Bigg Boss OTT: ನನ್ನ ಬದಲು ಇವ್ರು ಮನೆಯಿಂದ ಆಚೆ ಬರಬೇಕಿತ್ತು! ಕಿರಣ್​ ಕಥೆ, ನ್ಯೂಸ್​ 18 ಜೊತೆ ಪಾರ್ಟ್-2

ಕಿರಣ್​ ಅವರಿಗೆ ಕನ್ನಡ (Kannada) ಸರಿಯಾಗಿ ಮಾತನಾಡಲು ಬರುವುದಿಲ್ಲ. ಅಲ್ಲದೇ ಇತರೆ ಸ್ಪರ್ಧಿಗಳ ಜೊತೆ ಹೊಂದಿಕೊಳ್ಳಲು ಕೂಡ ಅವರಿಗೆ ಸಾಧ್ಯವಾಗುತ್ತಿರಲಿಲ್ಲ. ಬಿಗ್​ಬಾಸ್​ ಮನೆಯಿಂದ ಹೊರಬಂದ ಮೇಲೆ ನ್ಯೂಸ್​ 18 ಕನ್ನಡ (News 18 Kannada) ಜೊತೆ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

ಕಿರಣ್​ ಯೋಗೇಶ್ವರ್​

ಕಿರಣ್​ ಯೋಗೇಶ್ವರ್​

  • Share this:
ಬಿಗ್​ಬಾಸ್​ ಕನ್ನಡ ಒಟಿಟಿ (Bigg Boss OTT) ಶುರುವಾಗಿ ಇಂದಿಗೆ 10 ನೇ ದಿನ. ಕೇವಲ 10 ದಿನದಲ್ಲೇ ಬಿಗ್​ಬಾಸ್​ ಒಟಿಟಿ ಸಖತ್ ಸೌಂಡ್ ಮಾಡುತ್ತಿದೆ. ಮನೆಯೊಳಗೆ ಇರುವ ಒಬ್ಬೊಬ್ಬರ ಒಂದೊಂದು ಅವತಾರದಲ್ಲಿ ಜನರಿಗೆ ಮನರಂಜನೆ ನೀಡುತ್ತಿದ್ದಾರೆ. ಒಂದು ಎಲಿಮನೇಷನ್ (First Elimination)​ ಕೂಡ ಆಗಿದೆ. ಡ್ಯಾನ್ಸರ್​ ಕಮ್ ಮಾಡೆಲ್​,​ ಯೋಗಾ ಟೀಚರ್ ಆಗಿದ್ದ ಕಿರಣ್​ ಯೋಗೇಶ್ವರ್​ (Kiran Yogeshwar) ಅವರ ಬಿಗ್​ಬಾಸ್​ ಮನೆಯಿಂದ ಮೊದಲ ವಾರದಲ್ಲೇ ಹೊರಬಂದಿದ್ದಾರೆ. ಕಿರಣ್​ ಅವರಿಗೆ ಕನ್ನಡ (Kannada) ಸರಿಯಾಗಿ ಮಾತನಾಡಲು ಬರುವುದಿಲ್ಲ. ಅಲ್ಲದೇ ಇತರೆ ಸ್ಪರ್ಧಿಗಳ ಜೊತೆ ಹೊಂದಿಕೊಳ್ಳಲು ಕೂಡ ಅವರಿಗೆ ಸಾಧ್ಯವಾಗುತ್ತಿರಲಿಲ್ಲ. ಬಿಗ್​ಬಾಸ್​ ಮನೆಯಿಂದ ಹೊರಬಂದ ಮೇಲೆ ನ್ಯೂಸ್​ 18 ಕನ್ನಡ (News 18 Kannada) ಜೊತೆ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

"ನನ್ನ ಬದಲು ಅವ್ರು ಆಚೆ ಬರಬೇಕಿತ್ತು"

ಬಿಗ್​ಬಾಸ್​ ಮನೆಯಿಂದ ಬೇಗ ಹೊರಬಂದಿದ್ದಕ್ಕೆ ಕಿರಣ್​ ಬೇಸರ ವ್ಯಕ್ತಪಡಿಸಿದ್ದಾರೆ. 'ಈ ಬಾರಿ ಮನೆಗೆ ಬಂದ ಹಲವರು ವೀಕ್ಷಕರಿಗೆ ಗೊತ್ತಿರಲಿಲ್ಲ. ಅಂಥವರಲ್ಲಿ ನಾನೂ ಕೂಡ ಒಬ್ಬಳು. ನನ್ನಂತೆಯೇ ಜನರಿಗೆ ತಿಳಿಯದ ಕಂಟೆಸ್ಟೆಂಟ್​ ಕೂಡ ಇದ್ದರು. ಆದರೆ, ನಾನೇ ಮೊದಲ ವಾರ ಆಚೆ ಬಂದಿದ್ದು ಬೇಸರ ತರಿಸಿದೆ. ನನ್ನ ಬದಲು, ಅಕ್ಷತಾ ಅವರು ಆಚೆ ಬರಬೇಕಿತ್ತು. ನಾನು ಅವರಿಗಿಂತ ಎಲ್ಲ ವಿಚಾರದಲ್ಲೂ ಸ್ಟ್ರಾಂಗ್​ ಇದ್ದೇನೆ. ಏನಾಯಿತೋ ಗೊತ್ತಿಲ್ಲ. ಒಂದೇ ವಾರಕ್ಕೆ ಹೊರಬಂದೆ. ಈಗ ಜನರು ನನ್ನನ್ನು ಗುರುತಿಸಲು ಶುರು ಮಾಡಿದ್ದಾರೆ' ಎಂದು ಕಿರಣ್​ ಯೋಗೇಶ್ವರ್​ ನ್ಯೂಸ್​ 18 ಕನ್ನಡದೊಂದಿಗೆ ಮಾತನಾಡಿದ್ದಾರೆ.

"ಬಿಗ್​ಬಾಸ್​​ ಮನೆಯಿಂದ ಕಲಿತಿದ್ದೆ ಹೆಚ್ಚು"

ಇನ್ನೂ ಬಿಗ್​ಬಾಸ್​ ಮನೆಯಲ್ಲಿ ಏನೆಲ್ಲಾ ಕಲಿತುಕೊಂಡಿದ್ದೀರಾ ಎಂದು ಕೇಳಿದ್ದಕ್ಕೆ, ಕಿರಣ್​ ಯೋಗೇಶ್ವರ್​ ಮನೆಯಿಂದ ಕಲಿತಿರುವುದು ಸಾಕಷ್ಟಿದೆ ಎಂದಿದ್ದಾರೆ. ಮನೆಯಲ್ಲಿ ಒಬ್ಬಂಟಿಯಾಗಿರುತ್ತಿದೆ. ಬೆಂಗಳೂರಿಗೆ ಬಂದಾಗಿಂದಲೂ ನಾನು ಹೆಚ್ಚು ಎಲ್ಲರ ಜೊತೆಯಲ್ಲೂ ಬೆರೆಯುತ್ತಿರಲಿಲ್ಲ. ಸ್ನೇಹಿತರ ಸಂಖ್ಯೆಯೂ ಕಡಿಮೆ. ಆದರೆ, ಬಿಗ್​​ಬಾಸ್​ ಮನೆಯಲ್ಲಿ ಎಲ್ಲರ ಜೊತೆ ಇದ್ದಿದ್ದು ತುಂಬಾ ಖುಷಿ ಕೊಟ್ಟಿದೆ. ಸಾಕಷ್ಟು ಸ್ನೇಹಿತರು ಸಿಕ್ಕಿದ್ದಾರೆ. ಬಿಗ್​ಬಾಸ್​ ಮನೆಯಲ್ಲಿರುವಷ್ಟು ದಿನ ಸಖತ್​ ಎಂಜಾಯ್​ ಮಾಡಿದ್ದೇನೆ. ಇನ್ನೂ ಸ್ವಲ್ಪ ದಿನ ಇರಬೇಕಿತ್ತು. ಆದರೆ, ಹೊರಗೆ ಬಂದಿದ್ದೇನೆ, ಈಟ್ಸ್​  ಓಕೆ' ಎಂದು ಕಿರಣ್​ ಹೇಳಿದರು.

ಇದನ್ನೂ ಓದಿ: ಇವ್ರೆಲ್ಲ ಇನ್ನೂ ಬಿಗ್​ಬಾಸ್​ ಮನೆಯಲ್ಲಿ ಅಸಲಿ ಮುಖ ತೋರಿಸಿಲ್ವಂತೆ! ಕಿರಣ್​ ಕಥೆ, ನ್ಯೂಸ್​ 18 ಜೊತೆ

ತಮ್ಮ 17ನೇ ವಯಸ್ಸಿನಲ್ಲಿ ಮನೆ ಬಿಟ್ಟು ಬಂದಿದ್ದ ಕಿರಣ್​!

ರಾಜಸ್ಥಾನದ ಗ್ರಾಮವೊಂದರಲ್ಲಿ ಹುಟ್ಟಿದ ಕಿರಣ್ ಯೋಗೇಶ್ವರ್ 17ನೇ ವರ್ಷಕ್ಕೆ ತಮ್ಮ ಮನೆ ಬಿಟ್ಟು ಬಂದಿದ್ದರು. ನಂತರ ಹೋಟೆಲ್‌ವೊಂದರಲ್ಲಿ ಕೆಲಸ ಮಾಡಲು ಆರಂಭಿಸಿದರು. ಸೋಲೋ ಟ್ರಿಪ್ ಮಾಡುತ್ತಿದ್ದ ಕಿರಣ್ ಯೋಗೇಶ್ವರ್ ಆನಂತರ ಮಾಡೆಲ್ ಆದರ. ಸಾಕಷ್ಟು ಕಾರ್ಯಕ್ರಮದಲ್ಲಿ ಮಾಡೆಲ್​ ಆಗಿ ಭಾಗವಹಿಸಿದ್ದರು. ರಾಜಸ್ಥಾನದಲ್ಲಿ ಇವರ ಮನಯೆಲ್ಲಿ ಲಡ್ಡು ತಯಾರಿಗೆ ಮಾರಾಟ ಮಾಡಲಾಗುತ್ತಿತ್ತು.

ಇದನ್ನೂ ಓದಿ: ಕರುನಾಡ ವಾರಿಯರ್ಸ್​ನಿಂದ ರೂಪೇಶ್ ಔಟ್! ಗುರೂಜಿಗೆ ಲಕ್

'ಇವ್ರೆಲ್ಲ ಇನ್ನೂ ನಿಜವಾದ ಮುಖ ತೋರಿಸಿಲ್ಲ"

ಇನ್ನೂ ಈ ಬಿಗ್​ಬಾಸ್​ ಕನ್ನಡ ಒಟಿಟಿಯಲ್ಲಿ ಯಾರು ಇನ್ನೂ ಫೇಕ್ ಅನ್ನಿಸುತ್ತಾರೆ. ತಮ್ಮ ನಿಜವಾದ ರೂಪವನ್ನು ತೋರಿಸುತ್ತಿಲ್ಲ ಎಂದು ಕಿರಣ್​ ಅವರನ್ನು ಕೇಳಿದ್ದಕ್ಕೆ ಹೀಗೆ ಉತ್ತರಿಸಿದ್ದಾರೆ ನೋಡಿ. 'ಅರ್ಜುನ್​, ಚೈತ್ರ, ರಾಕೇಶ್​​, ಅಕ್ಷತಾ, ಸಾನಿಯಾ ಹಾಗೂ ಜಯಶ್ರೀ ಇವರು ಫೇಕ್​ ಅಂತ ಅಲ್ಲ. ಆದರೆ, ಅವರ ನಿಜವಾದ ರೂಪ ಬೇರೇನೆ ಇದೆ. ಆದರೆ ಅದನ್ನು ಮರೆಮಾಚಿ ಎಲ್ಲರೊಂದಿಗೆ ಖುಷಿಯಾಗಿ' ಇರುತ್ತಾರ ಎಂದು ಅವರು ಹೇಳಿದರು.
Published by:Vasudeva M
First published: