Bigg Boss OTT: ರಾಕೇಶ್​ ಜೊತೆ ಬೇರೆ ಹುಡುಗಿ ಮಾತಾಡಿದ್ರೆ ಈಕೆಗೆ ಉರಿಯುತ್ತಂತೆ, ಜೋಶ್​ ಹುಡುಗನಿಗೆ ಜೋತುಬಿದ್ದ ಸೋನು!

ಸೋನು ಗೌಡ ರಾಕೇಶ್‌ಗೆ ಮನಸೋತಿದ್ದಾರೆ. ಈ ವಿಷಯವನ್ನು ಅವರೇ ಬಿಗ್‌ಬಾಸ್ ಮನೆಯಲ್ಲಿ ಕೆಲವರೊಟ್ಟಿಗೆ ಹೇಳಿಕೊಂಡಿದ್ದಾರೆ.

ಸೋನು ಗೌಡ, ರಾಕೇಶ್​ ಅಡಿಗ

ಸೋನು ಗೌಡ, ರಾಕೇಶ್​ ಅಡಿಗ

  • Share this:
ಒಂದೇ ಮನೇಲಿ ದೊಡ್ಡ ದೊಡ್ಡ ಮಂದಿ ಅಡ್ಡಡ್ಡ ಉದ್ದುದ್ದ ಮಲಗವ್ರೆ, ನೋಡೋವ್ರು ನೀವು, ಆಡವ್ರು ಅವ್ರು. ಊರೆಲ್ಲಾ ಕ್ಯಾಮರಾ ಮಡಗ್ವರೆ. ಬಿಗ್​ಬಾಸ್​ (Bigboss) ಮತ್ತೆ ಶುರುವಾಗಿದೆ. ಆದರೆ, ಈ ಬಾರಿ ಕೊಂಚ ವಿಭಿನ್ನ. ಈ  ಬಾರಿ ಬಿಗ್​ಬಾಸ್​ ಟಿವಿಯಲ್ಲಿ ಪ್ರಸಾರವಾಗುತ್ತಿಲ್ಲ. ಬದಲಾಗಿ ಒಟಿಟಿಯಲ್ಲಿ ಪ್ರಸಾರವಾಗುತ್ತಿದೆ. OTTಯಲ್ಲಿ ಪ್ರಸಾರವಾಗ್ತಿರೋ ಬಿಗ್​ ಬಾಸ್​ (Bigg Boss OTT)  ಜನರಲ್ಲಿ ಭಾರೀ ಕುತೂಹಲ ಮೂಡಿಸಿದೆ. ಬಿಗ್​ ಬಾಸ್​ ಮನೆಯಲ್ಲಿ ಸ್ಪರ್ಧಿಗಳು ತಮ್ಮ ಜೀವನ ಅನೇಕ ವಿಚಾರವನ್ನು ಎಳೆ ಎಳೆಯಾಗಿ ಬಿಚ್ಚಿಡುತ್ತಿದ್ದಾರೆ. ಹೀಗಾಗಿ ಎಲ್ಲೆಲ್ಲೂ ಬಿಗ್​ ಬಾಸ್​ ಸ್ಪರ್ಧಿಗಳ ಕುರಿತ ಚರ್ಚೆಗಳು ಹೆಚ್ಚಾಗಿದೆ. ಆರ್ಯವರ್ಧನ್ (Aryavardhan Guruji)​ ಗುರೂಜಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಕೇವಲ ಒಂದು ವಾರದಲ್ಲಿ ಮನೆಯಲ್ಲಿ ಲವ್​ ಸ್ಟೋರಿ (Love Story) ಗಳು ಹೆಚ್ಚಾಗುತ್ತಿವೆ.

ಚೆಲುವೆಯರ ಮನಸ್ಸು ಗೆದ್ದ ರಾಕೇಶ್​ ಅಡಿಗ!

ಈ ಬಾರಿಯ ಬಿಗ್‌ಬಾಸ್ ಮನೆಯಲ್ಲಿ ನಟ ರಾಕೇಶ್ ಅಡಿಗ (Rakesh Adiga) ಸೆಂಟರ್ ಆಫ್ ಅಟ್ರಾಕ್ಷನ್ ಆಗಿದ್ದಾರೆ. ಅವರು ಹಾಗೂ ಸ್ಪೂರ್ತಿ ಗೌಡ ನಡುವೆ ಏನೋ ನಡೆಯುತ್ತಿದೆ ಎಂದು ವೀಕ್ಷಕರು ಮಾತನಾಡಿಕೊಳ್ಳುತ್ತಿದ್ದಾರೆ. ಅಂತೆಯೇ ಸ್ಪೂರ್ತಿ ಸಹ ತಮಗೆ ರಾಕೇಶ್ ಎಂದರೆ ಇಷ್ಟವೆಂದು, ನಮ್ಮಿಬ್ಬರ ಜಾತಕ ಹೊಂದಾಣಿಕೆ ಆಗುತ್ತೆಲ್ಲಾ ಎಂಬುದನ್ನು ನೋಡಿದ್ದೀರಾ. ಆದರೆ ಈಗ ರಾಕೇಶ್ ಮೇಲೆ ಇನ್ನೊಬ್ಬ ಯುವತಿಯ ಕಣ್ಣು ಬಿದ್ದಿದೆ ಅದುವೇ ಸೋನು ಗೌಡ (Sonu Gowda) . ರಾಕೇಶ್​ ಎಲ್ಲಿ ಹೋದರೂ, ಸೋನು ಗೌಡ ಹಿಂಬಾಲಿಸುತ್ತಿದ್ದಾರೆ. ಸದಾ ರಾಕೇಶ್ ಸುತ್ತ​ ಸುತ್ತುತ್ತಿದ್ದಾರೆ ಸೋನು ಶ್ರೀನಿವಾಸ ಗೌಡ.

ರಾಕೇಶ್​ ಅಡಿಗ


ರಾಕೇಶ್​ ಮಾತಿಗೆ ಮನಸೋತ ಸೋನು ಶ್ರೀನಿವಾಸ್​ ಗೌಡ!

ಸೋನು ಗೌಡ ರಾಕೇಶ್‌ಗೆ ಮನಸೋತಿದ್ದಾರೆ. ಈ ವಿಷಯವನ್ನು ಅವರೇ ಬಿಗ್‌ಬಾಸ್ ಮನೆಯಲ್ಲಿ ಕೆಲವರೊಟ್ಟಿಗೆ ಹೇಳಿಕೊಂಡಿದ್ದಾರೆ. ರೂಪೇಶ್‌ ಜೊತೆ ಮಾತನಾಡುವಾಗ, ''ಅವಳು ರಾಕೇಶ್‌ ಜೊತೆ ಅಂಟಿಕೊಂಡು ಕೂತಿದ್ದಳು. ಅದಕ್ಕೆ ನಾನು ಹೇಳಿದೆ ಹೇ ಯಾಕೆ ಅವನೊಟ್ಟಿಗೆ ಅಂಟಿಕೊಂಡೇ ಕೂರುತ್ತೀಯ ಅವನು ನನ್ನ ಹುಡುಗ ಎಂದು ಹೇಳಿದೆ ಎಂದು ಹೇಳಿದ್ದಾರೆ. ಇದಕ್ಕೆ ರೂಪೇಶ್​, ನೀನು ಸೀರಿಯಸ್​ ಆಗಿ ಇದ್ದೀಯಾ? ಎಂದು ಕೇಳಿದ್ದಾರೆ. ಇದಕ್ಕೆ ಸೋನು ಶ್ರೀನಿವಾಸಗೌಡ ಹೌದು ಎಂದು ಹೇಳುತ್ತಾರೆ.

ಇದನ್ನೂ ಓದಿ: ಬಿಗ್​ ಬಾಸ್ ಮನೆಗೆ ಹೋಗೋಕೆ ಕಾಫಿ ನಾಡು ಚಂದು ನಾನಾ ಕಸರತ್ತು! ಶುರುವಾಯ್ತು ಹೊಸ ಅಭಿಯಾನ

ರಾಕೇಶ್​ಗೆ ಜೋತುಬಿದ್ದ ಸೋನು ಶ್ರೀನಿವಾಸ ಗೌಡ!

ಸ್ಪೂರ್ತಿ ಬಳಿಯೂ ರಾಕೇಶ್ ಬಗ್ಗೆ ಸೋನು ಶ್ರೀನಿವಾಸ ಗೌಡ ಹೇಳಿಕೊಂಡಿದ್ದಾರೆ. ಜಯಶ್ರೀ ಬಳಿಯೂ ರಾಕೇಶ್ ಬಗ್ಗೆ ಹೇಳಿಕೊಂಡಿದ್ದಾರೆ ಸೋನು ಗೌಡ. ಆದರೆ ರಾಕೇಶ್ ಗಂಭೀರವಾಗಿಲ್ಲ, ನಾನು ಎಲ್ಲರೊಟ್ಟಿಗೆ ಫ್ಲರ್ಟ್ ಮಾಡಿಕೊಂಡು ಇರುತ್ತೀನಿ ಎಂದು ಹೇಳುತ್ತಾನೆ ಏನು ಮಾಡುವುದು ಎಂದು ಹೇಳುತ್ತಾನೆ ಅಂತ ಬೇಸರ ಮಾಡಿಕೊಂಡಿದ್ದಾರೆ ಸೋನು ಶ್ರೀನಿವಾಸಗೌಡ.

ರಾಕೇಶ್​, ಸ್ಫೂರ್ತಿ ಗೌಡ


ಸ್ಫೂರ್ತಿ, ರಾಕೇಶ್, ಸೋನು


ಇದನ್ನೂ ಓದಿ: ಎಷ್ಟು ಚೆನ್ನಾಗಿದ್ದಾಳಲ್ಲಾ ಹುಡುಗಿ? ಸಾನ್ಯಾ ಮೇಲೆ ರಾಕೇಶ್​ಗೆ ಕ್ರಶ್! ಮನೆಯೊಳಗೆ ಕುಚ್ ಕುಚ್

ಕೊನೆಗೆ ನೇರವಾಗಿ ರಾಕೇಶ್ ಬಳಿಯೇ ತಮ್ಮ ಪ್ರೀತಿಯನ್ನು ಪರೋಕ್ಷವಾಗಿ ಸೋನು ಗೌಡ  ಹೇಳಿಕೊಳ್ಳುತ್ತಾರೆ. ಸೋನು ಗೌಡಗೆ ಮಾತ್ರ ಸೂಕ್ತವಾದ ಉತ್ತರವನ್ನು ರಾಕೇಶ್ ನೀಡಿಲ್ಲ. ಈಗ ಸ್ಪೂರ್ತಿ ಗೌಡ ಅಥವಾ ಸೋನು ಗೌಡ ಇಬ್ಬರಲ್ಲಿ ಯಾರ ತೆಕ್ಕೆಗೆ ರಾಕೇಶ್ ಬೀಳುತ್ತಾರೆ ಅಂತ ಜನ ಮಾತನಾಡಿಕೊಳ್ಳುತ್ತಿದ್ದಾರೆ. ಇನ್ನೂ ರಾಕೇಶ್​ ಬಾಯಿಬಿಟ್ಟು ನಾನು ಎಲ್ಲರ ಜೊತೆ ಫ್ಲರ್ಟ್ ಮಾಡುತ್ತೇನೆ ಎಂದು ಹೇಳಿದ್ದರೂ, ಸೋನು ಹೀಗೆ ಆಡುತ್ತಿರುವದನ್ನು ಕಂಡು ನೆಟ್ಟಿಗರು ಕಾಲೆಳೆಯುತ್ತಿದ್ದಾರೆ.
Published by:Vasudeva M
First published: