Bigg Boss OTT: ಬಿಗ್​ಬಾಸ್​ ಓಟಿಟಿ ಹೊಸ ಪ್ರೋಮೋ ರಿಲೀಸ್​, ಅಭಿಮಾನಿಗಳ ಕುತೂಹಲಕ್ಕೆ ತೆರೆ ಎಳೆದ ಕಿಚ್ಚ

Kiccha Sudeep: ಅಲ್ಲದೇ ಈ ಮೊದಲು ಕಲರ್ಸ್ ಕನ್ನಡ ಬ್ಯುಸಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ಕೆಲ ದಿನಗಳ ಹಿಂದೆ ಕನ್ನಡ ಬಿಗ್ ಬಾಸ್ 9ನೇ ಸೀಸನ್​ ನ ಬಿಗ್​ ಬಾಸ್​ ಮನೆಯ ಸಿದ್ಧತೆಗಳು ನಡೆಯುತ್ತಿದೆ ಎಂದು ತಿಳಿಸಿದ್ದರು.

ಬಿಗ್​ಬಾಸ್​

ಬಿಗ್​ಬಾಸ್​

  • Share this:
ಕಲರ್ಸ್ ಕನ್ನಡ (colors Kannada) ವಾಹಿನಿ ವಿಭಿನ್ನ ಧಾರಾವಾಹಿಗಳ (serial) ಮೂಲಕ ಜನರ ಮನಗೆದ್ದಿದೆ. ಕೇವಲ ಧಾರಾವಾಹಿ ಮಾತ್ರವಲ್ಲದೆ, ರಿಯಾಲಿಟಿ ಶೋಗಳು ಸಹ ಜನರಿಗೆ ಬಹಳ ಇಷ್ಟವಾಗಿದೆ. ಅವುಗಳಲ್ಲಿಯೇ ವಿಶೇಷ ಕಾರ್ಯಕ್ರಮ ಬಿಗ್​ಬಾಸ್, ಈ ಬಾರಿ ಎರಡೆರಡು ಬಿಗ್​ಬಾಸ್ ಇರುತ್ತದೆ ಎನ್ನುವ ವಿಚಾರ ಈಗ ಎಲ್ಲರಿಗೂ ತಿಳಿಸಿದೆ. ಈ ವಿಚಾರ ತಿಳಿದ ನಂತರ ಬಿಗ್​ಬಾಸ್​ (Biggboss) ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ.  ಯಾವಾಗ ಸ್ಟಾರ್ಟ್​ ಆಗುತ್ತೆ, ಮೊದಲು ಯಾವುದು ಓಟಿಟಿನಾ ಅಥವಾ ಟಿವಿಯಲ್ಲಿ ಬರುತ್ತಾ ಎಂಬುದರ ಬಗ್ಗೆ ಹಲವಾರು ಪ್ರಶ್ನೆಗಳನ್ನು ಕೇಳಿದ್ದರು. ಅದಕ್ಕೆಲ್ಲಾ ಉತ್ತರವನ್ನು ನಿನ್ನೆ ವಾಹಿನಿ ನೀಡಿತ್ತು. ನಿನ್ನೆ ಈ ಬಗ್ಗೆ ವೂಟ್​ ಸೆಲೆಕ್ಟ್​ನಲ್ಲಿ ಪ್ರೋಮೋವೊಂದನ್ನು ಬಿಡುಗಡೆ ಮಾಡಲಾಗಿತ್ತು. ಇದೀಗ ಕಿಚ್ಚನ ಮತ್ತೊಂದು ಪ್ರೋಮೋ ರಿಲೀಸ್​ ಆಗಿದೆ.  

ಹೊಸ ಪ್ರೋಮೋ ಬಿಡುಗಡೆ ಮಾಡಿದ ವಾಹಿನಿ

ಇಂದು ಬಿಡುಗಡೆಯಾಗಿರುವ ಪ್ರೋಮೋದಲ್ಲಿ ಕಿಚ್ಚ ಸುದೀಪ್ ಕಾಣಿಸಿಕೊಂಡಿದ್ದು, ಸೀಸನ್​ 9 ಎಂದವರಿಗೆ ಸೀನಸ್​ ಒಂದು ಎಂದು ಹೇಳಿದ್ದಾರೆ. ಎಲ್ಲರೂ ಬಿಗ್​ಬಾಸ್​ ಸೀಸನ್​ 9 ಬರಲಿದೆ ಎಂದು ಕಾಯುತ್ತಿದ್ದಾರೆ, ಆದರೆ ಈ ಬಾರಿ ಮೊದಲಿಗೆ ಬಿಗ್​ಬಾಸ್​ ಓಟಿಟಿ ಸೀಸನ್​ 1 ಆರಂಭವಾಗಲಿದೆ ಎಂದು ತಿಳಿಸಿದ್ದಾರೆ.








View this post on Instagram






A post shared by Voot Select (@vootselect)






ಬಹಳ ದಿನಗಳಿಂದ ಕಾತುರದಿಂದ ಕಾಯುತ್ತಿದ್ದವರಿಗೆ ಇದೀಗ ಸಂಸತ ಬಂದಂತಾಗಿದೆ. ಏಕೆಂದರೆ ಬಿಗ್​ ಬಾಸ್​ ಓಟಿಟಿ ಇದೇ  ಆಗಸ್ಟ್ 6 ರಿಂದ ಬಿಗ್ ಬಾಸ್ ಓಟಿಟಿ ಶೋ ವೂಟ್‌ನಲ್ಲಿ ಪ್ರಾರಂಭವಾಗಲಿದೆ ಎಂದು ಅಧಿಕೃತ ಪ್ರೋಮೋ ಮೂಲಕ ತಿಳಿದುಬಂದಿದೆ. ಅಲ್ಲದೇ ಈ ಪ್ರೋಮೋದಲ್ಲಿ  ಸುದೀಪ್​,  ‘ಇದು ಟಿವಿ ಶೋ ಅಲ್ಲ, ಇದು ಓಟಿಟಿ ಶೋ. ಆಗಸ್ಟ್ 6 ರಿಂದ ಬಿಗ್ ಬಾಸ್ ಓಟಿಟಿ ಶೋ‘ ಎನ್ನುವ ಮೂಲಕ ಬಿಗ್​ ಬಾಸ್​ ಕುರಿತು ಇದ್ದ ಅನುಮಾನಗಳಿಗೆ ತೆರೆ ಎಳೆದಿದ್ದಾರೆ.

ಇದನ್ನೂ ಓದಿ: ಗಣೇಶನ ಜೊತೆ ಅಪ್ಪು, ಹಬ್ಬದ ಸಂಭ್ರಮದಲ್ಲೂ ಪರಮಾತ್ಮನ ಮರೆಯದ ಅಭಿಮಾನಿಗಳು

ಕಾತುರದಿಂದ ಕಾಯುತ್ತಿದ್ದಾರೆ ಅಭಿಮಾನಿಗಳು

ಕನ್ನಡದಲ್ಲಿ ಮೊದಲ ಬಾರಿ ಓಟಿಟಿ ಬಿಗ್​ಬಾಸ್​ ಸೀಸನ್​ ಆರಂಭವಾಗುತ್ತಿದೆ. ಈಗಾಗಲೇ ಹಿಂದಿಯಲ್ಲಿ ಬಿಗ್​ಬಾಸ್​ ಓಟಿಟಿ ಸೀಸನ್ 1 ಬಹಳ ಪ್ರಸಿದ್ದಿ ಪಡೆದಿದೆ. ಬಾಲಿವುಡ್​ ನಿರ್ದೇಶಕ ಹಾಗೂ ನಿರ್ಮಾಪಕ ಕರಣ್ ಜೋಹರ್ ನಡೆಸಿಕೊಟ್ಟಿದ್ದ ಈ ಶೋ ಜನರಿಗೆ ಇಷ್ಟವಾಗಿತ್ತು. ಅದೇ ರೀತಿ ಈ ಬಾರಿ ಕನ್ನಡದಲ್ಲಿ ಸಹ ಮಾಡುವ ಆಲೋಚನೆಯಲ್ಲಿ ವಾಹಿನಿ ಇದೆ. ಇನ್ನು ಹಿಂದಿ ಬಿಗ್​ಬಾಸ್​ನಲ್ಲಿ ಓಟಿಟಿಯಲ್ಲಿ ಭಾಗವಹಿಸಿದ್ದ ಸಲ್ಮಾನ್​ ಖಾನ್​ ನಡೆಸಿಕೊಡುವ ಬಿಗ್​ಬಾಸ್​ ಶೋಗೆ ಹೋಗಲು ಅವಕಾಶ ನೀಡಲಾಗಿತ್ತು. ಹಾಗೆಯೇ ಇಲ್ಲಿ ಸಹ ಇಬ್ಬರಿಗೆ ರೆಗ್ಯುಲರ್ ಬಿಗ್​​ಬಾಸ್​ಗೆ ಹೋಗಲು ಅವಕಾಶ ನೀಡಲಾಗುತ್ತದೆ.








View this post on Instagram






A post shared by Voot Select (@vootselect)






ಇದನ್ನೂ ಓದಿ: ಆ್ಯಕ್ಷನ್ ಸೀನ್​ಗೆ ಫುಲ್​ ತಯಾರಿ ಮಾಡ್ತಿದ್ದಾರೆ ಧ್ರುವ ಸರ್ಜಾ, ಮಾರ್ಟಿನ್ ಸಿನಿಮಾ ಬಗ್ಗೆ ಹೊಸ ಅಪ್​​ಡೇಟ್​

ಅಲ್ಲದೇ ಈ ಮೊದಲು ಕಲರ್ಸ್ ಕನ್ನಡ ಬ್ಯುಸಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ಕೆಲ ದಿನಗಳ ಹಿಂದೆ ಕನ್ನಡ ಬಿಗ್ ಬಾಸ್ 9ನೇ ಸೀಸನ್​ ನ ಬಿಗ್​ ಬಾಸ್​ ಮನೆಯ ಸಿದ್ಧತೆಗಳು ನಡೆಯುತ್ತಿದೆ ಎಂದು ತಿಳಿಸಿದ್ದರು. ಪ್ರತಿ ವರ್ಷದಂತೆ ಈ ಬಾರಿಯೂ ಬಾರಿ ನಿರೀಕ್ಷೆಯನ್ನು ಮೂಡಿಸಿದೆ. ವೀಕ್ಷಕರಲ್ಲಂತೂ ಬಿಗ್​ಬಾಸ್​ ಸೀಸನ್​ 9 ಬಗ್ಗೆ ಕುತೂಹಲ ಮನೆಮಾಡಿದ್ದು, ಯಾರೆಲ್ಲಾ ಮನೆಯೊಳಕ್ಕೆ ಕಾಲಿಡಲಿದ್ದಾರೆ ಎಂಬ ಪ್ರಶ್ನೆ ಕಾಡತೊಡಗಿದೆ. ಮಾತ್ರವಲ್ಲದೆ, ಈ ಬಾರಿಯ ಬಿಗ್​ಬಾಸ್​ ಹೇಗಿರಲಿದೆ? ಸ್ಪರ್ಧಿಗಳೆಷ್ಟು? ಮುಂತಾದ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಕಾಯುತ್ತಿದ್ದಾರೆ.
Published by:Sandhya M
First published: