Bigg Boss OTT: ಬಿಗ್​ಬಾಸ್ ಮನೆಗೆ ಈ ಟಿಕ್​ಟಾಕ್​ ಸ್ಟಾರ್ ಎಂಟ್ರಿ ಪಕ್ಕನಾ? ಮೊದಲ ಸೀಸನ್​ಗೆ ಕ್ಷಣಗಣನೆ

Bhumika Basavaraj: ಸೋಷಿಯಲ್ ಮೀಡಿಯಾದಲ್ಲಿ ಅವರ ಹೆಸರು ಮತ್ತು ಅಭಿಮಾನಿ ಬಳಗ ದೊಡ್ಡದಿದೆ. ತಮ್ಮ ಲಿಪ್ ಸಿಂಕ್ ವಿಡಿಯೋಗಳ ಮೂಲಕ ಪ್ರಸಿದ್ಧಿ ಪಡೆದಾಕೆ ಇವರು.

ಭೂಮಿಕಾ ಬಸವರಾಜ್​

ಭೂಮಿಕಾ ಬಸವರಾಜ್​

  • Share this:
ಕನ್ನಡ (Kannada)  ಬಿಗ್ ಬಾಸ್ ಒಟಿಟಿ (Bigg Boss OTT) ನಾಳೆಯಿಂದ ಪ್ರಾರಂಭವಾಗಲಿದೆ. ವೂಟ್‌ ಆ್ಯಪ್‌ನಲ್ಲಿ (VOOT App) ಪ್ರಸಾರವಾಗಲಿದೆ. ಈಗಾಗಲೆ ಈ ಬಗ್ಗೆ ವಾಹಿನಿ ಹಾಗೂ ಪ್ರತಿ ಬಾರಿ ಬಿಗ್​ಬಾಸ್​ ಕಾರ್ಯಕ್ರಮ ನಡೆಸಿ ಕೊಡುವ ಕಿಚ್ಚ ಸುದೀಪ್ ಮಾಹಿತಿ ನೀಡಿದ್ದಾರೆ. ಕಾರ್ಯಕ್ರಮ ಆರಂಭವಾಗಲು ಕೆಲವೇ ಗಂಟೆಗಳು ಬಾಕಿದೆ ಇದೆ. ನಿನ್ನೆಯಿಂದಲೇ ಯಾರೆಲ್ಲಾ ಮನೆಯೊಳಗೆ ಹೋಗುತ್ತಾರೆ ಎನ್ನುವ ಬಗ್ಗೆ ಚರ್ಚೆ ಆರಂಭವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಇವರು ಹೋಗುತ್ತಾರೆ, ಅವರು ಹೋಗುತ್ತಾರೆ ಎಂದೆಲ್ಲಾ ಮಾತುಗಳು ಕೇಳಿ ಬರುತ್ತಿದೆ. ಇದೀಗ ಮತ್ತೊಬ್ಬ ಸೋಷಿಯಲ್ ಮೀಡಿಯಾ ಸ್ಟಾರ್ ಒಬ್ಬರು ಬಿಗ್​ಬಾಸ್ ಮನೆಗೆ ಹೋಗುವುದು ಖಚಿತ ಎನ್ನಲಾಗುತ್ತಿದೆ.

ಭೂಮಿಕಾ ಹೋಗುವುದು ಪಕ್ಕಾನಾ?

ಭೂಮಿಕಾ ಬಸವರಾಜ್, ಈ ಹೆಸರನ್ನು ಕೇಳಿರದೇ ಇರುವುದಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಅವರ ಹೆಸರು ಮತ್ತು ಅಭಿಮಾನಿ ಬಳಗ ದೊಡ್ಡದಿದೆ. ತಮ್ಮ ಲಿಪ್ ಸಿಂಕ್ ವಿಡಿಯೋಗಳ ಮೂಲಕ ಪ್ರಸಿದ್ಧಿ ಪಡೆದಾಕೆ ಇವರು. ಇವರ ವೀಡಿಯೋಗಳು ಎಲ್ಲವೂ ವೈರಲ್ ಆಗಿದೆ. ಇನ್ಸ್ಟಾಗ್ರಾಮ್‌ನಲ್ಲಿ ಭೂಮಿಕಾ ಬಸವರಾಜ್ ಅವರಿಗೆ 944k ಫಾಲೋವರ್ಸ್ ಇದ್ದು,  ಯೂಟ್ಯೂಬ್‌ನಲ್ಲಿ ಇವರ ಚಾನೆಲ್​ ಅನ್ನು 27.7k ಸಬ್‌ಸ್ಕ್ರೈಬರ್ಸ್ ಮಾಡಿದ್ದಾರೆ. ಇವರು ಕೇವಲ ಹಾಡಿನ ವೀಡಿಯೋಗಳನ್ನು ಮಾತ್ರ ಮಾಡಯವುದಿಲ್ಲ, ಯೋಗ, ಪ್ರವಾಸ, ಬ್ಯೂಟಿ ಟಿಪ್ಸ್ ಹೀಗೆ ಹಲವಾರು ರೀತಿಯ ವಿಚಾರಗಳಿಗೆ ಸಂಬಂಧಪಟ್ಟ ವೀಡಿಯೋಗಳನ್ನು ಮಾಡಿ ಹಾಕುತ್ತಿರುತ್ತಾರೆ.
View this post on Instagram


A post shared by Bhumika (@bhumika_basavaraj)


ಈಗಾಗಲೇ ಅವರು ಸ್ಟಾರ್​ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುವ ಸುವರ್ಣ ಸೂಪರ್ ಸ್ಟಾರ್​ನಲ್ಲಿ ಸಹ ಭಾಗವಹಿಸಿದ್ದರು.  ಬಹಳಷ್ಟು ಫಾಲೋವರ್ಸ್ ಹೊಂದಿರುವ ಭೂಮಿಕಾ ಬಿಗ್​ಬಾಸ್​ ಮನೆಗೆ ಬರುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಇವರ ಎಂಟ್ರಿ ಬಗ್ಗೆ ಇಂದು ಸಂಜೆ ತಿಳಿಯಲಿದೆ.

ಇದನ್ನೂ ಓದಿ: ಟಾಲಿವುಡ್​ಗೆ ಎಂಟ್ರಿ ಕೊಡ್ತಾರಾ ನಿವೇದಿತಾ ಗೌಡ? ತೆರೆ ಮೇಲೆ ಗೊಂಬೆ ನೋಡಲು ಕಾಯ್ತಿದ್ದಾರೆ ಫ್ಯಾನ್ಸ್
View this post on Instagram


A post shared by Bhumika (@bhumika_basavaraj)


ಇನ್ನು ಇವರು ಮಾತ್ರವಲ್ಲದೇ, ಕನ್ನಡದ ಸುದ್ದಿ ವಾಹಿನಿ ನಿರೂಪಕ ಒಬ್ಬರು ಸಹ ಈ ಮನೆಗೆ ಹೋಗುವ ಬಗ್ಗೆ ಸುದ್ದಿ ಹರಿದಾಡಿದೆ. ಹೌದು, ಖಾಸಗಿ ವಾಹಿನಿಯೊಂದರ ನಿರೂಪಕ ಸೋಮಣ್ಣ ಮಾಚಿಮಾಡ ಈ ಬಾರಿ ಬಿಗ್​ಬಅಸ್​ ಓಟಿಟಿ ಮನೆಗೆ ಹೋಗುವುದು ನಿಶ್ಚಿತ ಎನ್ನಲಾಗುತ್ತಿದೆ. ಅಲ್ಲದೇ, ಈ ಬಗ್ಗೆ ಅವರ ಸ್ನೇಹಿತರು ಸಹ ಈ ಬಗ್ಗೆ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ವಿಚಾರ ಹಂಚಿಕೊಂಡಿದ್ದು, ವಿಶ್​ ಮಾಡುತ್ತಿದ್ದಾರೆ. ಆದರೆ ಈ ವಿಚಾರವನ್ನು ವಾಹಿನಿ ಇನ್ನೂ ಖಚಿತ ಪಡಿಸಿಲ್ಲ.

ಇದನ್ನೂ ಓದಿ: ಬಹುಭಾಷಾ ನಟಿಯಾಗಿ ಮಿಂಚ್ತಿದ್ದಾರೆ ಪಲ್ಲವಿ ಗೌಡ, ಈ ಸುಂದರಿಯ ಬಗ್ಗೆ ಇಲ್ಲಿದೆ ಮಾಹಿತಿ

ಹೇಗಿರಲಿದೆ ಬಿಗ್​ ಬಾಸ್​ ಹೌಸ್

 ಹೌದು, ಪ್ರತಿ ಬಾರಿಯೂ ಬಿಗ್​ ಬಾಸ್​ ಮನೆ ಅದ್ದೂರಿಯಾಗಿರುತ್ತದೆ. ಹಲವು ವಿಶೇಷತೆಗಳಿಂದ ಈ ಮನೆ ಕೂಡಿರುತ್ತದೆ. ಐಷಾರಾಮಿ ಮನೆಯಲ್ಲಿ ಸ್ಪರ್ಧಿಗಳು ಈ ಬಾರಿ 6 ವಾರಗಳ ಕಾಲ ಇರುತ್ತಾರೆ. ಹಾಗಾದರೆ ಈ ಬಾರಿ ಮನೆ ಹೇಗಿರಲಿದೆ ಎಂಬ ಕುತೂಹಲಕ್ಕೆ ಇದೀಗ ತೆರೆಬಿದ್ದಿದೆ. ಹೌದು, ಪರಮೇಶ್ವರ್ ಗುಂಡ್ಕಲ್​​ ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಬಿಗ್​ ಬಾಸ್​ ಮನೆಯ ಫೋಟೋ ಹಂಚಿಕೊಂಡಿದ್ದು, Over the top! ಎಂದು ಬರೆದುಕೊಂಡಿದ್ದಾರೆ. ಒಂದು ಗೊಂಬೆಯ ಕಣ್ಣನ್ನು ಹಾಗೂ ಕುತ್ತಿಗೆಯನ್ನು 2 ಕೈಗಳು ಹಿಡಿದಿರುವ ಚಿತ್ರ ಇದಾಗಿದ್ದು, ಪ್ರೇಕ್ಷಕರಲ್ಲಿ ಬಿಗ್​ ಬಾಸ್​ ಹೌಸ್​ ಕುರಿತು ಕುತೂಹಲ ಹೆಚ್ಚಿದ್ದು, ಇದಕ್ಕೆಲ್ಲಾ ಆಗಸ್ಟ್ 6ರಂದು ತೆರೆಬೀಳಲಿದೆ.
Published by:Sandhya M
First published: