Bigg Boss 8 Elimination: ಇಂದಿನ ಎಲಿಮಿನೇಷನ್​ ಪ್ರಕ್ರಿಯೆಗೆ ಟ್ವಿಸ್​ ಕೊಟ್ರಾ ಬಿಗ್ ಬಾಸ್​..!

ಎಲಿಮಿನೇಷನ್​ನಲ್ಲಿ ಟ್ವಿಸ್ಟ್​

ಎಲಿಮಿನೇಷನ್​ನಲ್ಲಿ ಟ್ವಿಸ್ಟ್​

Bigg Boss Kannada Season 8: ಇಂದು ಬಿಗ್ ಬಾಸ್​ ಮನೆಯಲ್ಲಿ ಎಲಿಮಿನೇಷನ್ ಪ್ರಕ್ರಿಯೆ ನಡೆಯಲಿದೆಯಾ..? ಒಂದು ವೇಳೆ ಎಲಿಮಿನೇಷನ್​ ನಡೆದರೆ ಮನೆಯಿಂದ ಹೊರ ಹೋಗುವುದು ಇವರೇನಾ..!

  • Share this:

ಬಿಗ್ ಬಾಸ್​ ಮನೆಯಲ್ಲಿ ಈಗ ಯಾರೂ ಸ್ನೇಹಿತರಲ್ಲ... ಯಾರೂ ವಿರೋಧಿಗಳಲ್ಲ. ಇಲ್ಲಿ ಎಲ್ಲರೂ ತಮ್ಮ ತಮ್ಮ ವೈಯಕ್ತಿಕ ಆಟ ಆಡುತ್ತಿರುವ ಸ್ಪರ್ಧಿಗಳೇ. ಹೌದು, ಬಿಗ್ ಬಾಸ್​ ಸೀಸನ್​ 8ರ ಫಿನಾಲೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಮನೆಯಲ್ಲಿ ಉಳಿಸುಕೊಂಡು ಆಟದಲ್ಲಿರಲು ಪ್ರತಿಯೊಬ್ಬ ಸ್ಪರ್ಧಿಯೂ ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದಾರೆ. ಟಾಸ್ಕ್​ ಎಂದರೆ ದೂರ ಓಡುತ್ತಿದ್ದವರು ಈಗ ಎಲ್ಲ ಟಾಸ್ಕ್​ಗಳಲ್ಲೂ ನಾ ಮುಂದು ಅಂತ ಭಾಗಿಯಾಗುತ್ತಿದ್ದಾರೆ. ಹೀಗಿರುವಾಗಲೇ ಕೊಟ್ಟಿದ್ದ ಕ್ಯಾಪ್ಟನ್ಸಿ ಟಾಸ್ಕ್​ನಲ್ಲಿ ದಿವ್ಯಾ ಉರುಡುಗ ಗೆದ್ದು ಮತ್ತೊಮ್ಮೆ ಮನೆಯ ಕ್ಯಾಪ್ಟನ್ ಆಗಿದ್ದಾರೆ. ಮನೆಯಲ್ಲಿ ಈಗ ತಾಳ್ಮೆಯಿಂದ ಇರುತ್ತಿದ್ದವರು ತಾಳ್ಮೆ ಕಳೆದುಕೊಂಡು ವರ್ತಿಸುತ್ತಿದ್ದಾರೆ. ಮತ್ತೆ ಕೆಲವರು ಕೂಗಾಡುತ್ತಾ ಜಗಳ ಮಾಡುತ್ತಿದ್ದವರು ಸಂಪೂರ್ಣವಾಗಿ ಶಾಂತರಾಗಿದ್ದಾರೆ. ಈ ಎಲ್ಲ ಬದಲಾವಣೆಗಳು ಕೇವಲ ಆಟಕ್ಕಾಗಿ ಅಂತಿದ್ದಾರೆ ಕೆಲವು ಸ್ಪರ್ಧಿಗಳು. ಒಟ್ಟಾರೆ ಸಾಕಷ್ಟು ಬದಲಾವಣೆಗಳನ್ನು ಈ ಮನೆಯಲ್ಲಿ ನೋಡಬಹುದಾಗಿದೆ. 


ವಾರಾಂತ್ಯ ಬಂತೆಂದರೆ ಸಾಕು, ಬಿಗ್ ಬಾಸ್​ ಮನೆಯಲ್ಲಿ ಸುದೀಪ್​ ಅವರು ಕಾಣಿಸಿಕೊಳ್ಳುವ ಖುಷಿ ಒಂದೆಡೆಯಾದರೆ, ಮತ್ತೊಂದು ಕಡೆ ಎಲಿಮಿನೇಷನ್​ ಭಯ. ಇಷ್ಟು ದಿನಗಳು ಈ ಮನೆಯಲ್ಲಿ ಕಳೆದ ಒಬ್ಬರು ಸ್ಪರ್ಧಿ ಮನೆಯಿಂದ ಹೊರಗೆ ಹೋಗುತ್ತಾರೆ. ಆದರೆ, ಈ ವಾರ ಎಲಿಮಿನೇಷನ್​ ಪ್ರಕ್ರಿಯೆಗೆ ಒಂದು ಟ್ವಿಸ್​ ನೀಡಲಾಗಿದೆಯಂತೆ.




ಹೌದು, ಪ್ರತಿ ಶನಿವಾರವೇ ನಾಮಿನೇಟ್​ ಆಗಿರುವ ಸ್ಪರ್ಧಿಗಳಲ್ಲಿ ಒಬ್ಬರನ್ನು ಸುದೀಪ್​ ಅವರು ಸೇವ್​ ಮಾಡುತ್ತಿದ್ದರು. ಹೆಚ್ಚಾಗಿ ಮತ ಪಡೆದವರನ್ನು ಸೇಫ್​ ಎಂದು ಹೇಳಲಾಗುತ್ತಿತ್ತು. ಆದರೆ, ನಿನ್ನೆಯ ಸಂಚಿಕೆಯಲ್ಲಿ ಸುದೀಪ್​ ಅವರು ಯಾರನ್ನೂ ಸೇವ್​ ಮಾಡಲಿಲ್ಲ. ಜೊತೆಗೆ ತಾನು ಯಾರೋಬ್ಬರನ್ನೂ ಸೇವ್ ಮಾಡುವುದಿಲ್ಲ ಎಂದು ಪದೇ ಪದೇ ಹೇಳಿದ್ದರು.


ಇದನ್ನೂ ಓದಿ: ಬಿಗ್​ ಬಾಸ್​ ಮನೆಯಲ್ಲಿ ಪ್ರಶಾಂತ್ ಸಂಬರಗಿ ತುಂಟಾಟ: ಫಜಿತಿಗೆ ಸಿಲುಕಿದ್ದ ದಿವ್ಯಾ ಉರುಡುಗ..!


ಈ ವಾರ ಮನೆಯಿಂದ ಹೊರ ಹೋಗಲು ಶಮಂತ್​ ಗೌಡ, ಶುಭಾ ಪೂಂಜಾ, ಚಕ್ರವರ್ತಿ ಚಂದ್ರಚೂಡ, ದಿವ್ಯಾ ಉರುಡುಗ ಹಾಗೂ ಪ್ರಶಾಂತ್ ಸಂಬರಗಿ ನಾಮಿನೇಟ್ ಆಗಿದ್ದಾರೆ. ಹೀಗಿರುವಾಗಲೇ ಈ ವಾರ ಮನೆಯಿಂದ ಯಾರು ಹೊರ ಹೋಗಲಿದ್ದಾರೆ ಅನ್ನೋ ಪ್ರಶ್ನೆ ವೀಕ್ಷಕರನ್ನು ಕಾಡುತ್ತಿದೆ.


ಕಳೆದ ವಾರ ಆಗಿರುವ ಬೆಳವಣಿಗೆಗಳಿಂದಾಗಿ ಈ ವಾರ ಮನೆಯಿಂದ ಹೊರ ಹೋಗುವವರಲ್ಲಿ ಚಕ್ರವರ್ತಿ ಚಂದ್ರಚೂಡ ಹಾಗೂ ಶುಭಾ ಪೂಂಜಾ ಅವರ ಹೆಸರು ಕೇಳಿ ಬರುತ್ತಿದೆ. ಕಾರಣ ಇರುವ ಸ್ಪರ್ಧಿಗಳಲ್ಲಿ ಶುಭಾ ಪೂಂಜಾ ತುಂಬಾ ವೀಕ್​ ಎಂದು ಹೇಳಲಾಗುತ್ತಿದೆ. ಇನ್ನು ಚಕ್ರವರ್ತಿ ಅವರು ಪ್ರಿಯಾಂಕಾ ತಿಮ್ಮೇಶ್ ಅವರು ನಾಮಿನೇಟ್ ಮಾಡಿದ್ದಕ್ಕೆ ಮಧ್ಯದ ಬೆರಳು ತೋರಿಸಿ ಅದಭ್ಯವಾಗಿ ಸನ್ನೆ ಮಾಡಿದ್ದರು. ಈ ಕಾರಣದಿಂದಾಗಿ ನೆಟ್ಟಿಗರು ಹಾಗೂ ವೀಕ್ಷಕರಿಂದ ತುಂಬಾ ವಿರೋಧ ವ್ಯಕ್ತಗಾಗಿತ್ತು.


ಇದನ್ನೂ ಓದಿ: Bigg Boss Kannada 8: ಪ್ರಶಾಂತ್​ ಸಂಬರಗಿ ಮೇಲೆ ಕೈ ಎತ್ತಿದ್ದ ವಿಷಯವಾಗಿ ಕಿಚ್ಚನ ಕೈಯಲ್ಲಿ ಬುದ್ಧಿ ಹೇಳಿಸಿಕೊಂಡ ವೈಷ್ಣವಿ ಗೌಡ..!


ಇನ್ನು ನಿನ್ನೆ ನಡೆದ ಸಂಚಿಕೆಯಲ್ಲಿ ಸುದೀಪ್​ ಸಹ ಚಕ್ರವರ್ತಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಒಬ್ಬ ಹೆಣ್ಣು ಮಗಳಿಗೆ ನೀವು ಮಾಡಿದ್ದು ಸರಿಯೇ. ಯಾರ ಮನೆಯ ಹೆಣ್ಣು ಮಕ್ಕಳಿಗಾದರೂ ಹೀಗೆ ಮಾಡಿದರೆ ಏನು ಮಾಡುತ್ತಾರೆ ಹೇಳಿ. ಇಂತಹ ವೇದಿಕೆಯಲ್ಲಿ ಹೇಗೆ ವರ್ತಿಸಬೇಕೆಂದು ತಿಳಿದುಕೊಂಡಿರಬೇಕು. ಈ ವೇದಿಕೆಯ ಮೇಲೆ ಕಾಣಿಸಿಕೊಳ್ಳುವ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ಹೆಣ್ಣಿಗೆ ಗೌರವ ಕೊಡುತ್ತೇನೆ ಎಂದಿದ್ದು ಇದೇನಾ..? ಎಂದು ಪ್ರಶ್ನಿಸುತ್ತಾರೆ ಸುದೀಪ್​.


ಇದಾದ ನಂತರ ತಮ್ಮ ತಪ್ಪಿನ ಅರಿವಾಗಿ ಚಕ್ರವರ್ತಿ ಕಣ್ಣೀರಿಟ್ಟರು. ನಂತರ ಕ್ಷಮೆ ಸಹ ಕೇಳಿದ್ದರು. ಚಕ್ರವರ್ತಿ ಇದೇ ಸಂಚಿಕೆಯಲ್ಲಿ ತನ್ನನ್ನು ಹೆಣ್ಣು ನಿಂದಕ ಹಾಗೂ ಪೀಡಕನಂತೆ ತೋರಿಸಲಾಗುತ್ತಿದೆ. ಪ್ರತಿವಾರಾಂತ್ಯ ನನ್ನನ್ನೇ ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಸುದೀಪ್​ ಅವರಿಗೆ ಹೇಳುತ್ತಾರೆ. ಅದಕ್ಕೆ ಉತ್ತರಿಸಿದ ಸುದೀಪ್​, ನೀವು ಮಾಡಿರುವ ಕೆಲಸಗಳೇ ನನ್ನ ಬಾಯಿಯಲ್ಲಿ ಬಂದಿದ್ದೇ ಹೊರತು, ನಾನು ಬೇಕೆಂದು ಹೇಳಿದ್ದಲ್ಲ. ಇನ್ನು ನೀವು ಕೊಟ್ಟ ಬೇಜಾರನ್ನು ಬೇಜಾರನ್ನಲ್ಲಿ ಹೇಳಿದ್ದೇನೆ, ಅದಕ್ಕೆ ತುಪ್ಪಾ ಹಚ್ಚಿ ಹೇಳಲಾ, ನಿಮ್ಮ ಬಗ್ಗೆ ಗೌರವ ಇದೆ ಅದನ್ನು ಕಾಪಾಡಿಕೊಳ್ಳಿ ಎಂದಿದ್ದಾರೆ.


ಇದನ್ನೂ ಓದಿ: Anushka Sharma: ಅತಿಯಾ ಶೆಟ್ಟಿ ತೆಗೆದ ಚಿತ್ರಗಳನ್ನು ಹಂಚಿಕೊಂಡ ಅನುಷ್ಕಾ ಶರ್ಮಾ..!


ಈ ಎಲ್ಲ ಬೆಳವಣಿಗೆಗಳನ್ನು ನೋಡಿದರೆ ಈ ವಾರ ಎಲಿಮಿನೇಟ್ ಆದರೆ, ಚಕ್ರವರ್ತಿ ಹಾಗೂ ಶುಭಾ ಪೂಂಜಾ ಅವರಲ್ಲಿ ಒಬ್ಬರು ಹೊರ ಹೋಗಬಹುದು ಎಂದು ಅಂದಾಜಿಸಲಾಗುತ್ತಿದೆ. ಆದರೆ ಈ ವಾರ ಯಾರೂ ಹೊರ ಹೋಗುವುದಿಲ್ಲ. ಅದೇ ಈ ವಾರದ ಟ್ವಿಸ್ಟ್ ಎಂದೂ ಹೇಳಲಾಗುತ್ತಿದೆ.

Published by:Anitha E
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು