Bigg Boss OTT: ಹೋದಲ್ಲೆಲ್ಲಾ ಸಾನ್ಯಾ ಅಯ್ಯರ್ ಹಿಂದೆ ಬೀಳ್ತಿದ್ದಾರೆ ರೂಪೇಶ್; ಇದು ಸ್ನೇಹನಾ? ಪ್ರೀತಿನಾ?

ಇದೀಗ ಓಟಿಟಿಯಲ್ಲಿ ಪ್ರಸಾರವಾಗ್ತಿರೋ ಬಿಗ್​ಬಾಸ್ ಮನೆಯಲ್ಲಿ ಸೋನು ಶ್ರೀನಿವಾಸ್​ ಗೌಡಗೆ ರಾಕೇಶ್​ ಮೇಲೆ ಲವ್​ ಸ್ಟೋರಿ ಶುರುವಾಗಿದ್ರೆ. ಮತ್ತೊಂದೆಡೆ ಸಾನ್ಯ ಹಾಗೂ ರೂಪೇಶ್ ನಡುವೆ ಏನೋ ನಡೀತಿದೆ ಅನ್ನೋ ಗುಸು ಗುಸು ಕೇಳಿ ಬರ್ತಿದೆ.

ಸಾನ್ಯಾ ಅಯ್ಯರ್​ ,ರೂಪೇಶ್​ ಶೆಟ್ಟಿ

ಸಾನ್ಯಾ ಅಯ್ಯರ್​ ,ರೂಪೇಶ್​ ಶೆಟ್ಟಿ

  • Share this:
ಜನಪ್ರಿಯ ರಿಯಾಲಿಟಿ ಶೋ ಬಿಗ್ಬಾಸ್ (Bigg Boss)​ ಬಾರಿ ಓಟಿಟಿಯಲ್ಲಿ (OTT) ಪ್ರಸಾರವಾಗ್ತಿದ್ದುಜನರಲ್ಲಿ ಭಾರೀ ಕುತೂಹಲ ಮೂಡಿಸಿದೆ. ಬಿಗ್ಬಾಸ್ಮನೆಯಲ್ಲಿ ಸ್ಪರ್ಧಿಗಳು ತಮ್ಮ ಜೀವನ ಅನೇಕ ವಿಚಾರವನ್ನು ಎಳೆ ಎಳೆಯಾಗಿ ಬಿಚ್ಚಿಡುತ್ತಿದ್ದಾರೆ. ಹೀಗಾಗಿ ಎಲ್ಲೆಲ್ಲೂ ಬಿಗ್ಬಾಸ್ಸ್ಪರ್ಧಿಗಳ (Bigg Boss Contestants) ಕುರಿತ ಚರ್ಚೆಗಳು ಹೆಚ್ಚಾಗಿದೆ. ಬಿಗ್ಬಾಸ್ಮನೆಯಲ್ಲಿ ಲವ್ಸ್ಟೋರಿಗಳು ಕಾಮನ್ಆಗಿದೆಕೆಲವರು ಬಿಗ್ ಬಾಸ್ಮನೆಯಲ್ಲಿ ಫೇಮಸ್ಆಗಲು ಪ್ರೀತಿ-ಪ್ರೇಮದ ಆಟ ಆಡಿದರೆ ಇನ್ನೂ ಕೆಲವರು, ನಿಜವಾಗಿ ಪ್ರೀತಿಸಿ ಮನೆಯಿಂದ ಹೊರಬಂದು ಮದುವೆ ಆಗಿದ್ದಾರೆ.

ಬಿಗ್​ ಬಾಸ್​ ಮನೆಯಲ್ಲಿ ಪ್ರೇಮಕಥೆ

ಇದೀಗ ಓಟಿಟಿಯಲ್ಲಿ ಪ್ರಸಾರವಾಗ್ತಿರೋ ಬಿಗ್​ಬಾಸ್ ಮನೆಯಲ್ಲಿ ಸೋನು ಶ್ರೀನಿವಾಸ್​ ಗೌಡಗೆ ರಾಕೇಶ್​ ಮೇಲೆ ಲವ್​ ಸ್ಟೋರಿ ಶುರುವಾಗಿದ್ರೆ. ಮತ್ತೊಂದೆಡೆ ಸಾನ್ಯಾ ಹಾಗೂ ರೂಪೇಶ್ ನಡುವೆ ಏನೋ ನಡೀತಿದೆ ಅನ್ನೋ ಗುಸು ಗುಸು ಕೇಳಿ ಬರ್ತಿದೆ. ಸಾನ್ಯಾ ಹೋದಲ್ಲೆಲ್ಲಾ ರೂಪೇಶ್​ ಹಿಂದೆ ಇರ್ತಾರೆ. ಬಿಗ್​ಬಾಸ್​​ ಮನೆಯಲ್ಲಿ ಇಬ್ಬರು ಹೆಚ್ಚು ಸಮಯ ಮಾತಾಡುತ್ತಾ ಕಾಲಕಳೆಯುತ್ತಾರೆ. ಇದನ್ನೆಲ್ಲಾ ನೋಡಿದ ಜನ ಇವರ ನಡುವೆನು ಲವ್​ ಶುರುವಾದಂತೆ ಕಾಣ್ತಿದೆ ಎನ್ನುತ್ತಾರೆ.

ಸಾನ್ಯ ರೂಪೇಶ್​ ಲವ್​ ಸ್ಟೋರಿ

ತನ್ನ ಜೀವನಲ್ಲಿ ನಡೆದ ಕಹಿ ಘಟನೆಗಳ ಬಗ್ಗೆ ಸಾನ್ಯ ಬಿಗ್​ ಬಾಸ್​ ಮನೆಯಲ್ಲಿ ಹಂಚಿಕೊಂಡಿದ್ದಾರೆ. ಈಗಾಗಲೇ ಲವ್ ಫೆಲ್ಯೂವರ್ ಕಂಡಿರುವ ಪುಟ್ಟಗೌರಿ ಖ್ಯಾತಿಯ ಸಾನ್ಯಾ ಅಯ್ಯರ್ ಮತ್ತು ರೂಪೇಶ್ ಶೆಟ್ಟಿ ನಡುವೆ ಏನೋ ನಡೀತಾ ಇದೆ ಎನ್ನುವುದು ಬಿಗ್ ಬಾಸ್ ಮನೆಯಲ್ಲಿದ್ದವರ ಗುಮಾನಿ. ಈ ಜೋಡಿ ಬಗ್ಗೆ ಬಿಗ್​ ಬಾಸ್​ ಮನೆಯಲ್ಲಿ ಗುಸುಗುಸು ಶುರುವಾಗಿದೆ.

ಇದನ್ನೂ ಓದಿ: Bigg Boss OTT: 'ನಂಗೆ ನಿನ್ನ ಮೇಲೆ ಫೀಲಿಂಗ್​ ಇದೆ; ಬೇಕು ಅಂದ್ರೆ ಒಪ್ಪಿಕೋ‘, ಸೋನು ಗೌಡ ಅಂಡ್​ ರಾಕೇಶ್ ಲವ್ ಸ್ಟೋರಿ

[caption id="attachment_815000" align="alignnone" width="1600"]Actress Sanya Iyer entered the house of Big Boss pvn ಸಾನ್ಯ ಅಯ್ಯರ್[/caption]

ನಮ್ಮ ನಡುವೆ ಪ್ರೀತಿ ಇಲ್ಲ ನಾವು ಜಸ್ಟ್​ ಫ್ರೆಂಡ್​

ರೂಪೇಶ್ ಹಾಗೂ ಸಾನ್ಯಾ ಬಗ್ಗೆ ಬಿಗ್​ ಬಾಸ್​ ಮನೆಯಲ್ಲಿದ್ದವರೇ  ಮಾತಾಡುತ್ತಿದ್ದಾರೆ. ಯಾವಾಗಲು ಒಟ್ಟಿಗೆ ಇರುವುದನ್ನು ಕಂಡ ಬಿಗ್​ಬಾಸ್ ಮಂದಿ ಇಬ್ಬರು ಲವ್​ ಮಾಡ್ತಿದ್ದಾರೆಂದು ಅಂದುಕೊಂಡಿದ್ದಾರೆ. ಈ ಬಗ್ಗೆ ಸಾನ್ಯ ಕಿವಿಗೂ ಬಿದ್ದಿದೆ ಹೀಗಾಗಿ, ಬಿಗ್​ಬಾಸ್​ ಮನೆಯಲ್ಲಿ ಅವ್ರೆ ಸ್ಪಷ್ಟನೆ ಹೊಂದನ್ನು ನೀಡಿದ್ದಾರೆ. ನನ್ನ ಹಾಗೂ ರೂಪೇಶ್​ ನಡುವೆ ನೀವೆಲ್ಲಾ ಊಹಿಸಿರುವಂತಹ ಸಂಬಂಧವಿಲ್ಲ, ನಮ್ಮಿಬ್ಬರ ನಡುವೆ ಇರೋದು ಪ್ರೀತಿ ಅಲ್ಲ ಸ್ನೇಹ. ನಾವು ಜಸ್ಟ್​ ಫ್ರೆಂಡ್​ ಎನ್ನುವ ಮೂಲಕ ಗಾಸಿಪ್​ಗೆ ತೆರೆ ಎಳೆದಿದ್ದಾರೆ.

ಜಿರಳೆ ಕಂಡು ಕಿರುಚಿದ ಸಾನ್ಯ

ಸಾನ್ಯಾ ಅಯ್ಯರ್ ಹಾಗೂ ರೂಪೇಶ್ ಇಬ್ಬರೂ ವಾಶ್​ರೂಂನಲ್ಲಿದ್ದ  ವೇಳೆ  ಜಿರಳೆ ಬಂದಿದೆ. ಜಿರಳೆಯನ್ನು ನೋಡಿ ಸಾನ್ಯಾ ಅಯ್ಯರ್ ಕಿರುಚಾಡಿದ್ದಾರೆ. ‘ಇದನ್ನು ಯಾರಾದರೂ ಸಾಯಿಸಿ’ ಎಂದು ಕಿರುಚಾಡಿದರು. ಈ ವೇಳೆಗೆ ಅಲ್ಲಿಗೆ ರೂಪೇಶ್ ಶೆಟ್ಟಿ ಎಂಟ್ರಿ ಆಗಿದೆ. ಅವರು ಸಾನ್ಯಾ ಅವರನ್ನು ಕಿಚಾಯಿಸಿದ್ದಾರೆ.

ಇದನ್ನೂ ಓದಿ: Bigg Boss OTT: ರಾಕೇಶ್​ ಜೊತೆ ಬೇರೆ ಹುಡುಗಿ ಮಾತಾಡಿದ್ರೆ ಈಕೆಗೆ ಉರಿಯುತ್ತಂತೆ, ಜೋಶ್​ ಹುಡುಗನಿಗೆ ಜೋತುಬಿದ್ದ ಸೋನು!

ಪ್ಲೀಸ್ ದಯವಿಟ್ಟು ಬಿಟ್ಟುಬಿಡಿ

ಜಿರಳೆಯನ್ನು ಕೈಯಲ್ಲಿ ಇಟ್ಟುಕೊಂಡ ರೂಪೇಶ್ ಅವರು ಅದನ್ನು ಸಾನ್ಯಾ ಗೆ ತೋರಿಸಿದರು. ಇದನ್ನು ನೋಡಿ ಸಾನ್ಯಾ ಆತಂಕಗೊಂಡರು. ‘ನಾನು ಹೇಳಿದಂತೆ ಕೇಳ್ತೀನಿ ಎಂದು ಹೇಳಿ. ಆಮೇಲೆ ಜಿರಳೆಯನ್ನು ಎಸಿತೀನಿ’ ಎಂದರು. ‘ಪ್ಲೀಸ್ ದಯವಿಟ್ಟು ಬಿಟ್ಟುಬಿಡಿ. ನೀವು ಹೇಳಿದಂತೆ ಕೇಳುತ್ತೇನೆ’ ಎಂದರು ಸಾನ್ಯಾ. ನಂತರ ಇಬ್ಬರ ನಡುವೆ ಮಾತುಕತೆ ನಡೆದೇ ಇತ್ತು.

‘ನಿಮ್ಮಿಬ್ಬರ ಜೋಡಿ ಚೆನ್ನಾಗಿ ಕಾಣುತ್ತದೆ’

ಸಾನ್ಯಾ ಹಾಗೂ ರೂಪೇಶ್ ನಡುವೆ ಏನೋ ನಡೆಯುತ್ತಿದೆ ಎಂಬ ಚರ್ಚೆ ಇದೆ. ‘ನಿಮ್ಮಿಬ್ಬರ ಜೋಡಿ ಚೆನ್ನಾಗಿ ಕಾಣುತ್ತದೆ’ ಎಂದು ಸೋಮಣ್ಣ ಹಾಗೂ ಜಶ್ವಂತ್ ಅವರು ಸಾನ್ಯಾ ಹಾಗೂ ರೂಪೇಶ್​ಗೆ ಹೇಳಿದ್ದರು. ‘ನಾವಿಬ್ಬರೂ ಒಳ್ಳೆಯ ಗೆಳೆಯರಷ್ಟೇ. ನಮ್ಮಿಬ್ಬರ ನಡುವೆ ಮತ್ತೇನು ಇಲ್ಲ’ ಎಂದು ರೂಪೇಶ್​ ಸ್ಪಷ್ಟನೆ ನೀಡಿದ್ದರು.
Published by:Pavana HS
First published: