Kannada Bigg Boss 7 Elimination: ಯಾರು ಹಿತವರು ನಿಮಗೆ ಈ ಏಳರೊಳಗೆ?; ಬಿಗ್​ಬಾಸ್​ ಮನೆಯಲ್ಲಿ ಈ ವಾರ ಹೊರ ಹೋಗೋರು ಯಾರು?

Bigg Boss Kannada 7 Elimination: ಈ ವಾರ ಒಟ್ಟು 7 ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ. ಕಿರುತೆರೆ ನಟಿಯರಾದ ಭೂಮಿ ಶೆಟ್ಟಿ, ಪ್ರಿಯಾಂಕಾ, ದೀಪಿಕಾ ದಾಸ್, ಶೈನ್ ಶೆಟ್ಟಿ, ಬರಹಗಾರ್ತಿ ಚೈತ್ರಾ ಕೋಟೂರ್, ನಟರಾದ ಚಂದನ್ ಆಚಾರ್ ಹಾಗೂ ರಾಜು ತಾಳೀಕೋಟೆ ಈ ವಾರ ನಾಮಿನೇಟ್ ಆಗಿದ್ದಾರೆ.

Sushma Chakre | news18-kannada
Updated:November 9, 2019, 8:16 PM IST
Kannada Bigg Boss 7 Elimination: ಯಾರು ಹಿತವರು ನಿಮಗೆ ಈ ಏಳರೊಳಗೆ?; ಬಿಗ್​ಬಾಸ್​ ಮನೆಯಲ್ಲಿ ಈ ವಾರ ಹೊರ ಹೋಗೋರು ಯಾರು?
Bigg Boss Kannada 7 Updates: ಬಿಗ್​ ಬಾಸ್​ ಮನೆಯಿಂದ 4ನೇ ಸ್ಪರ್ಧಿ ಔಟ್​; ಕೊನೆಗೂ ಬಿಡುಗಡೆ ಸಿಕ್ತು ಎಂದ ನಟಿ!
  • Share this:
ಬಿಗ್​ಬಾಸ್ ಕನ್ನಡ ಸೀಸನ್​ 7ರ ವಾರದ ಕತೆ ಕಿಚ್ಚನ ಜೊತೆ ಶೋ ಪ್ರಸಾರವಾಗಲು ಕೆಲವೇ ನಿಮಿಷಗಳು ಉಳಿದಿವೆ. ಈ ವಾರ ಬಿಗ್​ಬಾಸ್​ ಮನೆಯಿಂದ ಹೊರಗೆ ಹೋಗುವ ಸ್ಪರ್ಧಿ ಯಾರು ಎಂಬುದಕ್ಕೆ ಸ್ವಲ್ಪ ಹೊತ್ತಿನಲ್ಲೇ ಉತ್ತರ ಸಿಗಲಿದೆ.

ಈಗಾಗಲೇ ಬಿಗ್​ಬಾಸ್​ ಮನೆಯಿಂದ ಮೂವರು ಸ್ಪರ್ಧಿಗಳು ಹೊರನಡೆದಿದ್ದಾರೆ. ಮೊದಲ ವಾರ ಗುರುಲಿಂಗ ಸ್ವಾಮಿ ಹಾಗೂ ರವಿ ಬೆಳಗೆರೆ ಬಿಗ್​ಬಾಸ್​ ಮನೆಯಿಂದ ಹೊರ ನಡೆದಿದ್ದರು. 2ನೇ ವಾರ ನಿರೂಪಕಿ ಚೈತ್ರಾ ವಾಸುದೇವನ್ ಎಲಿಮಿನೇಟ್ ಆಗಿದ್ದರು. ಕಳೆದ ವಾರ ದುನಿಯಾ ರಶ್ಮಿ ದೊಡ್ಡ ಮನೆಯಿಂದ ಹೊರನಡೆದಿದ್ದರು.ಈ ವಾರ ಒಟ್ಟು 7 ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ. ಕಿರುತೆರೆ ನಟಿಯರಾದ ಭೂಮಿ ಶೆಟ್ಟಿ, ಪ್ರಿಯಾಂಕಾ, ದೀಪಿಕಾ ದಾಸ್, ಶೈನ್ ಶೆಟ್ಟಿ, ಬರಹಗಾರ್ತಿ ಚೈತ್ರಾ ಕೋಟೂರ್, ನಟರಾದ ಚಂದನ್ ಆಚಾರ್ ಹಾಗೂ ರಾಜು ತಾಳೀಕೋಟೆ ಈ ವಾರ ನಾಮಿನೇಟ್ ಆಗಿದ್ದಾರೆ. ಈ 7 ಜನರಲ್ಲಿ ಈ ವಾರ ಬಿಗ್​ಬಾಸ್​ ಮನೆಯಿಂದ ಹೊರಹೋಗುವ ಸ್ಪರ್ಧಿ ಯಾರು ಎಂಬ ಕುತೂಹಲಕ್ಕೆ ಇಂದು ರಾತ್ರಿ ತೆರೆಬೀಳಲಿದೆ.

First published: November 9, 2019, 8:15 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading