Bigg Boss OTT: ಮೂಡ್ ಇಲ್ಲ ಅಂದ್ರೆ 3 ದಿನ ಸ್ನಾನನೇ ಮಾಡಲ್ವಂತೆ ಸೋನು ಗೌಡ; ಟ್ರೋಲ್ ಹುಡುಗಿ ಮೇಲೆ ಸಾನ್ಯಾ ಕಂಪ್ಲೇಂಟ್

ಸೋನು ಗೌಡ ಸ್ನಾನ ಮಾಡುವುದಿಲ್ಲ ಎಂದು ಸಾನ್ಯಾ ಅಯ್ಯರ್​ ಆರೋಪಿಸಿದರು. ನಾನು ಇವತ್ತು ಸ್ನಾನ ಮಾಡಿಲ್ಲ ಎಂದು ಸುದೀಪ್​ ಎದುರು ಸೋನು ಗೌಡ ಒಪ್ಪಿಕೊಂಡಿದ್ದಾರೆ. ಅವರ ಮಾತು ಕೇಳಿ ಎಲ್ಲರೂ ಜೋರಾಗಿ ನಕ್ಕಿದ್ದಾರೆ.

ಸೋನು ಗೌಡ

ಸೋನು ಗೌಡ

  • Share this:
ಜನಪ್ರಿಯ ರಿಯಾಲಿಟಿ ಶೋ ಬಿಗ್​ಬಾಸ್ (Bigg Boss)​ ಈ ಬಾರಿ ಓಟಿಟಿಯಲ್ಲಿ (OTT) ಪ್ರಸಾರವಾಗ್ತಿದ್ದು, ಜನರಲ್ಲಿ ಭಾರೀ ಕುತೂಹಲ ಮೂಡಿಸಿದೆ. ಒಂದು ವಾರ ಬಿಗ್​ ಬಾಸ್ ಮನೆಯಲ್ಲಿ ಸ್ಪರ್ಧಿಗಳು (Contestant) ಹೇಗೆಲ್ಲಾ ಟಾಸ್ಕ್​ ಮಾಡಿದ್ರು. ಯಾರದು ತಪ್ಪು ಯಾರದು ಸರಿ ಅನ್ನೋ ಅನೇಕ ಗೊಂದಲಕ್ಕೆ ವಾರದ ಕಥೆ ಕಿಚ್ಚನ ಜೊತೆಯಲ್ಲಿ ಸುದೀಪ್​ ಉತ್ತರ ನೀಡ್ತಾರೆ.  ಈ ವಾರ ನಡೆದ ಪಂಚಾಯಿತಿಯಲ್ಲಿ ಕೆಲವು ಕುತೂಹಲಕಾರಿ ಸಂಗತಿಗಳ ಬಗ್ಗೆ ಚರ್ಚೆ ನಡೆದಿದೆ.  ಸೋನುಗೌಡ ಅವರಿಗೆ ಸುದೀಪ್​ ಅವರು ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ.  ಈ ವೇಳೆ ಸೋನು ಗೌಡ (Sonu Gowda) ಸ್ನಾನದ ವಿಚಾರ ಕೂಡ ಚರ್ಚೆಯಾಗಿದೆ. 

ಸೋನು ಗೌಡ ಸ್ನಾನ ಮಾಡಲ್ಲ ಎಂದ ಸಾನ್ಯಾ

ಮನೆಯನ್ನು ಕೊಳಕಾಗಿ ಇಟ್ಟುಕೊಳ್ಳುವವರು ಯಾರು, ತಮ್ಮ ವಸ್ತುಗಳಲ್ಲಿ ಚೆಲ್ಲಾಪಿಲ್ಲಿ ಮಾಡಿ ಗಲೀಜು ಮಾಡೋದು ಯಾರು ಎಂದು ಕಿಚ್ಚ ಸುದೀಪ್​ ಅವರು ಬಿಗ್​ ಸ್ಪರ್ಧಿಗಳಿಗೆ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಸ್ಪರ್ಧಿಗಳು ಅನೇಕ ಹೆಸರು ಹೇಳಿದ್ದಾರೆ. ಬಳಿಕ ಸ್ನಾನದ ಬಗ್ಗೆಯೂ ಚರ್ಚೆ ನಡೆದ ವೇಳೆ, ಸೋನು ಗೌಡ ಸ್ನಾನ ಮಾಡುವುದಿಲ್ಲ ಎಂದು ಸಾನ್ಯಾ ಅಯ್ಯರ್​ ಆರೋಪಿಸಿದರು. ನಾನು ಇವತ್ತು ಸ್ನಾನ ಮಾಡಿಲ್ಲ ಎಂದು ಸುದೀಪ್​ ಎದುರು ಸೋನು ಗೌಡ ಒಪ್ಪಿಕೊಂಡಿದ್ದಾರೆ.

Who is Bigg Boss OTT contestant Sonu Srinivasa Gowda
ಸೋನು ಶ್ರೀನಿವಾಸ್​ ಗೌಡ


ಮೂಡ್​ ಇಲ್ಲ ಅಂದ್ರೆ 3 ದಿನ ಸ್ನಾನ ಮಾಡೋದಿಲ್ಲ

ಇಲ್ಲಿ ಎಷ್ಟೋ ಜನರು ಸ್ನಾನದ ವಿಚಾರದಲ್ಲಿ ಡ್ರಾಮಾ ಮಾಡುತ್ತಾರೆ. ಎಲ್ಲರೂ ಪ್ರತಿ ದಿನ ಸ್ನಾನ ಮಾಡ್ತಾರೆ. ನಮ್ಮ ಮನೆಯಲ್ಲಿ ಒಮ್ಮೊಮ್ಮೆ ಮೂಡ್​ ಇಲ್ಲ ಅಂದರೆ ಮೂರು ದಿನಕ್ಕೊಮ್ಮೆ ಸ್ನಾನ ಮಾಡ್ತೀನಿ ಎಂದು ಸೋನು ಹೇಳಿದ್ದಾರೆ. ಅವರ ಮಾತು ಕೇಳಿ ಎಲ್ಲರೂ ಜೋರಾಗಿ ನಕ್ಕಿದ್ದಾರೆ.

ಸ್ನಾನದ ವಿಚಾರಕ್ಕೆ ಸೋನು ಟ್ರೋಲ್​

ಸೋನು ಶ್ರೀನಿವಾಸ್​ ಗೌಡ ಅವರನ್ನು ಸೋಶಿಯಲ್​ ಮೀಡಿಯಾದಲ್ಲಿ ಹೆಚ್ಚು ಟ್ರೋಲ್​ ಮಾಡಲಾಗುತ್ತಿದೆ. ಅವರಿಗೆ ಈ ವೇದಿಕೆಯಲ್ಲಿ ಅವಕಾಶ ಸಿಕ್ಕಿದ್ದಕ್ಕೆ ಅನೇಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೊದಲ ವಾರವೇ ಅವರು ಎಲಿಮಿನೇಟ್​ ಆಗಬಹುದು ಎಂದು ಕೆಲವರು ಊಹಿಸಿದ್ದರು. ಆದರೆ ವೀಕ್ಷಕರಿಂದ ಚೆನ್ನಾಗಿ ವೋಟ್​ ಪಡೆದ ಕಾರಣ ಅವರು ಮೊದಲ ವಾರ ಸೇಫ್​ ಆಗಿದ್ದಾರೆ. ಇದೀಗ ಸ್ನಾನದ ವಿಚಾರಕ್ಕೆ ಟ್ರೋಲ್​ ಆಗುತ್ತಿದ್ದಾರೆ.

ವಾರದ ಕಥೆ ಕಿಚ್ಚನ ಜೊತೆಯಲ್ಲಿ ಸಿಕ್ಕಾಪಟ್ಟೆ ಕ್ಲಾಸ್​!

ಬಿಗ್​ಬಾಸ್​ ಒಟಿಟಿ ಸೀಸನ್​ ಶುರುವಾಗಿ ಇಂದಿಗೆ ಒಂಬತ್ತನೇ ದಿನ. ವಾರದ ಕಥೆ ಕಿಚ್ಚ ಜೊತೆ ಮೊದಲ ವಾರರದ ಕಾರ್ಯಕ್ರಮ ಕೂಡ ಸೂಪರ್ ಆಗಿ ಮೂಡಿಬಂದಿತ್ತು. ಶನಿವಾರ ಕಿರಣ್​ ಯೋಗೇಶ್ವರ್​ ಬಿಗ್​ ಬಾಸ್​ ಮನೆಯಿಂದ  ಹೊರನಡೆದರು. ಸೂಪರ್​ ಸಂಡೇ ವಿತ್​ ಕಿಚ್ಚ ಕಾರ್ಯಕ್ರಮ ನಡೀತು. ಮನೆಯವರೊಂದಿಗೆ ಕಿಚ್ಚ ಸುದೀಪ್​ ಮಾತನಾಡಿದರು. ಭಾನುವಾರ ಕಿಚ್ಚ ಎಲ್ಲರ ಅಭಿಪ್ರಾಯ ಪಡೆದುಕೊಂಡರು. ಈ ವೇಳೆ ಕಿಚ್ಚನ ಮುಂದೆಯೇ ಖಾರವಾಗಿ ಮಾತನಾಡಿದ  ಸೋನು ಶ್ರೀನಿವಾಸ್​ ಗೌಡ ರವರಿಗೆ ನಗುಮುಖದಲ್ಲೇ ಅವರಿಗೆ ಕ್ಲಾಸ್​ ತೆಗೆದುಕೊಂಡರು. ಕೊನೆಗೂ ತನ್ನನ್ನು ಸಮರ್ಥಿಸಿಕೊಂಡು ಜಂಭ ತೋರಿದ್ದಾರೆ.

ಕಿಚ್ಚ ಸುದೀಪ್​  ಹೌದು ಅಥವಾ ಇಲ್ಲ ಎಂಬ ಆಟವನ್ನು ಮನೆಯ ಸದಸ್ಯರಿಗೆ ನೀಡಿದ್ದರು. ಈ ವೇಳೆ ಮನೆಯ ಎಲ್ಲ ಸದಸ್ಯರು ಆರ್ಯವರ್ಧನ್​ ಅವರ ಕಾಲೆಳೆದರು. ಸೋನು ಶ್ರೀನಿವಾಸ ಗೌಡ ಕೂಡ ಸುದೀಪ್​ ಸರ್​ ಎನ್ನುತ್ತಾ ಸಖತ್​ ಮಜಾ ಮಾಡಿದರು. ಇದೇ ವೇಳೆ ಸುದೀಪ್​ ಅವರು ಸೋನು ಗೌಡ ಅವರ ಬಗ್ಗೆ ಮನೆಯ ಸದಸ್ಯರಿಗೆ ಪ್ರಶ್ನೆ ಕೇಳಿದರು. ಸೋನು ಗೌಡ ಕೂಡ ಆರ್ಯವರ್ಧನ್​ ಅವರ ರೀತಿಯಲ್ಲೇ ಮಾತನಾಡುವ ಮತ್ಯಾವುದೋ ವಿಚಾರಕ್ಕೆ ಹೋಗುತ್ತಾರೆ. ಎಂದು ಕಿಚ್ಚ ಕೇಳಿದರು. ಇದಕ್ಕೆ ಮನೆಯ ಸದಸ್ಯರೆಲ್ಲ ಹೌದು ಎಂಬ ಬೋರ್ಡ್​ ಹಿಡಿದುಕೊಂಡರು.
Published by:Pavana HS
First published: