Bigg Boss OTT Kannada: ಕರುನಾಡ ವಾರಿಯರ್ಸ್​ನಿಂದ ರೂಪೇಶ್ ಔಟ್! ಗುರೂಜಿಗೆ ಲಕ್

ಗುರೂಜಿ ಅವರು ಕರುನಾಡ ವಾರಿಯರ್ಸ್ ತಂಡದ ಸದಸ್ಯರಾಗಿದ್ದು, ರೂಪೇಶ್ ಅವರು ಯಾವುದೇ ತಂಡದ ಸದಸ್ಯರಾಗಿರುವುದಿಲ್ಲ ಎನ್ನುವುದನ್ನು ಕೂಡಾ ಸ್ಪಷ್ಟಪಡಿಸಲಾಗಿದೆ.

ರೂಪೇಶ್ ಶೆಟ್ಟಿ

ರೂಪೇಶ್ ಶೆಟ್ಟಿ

  • Share this:
ಬಿಗ್​ಬಾಸ್ (Bigg Boss) ಒಟಿಟಿ ಕನ್ನಡ (OTT Kannada) ಇಂಟ್ರೆಸ್ಟಿಂಗ್ ಆಗಿ ಮುಂದುವರಿಯುತ್ತಿದೆ. 16 ಸ್ಪರ್ಧಿಗಳ ಆಟ ಆರಂಭದಿಂದಲೂ ಕುತೂಹಲಭರಿತವಾಗಿತ್ತು. ನಾನು ಯಾರು ಟಾಸ್ಕ್ ಅಂತೂ ಸೂಪರ್ ಆಗಿ ಮೂಡಿಬಂದು ಎಲ್ಲರೂ ಒಳ್ಳೆಯ ಪರ್ಫಾಮೆನ್ಸ್ ಕೊಟ್ಟಿದ್ದರು. ಅದರ ನಂತರದಲ್ಲಿಯೂ ಮನೆಯೊಳಗೆ ಸಾಕಷ್ಟು ಬೆಳವಣಿಗೆಗಳು ನಡೆದಿದ್ದು, ಈಗ ರೂಪೇಶ್ ಅವರನ್ನು ಕರುನಾಡ ವಾರಿಯರ್ಸ್ (Karunada Warriors)​ ತಂಡದಿಂದ ಹೊರಹಾಕಲಾಗಿದೆ. ಬದಲಾಗಿ ಈ ಸ್ಥಾನಕ್ಕೆ ಗುರೂಜಿ ಬಂದಿದ್ದಾರೆ. ಆರ್ಯವರ್ಧನ್ ಗುರೂಜಿಗೆ (Aryavardhan Guruji) ಅದೃಷ್ಟ ಬಂದಿದ್ದು ಅವರು ತಂಡವನ್ನು ಸೇರಿಕೊಂಡಿದ್ದಾರೆ. ಇದನ್ನು ಸೋಮಣ್ಣ (Somanna) ಅವರೇ ಮನೆಯೊಳಗೆ ಎನೌನ್ಸ್ ಮಾಡಿದ್ದಾರೆ.

ಸೋಮಣ್ಣ ಅವರನ್ನು ಸೂಚನೆಗಳನ್ನು ತಿಳಿಸಲು ಸೂಚಿಸಲಾಗಿದ್ದು ಅವರು ಇದನ್ನು ಎನೌನ್ಸ್ ಮಾಡಿದ್ದಾರೆ. ಸೋಮಣ್ಣ ಅವರ ನಿರ್ಧಾರಗಳನ್ನು ಸೂಕ್ತ ಕಾರಣಗಳೊಂದಿಗೆ ತಿಳಿಸಲು ಕೇಳಿಕೊಳ್ಳಲಾಗಿದ್ದು ಸೋಮಣ್ಣ ಅವರು ತಂಡದ ಕಾರಣಗಳೊಂದಿಗೆ ಕೈಬಿಡುತ್ತಿರುವ ಸದದ್ಯನ ಹೆಸರನ್ನು ಹೇಳಿದ್ದಾರೆ.

ರೂಪೇಶ್ ಔಟ್, ಗುರೂಜಿ ಇನ್

ಕರುನಾಡ ವಾರಿಯರ್ಸ್ ತಂಡದ ಎಲ್ಲ ಸದಸ್ಯರೊಂದಿಗೆ ಚರ್ಚಿಸಿ ಈ ತೀರ್ಮಾನ ತೆಗೆದುಕೊಂಡಿದ್ದೇವೆ. ಬಿಗ್​ಬಾಸ್ ರೂಲ್ಸ್​ಗಳನ್ನು ಯಾರೂ ಬ್ರೇಕ್ ಮಾಡಬಾರದು ಎನ್ನುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದ್ದು, ರೂಪೇಶ್ ಅವರನ್ನು ಟೀಂನಿಂದ ಕೈಬಿಡುತ್ತಿರುವುದಾಗಿ ಘೋಷಿಸಿದ್ದಾರೆ.


ಗುರೂಜಿ ಅವರು ಕರುನಾಡ ವಾರಿಯರ್ಸ್ ತಂಡದ ಸದಸ್ಯರಾಗಿದ್ದು, ರೂಪೇಶ್ ಅವರು ಯಾವುದೇ ತಂಡದ ಸದಸ್ಯರಾಗಿರುವುದಿಲ್ಲ ಎನ್ನುವುದನ್ನು ಕೂಡಾ ಸ್ಪಷ್ಟಪಡಿಸಲಾಗಿದೆ.

ರೂಪೇಶ್-ಸಾನ್ಯಾ ಲವ್

ಬಿಗ್ ಬಾಸ್’ ಮನೆಯಲ್ಲಿ ಮಂಗಳೂರಿನ ರೂಪೇಶ್ ಶೆಟ್ಟಿ ಹಾಗೂ ಕಿರುತೆರೆ ನಟಿ ಸಾನ್ಯ ಅಯ್ಯರ್ ಮಧ್ಯೆ ಕುಚ್ ಕುಚ್ ಅಂತ ಏನಾದರೂ ಇದೆಯಾ? ಅದರ ಬಗ್ಗೆ ಸ್ಪಷ್ಟನೆ ಇಲ್ಲ. ಆದರೆ, ನಾವಿಬ್ಬರು ಒಳ್ಳೆಯ ಫ್ರೆಂಡ್ಸ್ ಅನ್ನೋದನ್ನ ರೂಪೇಶ್ ಶೆಟ್ಟಿ ಹಾಗೂ ಸಾನ್ಯ ಅಯ್ಯರ್ ಪದೇ ಪದೇ ಹೇಳುತ್ತಿದ್ದಾರೆ. ಈ ಮೂಲಕವೇ ತಮ್ಮ ಮಧ್ಯೆ ಏನೋ ಒಂದು ಇದೆ ಎನ್ನುವುದನ್ನು ತೋರಿಸುತ್ತಿದ್ದಾರೋ ಗೊತ್ತಿಲ್ಲ.

ಇದನ್ನೂ ಓದಿ: Bigg Boss OTT: ಇವ್ರೆಲ್ಲ ಇನ್ನೂ ಬಿಗ್​ಬಾಸ್​ ಮನೆಯಲ್ಲಿ ಅಸಲಿ ಮುಖ ತೋರಿಸಿಲ್ವಂತೆ! ಕಿರಣ್​ ಕಥೆ, ನ್ಯೂಸ್​ 18 ಜೊತೆ

ಡೇಟಿಂಗ್ ಐಡಿಯಾ ಶುರು

ಸಾನ್ಯ ಅಯ್ಯರ್ ಹಾಗೂ ರೂಪೇಶ್ ಶೆಟ್ಟಿ ಮಾತನಾಡುತ್ತಿದ್ದಾಗ, ಮಧ್ಯೆ ಬಂದ ರಾಕೇಶ್ ಅಡಿಗ, ನಿಮ್ಮಿಬ್ಬರ ಜೋಡಿ ಚೆನ್ನಾಗಿದೆ.ಯಾಕೆ ಡೇಟ್ ಮಾಡಬಾರದು? ಎಂದು ಪ್ರಶ್ನಿಸಿದ್ದು ಮತ್ತೊಂದು ಟ್ವಿಸ್ಟ್ ಕೊಟ್ಟಿದೆ. ಆಗ, ಸಾನ್ಯ ಅಯ್ಯರ್ ನಾಟ್ ಇಂಟ್ರೆಸ್ಟೆಡ್ ಎಂದರು. ಈ ವೇಳೆ ರೂಪೇಶ್ ಶೆಟ್ಟಿ ಫಸ್ಟ್ ಅವಳತ್ರ ಕೇಳಿದ ಮೇಲೆ ನಾನೇನು ಹೇಳಲಿ, ಇಂಟ್ರೆಸ್ಟ್ ಇದೆ ಅಂತ ಹೇಳ್ಲಾ? ನಾವಿಬ್ಬರು ಒಳ್ಳೆಯ ಫ್ರೆಂಡ್ಸ್ ಎಂದರು.

ಸಾನ್ಯ ಅಯ್ಯರ್ ಬಗ್ಗೆ ರೂಪೇಶ್ ಶೆಟ್ಟಿ ಹೇಳಿದ್ದೇನು?

ಸಾನ್ಯ ತುಂಬಾ ಸ್ವೀಟ್ ಹುಡುಗಿ. ಯಾಕಂದ್ರೆ, ಯಾರೇ ಹೆಲ್ಪ್ ಕೇಳಿದರೂ, ಅದು ನ್ಯಾಯಯುತವಾಗಿದ್ದರೆ, ಅವರು ಸಹಾಯ ಮಾಡುತ್ತಾಳೆ. ಯಾರಿಗೂ ಹರ್ಟ್ ಮಾಡದೇ ಇರುವ ಪ್ರಯತ್ನದಲ್ಲಿದ್ದಾಳೆ. ಅದರಲ್ಲಿ ಸಕ್ಸಸ್ ಆಗಿದ್ದಾಳೆ. ಈ ಮನೆಯಲ್ಲಿ ಲೈಟ್ ಆಫ್ ಆಗುತ್ತೆ. ಆದರೂ ಈ ಮನೆ ಬೆಳಕಿನಿಂದ ಕೂಡಿರುತ್ತೆ ಅಂದ್ರೆ ಅದಕ್ಕೆ ಅವಳ ಕಾಂತಿಯುತವಾದ ಮುಖ ಕಾರಣ. ಆ ಮುಖವನ್ನ ನೋಡೋದೇ ನಮಗೆ ಸುಖ’’ ಎಂದು ರೂಪೇಶ್ ಶೆಟ್ಟಿ ಹೊಗಳಿದ ಫ್ಲೋ ನೋಡಿದರೆ ಪಕ್ಕಾ ಇವರ ಮಧ್ಯೆ ಏನೋ ಇದೆ ಅನಿಸುತ್ತದೆ.

ಕರಾವಳಿ ಭಾಗದ ತುಳು ಭಾಷೆಯ ಸಿನಿಮಾಗಳಲ್ಲಿ ನಟಿಸಿ ಸೂಪರ್ ಸ್ಟಾರ್​ ಎನಿಸಿಕೊಂಡಿರುವ ನಟ ರೂಪೇಶ್​ ಶೆಟ್ಟಿ ಅವರು ಬಿಗ್​ ಬಾಸ್​ ಓಟಿಟಿ ಮನೆಗೆ 3ನೇ ಸ್ಪರ್ಧಿಯಾಗಿ ಎಂಟ್ರಿ ನೀಡಿದ್ದಾರೆ. ಕೇವಲ ತುಳು ಮಾತ್ರವಲ್ಲದೆ ಇವರು ಕನ್ನಡ ಚಿತ್ರಗಳಲ್ಲಿಯೂ ನಟಿಸಿದ್ದಾರೆ. ಅಲ್ಲದೇ ನಿರೂಪಕರಾಗಿಯೂ ಗುರುತಿಸಿಕೊಂಡಿರುವ ಇವರು, ಡೇಂಜರ್ ಜೋನ್, ನಿಶಬ್ಧ 2 ಮತ್ತು ಪಿಶಾಚಿ 2 ಸಿನಿಮಾ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.

ಇದನ್ನೂ ಓದಿ: Bigg Boss OTT ಗೆ ಬಂದ್ರು ತುಳು ಸಿನಿಮಾ ಸೂಪರ್​ ಸ್ಟಾರ್​ ರೂಪೇಶ್ ಶೆಟ್ಟಿ

ಯುವ ನಟನಾಗಿ ಮಿಂಚುತ್ತಿರುವ ರೂಪೇಶ್​ ಬಿಗ್​ ಬಾಸ್​ಗೆ ಎಂಟ್ರಿ ನೀಡಿದ್ದು, ದೊಡ್ಮನೆ ಒಳಗೆ ಹೇಗಿರಲಿದ್ದಾರೆ ಎಂದು ಕಾದು ನೋಡಬೇಕಿದೆ. ಈಗಾಗಲೇ ವೂಟ್​ ನಲ್ಲಿ ಕೇವಲ ಸ್ಪರ್ಧಿಗಳ ಪ್ರೋಮೋ ಬಿಡುಗಡೆ ಮಾಡಲಾಗುತ್ತಿದ್ದು, ಸಂಜೆ 7 ಗಂಟೆಯಿಂದ ಅದ್ಧೂರಿ ಓಪನಿಂಗ್​ ಸೆರೆಮನೆ ಪ್ರಸಾರವಾಗಲಿದೆ.

ಇನ್ನು, ರೂಪೇಶ್​ ಶೆಟ್ಟಿ ಗಿರ್ಗಿಟ್ ಎಂಬ ತುಳು ಸಿನಿಮಾವನ್ನು ನಿರ್ದೇಶನ ಮಾಡಿದ್ದು, ಅಮ್ಮೆರ್ ಪೊಲೀಸ್ ಎಂಬ ತುಳು ಸಿನಿಮಾ ಇವರ ವೃತ್ತಿ ಜೀವನಕ್ಕೆ ಮಹತ್ತರವಾದ ತಿರುವನ್ನು ನೀಡಿತು. ಇದರ ಜೊತೆ ಕೆಲ ದಿನಗಳ ಹಿಂದೆ ತೆರೆಕಂಡ ಸ್ಯಾಂಡಲ್​ವುಡ್​ನ ಗೋವಿಂದ ಗೋವಿಂದ eಂಬ ಸಿನಿಮಾದಲ್ಲಿಯೂ ಇವರು ನಟಿಸಿದ್ದಾರೆ.
Published by:Divya D
First published: