Bigg Boss OTT: ನಾಳೆಯಿಂದ ಬಿಗ್​ಬಾಸ್​ ಇದ್ರೂ ಲೀಕ್​ ಆಗಿಲ್ಲ ಸ್ಪರ್ಧಿಗಳ ಲಿಸ್ಟ್​, ವರ್ಕ್ ಆಯ್ತಾ ಮಾಸ್ಟರ್ ಪ್ಲ್ಯಾನ್​?

Colors Kannada: ಸಾಮಾನ್ಯವಾಗಿ ಪ್ರತಿಬಾರಿ ಬಿಗ್​ಬಾಸ್​ ಆರಂಭವಾಗುವಾಗ ಯಾರೆಲ್ಲಾ ಮನೆಯ ಒಳಗೆ ಹೋಗುತ್ತಾರೆ ಎನ್ನುವ ಬಗ್ಗೆ ಸುದ್ದಿಗಳು ಹರಿದಾಡುತ್ತಿದ್ದವು. ಕೊನೆ ಪಕ್ಷ ಆ ಸುದ್ದಿಗಳಲ್ಲಿ ಶೇಕಡ 70ರಷ್ಟು ಸುದ್ದಿಗಳು ಸತ್ಯವಾಗಿರುತ್ತಿದ್ದವು.

ಬಿಗ್​ಬಾಸ್​

ಬಿಗ್​ಬಾಸ್​

  • Share this:
ಕಲರ್ಸ್ ಕನ್ನಡ (colors Kannada) ವಾಹಿನಿ ವಿಭಿನ್ನ ಧಾರಾವಾಹಿಗಳ (serial) ಮೂಲಕ ಜನರ ಮನಗೆದ್ದಿದೆ. ಕೇವಲ ಧಾರಾವಾಹಿ ಮಾತ್ರವಲ್ಲದೆ, ರಿಯಾಲಿಟಿ ಶೋಗಳು ಸಹ ಜನರಿಗೆ ಬಹಳ ಇಷ್ಟವಾಗಿದೆ. ಅವುಗಳಲ್ಲಿಯೇ ವಿಶೇಷ ಕಾರ್ಯಕ್ರಮ ಬಿಗ್​ಬಾಸ್, (Bigg Boss) ಈ ಬಾರಿ ಎರಡೆರಡು ಬಿಗ್​ಬಾಸ್ ಇರುತ್ತದೆ ಎನ್ನುವ ವಿಚಾರ ಈಗ ಎಲ್ಲರಿಗೂ ತಿಳಿದಿದೆ. ನಾಳೆಯಿಂದ ಬಿಗ್​ಬಾಸ್​ ಓಟಿಟಿ (Bigg Boss OTT) ಮೊದಲ ಸೀಸನ್​ ಆರಂಭವಾಗುತ್ತಿದೆ. ಅಭಿಮಾನಿಗಳು ಯಾವಾಗ ನಾಳೆ ಆಗುತ್ತದೆ, ಬಿಗ್​ಬಾಸ್​​ ಸ್ಟಾರ್ಟ್​​ ಆಗುತ್ತದೆ ಎಂದು ಕಾದು ಕುಳಿತಿದ್ದಾರೆ. ಯಾರೆಲ್ಲಾ ಮನೆ ಒಳಗೆ ಹೋಗುತ್ತಾರೆ ಎಂಬುದು ಇನ್ನೂ ತಿಳಿದಿಲ್ಲ. ಎಲ್ಲವೂ ಗುಟ್ಟಾಗಿ ಉಳಿದಿದೆ. ಇದಕ್ಕೆ ವಾಹಿನಿ ಮಾಡಿರುವ ಪ್ಲ್ಯಾನ್​​ ಎನ್ನಲಾಗುತ್ತಿದೆ.

ಸ್ಪರ್ಧಿಗಳ ಬಗ್ಗೆ ಸಿಕಿಲ್ಲ ಒಂದೇ ಒಂದು ಸುಳಿವು

ಹೌದು, ಸಾಮಾನ್ಯವಾಗಿ ಪ್ರತಿಬಾರಿ ಬಿಗ್​ಬಾಸ್​ ಆರಂಭವಾಗುವಾಗ ಯಾರೆಲ್ಲಾ ಮನೆಯ ಒಳಗೆ ಹೋಗುತ್ತಾರೆ ಎನ್ನುವ ಬಗ್ಗೆ ಸುದ್ದಿಗಳು ಹರಿದಾಡುತ್ತಿದ್ದವು. ಕೊನೆ ಪಕ್ಷ ಆ ಸುದ್ದಿಗಳಲ್ಲಿ ಶೇಕಡ 70ರಷ್ಟು ಸುದ್ದಿಗಳು ಸತ್ಯವಾಗಿರುತ್ತಿದ್ದವು. ಆದರೆ ಬಿಗ್​ಬಾಸ್​ ಸ್ಟಾರ್ಟ್​​ ಆಗಲು ಕೇವಲ ಒಂದು ದಿನ ಬಾಕಿ ಇದೆ, ಆದರೂ ಸಹ ಈ ಬಗ್ಗೆ ಸಣ್ಣ ಸುಳಿವು ಕೂಡ ಇಲ್ಲ. ಆ ಮಟ್ಟಿಗೆ ಈ ಬಾರಿಗೆ ವಾಹಿನಿ ಸೀಕ್ರೇಟ್​ ಮೇಂಟೈನ್​ ಮಾಡಿದೆಯಂತೆ.

ಮೊದಲೆಲ್ಲ ಒಂದೆಲ್ಲಾ ಒಂದು ರೀತಿಯಾಗಿ ವಿಚಾರ ಲೀಕ್​ ಆಗುತ್ತಿತ್ತು. ಒಳಗೆ ಹೋಗುತ್ತಿರುವವರೇ ಈ ವಿಚಾರ ಬಹಿರಂಗ ಮಾಡಿರುವುದು ಉಂಟು. ಅಲ್ಲದೇ ಶೋ ಆರಂಭದಲ್ಲಿ ಅವರ ಬಗ್ಗೆ ತೋರಿಸುವ ವಿಡಿಯೋ ಶೂಟ್​ ಮಾಡಿದ ಕ್ಯಾಮೆರಾ ಮ್ಯಾನ್​ಗಳಿಂದ ಸಹ ಈ ವಿಚಾರ ತಿಳಿಯುತ್ತಿತ್ತು. ಇಲ್ಲ ವಾಹಿನಿಯೇ ಪ್ರೋಮೋ ಮೂಲಕ ಒಟ್ಟಾರೆಯಾಗಿ ಸ್ವಲ್ಪವಾದರೂ ವಿಚಾರದ ಸುಳಿವು ಸಿಗುತ್ತಿತ್ತು. ಆದರೆ ಈ ಬಾರಿ ಎಲ್ಲವೂ ಸೈಲೆಂಟ್​.

ಇದನ್ನೂ ಓದಿ: ವಿಕ್ರಾಂತ್​ ರೋಣ ಕುರಿತು ಅಪಸ್ವರ ಎತ್ತಿದ ಚೇತನ್, ಸ್ಯಾಂಡಲ್​ವುಡ್​ನಲ್ಲಿ ಬಿರುಗಾಳಿ ಎಬ್ಬಿಸಿದ ನಟ

ಮಾಹಿತಿಯ ಪ್ರಕಾರ, ಈ ಬಾರಿ ಓಟಿಟಿಯಲ್ಲಿ ಬರುತ್ತಿರುವುದರಿಂದ ಜನರಿಗೆ ಮೊದಲೇ ವಿಚಾರಗಳು ತಿಳಿದು ಹೋದರೆ ಕುತೂಹಲ ಉಳಿಯುವುದಿಲ್ಲ. ಜನ ಕಾರ್ಯಕ್ರಮವನ್ನು ನೋಡುವುದಿಲ್ಲ ಎನ್ನುವುದು ವಾಹಿನಿಯ ಅಭಿಪ್ರಾಯವಂತೆ. ಹಾಗಾಗಿ ಈ ಬಾರಿ ಬಹಳ ಎಚ್ಚರಿಕೆಯಿಂದ ಗುಟ್ಟು ಕಾಪಾಡಿಕೊಂಡು ಬರಲಾಗಿದೆ ಎನ್ನಲಾಗುತ್ತಿದೆ.

ಹಾಗಾದ್ರೆ ವಾಹಿನಿ ಪ್ಲ್ಯಾನ್​ ಏನು?

ಮೂಲಗಳ ಪ್ರಕಾರ ವಾಹಿನಿ ಈ ಬಾರಿ ಬಿಗ್​ಬಾಸ್​ ಓಟಿಟಿಗೆ ಬರುವ ಸ್ಪರ್ಧಿಗಳಿಗೆ ತುಂಬಾ ಸ್ಟ್ರಿಕ್ಟ್​​ ರೂಲ್ಸ್​ ಮಾಡಿದೆಯಂತೆ. ಪ್ರತಿ ಸಲ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಸ್ಪರ್ಧಿಗಳಿಗೆ ಒಂದಿಷ್ಟು ದಿನಕ್ಕೆ ಒಂದು ಅಗ್ರಿಮೆಂಟ್​ ಆಗಿರುತ್ತದೆ. ಇಷ್ಟು ದಿನಕ್ಕೆ ಔಟ್​ ಆದ್ರೆ ಇಷ್ಟು ಮೊತ್ತ ಎಂದು ಅದರಲ್ಲಿ ಇರುತ್ತದೆ. ಈ ಸಲ ಆ ಅಗ್ರಿಮೆಂಟ್​ನಲ್ಲಿ ಅಪ್ಪಿ ತಪ್ಪಿ ವಿಚಾರವನ್ನು ಲೀಕ್ ಮಾಡಿದ್ರೆ ಕಾಂಟ್ರ್ಯಕ್ಟ್​ ಕ್ಯಾನ್ಸಲ್​ ಮಾಡಲಾಗುತ್ತದೆ ಎಂಬುದನ್ನ ಸಹ ಸೇರಿಸಲಾಗಿದೆಯಂತೆ. ಹಾಗಾಗಿ ಯಾವುದೇ ಸ್ಪರ್ಧಿಗಳಿಂದ ಮಾಹಿತಿ ಲೀಕ್​ ಆಗಿಲ್ಲವಂತೆ.

ಇದನ್ನೂ ಓದಿ: ಟಾಲಿವುಡ್​ಗೆ ಎಂಟ್ರಿ ಕೊಡ್ತಾರಾ ನಿವೇದಿತಾ ಗೌಡ? ತೆರೆ ಮೇಲೆ ಗೊಂಬೆ ನೋಡಲು ಕಾಯ್ತಿದ್ದಾರೆ ಫ್ಯಾನ್ಸ್

ಹಾಗಾದ್ರೆ ಬೇರೆ ರೀತಿಯಾಗಿ ವಿಚಾರ ಯಾಕೆ ಹೊರಗೆ ಬಂದಿಲ್ಲ ಎನ್ನುವುದಾದರೆ, ಸೆಲೆಬ್ರಿಟಿಗಳ ವಿಡಿಯೋ ಶೂಟ್​ ಮಾಡಲು ಕ್ಯಾಮೆರಾ ಮ್ಯಾನ್​ಗಳನ್ನು ಬೇರೆ ರಾಜ್ಯದಿಂದ ಕರೆಸಲಾಗಿದೆಯಂತೆ. ಅವರಿಗೆ ಈ ಸ್ಪರ್ಧಿಗಳ ಬಗ್ಗೆ ಮಾಹಿತಿ ಇರುವುದಿಲ್ಲ. ಹಾಗಾಗಿ ಈ ಸುದ್ದಿಗಳು ಹೊರಗೆ ಬಂದಿಲ್ಲವಂತೆ. ಇನ್ನು ವಾಹಿನಿ ಸಹ ಸ್ಪರ್ಧಿಗಳ ಕುರಿತಂತೆ ಯಾವುದೇ ಪ್ರೋಮೋ ಬಿಡುಗಡೆ ಮಾಡಿಲ್ಲ. ಈ ಎಲ್ಲಾ ಕಾರಣದಿಂದ ಈ ಬಾರಿ ಎಲ್ಲವೂ ಗುಟ್ಟಾಗಿ ಉಳಿದಿದ್ದು, ಜನರಲ್ಲಿ ಕುತೂಹಲ ಸಹ ಹೆಚ್ಚಿದೆ.
Published by:Sandhya M
First published: