Bigg Boss OTT: ಬಿಗ್​ಬಾಸ್ ಮನೆಯಲ್ಲಿ ಕ್ಯಾಪ್ಟನ್ ಪಟ್ಟಕ್ಕಾಗಿ ಸ್ಪರ್ಧಿಗಳ ಸರ್ಕಸ್, ಪ್ರೇಕ್ಷಕರಿಗೆ ಮಜವೋ ಮಜ!

Bigg Boss Kannada OTT: ಬಿಗ್​ಬಾಸ್ ಮನೆಯಲ್ಲಿ ಸ್ಪರ್ಧಿಗಳ ಆಟ ಜೋರಾಗಿದೆ. ಕ್ಯಾಪ್ಟನ್ ಆಗೋಕೆ ಭಾರೀ ಮಜವಾಗಿರೋ ಟಾಸ್ಕ್​​ಗಳನ್ನು ಕೊಟ್ಟಿರೋ ಬಿಗ್​ಬಾಸ್ ಪ್ರೇಕ್ಷಕರಿಗೆ ಫುಲ್ ಮನರಂಜನೆ ಕೊಟ್ಟಿದೆ.

ಜಸ್ವಂತ್ ಬೋಪಣ್ಣ

ಜಸ್ವಂತ್ ಬೋಪಣ್ಣ

  • Share this:
ಕನ್ನಡ ಬಿಗ್​ಬಾಸ್ ಒಟಿಟಿಗೆ (Bigg Boss OTT) ನಿರೀಕ್ಷೆಗಿಂತಲೂ ಹೆಚ್ಚಿನ ಪ್ರತಿಕ್ರಿಯೆ ಬರುತ್ತಿದೆ. ಒಟಿಟಿಯಲ್ಲಿ ಬಿಗ್​ಬಾಸ್ (Bigg Boss) ಹಿಂದಿಯಲ್ಲಿ ಚೆನ್ನಾಗಿ ಮೂಡಿಬಂದಿತ್ತು. ಈಗ ಕನ್ನಡದಲ್ಲಿ ಭರ್ಜರಿಯಾಗಿ ನಡೆಯುತ್ತಿದೆ. ಬಿಗ್​ಬಾಸ್ ರಿಯಾಲಿಟಿ ಶೋಗೆ ಟಿವಿಯಲ್ಲಿ ಮಾಮೂಲಿಯಾಗಿ ಪ್ರೇಕ್ಷರ ಕೊರತೆ ಇಲ್ಲ. ಆದರೆ ಒಟಿಟಿ ಎಂದ ಮೇಲೆ ಇದು ನಿರ್ದಿಷ್ಟ ಪ್ರೇಕ್ಷರನ್ನು ಟಾರ್ಗೆಟ್ ಮಾಡುತ್ತದೆ. ಆದರೆ ಕನ್ನಡ ಬಿಗ್​ಬಾಸ್ ಒಟಿಟಿ ನಿರೀಕ್ಷೆಗೂ ಮೀರಿ ಸಖತ್ತಾಗಿ ಸೌಂಡ್ ಮಾಡುತ್ತಿದೆ. ಈಗಾಗಲೇ ಮನೆ ಸೇರಿದ 16 ಮಂದಿ ಸ್ಪರ್ಧಿಗಳಲ್ಲಿ ಒಬ್ಬರು ಎಲಿಮಿನೇಟ್ ಆಗಿದ್ದಾರೆ. ಹಲವು ಸಿಂಪಲ್ ಫನ್ನಿ ಟಾಸ್ಕ್​ಗಳ (Funny Task) ಮೂಲಕ ರಿಯಾಲಿಟಿ ಶೋ (Reality Show) ನಿಜವಾಗಿಯೂ ಮಜಭರಿತವಾಗಿ ಮೂಡಿ ಬರುತ್ತಿದ್ದು, ಸ್ಪರ್ಧಿಗಳ ಸಂಖ್ಯೆ ಕಮ್ಮಿಯಾಗುವಾಗ ಇನ್ನಷ್ಟು ಮನರಂಜನೆ ಸಿಗುವ ಸಾಧ್ಯತೆ ಇದೆ.

ಶುರುವಾಗಿದೆ ಕ್ಯಾಪ್ಟನ್ ಪಟ್ಟಕ್ಕಾಗಿ ಸರ್ಕಸ್

ಬಿಗ್ ಬಾಸ್ ಮನೆಗೆ ಹೊಸ ಕ್ಯಾಪ್ಟನ್ ಬರುವ ವಾರದ ಸಮಯ ಇದು. ಬಿಗ್ ಬಾಸ್ ಮನೆಯೊಳಗೆ ನಾಯಕನ ಜವಾಬ್ದಾರಿಗಾಗಿ ಪ್ರತಿಬಾರಿ ಸ್ಪರ್ಧಿಗಳು ಸಾಕಷ್ಟು ಪ್ರಯತ್ನ ಮಾಡುವುದನ್ನು ಕಾಣಬಹುದು. ಜಸ್ವಂತ್ ಬೋಪಣ್ಣ (Jashwanth Bopanna) ಬಿಗ್ ಬಾಸ್ ಕನ್ನಡ OTT ನ ಹೊಸ ನಾಯಕನಾಗಲಿದ್ದಾರೆ.

ನಾಯಕತ್ವದ ಟಾಸ್ಕ್​ಗಳೇ ಈ ಬಾರಿಯ ಹೈಲೈಟ್

ನಾಯಕತ್ವಕ್ಕಾಗಿ ನೀಡಲಾದ ಟಾಸ್ಕ್ ಅನ್ನು ಜಸ್ವಂತ್ ಹೇಗೆ ನಿಭಾಯಿಸಿದ್ದಾರೆ, ಅದರಲ್ಲಿ ಹೇಗೆ ಕಾರ್ಯನಿರ್ವಹಿಸಿದ್ದಾರೆ ಎಂಬುದನ್ನು ಕಾದು ನೋಡಬೇಕಾಗಿದೆ. ಬಿಗ್ ಬಾಸ್ ಕನ್ನಡ OTT ಯ ಮುಂದಿನ ಸಂಚಿಕೆ ನಾಯಕತ್ವದ ಯುದ್ಧವನ್ನು ತೋರಿಸಲಿದ್ದು ಪ್ರೇಕ್ಷಕರಲ್ಲಿ ಈಗಾಗಲೇ ಕುತೂಹಲ ಮೂಡಿಸಿದೆ.










View this post on Instagram






A post shared by Voot Select (@vootselect)






ಜಸ್ವಂತ್ ಬಗ್ಗೆ ಹೇಳುವುದಾದರೆ ಬಿಗ್ ಬಾಸ್ ಕನ್ನಡ OTT ಮನೆಯೊಳಗೆ ಸ್ಪರ್ಧಾತ್ಮಕ ಸದಸ್ಯರಲ್ಲಿ ಇವರೂ ಒಬ್ಬರು. ಅವರು ತಮ್ಮ ಸಹ-ಸ್ಪರ್ಧಿಗಳಿಗೆ ಟಫ್ ಕಾಂಪಿಟೇಷನ್ ಕೊಡುತ್ತಿದ್ದಾರೆ ಎನ್ನುವುದನ್ನು ಬೇರೆ ಹೇಳಬೇಕಾಗಿಲ್ಲ. ಅವರು ಮಾಡುವ ಹೆಚ್ಚಿನ ಟಾಸ್ಕ್​​ಗಳಲ್ಲಿ ಅವರು ವಿಜೇತರಾಗಿ ಹೊರಹೊಮ್ಮಿದ್ದಾರೆ.

ಕಳಪೆ ಪ್ರದರ್ಶನ ಕೊಟ್ಟೋರು ಯಾರು?

ಮತ್ತೊಂದೆಡೆ, ಮುಂಬರುವ ಸಂಚಿಕೆಯು ಹೊಸ ನಾಯಕನಿಗೆ ಸಾಕ್ಷಿಯಾಗುವುದಲ್ಲದೆ ವಾರದ ಅತ್ಯುತ್ತಮ ಮತ್ತು ಕಳಪೆ ಪ್ರದರ್ಶನ ಕೊಟ್ಟವರು ಯಾರು ಎನ್ನುವುದು ಕೂಡಾ ಎನೌನ್ಸ್ ಆಗುತ್ತದೆ. ವರದಿಗಳ ಪ್ರಕಾರ, ರಾಕೇಶ್ ಅಡಿಗ ಅವರನ್ನು ಅತ್ಯುತ್ತಮ ಪ್ರದರ್ಶನಕಾರ ಎಂದು ಘೋಷಿಸಲಾಗಿದೆ. ಸ್ಪೂರ್ತಿ ಗೌಡ ಅವರನ್ನು ಕಳಪೆ ಪ್ರದರ್ಶನ ನೀಡಿದ ಸ್ಪರ್ಧಿ ಎಂದು ಆಯ್ಕೆ ಮಾಡಿದ್ದಾರೆ.

ಇದನ್ನೂ ಓದಿ: Bigg Boss OTT: ಆತ ಹಿಂದಿನಿಂದ ಬಂದು ತಬ್ಬಿಕೊಳ್ತಾನೆ, ಮುತ್ತು ಕೊಡ್ತಾನೆ ಎಂದ ಸಾನಿಯಾ ಅಯ್ಯರ್​!

ಶುರುವಾಗಿದೆ ಲವ್ ಕಹಾನಿ - ರಾಕೇಶ್, ಸೋನು ಗೌಡ ನಡುವೆ ಲವ್​

ಬಿಗ್​ಬಾಸ್​ ಮನೆಯಲ್ಲಿ ಸಾಕಷ್ಟು ಲವ್​ ಸ್ಟೋರಿಗಳು ಹುಟ್ಟಿಕೊಂಡಿವೆ. ಕೆಲವರು ಬಿಗ್ ಬಾಸ್​ ಮನೆಯಲ್ಲಿ ಫೇಮಸ್​ ಆಗಲು ಪ್ರೀತಿ-ಪ್ರೇಮದ ಆಟ ಆಡಿದರೆ ಇನ್ನೂ ಕೆಲವರು, ನಿಜವಾಗಿ ಪ್ರೀತಿಸಿ ಮನೆಯಿಂದ ಹೊರಬಂದು ಮದುವೆ ಆಗಿದ್ದಾರೆ. ಇದೀಗ ಓಟಿಟಿಯಲ್ಲಿ ಪ್ರಸಾರವಾಗ್ತಿರೋ ಬಿಗ್​ಬಾಸ್ ಮನೆಯಲ್ಲಿ ಸೋನು ಶ್ರೀನಿವಾಸ್​ ಗೌಡಗೆ ರಾಕೇಶ್​ ಮೇಲೆ ಲವ್​ ಆಗಿರುವುದಾಗಿ, ಹಾಗೂ ಟ್ರೂ ಫೀಲಿಂಗ್ಸ್​ ಇರುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ: Bigg Boss OTT: ಇವ್ರೆಲ್ಲ ಇನ್ನೂ ಬಿಗ್​ಬಾಸ್​ ಮನೆಯಲ್ಲಿ ಅಸಲಿ ಮುಖ ತೋರಿಸಿಲ್ವಂತೆ! ಕಿರಣ್​ ಕಥೆ, ನ್ಯೂಸ್​ 18 ಜೊತೆ

ರಾಕೇಶ್ ಮೇಲೆ ಸೋನುಗೆ ಸಿಟ್ಟು

ಮಧ್ಯರಾತ್ರಿ 2.15ಕ್ಕೆ ರಾಕೇಶ್​ ಅವರು ಸೋನು ಗೌಡ ಅವರನ್ನು ಹುಡುಕಿಕೊಂಡು ಬಂದು ಮಾತಾಡಿಸಿದ್ದಾರೆ. ಚೈತ್ರಾ ಹಳ್ಳಿಕೇರಿ, ಜಯಶ್ರೀ ಆರಾಧ್ಯ ಜೊತೆ ಸೋನು ಗೌಡ ಮಾತನಾಡುತ್ತಿದ್ದರು. ಆಗ ಸೋನು ಗೌಡ ಅವರನ್ನು ಮಾತಾಡಿಸಲು ರಾಕೇಶ್​ ಅಡಿಗ ಬಂದರು. ನೀನು ದಯವಿಟ್ಟು ಹೋಗ್ಬಿಡು ಎಂದು ಸೋನು ಹೇಳಿದ್ದಾಳೆ. ನನ್ನ ಮತ್ತು ನಿನ್ನ ವಿಷಯವನ್ನು ಬೇರೆಯವರ ಮುಂದೆ ಜಡ್ಜ್​ ಮಾಡಬೇಡ. ನನಗೆ ಇಷ್ಟ ಆಗಲ್ಲ ಹೋಗು ಎಂದು ಸೋನು ಗೌಡ ಸರಿಯಾಗಿ ಬೈಯ್ದು ಕಳಿಸಿದರು.
Published by:Divya D
First published: