Kannada Bigg Boss 8: ಕಿಚ್ಚ ಸುದೀಪ್ ನಿರೂಪಣೆಯ ಬಿಗ್ ಬಾಸ್ ಸೀಸನ್​ 8 ಬಗ್ಗೆ ಹೊರಬಿತ್ತು ಮತ್ತೊಂದು ಸುದ್ದಿ!

Bigg Boss Kannada: ಫೇಸ್​​ಬುಕ್​​ ಮೂಲಕ ಕಿಚ್ಚ ಸುದೀಪ್​ ಅವರ ಜೊತೆಗಿರುವ ಫೋಟೋ ಹಂಚಿಕೊಂಡಿರುವ ಪರಮೇಶ್ವರ್​ ಗುಂಡ್ಕಲ್​ ಅವರು ಬಿಗ್​ ಬಾಸ್​ ಸೀಸನ್​ 8 ಕುರಿತಾಗಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಕಿಚ್ಚ ಸುದೀಪ್​

ಕಿಚ್ಚ ಸುದೀಪ್​

 • Share this:
  ಕನ್ನಡದ ಕಿರುತೆರೆಯಲ್ಲಿ ಅತ್ಯಂತ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಈ ಬಾರಿ ನಡೆಯುತ್ತೋ ಇಲ್ಲವೋ ಎಂಬ ಗೊಂದಲದಲ್ಲಿತ್ತು. ಮಹಾಮಾರಿ ಕೊರೋನಾ ಆ ರೀತಿ ಸ್ಥಿತಿಯನ್ನು ನಿರ್ಮಾಣ ಮಾಡಿತ್ತು. ಆದರೀಗ ಬಿಗ್​ ಬಾಸ್​ ಸೀಸನ್​ 8 ತಯಾರಿ ಪ್ರಗತಿಯಲ್ಲಿದೆ. ಈ ಕುರಿತಾಗಿ ಕಲರ್ಸ್​ ಕನ್ನಡದ ಬಿಸಿನೆಸ್​ ಹೆಡ್​ ಪರಮೇಶ್ವರ್​ ಗುಂಡಲ್ಕ್​  ಮಾಹಿತಿಯನ್ನ ಹಂಚಿಕೊಳ್ಳುತ್ತಾ ಬಂದಿದ್ದಾರೆ. ಇದೀಗ ಮತ್ತೊಂದು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

  ಫೇಸ್​​ಬುಕ್​​ ಮೂಲಕ ಕಿಚ್ಚ ಸುದೀಪ್​ ಅವರ ಜೊತೆಗಿರುವ ಫೋಟೋ ಹಂಚಿಕೊಂಡಿರುವ ಪರಮೇಶ್ವರ್​ ಗುಂಡ್ಕಲ್​ ಅವರು ಬಿಗ್​ ಬಾಸ್​ ಸೀಸನ್​ 8 ಕುರಿತಾಗಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಬಿಗ್​ ಬಾಸ್​ ಕನ್ನಡದ ಪ್ರೊಮೋ ಶೂಟ್​ ಎಂದು ಫೋಟೋಗೆ ಅಡಿಬರಹ ನೀಡಿದ್ದಾರೆ. ಸದ್ಯ ತುದಿಗಾಲಿನಲ್ಲಿ ನಿಂತು ಕಾಯುತ್ತಿರುವ ಅಭಿಮಾನಿಗಳಿಗೆ ಈ ವಿಚಾರ ಸಿಹಿ ಸಿಕ್ಕಂತಾಗಿದೆ. ಸದ್ಯದಲ್ಲೇ ಕಲರ್ಸ್​ ಕನ್ನಡ ವಾಹಿನಿಯಲ್ಲಿ ಬಿಗ್​ ಬಾಸ್​ ಕಾರ್ಯಕ್ರಮ ಮೂಡಿ ಬರಲಿದೆ ಎಂಬುದು ಧೃಡವಾಗಿದೆ.

  ಅಭಿಮಾನಿಗಳ ಮನಸ್ಸಲ್ಲಿ  ಕಿಚ್ಚ ನಿರೂಪಣೆಯಲ್ಲಿ ಮೂಡಿಬರುತ್ತಿರುವ ಬಿಗ್​ ಬಾಸ್​ ಸೀಸನ್​ 8 ಕುರಿತಾಗಿ ಕುತೂಹಲತೆ ಒಂದೆಡೆಯಾದರೆ ಮತ್ತೊಂದೆಡೆ ಈ ಬಾರಿ ಬಿಗ್​ ಬಾಸ್​ ಮನೆಯೊಳಕ್ಕೆ ಯಾರು ಹೋಗುತ್ತಾರೆ? ಎಂಬ ಕುತೂಹಲತೆ ಎರಡನೆಯದು. ಹಾಗಾಗಿ ಸಾಮಾಜಿಕ ಜಾಲತಾಣದಲ್ಲಂತೂ ಈ ಬಗ್ಗೆ ಬಾರಿ ಚರ್ಚೆ ನಡೆಯುತ್ತಿದೆ. ಕೆಲವು ಸೆಲೆಬ್ರಿಟಿಗಳ ಹೆಸರುಗಳು ಓಡಾಡುತ್ತಿದೆ.

  ಅಂದಹಾಗೆಯೇ, ಪ್ರಮುಖವಾಗಿ ಜೊತೆ ಜೊತೆಯಲಿ ಧಾರಾವಾಹಿ ಖ್ಯಾತಿಯ ನಟ ಆರ್ಯವರ್ಧನ್, ನ್ಯೂಸ್ ರೀಡರ್ ರಾಧಾ ಹಿರೇಗೌಡರ್, ದಿವ್ಯಾ, ಡ್ರೋನ್ ಪ್ರತಾಪ್, ಟಿಕ್ ಟಾಕ್ ಚೆಲುವೆ ಸೋನು ಗೌಡ, ಬಿಂದು ಗೌಡ ಸೇರಿದಂತೆ ಸೋಷಿಯಲ್ ಮೀಡಿಯಾದಲ್ಲಿ ಹೆಸರು ಮಾಡಿದವರ ಅನೇಕ ಹೆಸರು ಕೇಳಿಬರುತ್ತಿವೆ. ಆದರೆ, ಇದು ಎಷ್ಟರ ಮಟ್ಟಿಗೆ ನಿಜ ಎಂಬುದು ತಿಳಿದಿಲ್ಲ.

  ಕಳೆದ ಬಿಗ್ ಬಾಸ್ ಸೀಸನ್- 7ನಲ್ಲಿ ಶೈನ್ ಶೆಟ್ಟಿ, ಪತ್ರಕರ್ತ ರವಿ ಬೆಳಗೆರೆ, ಭೂಮಿ ಶೆಟ್ಟಿ, ದೀಪಿಕಾ ದಾಸ್, ಕಿಶನ್, ಕುರಿ ಪ್ರತಾಪ್, ವಾಸುಕಿ ವೈಭವ್, ಹರೀಶ್ ರಾಜ್, ಪ್ರಿಯಾಂಕ ಚಂದ್ರಿಕಾ, ಚಂದನ್ ಆಚಾರ್, ಚಂದನಾ ಅನಂತಕೃಷ್ಣ, ಚೈತ್ರಾ ಕೊಟ್ಟೂರು, ರಾಜು ತಾಳಿಕೋಟೆ,ರಕ್ಷಾ ಸೋಮಶೇಖರ್, ರಾಜು ತಾಳಿಕೋಟೆ, ಪೃಥ್ವಿ, ಜೈ ಜಗದೀಶ್, ದುನಿಯಾ ರಶ್ಮಿ, ಚೈತ್ರಾ ವಾಸುದೇವ್, ಗುರುಲಿಂಗ ಸ್ವಾಮಿ ಮನೆಯೋಕ್ಕೆ ಹೋಗಿದ್ದರು. ಅದರಲ್ಲಿ ಶೈನ್ ಶೆಟ್ಟಿ ವಿಜೇತರಾಗಿ ಹೊರಹೊಮ್ಮಿದರೆ, ಕುರಿ ಪ್ರತಾಪ್ ರನ್ನಪ್ ಅಪ್ ಆಗಿದ್ದರು.

  .
  Published by:Harshith AS
  First published: