ಕಲರ್ಸ್ ಕನ್ನಡ (colors Kannada) ವಾಹಿನಿ ವಿಭಿನ್ನ ಧಾರಾವಾಹಿಗಳ (serial) ಮೂಲಕ ಜನರ ಮನಗೆದ್ದಿದೆ. ಕೇವಲ ಧಾರಾವಾಹಿ ಮಾತ್ರವಲ್ಲದೆ, ರಿಯಾಲಿಟಿ ಶೋಗಳು ಸಹ ಜನರಿಗೆ ಬಹಳ ಇಷ್ಟವಾಗಿದೆ. ರಾಜ – ರಾಣಿ, ಗಿಚ್ಚ ಗಿಲಿಗಿಲಿ, ನಮ್ಮಮ್ಮ ಸೂಪರ್ ಸ್ಟಾರ್ ಹೀಗೆ ವಿಭಿನ್ನ ಕಾರ್ಯಕ್ರಮಗಳನ್ನು ಜನರಿಗೆ ನೀಡಿದೆ. ಆದರೆ ಮತ್ತೊಂದು ವಿಶೇಷ ಕಾರ್ಯಕ್ರಮ ಬಿಗ್ಬಾಸ್, ಈ ಬಾರಿ ಎರಡೆರಡು ಬಿಗ್ಬಾಸ್ ಇರುತ್ತದೆ ಎನ್ನುವ ವಿಚಾರ ಈಗ ಎಲ್ಲರಿಗೂ ತಿಳಿಸಿದೆ. ಆದರೆ ಯಾವಾಗ ಈ ಸೀಸನ್ ಆರಂಭವಾಗುತ್ತದೆ ಎಂದು ಅಭಿಮಾನಿಗಳು ಕೇಳುತ್ತಿದ್ದು, ಈ ಬಗ್ಗೆ ಹೊಸ ಅಪ್ಡೇಟ್ ಬಂದಿದೆ.
ಆಗಸ್ಟ್ನಲ್ಲಿ ಓಟಿಟಿ ಬಿಗ್ಬಾಸ್
ಮೂಲಗಳ ಪ್ರಕಾರ ಬಿಗ್ಬಾಸ್ ಓಟಿಟಿ ಇದೇ ಆಗಸ್ಟ್ನಲ್ಲಿ ಆರಂಭವಾಗಲಿದೆ. ಈ ಬಾರಿ ಇದು ಬಹಳ ವಿಶೇಷವಾಗಿರುವುದರಿಂದ ಅಭಿಮಾನಿಗಳು ಬಹಳ ಕಾತುರದಿಂದ ಕಾಯುತ್ತಿದ್ದಾರೆ. ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಕಿಚ್ಚ ಸುದೀಪ್, 8 ಅದ್ಭುತ ಸೀಸನ್ಗಳ ನಂತರ ಬಿಗ್ಬಾಸ್ 9 ನೇ ಸೀಸನ್ ಮತ್ತೆ ಆರಂಭವಾಗುತ್ತಿದೆ. ಈ ಶೋ ನನ್ನ ಮನಸ್ಸಿನಲ್ಲಿ ವಿಶೇಷ ಸ್ಥಾನವನ್ನು ಹೊಂದಿದೆ. ಈ ಬಾರಿ ಮೊದಲ ಓಟಿಟಿ ಸೀಸನ್ ಆರಂಭವಾಗುತ್ತಿದೆ. ಈ ಮೂಲಕ ಜನರಿಗೆ ಮನರಂಜನೆ ನೀಡಲು ಸಜ್ಜಾಗಿದ್ದೇವೆ. ವೂಟ್ನಲ್ಲಿ ಈ ಶೋ ಆರಂಭಿಸಲು ಎಲ್ಲಾ ತಯಾರಿಯಾಗಿದ್ದು, ನಾನು ವೀಕ್ಷಕರಿಗೆ 24/7 ಲೈವ್ , ಕುತೂಹಲಕಾರಿ ವಿಚಾರಗಳನ್ನು ತೋರಿಸಲು ಸಂತೋಷವಾಗುತ್ತದೆ. ಇದು ವೀಕ್ಷಕರಿಗೆ ಬಹಳ ಇಷ್ಟವಾಗುತ್ತದೆ ಎಂಬ ಭರವಸೆ ಇದೆ ಎಂದಿದ್ದಾರೆ.
ಅಲ್ಲದೇ ಈ ಮೊದಲು ಕಲರ್ಸ್ ಕನ್ನಡ ಬ್ಯುಸಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ಕೆಲ ದಿನಗಳ ಹಿಂದೆ ಕನ್ನಡ ಬಿಗ್ ಬಾಸ್ 9ನೇ ಸೀಸನ್ ನ ಬಿಗ್ ಬಾಸ್ ಮನೆಯ ಸಿದ್ಧತೆಗಳು ನಡೆಯುತ್ತಿದೆ ಎಂದು ತಿಳಿಸಿದ್ದರು. ಪ್ರತಿ ವರ್ಷದಂತೆ ಈ ಬಾರಿಯೂ ಬಾರಿ ನಿರೀಕ್ಷೆಯನ್ನು ಮೂಡಿಸಿದೆ. ವೀಕ್ಷಕರಲ್ಲಂತೂ ಬಿಗ್ಬಾಸ್ ಸೀಸನ್ 9 ಬಗ್ಗೆ ಕುತೂಹಲ ಮನೆಮಾಡಿದ್ದು, ಯಾರೆಲ್ಲಾ ಮನೆಯೊಳಕ್ಕೆ ಕಾಲಿಡಲಿದ್ದಾರೆ ಎಂಬ ಪ್ರಶ್ನೆ ಕಾಡತೊಡಗಿದೆ. ಮಾತ್ರವಲ್ಲದೆ, ಈ ಬಾರಿಯ ಬಿಗ್ಬಾಸ್ ಹೇಗಿರಲಿದೆ? ಸ್ಪರ್ಧಿಗಳೆಷ್ಟು? ಮುಂತಾದ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಕಾಯುತ್ತಿದ್ದಾರೆ.
Exciting promo shoot for the new #BigBossKannada.
Thanks to the entire team for all ua efforts,, and also to all those lovely people who participated in the shoot.
You all,,look forward to the promo soon ,,, its a supaa announcement .
🥂🤜🏽🤜🏽@ColorsKannada
— Kichcha Sudeepa (@KicchaSudeep) July 13, 2022
ಮೊದಲ ಬಾರಿಗೆ ಬಿಗ್ಬಾಸ್ ಓಟಿಟಿ
ಕನ್ನಡದಲ್ಲಿ ಮೊದಲ ಬಾರಿ ಓಟಿಟಿ ಬಿಗ್ಬಾಸ್ ಸೀಸನ್ ಆರಂಭವಾಗುತ್ತಿದೆ. ಈಗಾಗಲೇ ಹಿಂದಿಯಲ್ಲಿ ಬಿಗ್ಬಾಸ್ ಓಟಿಟಿ ಸೀಸನ್ 1 ಬಹಳ ಪ್ರಸಿದ್ದಿ ಪಡೆದಿದೆ. ಬಾಲಿವುಡ್ ನಿರ್ದೇಶಕ ಹಾಗೂ ನಿರ್ಮಾಪಕ ಕರಣ್ ಜೋಹರ್ ನಡೆಸಿಕೊಟ್ಟಿದ್ದ ಈ ಶೋ ಜನರಿಗೆ ಇಷ್ಟವಾಗಿತ್ತು. ಅದೇ ರೀತಿ ಈ ಬಾರಿ ಕನ್ನಡದಲ್ಲಿ ಸಹ ಮಾಡುವ ಆಲೋಚನೆಯಲ್ಲಿ ವಾಹಿನಿ ಇದೆ. ಇನ್ನು ಹಿಂದಿ ಬಿಗ್ಬಾಸ್ನಲ್ಲಿ ಓಟಿಟಿಯಲ್ಲಿ ಭಾಗವಹಿಸಿದ್ದ ಸಲ್ಮಾನ್ ಖಾನ್ ನಡೆಸಿಕೊಡುವ ಬಿಗ್ಬಾಸ್ ಶೋಗೆ ಹೋಗಲು ಅವಕಾಶ ನೀಡಲಾಗಿತ್ತು. ಹಾಗೆಯೇ ಇಲ್ಲಿ ಸಹ ಇಬ್ಬರಿಗೆ ರೆಗ್ಯುಲರ್ ಬಿಗ್ಬಾಸ್ಗೆ ಹೋಗಲು ಅವಕಾಶ ನೀಡಲಾಗುತ್ತದೆ.
ಇದನ್ನೂ ಓದಿ:ನಾನು ಬೆಂಗಳೂರಲ್ಲೇ ಸೆಟಲ್ ಆಗ್ಬೇಕಿತ್ತು, ಆದ್ರೆ ಬೇರೆ ಏನೋ ಆಗಿ ಎಲ್ಲಾ ಬದಲಾಯ್ತು- ಹೇಮಮಾಲಿನಿ ಲೈಫ್ ಪ್ಲಾನ್
ಕಿಚ್ಚ ಸುದೀಪ್ ಈ ಎರಡು ಬಿಗ್ಬಾಸ್ ಕಾರ್ಯಕ್ರಮದ ನಿರೂಪಣೆ ಮಾಡಲಿದ್ದಾರೆ. ಈಗಾಗಲೇ ಬಿಗ್ಬಾಸ್ಗೆ ಸ್ಪರ್ಧಿಗಳ ಹುಡುಕಾಟ ಆರಂಭವಾಗಿದ್ದು, ಮಿನಿ ಬಿಗ್ಬಾಸ್ಗೆ ಬಹಳ ವಿಶೇಷ ಅತಿಥಿಗಳು ಇರುತ್ತಾರೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ವಾಹಿನಿ ಇನ್ನೂ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಕಳೆದ ಬಾರಿ ಬಿಗ್ಬಾಸ್ 8 ಕೊರೊನಾ ಕಾರಣದಿಂದ ಅರ್ಧಕ್ಕೆ ನಿಂತು ಮತ್ತೆ ಆರಂಭವಾಗಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ