ಈ ಬಾರಿ ಹೇಗಿರಲಿದೆ ಬಿಗ್​ ಬಾಸ್​ ಮನೆ? ಕೊನೆಗೂ ರಿವೀಲ್ ಆಯ್ತು Bigg Boss OTT ಹೌಸ್

ಕಲರ್ಸ್ ಕನ್ನಡ ಬಿಸ್ನೆಸ್ ಹೆಡ್​ ಪರಮೇಶ್ವರ್ ಗುಂಟ್ಕಲ್ ಅವರು ಈ ಬಾರಿಯ ಬಿಗ್​ ಬಾಸ್​ ಮನೆಯ ಚಿತ್ರಣವನ್ನು ಹಂಚಿಕೊಂಡಿದ್ದಾರೆ.

ಬಿಗ್​ ಬಾಸ್​

ಬಿಗ್​ ಬಾಸ್​

  • Share this:
ಕಲರ್ಸ್ ಕನ್ನಡ (colors Kannada) ವಾಹಿನಿ ವಿಭಿನ್ನ ಧಾರಾವಾಹಿಗಳ (serial) ಮೂಲಕ ಜನರ ಮನಗೆದ್ದಿದೆ. ಕೇವಲ ಧಾರಾವಾಹಿ ಮಾತ್ರವಲ್ಲದೆ, ರಿಯಾಲಿಟಿ ಶೋಗಳು ಸಹ ಜನರಿಗೆ ಬಹಳ ಇಷ್ಟವಾಗಿದೆ. ಅವುಗಳಲ್ಲಿಯೇ ವಿಶೇಷ ಕಾರ್ಯಕ್ರಮ ಬಿಗ್​ಬಾಸ್, (Bigg Boss) ಈ ಬಾರಿ ಎರಡೆರಡು ಬಿಗ್​ಬಾಸ್ ಇರುತ್ತದೆ ಎನ್ನುವ ವಿಚಾರ ಈಗ ಎಲ್ಲರಿಗೂ ತಿಳಿದಿದೆ. ನಾಳೆಯಿಂದ ಬಿಗ್​ಬಾಸ್​ ಓಟಿಟಿ (Bigg Boss OTT) ಮೊದಲ ಸೀಸನ್​ ಆರಂಭವಾಗುತ್ತಿದೆ. ಆದರೆ ಈವರೆಗೆ ಬಿಗ್​ ಬಾಸ್​ ಸ್ಪರ್ಧಿಗಳ ಕುರಿತು ವಾಹಿನಿ ಯಾವುದೇ ಸುಳಿವನ್ನು ನೀಡಲಿಲ್ಲ. ಆದರೆ ಇದೀಗ ಕಲರ್ಸ್ ಕನ್ನಡ ಬಿಸ್ನೆಸ್ ಹೆಡ್​ ಪರಮೇಶ್ವರ್ ಗುಂಟ್ಕಲ್ ಅವರು ಈ ಬಾರಿಯ ಬಿಗ್​ ಬಾಸ್​ ಮನೆಯ ಚಿತ್ರಣವನ್ನು ಹಂಚಿಕೊಂಡಿದ್ದಾರೆ.

ಹೇಗಿರಲಿದೆ ಬಿಗ್​ ಬಾಸ್​ ಹೌಸ್​:

ಹೌದು, ಪ್ರತಿ ಬಾರಿಯೂ ಬಿಗ್​ ಬಾಸ್​ ಮನೆ ಅದ್ದೂರಿಯಾಗಿರುತ್ತದೆ. ಹಲವು ವಿಸೇಷತೆಗಳಿಂದ ಈ ಮನೆ ಕೂಡಿರುತ್ತದೆ. ಐಷಾರಾಮಿ ಮನೆಯಲ್ಲಿ ಸ್ಪರ್ಧಿಗಳು ಈ ಬಾರಿ 6 ವಾರಗಳ ಕಾಲ ಇರುತ್ತಾರೆ. ಹಾಗಾದರೆ ಈ ಬಾರಿ ಮನೆ ಹೇಗಿರಲಿದೆ ಎಂಬ ಕುತೂಹಲಕ್ಕೆ ಇದೀಗ ತೆರೆಬಿದ್ದಿದೆ. ಹೌದು, ಪರಮೇಶ್ವರ್ ಗುಂಟ್ಕಲ್​ ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಬಿಗ್​ ಬಾಸ್​ ಮನೆಯ ಫೋಟೋ ಹಂಚಿಕೊಂಡಿದ್ದು, Over the top! ಎಂದು ಬರೆದುಕೊಂಡಿದ್ದಾರೆ. ಒಂದು ಗೊಂಬೆಯ ಕಣ್ಣನ್ನು ಹಾಗೂ ಕುತ್ತಿಗೆಯನ್ನು 2 ಕೈಗಳು ಹಿಡಿರುವ ಚಿತ್ರ ಇದಾಗಿದ್ದು, ಪ್ರೇಕ್ಷಕರಲ್ಲಿ ಬಿಗ್​ ಬಾಸ್​ ಹೌಸ್​ ಕುರಿತು ಕುತೂಹಲ ಹೆಚ್ಚಿದ್ದು, ಇದಕ್ಕೆಲ್ಲಾ ನಾಳೆ ಅಂದರೆ ಆಗಸ್ಟ್ 6ರಂದು ತೆರೆಬೀಳಲಿದೆ.


ಓಟಿಟಿ ಸೀಸನ್ ಬಗ್ಗೆ ಮಾಹಿತಿ ಕೊಟ್ಟ ಕಿಚ್ಚ:

ಬಿಗ್​ಬಾಸ್ ಓಟಿಟಿ ಮೊದಲ ಸೀಸನ್ ಗೆ ಕೌಂಟ್ ಡೌನ್  ಶುರುವಾಗಿದ್ದು,  ಈ ಬಗ್ಗೆ ಕಿಚ್ಚ ಸುದೀಪ್ ಮಾತನಾಡಿದ್ದಾರೆ. ನನಗೆ ಸಿನಿಮಾ‌ ಬೇರೆ ಅಲ್ಲ ಬಿಗ್ ಬಾಸ್  ಬೇರೆ ಅಲ್ಲ. ನನಗೆ ಬಿಗ್ ಬಾಸ್ ಅರಂಭವಷ್ಟೇ ಗೊತ್ತು ಉಳಿದಿದ್ದೆಲ್ಲ ಸ್ಪರ್ಧಿಗಳೇ ನೋಡಿಕೊಳ್ತಾರೆ.  ಬಿಗ್​ಬಾಸ್ ಕೆಲವು ಸೀಸನ್ ಆದ ಮೇಲೆ ನನಗೆ ಬಿಗ್​ಬಾಸ್ ಸಾಕು ಅನಿಸಿದೆ ಆದರೆ ಬಿಗ್​ಬಾಸ್​ ಹಾಗೂ ನನಗೂ ಒಂದು ಭಾಂದವ್ಯ ಇದೆ ಎಂದಿದ್ದಾರೆ.

ಇದನ್ನೂ ಓದಿ: Bigg Boss OTT: ನಾಳೆಯಿಂದ ಬಿಗ್​ಬಾಸ್​ ಇದ್ರೂ ಲೀಕ್​ ಆಗಿಲ್ಲ ಸ್ಪರ್ಧಿಗಳ ಲಿಸ್ಟ್​, ವರ್ಕ್ ಆಯ್ತಾ ಮಾಸ್ಟರ್ ಪ್ಲ್ಯಾನ್​?

ಎಷ್ಟು ಸ್ಪರ್ಧಿಗಳಿರುತ್ತಾರೆ ಈ ಬಾರಿ ದೊಡ್ಮನೆ ಒಳಗೆ?:

ಇನ್ನು ಈ ಬಿಗ್​ಬಾಸ್​ ಓಟಿಟಿಯಲ್ಲಿ ಈ ಬಾರಿ 16 ಸ್ಪರ್ಧಿಗಳು ಇರಲಿದ್ದಾರೆ ಎಂದು ಪರಮೇಶ್ವರ್ ಅವರು ಮಾಹಿತಿ ನೀಡಿದ್ದು, ಅದು 17 ಆಗಬಹುದು ಅಥವಾ 15 ಆಗಬಹುದು ಎಂದು ಹೇಳಿದ್ದಾರೆ. ಅಲ್ಲದೇ, ಮಾಧ್ಯಮದವರು ಈ ಬಾರಿ ಯಾವ ರೀತಿಯ ಸ್ಪರ್ಧಿಗಳಿರುತ್ತಾರೆ, ಪ್ರತಿಬಾರಿ ನೆಗೆಟಿವ್​ ಆಗಿ ಪ್ರಸಿದ್ದಿ ಪಡೆದ ಜನರಿರುತ್ತಾರೆ, ಈ ಬಾರಿ ಯಾವ ಆಧಾರದ ಮೇಲೆ ಸ್ಪರ್ಧಿಗಳನ್ನು ಆಯ್ಕೆ ಮಾಡುತ್ತೀರಿ ಎಂದು ಕೇಳಿದ್ದಾರೆ, ಅದಕ್ಕೆ ಉತ್ತರಿಸಿದ ಅವರು, ಪ್ರತಿಬಾರಿಯೂ ನೆಗೆಟಿವ್​ ಆಗಿ ಫೇಮಸ್​ ಆದ ಸ್ಪರ್ಧಿಗಳು ಮಾತ್ರ ಯಾವಾಗಲೂ ಇರಲಿಲ್ಲ. ಒಂದು ಸ್ಪರ್ಧೆ ಎಂದ ಮೇಲೆ ಎಲ್ಲಾ ರೀತಿಯವರು ಇರಬೇಕು. ಈ ಬಾರಿ ಇದು ಸೆಲೆಬ್ರಿಟಿ ಶೋ ಎಂದಿದ್ದಾರೆ. ಇದರ ಜೊತೆ . ಇನ್ನು ವಾಹಿನಿ ಸಹ ಸ್ಪರ್ಧಿಗಳ ಕುರಿತಂತೆ ಯಾವುದೇ ಪ್ರೋಮೋ ಬಿಡುಗಡೆ ಮಾಡಿಲ್ಲ. ಈ ಎಲ್ಲಾ ಕಾರಣದಿಂದ ಈ ಬಾರಿ ಎಲ್ಲವೂ ಗುಟ್ಟಾಗಿ ಉಳಿದಿದ್ದು, ಜನರಲ್ಲಿ ಕುತೂಹಲ ಸಹ ಹೆಚ್ಚಿದೆ.
Published by:shrikrishna bhat
First published: