Bigg Boss OTT: ಸೋನು ಗೌಡಗೆ 2ನೇ ವಾರವೂ ಬೆಂಡೆತ್ತಿದ ಕಿಚ್ಚ ಸುದೀಪ್​

ಟಾಸ್ಕ್‌ನಲ್ಲಿ ಸೋನು ತನ್ನ ಸೋಲನ್ನು ಒಪ್ಪಿಕೊಂಡಿಲ್ಲ ಬದಲಿಗೆ ಸೋಲಿಗೆ ಸಾನ್ಯಾ ಅಯ್ಯರ್ ಅವರೇ ಪ್ರದರ್ಶನವೇ ಕಾರಣ ಎಂದು ಆರೋಪಿಸಿದ್ರು. ನೀವು ಕೊಟ್ಟ ಹೇಳಿಕೆ ಸರಿಯಲ್ಲ ಎಂದು ಸುದೀಪ್​ ಹೇಳಿದ್ದಾರೆ.

ಸೋನು ಗೌಡ, ಸುದೀಪ್​​

ಸೋನು ಗೌಡ, ಸುದೀಪ್​​

  • Share this:
ಈ ಬಾರಿ ಓಟಿಟಿಯಲ್ಲಿ (OTT) ಪ್ರಸಾರವಾಗ್ತಿದ್ದು, ಜನರಲ್ಲಿ ಭಾರೀ ಕುತೂಹಲ ಮೂಡಿಸಿದೆ. ಬಿಗ್​ ಬಾಸ್​ ಮನೆಯಲ್ಲಿ ಸ್ಪರ್ಧಿಗಳು  ತಮ್ಮ ಜೀವನ ಅನೇಕ ವಿಚಾರವನ್ನು ಎಳೆ ಎಳೆಯಾಗಿ ಬಿಚ್ಚಿಡುತ್ತಿದ್ದಾರೆ. ಮೊದಲ ವಾರ ಮುಗಿಸಿ ಸ್ಪರ್ಧಿಗಳು 2 ನೇ ವಾರಕ್ಕೆ ಕಾಲಿಟ್ಟಿದ್ದಾರೆ. ಬಿಗ್​ಬಾಸ್ ಮನೆಯಲ್ಲಿ ಈಗಾಗಲೇ ಪ್ರೇಮಕಥೆಗಳು ಶುರುವಾಗಿದೆ.  ಹೀಗಾಗಿ ಎಲ್ಲೆಲ್ಲೂ ಬಿಗ್​ ಬಾಸ್​ ಸ್ಪರ್ಧಿಗಳ(Bigg Boss Contestants) ಕುರಿತ ಚರ್ಚೆಗಳು ಹೆಚ್ಚಾಗಿದೆ. ರೀಲ್ಸ್​ ಹಾಗೂ ಟಿಕ್​ಟಾಕ್ (Reels and Tiktok)​ ಮಾಡಿಕೊಂಡು ಫೇಮಸ್​ ಆಗಿದ್ದ ಸೋನು ಶ್ರೀನಿವಾಸ ಗೌಡ (Sonu Srinivasa Gowda) ಬಿಗ್ ಬಾಸ್ ಮನೆಯಲ್ಲೂ ಭಾರೀ ಸದ್ದು ಮಾಡ್ತಿದ್ದಾರೆ. ಒಂದಲ್ಲ ಒಂದು ವಿಷಯಕ್ಕೆ ಸುದ್ದಿಯಾಗ್ತಾನೆ ಇರ್ತಾರೆ. 2ನೇ ವಾರದಲ್ಲೂ ಕಿರಿಕ್​ ಮಾಡಿಕೊಂಡಿದ್ದ ಸೋನು ಗೌಡರನ್ನು ಸುದೀಪ್​ ತರಾಟೆಗೆ ತೆಗೆದುಕೊಂಡಿದ್ದಾರೆ. 

ಸೋನು ಗೌಡಗೆ ಸುದೀಪ್​ ಕ್ಲಾಸ್​​

ಇದೀಗ ಕುತೂಹಲಕ್ಕೆ ತೆರೆಬಿದ್ದಿದ್ದು, ಅತಿ ಕಡಿಮೆ ವೋಟ್ ಪಡೆದು ಸ್ಫೂರ್ತಿ ಗೌಡ (Spoorthi Gowda) ಎಲಿಮಿನೇಟ್ ಆಗಿದ್ದಾರೆ. ವಾರದ ಕಥೆ ಕಿಚ್ಚನ ಜೊತೆಯಲ್ಲಿ ಸುದೀಪ್​, ಸೋನು ಶ್ರೀನಿವಾಸ್​ ಗೌಡಗೆ ಸರಿಯಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಸೋಲನ್ನು ಒಪ್ಪಿಕೊಳ್ಳದ ಸೋನುಗೌಡ ಮತ್ತೆ ತಮ್ಮ ಮೊಂಡುವಾದ ಮುಂದುವರಿಸಿದ್ದಾರೆ.

bigg boss kannada ott sonu srinivas gowda says she do not take bath for 3 days pvn
ಸೋನು ಗೌಡ


ಟಾಸ್ಕ್​​ನಲ್ಲಿ ಸೋನು ಪಾತ್ರ ಏನು?

ಟಾಸ್ಕ್‌ನಲ್ಲಿ ಸೋನು ತನ್ನ ಸೋಲನ್ನು ಒಪ್ಪಿಕೊಂಡಿಲ್ಲ ಬದಲಿಗೆ ಸೋಲಿಗೆ ಸಾನ್ಯಾ ಅಯ್ಯರ್ ಅವರೇ ಪ್ರದರ್ಶನವೇ ಕಾರಣ ಎಂದು ಆರೋಪಿಸಿದ್ರು. ನೀವು ಕೊಟ್ಟ ಹೇಳಿಕೆ ಸರಿಯಲ್ಲ ಎಂದು ಸುದೀಪ್​ ಹೇಳಿದ್ರು. ನಿಮ್ಮ ತಪ್ಪನ್ನು ಮತ್ತೊಬ್ಬರ ಮೇಲೆ ಹಾಕಿರೋದು ಸರಿಯಲ್ಲ ಎಂದು ಸುದೀಪ್​ ಬುದ್ಧಿ ಹೇಳಿದ್ದಾರೆ.

ತಪ್ಪು ಒಪ್ಪಿಕೊಂಡ ಸೋನು

ಸೋಲು ಒಪ್ಪಿಕೊಳ್ಳಲು ಅಂಜಿಕೆ ಯಾಕೆ ಎಂದು ಸುದೀಪ್​ ಹೇಳ್ತಿದ್ದಂತೆ ಸೋನು ಉಲ್ಟಾ ಹೊಡೆದಿದ್ದಾರೆ. ಹೌದು ನನ್ನದೇ ತಪ್ಪು ಎಂದು ಸೋನು ಗೌಡ ಒಪ್ಪಿಕೊಂಡಿದ್ದಾರೆ.

ಸಾನ್ಯಾ, ಸೋನು ನಡುವೆ ಕಿತ್ತಾಟ ಯಾಕೆ? 

ಬಿಗ್​ ಬಾಸ್​ ಸ್ಪರ್ಧಿಗಳಿಗೆ ಒಂದಲ್ಲ ಒಂದು ಟಾಸ್ಕ್ ಕೊಡಲಾಗುತ್ತದೆ. ಅದೇ ರೀತಿ  2 ಟೀಂ ಮಾಡಿ ಒಂದು ಟಾಸ್ಕ್ ನೀಡಿದ್ರು.  ಈ ಟಾಸ್ಕ್​ನ ಪ್ರಕಾರ 1 ಟೀಂನಿಂದ ಇಬ್ಬರು ಆಟಕ್ಕೆ ಇಳಿಯಬೇಕು. ಒಬ್ಬರ ಕಿವಿಗೆ ಹೆಡ್​ಫೋನ್​ ಹಾಕಿ ಸಾಂಗ್ ಹಾಕಲಾಗುತ್ತದೆ. ಎದುರು ಇದ್ದವರು ಬಿಗ್ ಬಾಸ್ ನೀಡಿದ ಲೈನ್​​ನ ಜೋರಾಗಿ ಹೇಳಬೇಕು. ಹೆಡ್​ಫೋನ್ ಹಾಕಿಕೊಂಡವರು ಇದನ್ನು ಗೆಸ್ ಮಾಡಬೇಕು. ಈ ಆಟವನ್ನು ಸೋನು ಹಾಗೂ ಸಾನ್ಯಾ ಆಡಿದ್ರು.
ಹುಡುಗರನ್ನು ಮನೆಯಿಂದ ಹೊರ ಹಾಕಿ ಸೋನು ಶ್ರೀನಿವಾಸ್ ಗೌಡ ಮನೆಯ ಸೆಂಟರ್ ಆಫ್ ಅಟ್ರಾಕ್ಷನ್ ಅಂದ್ರೆ ತಪ್ಪಾಗಬಾರದು. ಸಾಕಷ್ಟು ವಿಚಾರವಾಗಿ ನೋಡುಗರ ಗಮನ ಸೆಳೆಯುತ್ತಿರುವ ಸ್ಪರ್ಧಿಯಾಗಿದ್ದಾರೆ. ಸದ್ಯ ವಾರದ ಪಂಚಾಯಿತಿಯಲ್ಲಿ ಸೋನು ಮಾತನಾಡಿರುವ ಮಾತು ಸಖತ್ ಮಾಡುತ್ತಿದೆ. ದೊಡ್ಮನೆಯಲ್ಲಿ ಹೆಚ್ಚು ಚೆನ್ನಾಗಿ ಟಾಸ್ಕ್ ಮಾಡುತ್ತಿರುವುದು ಹುಡುಗಿಯರು. ಆದರೆ ಹೆಚ್ಚು ನಾಮಿನೇಟ್ ಆಗುತ್ತಿರುವುದು ಕೂಡ ಹುಡುಗಿಯರು. ಅಲ್ಲದೇ ಈವರೆಗೆ ಕಡಿಮೆ ವೋಟ್ ಪಡೆದು ಎಲಿಮಿನೇಟ್ ಆದ ಇಬ್ಬರು ಕೂಡ ಹುಡುಗಿಯರು. ಈ ವಿಚಾರವನ್ನು ಮನೆಯೊಳಗೆ ಪ್ರಸ್ತಾಪಿಸಿರುವ ಸೋನು ಗೌಡ ಅವರು, ಮುಂದಿನ ಬಾರಿ ಹುಡುಗರನ್ನು ಮನೆಯಿಂದ ಹೊರಹಾಕಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: Bigg Boss OTT: ಬಿಗ್​ ಬಾಸ್​ ಮನೆಯ ಲವ್​​ ಬರ್ಡ್ಸ್​​ಗೆ ಕಿಚ್ಚನ ವಾರ್ನಿಂಗ್​! ಹೀಗೆ ಮಾಡ್ತಿದ್ರೆ ಗೇಟ್​ ಪಾಸ್​ ಫಿಕ್ಸ್!​

ಸದ್ಯ ಬಿಗ್ ಬಾಸ್ ಮನೆಯಲ್ಲಿ ಈಗಾಗಲೇ ಸ್ಪೂರ್ತಿ ಗೌಡ, ಕಿರಣ್ ಯೋಗೇಶ್ವರ್, ಅರ್ಜುನ್ ರಮೇಶ್, ಈಗಾಗಲೇ ಹೊರ ನಡೆದಿದ್ದಾರೆ. ಈಗ 12 ಜನರ ನಡುವೆ ಸಖತ್ ಪೈಪೋಟಿ ನಡೆಯುತ್ತಿದೆ. ಇನ್ನು ಮುಂದಿನ ದಿನಗಳಲ್ಲಿ ಯಾರು ಮನೆಯಿಂದ ಹೊರಬರಲಿದ್ದಾರೆ ಎಂಬುದನ್ನ ಕಾದುನೋಡಬೇಕಿದೆ.
Published by:Pavana HS
First published: