Bigg Boss Kannada 7: ಬಿಗ್ ಬಾಸ್​ನಲ್ಲಿ ಬಿಗ್ ಟ್ವಿಸ್ಟ್​: ಹೌದು ಸ್ವಾಮಿ, ಇದು ಅಂತಿಂಥ ಟಾಸ್ಕ್ ಅಲ್ಲ..!

Bigg Boss Kannada 7: ಇಲ್ಲಿ ಕೇವಲ ನಾಯಕತ್ವಕ್ಕಾಗಿ ಮಾತ್ರ ಸ್ಪರ್ಧೆಗಳು ನಡೆಯುತ್ತಿಲ್ಲ. ಅದರೊಂದಿಗೆ ನಾಮಿನೇಷನ್ ಲೀಸ್ಟ್​ನಿಂದ ಪಾರಾಗೋಕೆ ಪ್ರತಿಯೊಬ್ಬರೂ ಈ ಟಾಸ್ಕ್ ಗೆಲ್ಲಲೇ ಬೇಕು ಎಂದು ಬಿಗ್ ಬಾಸ್ ತಿಳಿಸಿದೆ.


Updated:January 13, 2020, 8:58 PM IST
Bigg Boss Kannada 7: ಬಿಗ್ ಬಾಸ್​ನಲ್ಲಿ ಬಿಗ್ ಟ್ವಿಸ್ಟ್​: ಹೌದು ಸ್ವಾಮಿ, ಇದು ಅಂತಿಂಥ ಟಾಸ್ಕ್ ಅಲ್ಲ..!
Bigg Boss Kannada 7
  • Share this:
ಬಿಗ್ ಬಾಸ್ ಕನ್ನಡ ಸೀಸನ್ 7 ಹದಿಮೂರು ವಾರಗಳನ್ನು ಪೂರೈಸಿದೆ. ಈಗಾಗಲೇ ಮನೆಯಿಂದ 9 ಸ್ಪರ್ಧಿಗಳು ಹೊರಬಿದ್ದರೆ, ಅಂತಿಮ ಹಂತಕ್ಕೇರಲು  9 ಮಂದಿ ಮನೆಯಲ್ಲಿದ್ದಾರೆ. ಅದರಲ್ಲೂ ಕಳೆದ ವಾರ ಬಿಗ್ ಬಾಸ್ ನೋ ಎಲಿಮಿನೇಷನ್ ನಡೆಸುವ ಮೂಲಕ ಮುಂದಿನ ವಾರಾಂತ್ಯದ ಕುತೂಹಲವನ್ನು ಮುಂದೂಡಲಾಗಿತ್ತು.

ಅದರಂತೆ ಈ ವಾರ ಡಬಲ್ ಎಲಿಮಿನೇಷನ್​ ಇರಲಿದ್ದು, ಈ ವಾರ ಯಾರೆಲ್ಲಾ ನಾಮಿನೇಟ್ ಆಗಲಿದ್ದಾರೆ ಎಂಬ ಕುತೂಹಲ ವೀಕ್ಷಕರಲ್ಲಿದೆ. ಆದರೆ ಇದೀಗ ಬಿಗ್ ಬಾಸ್ ಮನೆಯ ಎಲ್ಲಾ ಸ್ಪರ್ಧಿಗಳನ್ನು ನೇರ ನಾಮಿನೇಟ್ ಮಾಡಿ ಶಾಕ್ ನೀಡಿದೆ. ಅಷ್ಟೇ ಅಲ್ಲದೆ ವಿಶೇಷ ಟಾಸ್ಕ್​ವೊಂದನ್ನು ನೀಡಿದ್ದು, ಇದರಲ್ಲಿ ವಿನ್ ಆಗುವ ಸ್ಪರ್ಧಿ ಕ್ಯಾಪ್ಟನ್​ಶಿಪ್​ನೊಂದಿಗೆ ಸೇಫ್ ಆಗಲಿದ್ದಾರೆ. ಇಲ್ಲಿ ಕೇವಲ ನಾಯಕತ್ವಕ್ಕಾಗಿ ಮಾತ್ರ ಸ್ಪರ್ಧೆಗಳು ನಡೆಯುತ್ತಿಲ್ಲ. ಅದರೊಂದಿಗೆ ನಾಮಿನೇಷನ್ ಲೀಸ್ಟ್​ನಿಂದ ಪಾರಾಗೋಕೆ ಪ್ರತಿಯೊಬ್ಬರೂ ಈ ಟಾಸ್ಕ್ ಗೆಲ್ಲಲೇ ಬೇಕು ಎಂದು ಬಿಗ್ ಬಾಸ್ ತಿಳಿಸಿದೆ.

ಹೀಗಾಗಿ ಈ ವಾರದ ಮೊದೆಲೆರಡು ಸಂಚಿಕೆಗಳು ಭಾರೀ ಕುತೂಹಲಕ್ಕೆ ಕಾರಣವಾಗಲಿದೆ. ಮುಕ್ತಾಯದ ಹಂತಕ್ಕೆ ಬರುತ್ತಿದ್ದಂತೆ ಬಿಗ್ ಬಾಸ್ ಸ್ಪರ್ಧೆಗಳಲ್ಲೂ ವ್ಯತ್ಯಾಸಗಳು ಕಾಣಿಸುತ್ತಿದ್ದು, ವಿಭಿನ್ನ ಟಾಸ್ಕ್​ಗಳ ಮೂಲಕ ಆಯೋಜಕರು ಪ್ರೇಕ್ಷಕರನ್ನು ರಂಜಿಸುವತ್ತ ಹೆಚ್ಚಿನ ಗಮನ ಹರಿಸುತ್ತಿದ್ದಾರೆ.

ಒಟ್ಟಿನಲ್ಲಿ 9 ಮಂದಿ ಉಳಿದಿರುವ ಬಿಗ್ ಬಾಸ್​ನಲ್ಲಿ ಈ ವಾರ ಯಾರು ಕ್ಯಾಪ್ಟನ್ ಆಗಲಿದ್ದಾರೆ, ವಾರಾಂತ್ಯದಲ್ಲಿ ಯಾರೆಲ್ಲಾ ಹೊರಬೀಳಲಿದ್ದಾರೆ ಎಂದು ತಿಳಿಯಲು ಈ ವಾರದ ಸಂಚಿಕೆಗಳನ್ನು ಪೂರ್ತಿ ನೋಡಬೇಕಾಗುತ್ತದೆ.

ಇದನ್ನೂ ಓದಿ: Bigg Boss Kannada 7: ಹುಡುಗಿಯರ ಬಗ್ಗೆ ಬಿಗ್ ಬಾಸ್ ಸ್ಪರ್ಧಿ ನೀಡಿದ ಹೇಳಿಕೆ ಕಿಚ್ಚನನ್ನೇ ಬೆಚ್ಚಿ ಬೀಳಿಸಿತು..!
Published by: zahir
First published: January 13, 2020, 8:56 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading