ಕಲರ್ಸ್ ಕನ್ನಡ (colors Kannada) ವಾಹಿನಿ ವಿಭಿನ್ನ ಧಾರಾವಾಹಿಗಳ (serial) ಮೂಲಕ ಜನರ ಮನಗೆದ್ದಿದೆ. ಕೇವಲ ಧಾರಾವಾಹಿ ಮಾತ್ರವಲ್ಲದೆ, ರಿಯಾಲಿಟಿ ಶೋಗಳು ಸಹ ಜನರಿಗೆ ಬಹಳ ಇಷ್ಟವಾಗಿದೆ. ಅವುಗಳಲ್ಲಿಯೇ ವಿಶೇಷ ಕಾರ್ಯಕ್ರಮ ಬಿಗ್ಬಾಸ್, ಈ ಬಾರಿ ಎರಡೆರಡು ಬಿಗ್ಬಾಸ್ ಇರುತ್ತದೆ ಎನ್ನುವ ವಿಚಾರ ಈಗ ಎಲ್ಲರಿಗೂ ತಿಳಿಸಿದೆ. ಆದರೆ ಯಾವಾಗ ಈ ಸೀಸನ್ ಆರಂಭವಾಗುತ್ತದೆ ಎಂದು ಅಭಿಮಾನಿಗಳು ಕೇಳುತ್ತಿದ್ದಾರೆ. ಇದರ ನಡುವೆ ಬಿಗ್ ಬಾಗ್ ಕನ್ನಡ ಸೀಸನ್ 9ರ ಫಸ್ಟ್ ಲುಕ್ ಪೋಸ್ಟರ್ ಅನ್ನು ರಿಲೀಸ್ ಮಾಡಲಾಗಿದ್ದು, ಕಿಚ್ಚ ಸುದೀಪ್ ವಿಭಿನ್ನ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಎಲ್ಲಾ ಸೀಸನ್ ಗಳಂತೆಯೇ ಈ ಸೀಸನ್ ನಲ್ಲಿಯೂ ಕಣ್ಣಿನ ಮೇಲೆಯೇ ಫೋಸ್ಟರ್ ಸಿದ್ದವಾಗಿದ್ದು, ಸುದೀಪ್ ನಿಮ್ಮನ್ನು ಕ್ಯಾಮರಾ ಮೂಲಕ ನೋಡುವಂತೆ ಪೋಸ್ಟರ್ ಅನ್ನು ಸಿದ್ಧಪಡಿಸಲಾಗಿದೆ.
ಬಿಗ್ ಬಾಗ್ OTT ಬಿಡುಗಡೆ ಡೇಟ್ ಫಿಕ್ಸ್:
ಹೌದು, ಬಿಗ್ ಬಾಸ್ ಗಾಗಿ ಕಾಯುತ್ತಿದ್ದವರಿಗೆ ಇದೀಗ ಸಂಸತದ ಸುದ್ದಿಯೊಂದನ್ನು ಬಿಗ್ ಬಾಸ್ ಟೀಂ ನೀಡಿದೆ. ಬಿಗ್ ಬಾಸ್ ಕನ್ನಡ ಸೀಸನ್ 9ರ ಫಸ್ಟ್ ಲುಕ್ ಪೋಸ್ಟರ್ ಮತ್ತು ಓಟಿಟಿ ಪ್ರೋಮೋವನ್ನು ಬಿಡುಗಡೆ ಮಾಡಿದೆ. ಅದರ ಜೊತೆಗೆ ಓಟಿಟಿ ಅಲ್ಲಿ ಬಿಗ್ ಬಾಸ್ ಎಂದಿನಿಂದ ಪ್ರಸಾರವಾಗಲಿದೆ ಎನ್ನುವುದರ ಕುರಿತು ಮಾಹಿತಿಯನ್ನು ಹಂಚಿಕೊಂಡಿದೆ. ಆದರೆ ಬಿಗ್ ಬಾಸ್ 9ರ ಓಟಿಟಿ ಪ್ರೋಮೋವನ್ನು ಕೇವಲ ವೂಟ್ ಸೆಲೆಕ್ಟ್ ನಲ್ಲಿ ಮಾತ್ರ ಸದ್ಯ ಬಿಡುಗಡೆ ಮಾಡಿದೆ.
Calling all our Kannada fans! Making an exciting announcement soon. Can you guess what's coming? 👁️ #VootSelect #KicchaSudeepa @KicchaSudeep @justvoot @ColorsSuper pic.twitter.com/L1YqoUUKUV
— Voot Select (@VootSelect) July 22, 2022
ಬಹಳ ದಿನಗಳಿಂದ ಕಾತುರದಿಂದ ಕಾಯುತ್ತಿದ್ದವರಿಗೆ ಇದೀಗ ಸಂಸತ ಬಂದಂತಾಗಿದೆ. ಏಕೆಂದರೆ ಬಿಗ್ ಬಾಸ್ ಓಟಿಟಿ ಇದೇ ಆಗಸ್ಟ್ 6 ರಿಂದ ಬಿಗ್ ಬಾಸ್ ಓಟಿಟಿ ಶೋ ವೂಟ್ನಲ್ಲಿ ಪ್ರಾರಂಭವಾಗಲಿದೆ ಎಂದು ಅಧಿಕೃತ ಪ್ರೋಮೋ ಮೂಲಕ ತಿಳಿದುಬಂದಿದೆ. ಅಲ್ಲದೇ ಈ ಪ್ರೋಮೋದಲ್ಲಿ ಸುದೀಪ್, ‘ಇದು ಟಿವಿ ಶೋ ಅಲ್ಲ, ಇದು ಓಟಿಟಿ ಶೋ. ಆಗಸ್ಟ್ 6 ರಿಂದ ಬಿಗ್ ಬಾಸ್ ಓಟಿಟಿ ಶೋ‘ ಎನ್ನುವ ಮೂಲಕ ಬಿಗ್ ಬಾಸ್ ಕುರಿತು ಇದ್ದ ಅನುಮಾನಗಳಿಗೆ ತೆರೆ ಎಳೆದಿದ್ದಾರೆ.
ಇದನ್ನೂ ಓದಿ: Bigg Boss: ಆಗಸ್ಟ್ನಲ್ಲಿ ಸ್ಟಾರ್ಟ್ ಆಗುತ್ತಂತೆ ಬಿಗ್ಬಾಸ್ ಓಟಿಟಿ, ಈ ಬಗ್ಗೆ ಕಿಚ್ಚ ಹೇಳಿದ್ದೇನು?
ಮೊದಲ ಬಾರಿಗೆ ಬಿಗ್ಬಾಸ್ ಓಟಿಟಿ:
ಕನ್ನಡದಲ್ಲಿ ಮೊದಲ ಬಾರಿ ಓಟಿಟಿ ಬಿಗ್ಬಾಸ್ ಸೀಸನ್ ಆರಂಭವಾಗುತ್ತಿದೆ. ಈಗಾಗಲೇ ಹಿಂದಿಯಲ್ಲಿ ಬಿಗ್ಬಾಸ್ ಓಟಿಟಿ ಸೀಸನ್ 1 ಬಹಳ ಪ್ರಸಿದ್ದಿ ಪಡೆದಿದೆ. ಬಾಲಿವುಡ್ ನಿರ್ದೇಶಕ ಹಾಗೂ ನಿರ್ಮಾಪಕ ಕರಣ್ ಜೋಹರ್ ನಡೆಸಿಕೊಟ್ಟಿದ್ದ ಈ ಶೋ ಜನರಿಗೆ ಇಷ್ಟವಾಗಿತ್ತು. ಅದೇ ರೀತಿ ಈ ಬಾರಿ ಕನ್ನಡದಲ್ಲಿ ಸಹ ಮಾಡುವ ಆಲೋಚನೆಯಲ್ಲಿ ವಾಹಿನಿ ಇದೆ. ಇನ್ನು ಹಿಂದಿ ಬಿಗ್ಬಾಸ್ನಲ್ಲಿ ಓಟಿಟಿಯಲ್ಲಿ ಭಾಗವಹಿಸಿದ್ದ ಸಲ್ಮಾನ್ ಖಾನ್ ನಡೆಸಿಕೊಡುವ ಬಿಗ್ಬಾಸ್ ಶೋಗೆ ಹೋಗಲು ಅವಕಾಶ ನೀಡಲಾಗಿತ್ತು. ಹಾಗೆಯೇ ಇಲ್ಲಿ ಸಹ ಇಬ್ಬರಿಗೆ ರೆಗ್ಯುಲರ್ ಬಿಗ್ಬಾಸ್ಗೆ ಹೋಗಲು ಅವಕಾಶ ನೀಡಲಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ