನಾಡಿದ ದಿವ್ಯಾ ಸುರೇಶ್​

ಬಿಗ್​ ಬಾಸ್​ ಜತೆ ಫೋನ್​ನಲ್ಲಿ ಮಾತನಾಡಿದ ದಿವ್ಯಾ ಸುರೇಶ್​

  • Share this:
ಬಿಗ್ ಬಾಸ್​ ಫಿನಾಲೆಗೆ ಇನ್ನು 13 ದಿನಗಳು ಬಾಕಿ ಇವೆ. ಹೀಗಿರುವಾಗಲೇ ಬಿಗ್ ಬಾಸ್​ ಮನೆಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಸೂಪರ್ ಸಂಡೆ ವಿಥ್ ಸುದೀಪ ಸಂಚಿಕೆಯಲ್ಲಿ ಕಿಚ್ಚ ಹೇಳಿದಂತೆಯೇ ಮನೆಯಲ್ಲಿ ಈಗಾಗಲೇ ಸ್ಪರ್ಧಿಗಳ ನಿದ್ದೆ ಹಾರಿ ಹೋಗಿದೆ. ಹೇಳಿದಂತೆಯೇ ಬೆಳಿಗ್ಗೆ ವೇಕಪ್​ ಸಾಂಗ್​ ಪ್ಲೇ ಆಗುವ ಮುನ್ನವೇ ಸ್ಪರ್ಧಿಗಳನ್ನು ನಿದ್ದೆಯಿಂದ ಎಬ್ಬಿಸಲಾಗಿದೆ. ಬಿಗ್ ಬಾಸ್​ ಮನೆಯಲ್ಲಿ ಈಗ ಟೆಲಿಫೋನ್ ಬೂತ್​ ಇಡಲಾಗಿದೆ. ಈ ಸೀಸನ್​ನಲ್ಲಿ ಇದೇ ಮೊದಲ ಸಲ ಬಿಗ್ ಬಾಸ್​ ಮನೆಯ ಒಳಗೆ ಟೆಲಿಫೋನ್ ಬೂತ್ ಇಡಲಾಗಿದ್ದು, ಸ್ಪರ್ಧಿಗಳು ಫೋನ್ ಕಾಲ್​ನಲ್ಲಿ ಮಾತನಾಡುತ್ತಿದ್ದಾರೆ. ಪೋನ್​ ರಿಂಗ್​ ಆದರೆ ಸಾಕು ಓಡುತ್ತಾ ಬಂದು ಕರೆ ಸ್ವೀಕರಿಸುತ್ತಿದ್ದಾರೆ ಸ್ಪರ್ಧಿಗಳು. ಮೊದಲ ದಿನವೇ ಬೆಳಿಗ್ಗೆ 6.15ಕ್ಕೆ ಸ್ಪರ್ಧಿಗಳಿಗೆ ಮೊಲದ ಕರೆ ಮಾಡುವ ಮೂಲಕ ಬಿಗ್ ಬಾಸ್​ ಶಾಕ್​ ಕೊಟ್ಟಿದ್ದರು. ಮೊದಲು ಫೋನ್ ಟ್ರಿಣ್​ ಟ್ರಿಣ್​ ಎಂದಾಗ  ಮನೆಯಲ್ಲಿ ಕೆಲವರು ಅದು ಅಲಾರ್ಮ್ ಇರಬೇಕು ಎಂದು ಮಲಗಿದ್ದಲ್ಲೇ ಇದ್ದರು. 

ಟ್ರಿಣ್ ಟ್ರಿಣ್ ಸದ್ದು ರಿಂಗಣಿಸುತ್ತಲೇ ಇತ್ತು. ಶಮಂತ್ ಗೌಡ ನಿದ್ದೆ ಬಿಟ್ಟು ಬಂದು ಫೋನ್ ಕಾಲ್​ಗೆ ಉತ್ತರಿಸುತ್ತಾರೆ. ಮೊದಲಿಗೆ ಶಮಂತ್ ಅವರಿಗೆ ರಾತ್ರಿ ಅಥವಾ ಬೆಳಿಗ್ಗೆ ಕನಸು ಏನಾದರೂ ಬಿದ್ದಿತ್ತಾ ಎಂದು ಕೇಳುವ ಬಿಗ್ ಬಾಸ್​, ಇಲ್ಲ ಎನ್ನುವ ಶಮಂತ್ ಬಳಿ ಕೆಲ ನಿಮಿಷ ಮಾತನಾಡಿ ಹೋಗಿ ಮತ್ತೆ ಮಲಗಿ ಎನ್ನುತ್ತಾರೆ. ಅದ್ಕಕೂ ಮೊದಲು ಒಂದು ಹಾಡನ್ನೂ ಹೇಳಿಸುತ್ತಾರೆ. ನಂತರ ಇಡೀ ದಿನ ಆ್ಯಕ್ಟೀವ್ ಆಗಿರಲು ನಿದ್ದೆ ಬಹಳ ಮುಖ್ಯ. ಗುಡ್ ನೈಟ್​ ಹೋಗಿ ಮಲಗಿ ಎನ್ನುತ್ತಾರೆ.






ಮತ್ತೆ ಟೆಲಿಫೋನ್ ಬೂತ್​ಗೆ ಕರೆ ಮಾಡುವ ಬಿಗ್​ ಬಾಸ್​ ಅವರಿಗೆ ಸಿಗುವುದು ದಿವ್ಯಾ ಸುರೇಶ್​. ದಿವ್ಯಾ ಅವರ ಜತೆ ಸಖತ್ ಕ್ಯೂಟ್​ ಆಗಿ ಮಾತನಾಡುವ ಬಿಗ್ ಬಾಸ್​, ನಿಮ್ಮ ಇಷ್ಟ ಬಣ್ಣ ಯಾವುದು ಕೇಳುತ್ತಾರೆ. ನಂತರ ನನ್ನಿಷ್ಟದ ಬಣ್ಣದ ಯಾವುದು ಅಂತ ಕೇಳುವುದಿಲ್ಲವಾ..? ಎಂದ ಕೂಡಲೇ ದಿವ್ಯಾ ಸುರೇಶ್​ ಯಾವುದು ಅಂತ ಕೇಳುತ್ತಾರೆ. ಅದಕ್ಕೆ ನೀಲಿ ಬಣ್ಣ ಎನ್ನುವ ಬಿಗ್ ಬಾಸ್​, ನೀಲಿ ಬಣ್ಣದ ಡ್ರೆಸ್​ ಹಾಕಿಕೊಳ್ಳಿ ಚೆನ್ನಾಗಿರುತ್ತೆ ಎನ್ನುತ್ತಾರೆ. ಅಂತೆಯೇ ದಿವ್ಯಾ ಸುರೇಶ್ ನೀಲಿ ಬಣ್ಣದ ಡ್ರೆಸ್​ ತೊಡುತ್ತಾರೆ.

ಇದನ್ನೂ ಓದಿ: ದಿವ್ಯಾಗೆ ತಲೆ ಬಾಚಿ ಜಡೆ ಹಾಕಿದ ಚಕ್ರವರ್ತಿ: ಕ್ಯಾಪ್ಟನ್​ ಜತೆ ಹೆಚ್ಚಿನ ಸಮಯ ಕಳೆಯುತ್ತಿರುವ ಚಂದ್ರಚೂಡ..!

ಶಮಂತ್​ ಅವರು ಬಿಗ್ ಬಾಸ್​ ಮನೆಗೆ ಫೋನ್ ಬಂದಿದೆ ಗುರು ಫೋನು... ನನಗೆ ನಿಜಕ್ಕೂ ಖುಷಿಯಾಯ್ತು ಅಂತಾರೆ. ಆದರೆ ಫೋನ್​ನಲ್ಲಿ ಮಾತನಾಡಿದ್ದು ಕನಸು ಅನಿಸುತ್ತಿದೆ ಎನ್ನುತ್ತಾರೆ ಬ್ರೋ ಗೌಡ.






ಮನೆಯಲ್ಲಿ ಎಲ್ಲರೂ ಮನೆಯಿಂದ ಯಾವಾಗ ಎಲಿಮಿನೇಟ್​ ಆಗ್ತೀವೋ ಅಂತ ಟೆನ್ಷನ್​ನಲ್ಲಿದ್ದಾರೆ. ಸುದೀಪ್ ಅವರು ಪ್ರತಿ ಕ್ಷಣ ಎಂಜಾಯ್ ಮಾಡಿ ಅಂದ್ರೆ, ಮನೆಯವರು ಆತಂಕದಲ್ಲಿ ಕಳೆಯುತ್ತಿದ್ದಾರೆ. ಅದಕ್ಕೆ ಫೋನ್ ಕರೆಗಳ ಮೂಲಕ ನಾಮಿನೇಟ್ ಆಗಿರುವ ಸ್ಪರ್ಧಿಗಳ ಮುಖದಲ್ಲಿ ನಗು ಮೂಡಿಸುವ ಯತ್ನ ಮಾಡಿದ್ದಾರೆ ಬಿಗ್ ಬಾಸ್​.

ಇದನ್ನೂ ಓದಿ: ಒಟಿಟಿ ವೇದಿಕೆಯಲ್ಲಿ ಲಾಂಚ್ ಆಗಲಿದೆ​ ಹಿಂದಿ ಬಿಗ್ ಬಾಸ್​ ಸೀಸ್​ನ್​ 15: ನಿರೂಪಣೆ ಮಾಡಲಿದ್ದಾರೆ ಕರಣ್​ ಜೋಹರ್​

ಇನ್ನು ಬಿಗ್​ ಬಾಸ್​ ಮನೆಗೆ ಬರುವ ಸಂದೇಶ ಹಾಗೂ ಸೂಚನೆಗಳೆಲ್ಲ ಈ ಕಾಲ್​ ಮೂಲಕವೇ ಬರಲಿದೆ. ಈ ಕಾಲ್​ ಯಾವ ಸಮಯದಲ್ಲಾದರೂ ಬರಬಹುದು. ಹೀಗೆ ಕರೆ ಬಂದಾಗ ಅದು ಸ್ಪರ್ಧಿಗಳಿಗೆ ಖುಷಿ ನೀಡುವ ಅಥವಾ ಬೇಸರ ತರಿಸುವ ವಿಷಯವೂ ಆಗಿರಬಹುದಾಗಿದೆ.  ಆದರೆ ಸದ್ಯಕ್ಕಂತೂ ಟ್ರಿಣ್ ಟ್ರಿಣ್​ ಸದ್ದಾದರೆ ಸಾಕು ಸ್ಪರ್ಧಿಗಳ ಮುಖದಲ್ಲಿ ನಗು ಮೂಡುತ್ತದೆ. ಇನ್ನು, ಬಿಗ್ ಬಾಸ್ ತಮ್ಮ ಒಂದು ವಸ್ತು ಮನೆಯಲ್ಲಿದೆ. ಅದು ತುಂಬಾ ಚಿಕ್ಕದು ಹಾಗೂ ಸದ್ದು ಮಾಡುತ್ತದೆ. ಅದನ್ನು ಹುಡುಕಿ ನನಗೆ ಕೊಡಿ ಎಂದು ಸ್ಪರ್ಧಿಗಳಿಗೆ ಹೇಳಿದ್ದಾರೆ. ಆ ವಸ್ತುವನ್ನು ಸ್ಪರ್ಧಿಗಳು ಹುಡುಕುತ್ತಾರಾ ಅಂತ ನಾಳೆ ತಿಳಿಯಲಿದೆ.
Published by:Anitha E
First published: