Bigg Boss OTT Kannada: ಜಯಶ್ರೀಗೆ ಕಿಸ್ ಕೊಟ್ಟ ರಾಕೇಶ್! ಸೋನುಗೆ ಅಸೂಯೆ

Bigg Boss OTT Kannada: ಬಿಗ್​ಬಾಸ್ ಒಟಿಟಿ ಮನೆಯಲ್ಲಿ ಈಗ ಕಿಸ್ಸಿಂಗ್ ಸೀನ್ ಶುರುವಾಗಿದೆ. ರಾಕೇಶ್ ಅಡಿಗ ಜಯಶ್ರೀ ಕೆನ್ನೆಗೆ ಮುತ್ತಿಟ್ಟಿದ್ದಾರೆ.

ಜಯಶ್ರೀ ಆರಾಧ್ಯಗೆ ಕಿಸ್ ಕೊಟ್ಟ ರಾಕೇಶ್ ಅಡಿಗ

ಜಯಶ್ರೀ ಆರಾಧ್ಯಗೆ ಕಿಸ್ ಕೊಟ್ಟ ರಾಕೇಶ್ ಅಡಿಗ

  • Share this:
ಬಿಗ್​ಬಾಸ್ (Bigg boss) ಮನೆಯಲ್ಲಿ ದಿನಕ್ಕೊಂದು ಇಂಟ್ರೆಸ್ಟಿಂಗ್ ಘಟನೆ ನಡೆಯುತ್ತಲೇ ಇದೆ. ಸ್ಪರ್ಧಿಗಳ ಜಗಳ, ಕೋಪ, ಮುನಿಸು, ಫ್ರೆಂಡ್​ಶಿಪ್, ಎಲಿಮಿನೇಷನ್, ಗೇಮ್ಸ್ ಪ್ರೇಕ್ಷಕರನ್ನು ಶೋ ವೀಕ್ಷಿಸುವಂತೆ ಮಾಡುತ್ತಿದೆ. ಇದೀಗ ಬಿಗ್ ಬಾಸ್ ಒಟಿಟಿ ಮನೆಯಲ್ಲಿ ರೊಮ್ಯಾನ್ಸ್ ಕೂಡಾ ಶುರುವಾಗಿದೆ. ಹೌದು ನಟ ರಾಕೇಶ್ ಅಡಿಗ ಅವರು ಜಯಶ್ರೀ ಆರಾಧ್ಯ ಕೆನ್ನೆಗೆ ಮುತ್ತಿಟ್ಟಿದ್ದು ಈಗ ಭಾರೀ ಸುದ್ದಿಯಾಗಿದೆ. ಇಂದಿನಿಂದ ಬಿಗ್​ಬಾಸ್ ಶೋಗೆ ಪ್ರೇಕ್ಷಕರು ಹೆಚ್ಚುವ ನಿರೀಕ್ಷೆಯೂ ಇದೆ. ಬಿಗ್​ಬಾಸ್ ಒಟಿಟಿ ಕನ್ನಡ (Bigg boss ott) ತುಂಬಾ ಇಂಟ್ರೆಸ್ಟಿಂಗ್ ರೀತಿಯಲ್ಲಿ ಸಾಗುತ್ತಾ ಬಂದಿದೆ. ಮೇಲಿಂದ ಮೇಲೆ ಡಿಫರೆಂಟ್ ಟ್ವಿಸ್ಟ್, ಹೊಸ ಹೊಸ ಟಾಸ್ಕ್, ಸ್ಪಧಿಗಳ ಜಗಳ, ತಮಾಷೆ, ಹಬ್ಬದ ಸಂಭ್ರಮ ಹೀಗೆ ಪ್ರೇಕ್ಷಕರನ್ನು ಕುತೂಹಲದಿಂದ ವೀಕ್ಷಿಸುವಂತೆ ಮಾಡುತ್ತಿದೆ. ಇತ್ತೀಚೆಗಷ್ಟೇ ಇಬ್ಬರು ಒಟ್ಟಿಗೆ ಎಲಿಮಿನೇಟ್ (Eliminate) ಕೂಡಾ ಆಗಿದ್ದಾರೆ. ಬಿಗ್​ಬಾಸ್ ಮನೆಯಲ್ಲಿ (Bigg Boss House) ಎರಡೆರಡು ಎಲಿಮಿನೇಷನ್ ಆಗಿದೆ. ಮನೆಯಲ್ಲಿ ಇರುವವರಿಗೆ ಹೀಗೂ ಆಗುತ್ತೆ ಎನ್ನುವುದು ಶಾಕ್ ನೀಡಿದೆ. ಇದೀಗ ಕಿಸ್ಸಿಂಗ್ ಶಾಕ್ ಎದುರಾಗಿದೆ.

ಬಿಗ್ ಬಾಸ್ ಮನೆಯಲ್ಲಿ ಲವ್ ಕಿಸ್ಸಿಂಗ್ ರೊಮ್ಯಾನ್ಸ್ ಎಲ್ಲಾ ತುಂಬಾ ಕಾಮನ್. ಇದಿಲ್ಲದೆ ಶೋ ನಡೆಯೋದೇ ಇಲ್ವೇನೋ ಎನ್ನುವಷ್ಟರ ಮಟ್ಟಿಗೆ ಬಿಗ್​ಬಾಸ್ ಮನೆಯಲ್ಲಿ ಪ್ರಣಯ ದೃಶ್ಯಗಳು ನಡೆಯುತ್ತವೆ. ಇದೀಗ ನಟ ರಾಕೇಶ್ ಅಡಿಗ ಇದನ್ನು ಸತ್ಯ ಎಂದು ಸಾಬೀತು ಮಾಡಿದ್ದಾರೆ. ಕಣ್ಸನ್ನೆ, ಕ್ರಶ್, ಲೈನ್ ಎಲ್ಲಾ ಬಿಟ್ಟು ಒಂದು ಹೆಜ್ಜೆ ಮುಂದೆ ಹೋಗಿ ಜಯಶ್ರೀ ಆರಾಧ್ಯ ಕೆನ್ನೆಗೆ ಮುತ್ತಿಟ್ಟು ಸುದ್ದಿಯಾಗಿದ್ದಾರೆ. ಈ ಸಿಹಿ ಮುತ್ತು ಕೊಟ್ಟಿರುವುದರ ಹಿಂದೆ ಬೇರೆಯೇ ಕಾರಣವಿದ್ದರೂ ಇಂಥದ್ದೊಂದು ಘಟನೆ ಪ್ರೇಕ್ಷಕರ ಮಧ್ಯೆ ಚರ್ಚೆಗೆ ಕಾರಣವಾಗಿದೆ.

ಇದನ್ನೂ ಓದಿ: Bigg Boss OTT: ಬಿಗ್​ಬಾಸ್ ಮನೆಯಲ್ಲಿ ಗಣೇಶ ಚುತುರ್ಥಿ ಪೂಜೆ! ಇಲ್ನೋಡಿ ಫೋಟೋಸ್

ರಾಕೇಶ್-ಸೋನು ಕ್ಲೋಸ್ ಕ್ಲೋಸ್

ರಾಕೇಶ್ ಅಡಿಗನಿಗೆ ಸೋನು ಶ್ರೀನಿವಾಸ್ ಗೌಡ ತುಂಬಾ ಹತ್ತಿರವಾಗುತ್ತಿದ್ದಾರೆ. ರಾಕೇಶ್ ಸದಾ ತನ್ನ ಜೊತೆಯೇ ಇರಬೇಕು ಎನ್ನುವುದು ಸೋನು ಅವರ ಮಹದಾಸೆ. ರಾಕೇಶ್ ಅಡಿಗ ಬೇರೆಯವರ ಜೊತೆ ಕ್ಲೋಸ್ ಆಗುವುದನ್ನು ಸೋನು ಕಂಡರೆ ಅಸೂಯೆ ಪಟ್ಟುಕೊಳ್ಳುತ್ತಾರೆ. ಅದನ್ನು ಪರೀಕ್ಷಿಸಲೆಂದೇ ರಾಕೇಶ್ ಮತ್ತು ಜಯಶ್ರೀ ಪ್ಲ್ಯಾನ್ ಮಾಡಿದ್ದಾರೆ. ಇಬ್ಬರೂ ಜೊತೆಯಾಗಿ ಕುಳಿತು ಚರ್ಚಿಸಿ ಸೋನು ರಿಯಾಕ್ಷನ್ ನೋಡುವುದಕ್ಕಾಗಿ ಪ್ಲಾಟ್ ಕ್ರಿಯೇಟ್ ಮಾಡಿದ್ದಾರೆ. ಜಯಶ್ರೀಗೆ ರಾಕೇಶ್ ಕಿಸ್ ಮಾಡುತ್ತಾನೆ. ಅದನ್ನು ಗಮನಿಸುವ ಸೋನು ವಿಚಿತ್ರ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಾರೆ.

Bigg boss kannada ott Jayashree aradhya broken into tears in house
ಜಯಶ್ರೀ ಆರಾಧ್ಯ


ಇದನ್ನೂ ಓದಿ: Bigg Boss Kannada OTT: ಇಲ್ಲಿರೋಕೆ ಆಗ್ತಿಲ್ಲ, ಬಿಗ್​ ಬಾಸ್ ಮನೆಯಲ್ಲಿ ಬಿಕ್ಕಿ ಬಿಕ್ಕಿ ಅತ್ತ ಜಯಶ್ರೀ ಆರಾಧ್ಯ

ರಾಕೇಶ್ ಮತ್ತು ಸೋನು ಗೌಡ ಇಬ್ಬರ ಮಧ್ಯೆ ಪ್ರೀತಿ ಶುರುವಾಗಿದೆ ಎನ್ನುವುದು ಎಲ್ಲರಿಗೂ ಗೊತ್ತು. ಬಿಗ್ ಬಾಸ್ ಮನೆಯಲ್ಲಿ ಸದಾ ಅಂಟಿಕೊಂಡೇ ಇರುವ ಈ ಕಪಲ್ ಹೊರಗೆ ಬಂದ ಮೇಲೆ ಹೇಗಿರುತ್ತಾರೆ ಎನ್ನುವುದು ಬೇರೆ ಮಾತು. ಮೊನ್ನೆ ಇಬ್ಬರೂ ಸ್ಮೋಕಿಂಗ್ ಕೋಣೆಯಲ್ಲೂ ಒಟ್ಟಾಗಿಯೇ ಕಾಣಿಸಿಕೊಂಡಿದ್ದರು. ಇಡೀ ಮನೆ ಕೂಡ ಇವರಿಬ್ಬರ ಬಗ್ಗೆಯೇ ಮಾತನಾಡುತ್ತಿದೆ. ಒಬ್ಬರಿಗೊಬ್ಬರೂ ಬಿಟ್ಟಿರಲಾರದಷ್ಟು ಹಚ್ಚಿಕೊಂಡಿದ್ದಾರೆ. ಇದನ್ನು ಪರೀಕ್ಷಿಸಲು ರಾಕೇಶ್ ಮುತ್ತಿನ ಪ್ಲಾನ್ ಮಾಡಿದ್ದಾರೆ.

ಸದ್ಯ ಈ ಜೋಡಿ ರೊಮ್ಯಾನ್ಸ್ ಮೂಲಕ ಸಖತ್ ಸುದ್ದಿ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಇವರ ರೊಮ್ಯಾನ್ಸ್ ಒನ್ನಷ್ಟು ಜಾಸ್ತಿಯಾಗುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ.
Published by:Divya D
First published: