Bigg Boss Kannada Season 8: ಬಿಗ್ ಬಾಸ್​ ಕೊಟ್ಟ ಟ್ವಿಸ್ಟ್: ಗೊಂದಲಕ್ಕೀಡಾದ ಕ್ಯಾಪ್ಟನ್​ ದಿವ್ಯಾ ಸುರೇಶ್​..!

Bigg Boss Kannada 8: ಬಯಸಿ ಬಯಸಿ ಕ್ಯಾಪ್ಟನ್ ಆದ ದಿವ್ಯಾ ಸುರೇಶ್ ಅವರಿಗೆ ಈಗ ಕ್ಯಾಪ್ಟನ್ಸಿಯಿಂದಲೇ ಕಿರಿಕಿರಿಯಾಗುತ್ತಿದೆ. ಹೌದು, ಬಿಗ್ ಬಾಸ್ ಕೊಡುತ್ತಿರುವ ಟ್ವಿಸ್ಟ್​ಗಳಿಂದಾಗಿ ದಿವ್ಯಾ ಸುರೇಶ್​ ಗೊಂದಲಕ್ಕೀಡಾಗಿದ್ದಾರೆ.

ದಿವ್ಯಾ ಸುರೇಶ್​

ದಿವ್ಯಾ ಸುರೇಶ್​

  • Share this:
ಬಿಗ್​ ಬಾಸ್​ ಸೀಸನ್​ 8ರಲ್ಲಿ ಸ್ಪರ್ಧಿಗಳು ನೂರು ದಿನ ಕಳೆದಿದ್ದಾರೆ. ಯಶಸ್ವಿಯಾಗಿ ನೂರು ದಿನ ಕಳೆದ ಖುಷಿಯಲ್ಲಿ ಬಿಗ್ ಬಾಸ್​ ಮನೆಯಲ್ಲಿರುವ ಸ್ಪರ್ಧಿಗಳಿಗೆ ಕೇಕ್​ ಕಳುಹಿಸಿದ್ದರು. ಸ್ಪರ್ಧಿಗಳು ಆ ಕೇಕ್​ ಅನ್ನು ಖುಷಿಯಿಂದ ಕತ್ತರಿಸಿ ಸಂಭ್ರಮಿಸಿದ್ದಾರೆ. ಇನ್ನು ನೂರು ದಿನಗಳ ಜರ್ನಿಯಲ್ಲಿ ದಿವ್ಯಾ ಸುರೇಶ್ ಅವರು ಮನೆಯ ಎರಡನೇ ಮಹಿಳಾ ಕ್ಯಾಪ್ಟನ್​ ಆಗಿ ಆಯ್ಕೆಯಾಗಿದ್ದಾರೆ. ದಿವ್ಯಾ ಸುರೇಶ್​ ಅವರು ಕ್ಯಾಪ್ಟನ್​ ಆಗಿ ಆಯ್ಕೆಯಾದ ದಿನದಿಂದ ಅವರಿಗೆ ಸಾಕಷ್ಟು ಸವಾಲುಗಳು ಎದುರಾಗುತ್ತಿವೆ. ಮೊದಲಿಗೆ ಚಕ್ರವರ್ತಿ ಚಂದ್ರಚೂಡ ಅವರು ಕಳಪೆಯಾಗಿ ಆಯ್ಜೆಯಾದ ಕಾರಣಕ್ಕೆ ಪ್ರತಿಭಟನೆ ಆರಂಭಿಸಿ, ತರಕಾರಿ ಕತ್ತರಿಸಲಿಲ್ಲ. ಇದರಿಂದಾಗಿ ಮನೆಯವರು ತರಕಾರಿ ಇಲ್ಲದೆಯೇ ಅಡುಗೆ ಮಾಡುವ ಹಾಗೂ ಕತ್ತರಿಸದ ತರಕಾರಿ ಬಳಸಿ ಅಡುಗೆ ತಯಾರಿಸುವ ಪ್ರಯೋಗ ಮಾಡಿದ್ದರು. ಇದಾದ ನಂತರ ಬಿಗ್ ಬಾಸ್​ ಕೊಡುತ್ತಿರುವ ಟ್ವಿಸ್ಟ್​ಗಳಿಂದಾಗಿ ದಿವ್ಯಾ ಸುರೇಶ್​ ಕಂಗಾಲಾಗುವುದರೊಂದಿಗೆ ಗೊಂದಲಕ್ಕೀಡಾಗಿದ್ದಾರೆ.

ಹೌದು, ದಿವ್ಯಾ ಸುರೇಶ್ ಅವರು ಕ್ಯಾಪ್ಟನ್ ಆದಾಗಿನಿಂದ ಬಿಗ್ ಬಾಸ್​ ಕೊಡುತ್ತಿರುವ ನಾನಾ ರೀತಿಯ ಟಾಸ್ಕ್​ಗಳಿಂದಾಗಿ ಸಿಕ್ಕಾಪಟ್ಟೆ ಗೊಂದಲದಲ್ಲಿದ್ದಾರೆ. ಕಾರಣ ಮನೆಯಲ್ಲಿ ಈಗ ಡಎಂಟು ಮಂದಿ ಸ್ಪರ್ಧಿಗಳು ಉಳಿದಿದ್ದು, ಇದರಲ್ಲಿ ದಿವ್ಯಾ ಕ್ಯಾಪ್ಟನ್​ ಆಗಿರುವ ಕಾರಣಕ್ಕೆ ಅವರು ಟಾಸ್ಕ್​ಗಳ ಮೇಲ್ವಿಚಾರಣೆ ವಹಸಿಕೊಳ್ಳುತ್ತಿದ್ದಾರೆ. ಉಳಿದವರು ಟಾಸ್ಕ್​ಗಳಲ್ಲಿ ಭಾಗಿಯಾಗುತ್ತಿದ್ದಾರೆ.


ಕ್ಯಾಪ್ಟನ್ಸಿ ಟಾಸ್ಕ್​ಗೆ ಅರ್ಹತೆ ಪಡೆಯವ ನಾನಾ ನೀನಾ ಟಾಸ್ಕ್​ಗಾಗಿ ಅಂಕ ಪಡೆಯಲು ವಿಭಿನ್ನವಾದ ಟಾಸ್ಕ್​ಗಳನ್ನು ನೀಡಲಾಗುತ್ತಿದೆ. ಈ ಟಾಸ್ಕ್​ಗಳಲ್ಲಿ ಬಿಗ್ ಬಾಸ್​ ಒಂದು ಟ್ವಿಸ್ಟ್ ಇಟ್ಟಿದ್ದಾರೆ. ಅದು ಉಳಿದ 7 ಮಂದಿ ಈ ಟಾಸ್ಕ್​ನಲ್ಲಿ ಭಾಗಿಯಾಗುವಂತಿಲ್ಲ. ಒಂದು ಟಾಸ್ಕ್​ನಲ್ಲಿಇಬ್ಬರು, ಮತ್ತೊಂದು ಟಾಸ್ಕ್​ನಲ್ಲಿ ಐವರು ಹೀಗೆ ಆಟ ಆಡುವವರ ಸಂಖ್ಯೆಯನ್ನು ಬಿಗ್ ಬಾಸ್​ ನಿರ್ಧರಿಸಿದ್ದಾರೆ. ಆದರೆ, ಯಾರು ಆಡಬೇಕು ಎಂಬುದು ಮನೆಯ ಕ್ಯಾಪ್ಟನ್ ಹಾಗೂ ಉಳಿದ ಸ್ಪರ್ಧಿಗಳು ನಿರ್ಧರಿಸಬೇಕಿದೆ.

ಇದನ್ನೂ ಓದಿ: Bigg Boss Season 8 Kannada: ಚಕ್ರವರ್ತಿ ಮೀಸೆಗೆ ಕತ್ತರಿ ಹಾಕಿದ ಪ್ರಶಾಂತ್​ ಸಂಬರಗಿ..!

ನಿನ್ನೆ ಸಹ ಟಾಸ್ಕ್​ವೊಂದರಲ್ಲಿ ಯಾರು ಆಡಬೇಕೆಂದು ನಿರ್ಧರಿಸಲು ಒಂದೂವರೆ ಗಂಟೆ ಹಿಡಿದಿತ್ತು. ಸ್ಪರ್ಧಿಗಳಲ್ಲಿ ಯಾರೊಬ್ಬರೂ ತ್ಯಾಗ ಮಾಡಲು ಸಿದ್ಧರಿಲ್ಲ. ಹೀಗಾಗಿ ಮಾತುಕತೆಯ ಮೂಲಕ ಆಟದಲ್ಲಿ ಯಾರು ಭಾಗಿಯಾಗಲಿದ್ದಾರೆ ಎಂದು ನಿರ್ಧಾರವಾಗಬೇಕು. ಇದೇ ಈಗ ದಿವ್ಯಾ ಸುರೇಶ್​ ಅವರಿಗೆ ದೊಡ್ಡ ತಲೆನೋವಾಗಿದೆ.

ಇದನ್ನೂ ಓದಿ: ಕಣ್ಣೀರಿಟ್ಟು ನಾನು ಬಿಗ್ ಬಾಸ್​ ಮನೆಯ ಬ್ಯಾಡ್ ಬಾಯ್​​ ಎಂದಿದ್ದೇಕೆ ಬ್ರೋ ಗೌಡ

ಈ ಗೊಂದಲ ಇವತ್ತೂ ಸಹ ಮುಂದುವರೆದಿತ್ತು. ಇಂದು ಸಹ ಜೋಳದ ಕಣಜ ಟಾಸ್ಕ್​ನಲ್ಲಿ ಕೇವಲ ಇಬ್ಬರು ಮಾತ್ರ ಭಾಗಿಯಾಗಬೇಕು ಎಂದು ಬಿಗ್ ಬಾಸ್​ ಹೇಳಿದ್ದರು. ಅದಕ್ಕೆ ಮನೆಯಲ್ಲಿ ಶಮಂತ್​, ಚಕ್ರವರ್ತಿ, ಶುಭಾ ಪೂಂಜಾ, ವೈಷ್ಣವಿ ಹಾಗೂ ದಿವ್ಯಾ ಉರುಡುಗ ತಾವಾಗಿಯೇ ಈ ಟಾಸ್ಕ್​ನಿಂದ ಹಿಂದೆ ಸರಿದರೆ, ಪ್ರಶಾಂತ್ ಸಂಬರಗಿ, ಮಂಜು ಹಾಗೂ ಅರವಿಂದ್​ ತಾವೇ ಆಬೇಕೆಂದು ಪಟ್ಟು ಹಿಡಿದಿದ್ದರು. ಕೊನೆಗೆ ದಿವ್ಯಾ ಸುರೇಶ್​ ಸ್ಪರ್ಧಿಗಳಿಗೆ ಆಡಲು ಸಿಕ್ಕಿರುವ ಅವಕಾಶಗಳ ಆಧಾರದ ಮೇಲೆ ಮಂಜು ಹಾಗೂ ಅರವಿಂದ್ ಅವನ್ನು ಈ ಟಾಸ್ಕ್​ನಲ್ಲಿ ಆಡಲು ಆಯ್ಕೆ ಮಾಡುತ್ತಾರೆ. ಇದರಿಂದಾಗಿ ಪ್ರಶಾಂತ್ ಕೊಂಚ ಏರು ದನಿಯಲ್ಲಿ ಮಾತನಾಡಿ ಇದು ಸರಿಯಲ್ಲ ಎಂದು ವಾದ ಮಾಡುತ್ತಾರೆ. ಮಂಜು ವಿಷಯದಲ್ಲಿ ದಿವ್ಯಾ ಸುರೇಶ್ ಕೊಂಚ ಸಾಫ್ಟ್​ ಆಗಿ ಆಲೋಚಿಸುತ್ತಿದ್ದಾರೆ ಎಂದು ಪ್ರಶಾಂತ್ ಆರೋಪಿಸಿದ್ದಾರೆ. ಈ ಗೊಂದಲ ಪ್ರತಿ ಟಾಸ್ಕ್​ನಲ್ಲೂ ಮುಂದುವರೆಯುತ್ತಿದೆ. ಒಟ್ಟಾರೆ ಕ್ಯಾಪ್ಟನ್​ ಆದ ದಿವ್ಯಾ ಸುರೇಶ್ ಅವರಿಗೆ ಇಡೀ ವಾರ ನಿಜಕ್ಕೂ ಸವಾಲಾಗಿದೆ ಎಂದರೆ ತಪ್ಪಾಗದು.
Published by:Anitha E
First published: