Bigg Boss Kannada OTT: ಇಲ್ಲಿರೋಕೆ ಆಗ್ತಿಲ್ಲ, ಬಿಗ್​ ಬಾಸ್ ಮನೆಯಲ್ಲಿ ಬಿಕ್ಕಿ ಬಿಕ್ಕಿ ಅತ್ತ ಜಯಶ್ರೀ ಆರಾಧ್ಯ

ಗೆಳತಿ ಮನೆಯಿಂದ ಹೋದ ಮೇಲೆ ಜಯಶ್ರೀ ಆರಾಧ್ಯ ಲೋನ್ಲಿನೆಸ್ ಅನುಭವಿಸುತ್ತಿದ್ದಾರೆ. ಎಲಿಮಿನೇಷನ್ ಆದಾಗಿನಿಂದಲೂ ಬೇಸರದಲ್ಲಿರುವ ಜಯಶ್ರೀ ಇತ್ತೀಚೆಗೆ ನನಗಿಲ್ಲ ಇರೋಕಾಗ್ತಿಲ್ಲ ಎಂದು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

ಜಯಶ್ರೀ ಆರಾಧ್ಯ

ಜಯಶ್ರೀ ಆರಾಧ್ಯ

  • Share this:
ಬಿಗ್​ಬಾಸ್ ಒಟಿಟಿ ಕನ್ನಡ (Bigg boss ott) ತುಂಬಾ ಇಂಟ್ರೆಸ್ಟಿಂಗ್ ರೀತಿಯಲ್ಲಿ ಸಾಗುತ್ತಾ ಬಂದಿದೆ. ಮೇಲಿಂದ ಮೇಲೆ ಡಿಫರೆಂಟ್ ಟ್ವಿಸ್ಟ್, ಹೊಸ ಹೊಸ ಟಾಸ್ಕ್, ಸ್ಪಧಿಗಳ ಜಗಳ, ತಮಾಷೆ, ಹಬ್ಬದ ಸಂಭ್ರಮ ಹೀಗೆ ಪ್ರೇಕ್ಷಕರನ್ನು ಕುತೂಹಲದಿಂದ ವೀಕ್ಷಿಸುವಂತೆ ಮಾಡುತ್ತಿದೆ. ಇತ್ತೀಚೆಗಷ್ಟೇ ಇಬ್ಬರು ಒಟ್ಟಿಗೆ ಎಲಿಮಿನೇಟ್ (Eliminate) ಕೂಡಾ ಆಗಿದ್ದಾರೆ. ಬಿಗ್​ಬಾಸ್ ಮನೆಯಲ್ಲಿ (Bigg Boss House) ಎರಡೆರಡು ಎಲಿಮಿನೇಷನ್ ಆಗಿದೆ. ಮನೆಯಲ್ಲಿ ಇರುವವರಿಗೆ ಹೀಗೂ ಆಗುತ್ತೆ ಎನ್ನುವುದು ಶಾಕ್ ನೀಡಿದೆ. ಚೈತ್ರಾ ಹಳ್ಳಿಕೇರಿ ಮತ್ತು ಅಕ್ಷತಾ ಕುಕ್ಕಿ ಈ ವಾರ ಮನೆಯಿಂದ ಹೊರನಡೆದಿದ್ದಾರೆ. ಈ ಎಲ್ಲ ಬೆಳವಣಿಗೆಗಳ ನಡುವೆ ಜಯಶ್ರೀ ಆರಾಧ್ಯಗೆ  (Jayashree Aradhya) ಮನೆಯಲ್ಲಿರಲು ಸಾಧ್ಯವಾಗುತ್ತಿಲ್ಲ. 'ನನಗೆ ಬಿಗ್ ಬಾಸ್ ಮನೆಯಲ್ಲಿ ಇರೋದಕ್ಕೆ ಆಗ್ತಿಲ್ಲ' ಎಂದು ಕಣ್ಣೀರಿಟ್ಟಿದ್ದಾರೆ. 

ಭಾನುವಾರದ ಎಪಿಸೋಡ್ ಸಂಚಿಕೆ ಮುಗಿದ ಮೇಲೆ ಜಯಶ್ರೀ ಒಬ್ಬರೇ ವಾಶ್ ರೂಂಗೆ (Washroom) ಹೋಗಿ ಕಣ್ಣೀರಿಟ್ಟಿದ್ದಾರೆ. 'ಸಾರಿ ಬಿಗ್ ಬಾಸ್. ನನಗೆ ಇಲ್ಲಿ ಇರೋದಕ್ಕೆ ಆಗ್ತಿಲ್ಲ' ಎಂದು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಅಷ್ಟೊತ್ತಿಗೆ ಅಲ್ಲಿಗೆ ಬಂದ ಸೋಮಣ್ಣ (Somanna) ಅವರು ಜಯಶ್ರೀ ಅವರನ್ನು ಸಮಾಧಾನಿಸಲು ಪ್ರಯತ್ನಿಸಿದ್ದಾರೆ.

ಒಟ್ಟಿಗೆ ಇಬ್ಬರು ಎಲಿಮಿನೇಟ್

ಚೈತ್ರಾ ಹಳ್ಳಿಕೇರಿ, ಜಶ್ವಂತ್​, ಜಯಶ್ರೀ ಆರಾಧ್ಯ, ನಂದಿನಿ, ಸಾನ್ಯಾ ಐಯ್ಯರ್​, ಅಕ್ಷತಾ ಕುಕ್ಕಿ, ರಾಕೇಶ್​ ಅಡಿಗ, ಸೋನು ಶ್ರೀನಿವಾಸ್​ ಗೌಡ (Sonu Srinivas Gowda) ಅವರು ಈ ವಾರ ನಾಮಿನೇಟ್​ ಆಗಿದ್ದರು. ಅಂತಿಮವಾಗಿ ಅಕ್ಷತಾ ಮತ್ತು ಚೈತ್ರಾ ಹಳ್ಳಿಕೇರಿ ಎಲಿಮಿನೇಟ್​ ಆಗುವ ಮೂಲಕ ಬಿಗ್​ ಬಾಸ್​ ಆಟ ಮುಗಿಸಿದ್ದಾರೆ.

ಜಯಶ್ರೀ ಜೊತೆ ಹೆಚ್ಚಿನ ಒಡನಾಟ

ಬಿಗ್​ ಮನೆಯಿಂದ 4ನೇ ವಾರಕ್ಕೆ ಅಕ್ಷತಾ ಮತ್ತು ಚೈತ್ರಾ ಎಲಿಮಿನೇಟ್​ ಆಗಿದ್ದಾರೆ. ಚೈತ್ರ ಅವರು ಜಯಶ್ರೀ ಹೊರತುಪಡಿಸಿ ಬೇರೆ ಯಾರ ಜೊತೆಗೂ ಅವರಿಗೆ ಹೆಚ್ಚು ಒಡನಾಟ ಇರಲಿಲ್ಲ. ಹಾಗಾಗಿ ಅವರಿಗೆ ಕಡಿಮೆ ವೂಟ್​ ಬಂದಿರಬಹುದು. ಟಾಸ್ಕ್​ ಮತ್ತು ಎಂಟರ್​ಟೇನ್​ಮೆಂಟ್​ ವಿಚಾರದಲ್ಲಿ ಅಕ್ಷತಾ ಕುಕ್ಕಿ ಅವರು ಹೇಳಿಕೊಳ್ಳುವಂಥ ಪರ್ಫಾರ್ಮೆನ್ಸ್​ ನೀಡಲಿಲ್ಲ. ಈ ಎಲ್ಲ ಕಾರಣದಿಂದ ಪ್ರೇಕ್ಷಕರಿಂದ ಅವರಿಗೆ ಹೆಚ್ಚು ವೋಟ್​ ಸಿಕ್ಕಿಲ್ಲ.

ಬಿಗ್​ ಬಾಸ್​ ಸೀಸನ್​ 9 ಗೆ ಯಾರ್ಯಾರು ಸ್ಥಾನ ಪಡೀತಾರೆ!?

ಐದನೇ ವಾರದತ್ತ ಬಿಗ್​ ಬಾಸ್ ಕನ್ನಡ​ ಒಟಿಟಿ ಮೊದಲ ಸೀಸನ್​ ಸಾಗುತ್ತಿದೆ. 6ನೇ ವಾರಕ್ಕೆ ಈ ಶೋ ಮುಗಿಯಲಿದೆ. ಇದರಲ್ಲಿ ಭಾಗವಹಿಸಿದ ಕೆಲವರಿಗೆ ಬಿಗ್​ ಬಾಸ್​ ಕನ್ನಡ ಸೀಸನ್​ 9ಗೆ ಎಂಟ್ರಿ ಸಿಗಲಿದೆ. ಆ ಚಾನ್ಸ್​ ಯಾರು ಪಡೆಯುತ್ತಾರೆ ಎಂಬುದನ್ನು ತಿಳಿಯುವ ಕುತೂಹಲ ಹೆಚ್ಚಾಗಿದೆ.

ಇದನ್ನೂ ಓದಿ: Bigg Boss OTT: ಸೋನುಗೌಡ ಕಳ್ಳಾಟಕ್ಕೆ ಸಿಟ್ಟಾದ ಕಿಚ್ಚ; ಟ್ರೋಲ್​ ರಾಣಿಗೆ ಲಾಸ್ಟ್​ ವಾರ್ನಿಂಗ್​ ಕೊಟ್ಟ ಸುದೀಪ್​​!

ಚೈತ್ರಾ ಜೊತೆ ಜಯಶ್ರೀ ಉತ್ತಮವಾದ ಒಡನಾಟ ಹೊಂದಿದ್ದರು. ನಾಲ್ಕನೇ ವಾರ ಚೈತ್ರಾ ಹಳ್ಳಿಕೇರಿ ಅವರು ಮನೆಯಿಂದ ಹೊರಹೋದರು. ಜಯಶ್ರೀಗೆ ಹೆಚ್ಚಿನ ನೋವು ತಂದ ವಿಚಾರ ಇದು. ಬಿಗ್ ಬಾಸ್ ಮನೆಯಲ್ಲಿ ಇದ್ದಷ್ಟು ದಿನವು ಚೈತ್ರಾ ಜೊತೆಗೆ ಜಯಶ್ರೀಗೆ ಒಳ್ಳೆಯ ಒಡನಾಟ ಇತ್ತು.

ಒಂಟಿತನ ಕಾಡಿತಾ?

ಚೈತ್ರಾ ಎಲಿಮಿನೇಷನ್ ಆಗಿದ್ದು ಜಯಶ್ರೀಗೆ ಬೇಸರ ಉಂಟು ಮಾಡಿದೆ ಹೌದು. ಹಾಗಿದ್ದರೆ ಜಯಶ್ರೀ ಅವರಿಗೆ ಒಂಟಿತನ ಕಾಡುತ್ತಿದೆಯಾ? ಎಲಿಮಿನೇಷನ್ ದಿನವೇ ಅವರು ಸಿಕ್ಕಾಪಟ್ಟೆ ಕಣ್ಣೀರು ಹಾಕಿದ್ದರು. ಇಂದು ಮತ್ತೊಮ್ಮೆ ಜಯಶ್ರೀ ಕಣ್ಣೀರು ಹಾಕಿದ್ದಾರೆ. ಅವರಿಗೆ ನಿಜವಾಗಿಯೂ ಮನೆಯಿಂದ ಹೊರಗೆ ಹೋಗಬೇಕಿನಿಸಿದೆಯೇ? ಗೊತ್ತಿಲ್ಲ. ಸದ್ಯಕ್ಕಂತೂ ಜಯಶ್ರೀ ತುಂಬ ನೋವಿನಲ್ಲಿದ್ದಾರೆ.
Published by:Divya D
First published: