Sonu Srinivas Gowda: ಖಾಸಗಿ ವಿಡಿಯೋ ಲೀಕ್​ ಆಗಿದ್ದನ್ನು ನೆನೆದು ದೊಡ್ಮನೆಯಲ್ಲಿ ಕಣ್ಣೀರಿಟ್ಟ ಸೋನು ಶ್ರೀನಿವಾಸ್ ಗೌಡ!

ಸೋನು ಶ್ರೀನಿವಾಸ್​ ಗೌಡ ಹುಡುಗನೊಬ್ಬನ ಪ್ರೀತಿಗೆ ಬಿದ್ದಿದ್ದರು. ಇಬ್ಬರು ಲವ್​ ಮಾಡುತ್ತಿದ್ದರು. ಅಷ್ಟೇ ಏಕೆ ಆತನು ಕೂಡ ಗೌಡ ಜಾತಿಗೆ ಸೇರಿದವನಾಗಿದ್ದು, ಮೆಸೇಜ್​, ಕಾಲ್​, ವಿಡಿಯೋ ಕಾಲ್​ ಮಾಡುತ್ತಿದ್ದರಂತೆ.

ಸೋನು ಶ್ರೀನಿವಾಸ್​ ಗೌಡ

ಸೋನು ಶ್ರೀನಿವಾಸ್​ ಗೌಡ

  • Share this:
    ಬಿಗ್​ ಬಾಸ್​ ಮನೆಗೆ ಸೋನು ಶ್ರೀನಿವಾಸ್​ ಗೌಡ ಕೂಡ ಕಾಲಿಟ್ಟಿದ್ದಾರೆ. ಸೋಶಿಯಲ್​ ಮೀಡಿಯಾ ಮೂಲಕ ಜನಪ್ರಿಯತೆ ಪಡೆದ ಸೋನುಗೆ ದೊಡ್ಮನೆ ಮನೆಯಲ್ಲಿ ಈಗ ಜಾಗ ಸಿಕ್ಕಿದೆ. ಆದರೆ ಈ ಅವಕಾಶ ಮಾಡಿಕೊಟ್ಟ ಬಗ್ಗೆ ಅನೇಕರು ಸೋನು ಶ್ರೀನಿವಾಸ್​ ಗೌಡ (Sonu Srinivas Gowda) ಅವರನ್ನು ಬಿಗ್​​ ಬಾಸ್​ ಮನೆಗೆ ಕರೆಸಿಕೊಂಡಿರುವುದು ಸರಿಯಲ್ಲ ಎಂದು ಮಾತನ್ನಾಡುತ್ತಿದ್ದಾರೆ. ಸದಾ ಸಾಮಾಜಿಕ ಜಾಲತಾಣದ (Social Medai) ಮೂಲಕ ಏನಾದರೊಂದು ಚರ್ಚೆಗೆ ಗ್ರಾಸವಾಗುವ ಕಂಟೆಂಟ್​ ಅನ್ನು ಸೋನು ಸೋನು ಶ್ರೀನಿವಾಸ್​ ಗೌಡ ನೀಡುತ್ತಿದ್ದರು. ಈ ಮೂಲಕ ಬೇಗ ಜನಪ್ರಿಯತೆ ಪಡೆದರು. ಹಿಂದೊಮ್ಮೆ ಸೋನು ಶ್ರೀನಿವಾಸ್​ ಗೌಡ ಅವರ ಖಾಸಗಿ ವಿಡಿಯೋ ಕೂಡ  ಲೀಕ್​ ಆಗಿತ್ತು. ಬಿಗ್​ ಬಾಸ್ (Bigg Boss)​ ಮನೆಗೆ ಕಾಲಿಟ್ಟಂತೆ ಸೋನು ಈ ವಿಚಾರದ ಬಗ್ಗೆ ಹೇಳಿಕೊಂಡಿದ್ದಾರೆ. ಕಣ್ಣೀರು ಸುರಿಸಿದ್ದಾರೆ. ಯಾರಿಂದ ತಪ್ಪಾಗಿದೆ ಅನ್ನೋದನ್ನ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

    ಸೋನು ಶ್ರೀನಿವಾಸ್​ ಗೌಡ ಟಿಕ್​ ಟಾಕ್ ವೇದಿಕೆ​ ಮೂಲಕ ಜನಪ್ರಿಯತೆ ಪಡೆದವರು. ಆ ಬಳಿಕ ಆಕೆಯ ಮಾತಿನ ಶೈಲಿ, ವಿಧಾನದಿಂದಾಗಿ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆದರು. ಹೀಗೆ ಅನೇಕ ಫಾಲೋವರ್ಸ್​ಗಳನ್ನು ಸೋನು ಶ್ರೀನಿವಾಸ್​ ಗೌಡ ಸಂಪಾದಿದ್ದಾರೆ. ಇದೇ ಕಾರಣಕ್ಕೆ ಬಿಗ್​ ಬಾಸ್​ ಮನೆಗೆ ಅವರಿಗೆ ಎಂಟ್ರಿ ಸಿಕ್ಕಿದೆ. ಈ ಸಿಕ್ಕಿರುವ ಅವಕಾಶವನ್ನು ಸದುಪಯೋಗ ಪಡೆದುಕೊಳ್ಳುವಲ್ಲಿ ಸೋನು ಮುಂದಾಗಿದ್ದಾರೆ. ಬಿಗ್​ ಬಾಸ್​ ಸ್ಪರ್ಧಿಗಳ ಎದುರು ಹಿಂದೊಮ್ಮೆ ವೈರಲ್​ ಆಗಿದ್ದ ಖಾಸಗಿ ವಿಡಿಯೋದ ಬಗ್ಗೆ ಮಾತನಾಡಿದ್ದಾರೆ.

    ಸೋನು ಶ್ರೀನಿವಾಸ್​ ಗೌಡ ಹುಡುಗನೊಬ್ಬನ ಪ್ರೀತಿಗೆ ಬಿದ್ದಿದ್ದರು. ಇಬ್ಬರು ಲವ್​ ಮಾಡುತ್ತಿದ್ದರು. ಅಷ್ಟೇ ಏಕೆ ಆತನು ಕೂಡ ಗೌಡ ಜಾತಿಗೆ ಸೇರಿದವನಾಗಿದ್ದು, ಮೆಸೇಜ್​, ಕಾಲ್​, ವಿಡಿಯೋ ಕಾಲ್​ ಮಾಡುತ್ತಿದ್ದರಂತೆ. ಆದರೆ ಕೊನೆಗೊಂದು ದಿನ ಆ ಬಾಯ್​ ಫ್ರೆಂಡ್​​ನಿಂದಾಗಿ​ ಸೋನು ಶ್ರೀನಿವಾಸ್​ ಗೌಡ ಅವರ ಖಾಸಗಿ ವಿಡಿಯೋ ವೈರಲ್​ ಆಗಿದೆ. ಈ ಹಳೆಯ ಘಟನೆಯನ್ನು ಹೇಳುವ ಮೂಲಕ ಬಿಗ್​ ಬಾಸ್​ ಮನೆಯಲ್ಲಿ ತನ್ನ ನೋವನ್ನು ಹೇಳಿಕೊಂಡಿದ್ದಾರೆ ಸೋನು ಶ್ರೀನಿವಾಸ್​ ಗೌಡ. ಆಕೆಯ ಕಣ್ಣೀರು ಕಂಡು ಉಳಿದ ಸ್ಫರ್ಧಿಗಳು ಸಂತೈಸಿದ್ದಾರೆ. ಅವರನ್ನು ತಬ್ಬಿಕೊಂಡು ಕಣ್ಣೀರು ಒರೆಸುವ ಕೆಲಸ ಮಾಡಿದ್ದಾರೆ ನಟ ರಾಕೇಶ್​ ಅಡಿಗ.

    ಆತ ಮದುವೆ ಆಗ್ತಿನಿ ಅಂದಿದ್ದ!

    ಪ್ರೀತಿಗೆ ಬೀಳುವುದು ಸಹಜ. ಅದೇ ರೀತಿ ಸೋನು ಶ್ರೀನಿವಾಸ್​ ಗೌಡ ಕೂಡ ಯುವಕನೊಬ್ಬನ ಪ್ರೀತಿಗೆ ಬಿದ್ದಿದ್ದರು. ಆತನ ಮೊಲಿನಿಂದಲೂ ಆಕೆಗೆ ತಿಳಿದಿದ್ದ ಕಾರಣ ಮತ್ತು ಒಂದೇ ಜಾತಿಯವನಾಗಿದ್ದ ಕಾರಣ ಸೋನು ಕೂಡ ಆಕೆಯನ್ನು ಪ್ರೀತಿಸಿದರು. ಇಬ್ಬರ ನಡುವೆ ಪ್ರೀತಿ ಹೆಚ್ಚಾಗುತ್ತಿಂದಂತೆ ಆತನನ್ನೇ ಮದುವೆ ಆಗ್ತೀನಿ ಅಂತ ಮನೆಯಲ್ಲಿ ಹೇಳಿದ್ದರಂತೆ.



    ಹೀಗಿರುವಾಗ ಒಂದು ದಿನ ಪ್ರಿಯಕರ ವಿಡಿಯೋ ಕರೆ ಮಾಡು ಎಂದು ಸೋನು ಶ್ರೀನಿವಾಸ್​ ಗೌಡ ಅವರನ್ನು ಕೇಳಿಕೊಂಡಿದ್ದಾನೆ. ಆಕೆ ಕೂಡ ಆತನಿಗೆ ವಿಡಿಯೋ ಫೋನ್​ ಕರೆ ಮಾಡಿದ್ದಾರೆ. ಹೇಗೂ ಮದುವೆ ಆಗುತ್ತೇವೆ ಎಂದು ಸೋನು ಶ್ರೀನಿವಾಸ್​ ಗೌಡ ದುಡುಕುತ್ತಾರೆ. ಆತ್ತ ಕಡೆಯಿಂದ ಪ್ರಿಯಕರ ವಿಡಿಯೋ ಕರೆಯನ್ನು ರೆಕಾರ್ಡ್​ ಮಾಡತ್ತಾನೆ. ಒಂದು ವಾರದ ನಂತರ ಅವನು ಆಕೆಯ ಬಳಿ  ರೂಡ್​ ಆಗಿ ನಡೆದುಕೊಳ್ಳಲು ಶುರು ಮಾಡಿತ್ತಾನೆ ಎಂದು ಸೋನು ತನ್ನ ಬೇಸರ ಹಂಚಿಕೊಂಡಿದ್ದಾರೆ.

    ಇದನ್ನೂ ಓದಿ: Fahad Fazil Birthday: ಖ್ಯಾತ ನಿರ್ದೇಶಕನ ಮಗನಾದ್ರೂ ಫಹಾದ್ ಸಾಲು ಸಾಲು ಸಿನಿಮಾ ಫ್ಲಾಪ್ ಆಗಿತ್ತು

    ಬ್ಲಾಕ್​​ ಮೇಲ್​

    ಕೊನೆಗೆ ಪ್ರಿಯಕರ ತನ್ನ ಆ ವಿಡಿಯೋ ಇಟ್ಟುಕೊಂಡು ಸೋನು ಶ್ರೀನಿವಾಸ್​ ಗೌಡಗೆ ಬ್ಲಾಕ್​ ಮೇಲ್​ ಮಾಡುತ್ತಿದ್ದಾನಂತೆ. ಆದರೆ ಒಂದು ವರ್ಷದ ಬಳಿಕ ವಿಡಿಯೋ ಲೀಕ್ ಮಾಡುತ್ತಾನೆ.​ ಈ ಘಟನೆಯಿಂದ ನೊಂದ ಆಕೆ ತನ್ನ ತಪ್ಪಿನ ಅರಿವಾಗಿದೆ. ವಿಡಿಯೋ ಲೀಕ್​ ಆದ ನಂತರ ಡಿಫ್ರೆಶನ್​ಗೆ ಹೋಗಿದ್ದೆ ಎಂದು ಹೇಳಿಕೊಂಡಿದ್ದಾರೆ.

    ತಾನು ಮಾಡಿದ ತಪ್ಪನ್ನು  ಸೋನು ಶ್ರೀನಿವಾಸ್​ ಗೌಡ ಅಮ್ಮನ ಬಳಿಕ ಹೇಳಿಕೊಳ್ಳುತ್ತಾರೆ. ಆದರೆ ಆ ವಿಡಿಯೋ ಲೀಕ್​ ಆದ ಬಳಿಕ ನಾನು ನಮ್ಮ ಊರಿಗೆ ಹೋಗಿಲ್ಲ’ ಎಂದು ಸೋನು ಗೌಡ ಕಣ್ಣೀರು ಹಾಕಿದ್ದಾರೆ.

    ಇದನ್ನೂ ಓದಿ: Rakshi Shops Near Me: ಅಣ್ಣಂಗೆ ಕಟ್ಟೋಕೆ ಸೂಪರ್ ರಾಖಿ ಬೇಕಾ? ಹಾಗಾದ್ರೆ ಬೆಂಗಳೂರಿನ ಈ ಸ್ಥಳಗಳು ಬೆಸ್ಟ್​ ಅಂತೆ ನೋಡಿ




    ಯಾರೂ ಸಾಚಾ ಅಲ್ಲ

    ನಾನು ಮೋಸ ಹೋಗೆ ನನ್ನ ನಂಬಿಕೆಗೆ ಮೋಸ ಆಗಿದೆ. ‘ನಾನು ಇದುವರೆಗೆ ಯಾವ ಹುಡುಗನನ್ನೂ ಕೈ ಹಿಡಿದುಕೊಂಡು ಮಾತನಾಡಿಸಿಲ್ಲ. ಆದರೆ ಇಲ್ಲಿ ಯಾರೂ ಸಾಚಾ ಅಲ್ಲ. ಎಲ್ಲರೂ ಇದನ್ನು ಮಾಡಿಕೊಂಡಿರುತ್ತಾರೆ. ಆದರೆ ನನ್ನ ವಿಡಿಯೋ ವೈರಲ್​ ಆಯ್ತು. ನಾನು ಪಬ್​ಗೆ ಹೋಗುತ್ತೇನೆ.  ಎಂಜಾಯ್​ ಮಾಡುತ್ತೇನೆ. ಆದರೆ ನಮ್ಮ ಅಮ್ಮ ಹಳ್ಳಿ ಕಡೆಯಿಂದ ಬಂದವರು. ಅವರು ಅಷ್ಟು ದುಡ್ಡು ಮಾಡಿಟ್ಟಿರುವುದು ನಮಗೋಸ್ಕರ. ನಾನು ಅವರ ಮಾನ ಮರ್ಯಾದೆ ತೆಗೆದೆ ಎಂಬ ಫೀಲ್​ ನನ್ನನ್ನು ತುಂಬ ಕಾಡುತ್ತಿದೆ’ಎಂದು ಸೋನು ಶ್ರೀನಿವಾಸ್​ ಗೌಡ ಮನದಲ್ಲಿರುವ ಬೇಸರವನ್ನು ಬಿಗ್​ ಬಾಸ್​ ಮನೆಯಲ್ಲಿ ಹಂಚಿಕೊಂಡಿದ್ದಾರೆ
    Published by:Harshith AS
    First published: