Bigg Boss OTT: ಮೊದಲ ದಿನವೇ ಕಷ್ಟದ ಕಥೆ ಹೇಳಿಕೊಂಡು ಕಣ್ಣೀರಿಟ್ಟ ಸ್ಪರ್ಧಿಗಳು, ಫುಲ್ ಎಮೋಷನಲ್​ ಎಪಿಸೋಡ್

Bigg Boss Kannada OTT: ಎಲ್ಲರ ಬದುಕಿನಲ್ಲಿ ನೋವು ಇರುತ್ತದೆ. ಅವುಗಳ ಬಗ್ಗೆ ಸ್ಪರ್ಧಿಗಳು ಪ್ರೇಕ್ಷಕರ ಮುಂದೆ ಬಿಚ್ಚಿಟ್ಟಿದ್ದು, ಮೊದಲ ಎಪಿಸೋಡ್​ ಎಮೋಷನಲ್​​ ಆಗಿದೆ ಎನ್ನಬಹುದು.

ಬಿಗ್​ ಬಾಸ್​

ಬಿಗ್​ ಬಾಸ್​

  • Share this:
ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ (Big Boss OTT) ಈ ಬಾರಿ ಓಟಿಟಿ ಪ್ಲಾಟ್​ಫಾರ್ಮ್​ನಲ್ಲಿ ಪ್ರಸಾರವಾಗ್ತಿದೆ. ಈ ರಿಯಾಲಿಟಿ ಶೋಗೆ (Reality Show)  ಈಗಾಗಲೇ ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದಾರೆ. ಅದರಂತೆ ಬಿಗ್ ಬಾಸ್ ಓಟಿಟಿಯಲ್ಲಿ ಕಾಣಿಸಿಕೊಳ್ಳುವ ಸ್ಪರ್ಧಿಗಳು ಯಾರೆಲ್ಲಾ ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ. ಸ್ಪರ್ಧಿಗಳೆಲ್ಲಾ ಮನೆಯಲ್ಲಿ ಒಂದೆಡೆ ಸೇರಿದ್ದಾರೆ. ಈ ಬಾರಿಯಂತೂ ಅನೇಕ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲಾಗಿದೆ. ಇಂದು ಮೊದಲ ದಿನವಾಗಿದ್ದು, ಅಸಲಿ ಆಟ ಆರಂಭವಾಗಿದೆ.  ಹೌದು, ಮೊದಲ ದಿನವೇ ಸ್ಪರ್ಧಿಗಳು ತಮ್ಮ ನೋವಿನ ಕಥೆಯನ್ನು ಹೇಳಿಕೊಂಡು ಗಳಗಳನೆ ಅತ್ತಿದ್ದಾರೆ.

ಕಷ್ಟದ ಕಥೆ ಹಂಚಿಕೊಂಡ ಸ್ಪರ್ಧಿಗಳು

ಎಲ್ಲರ ಬದುಕಿನಲ್ಲಿ ನೋವು ಇರುತ್ತಾರೆ. ಅವುಗಳ ಬಗ್ಗೆ ಸ್ಪರ್ಧಿಗಳು ಪ್ರೇಕ್ಷಕರ ಮುಂದೆ ಬಿಚ್ಚಿಟ್ಟಿದ್ದು, ಮೊದಲ ಎಪಿಸೋಡ್​ ಎಮೋಷನಲ್​​ ಆಗಿದೆ ಎನ್ನಬಹುದು. ಸಾಮಾನ್ಯವಾಗಿ ಬಿಗ್​ಬಾಸ್​ನಲ್ಲಿ ಮೊದಲ ವಾರ ಬಹಳ ಮುಖ್ಯವಾಗುತ್ತದೆ. ಪ್ರೇಕ್ಷಕರನ್ನು ಸೆಳೆದುಕೊಳ್ಳಲು ಉತ್ತಮ ಅವಕಾಶ ಸಿಗುತ್ತದೆ. ತಾವೇನು ಎಂಬುದನ್ನ ಜನರಿಗೆ ತೋರಿಸಲು ಅವರಿಗೆ ಜಾಸ್ತಿ ಸಮಯವಿರುವುದಿಲ್ಲ, ಅದಕ್ಕಾಗಿ ಈ ಎಮೋಷನ್​ ಕಾರ್ಡ್​ ಅನ್ನು ಬಳಕೆ ಮಾಡುತ್ತಾರೆ. ಸ್ಪರ್ಧಿಗಳು ತಮ್ಮ ಬದುಕಿನಲ್ಲಿ ಅನುಭವಿಸಿದ ಕಷ್ಟಗಳ ಬಗ್ಗೆ ನೆನೆದು ಕಣ್ಣೀರಿಟ್ಟಿದ್ದಾರೆ.

ಎಲ್ಲರ ಬದುಕಿನಲ್ಲಿ ಕಷ್ಟಗಳ ಒಂದೇ ರೀತಿ ಇರುವುದಿಲ್ಲ, ಸಾನ್ಯ ಅಯ್ಯರ್​ ತಂದೆಯ ಪ್ರೀತಿ ಸಿಕ್ಕಿಲ್ಲ ಎಂದು ನೆನೆದು ಅತ್ತರೆ, ಸೋಮಣ್ಣ ಮಾಚಿಮಾಡ ಅವರ ಸಂಸಾರದಲ್ಲಿ ಉಂಟಾದ ಸಮಸ್ಯೆಯ ಬಗ್ಗೆ ಕಣ್ಣೀರಿಟ್ಟಿದ್ದಾರೆ. ಅದೇ ರೀತಿ ಚೈತ್ರಾ ಹಳ್ಳಿಕೇರಿ ಅವರಿಗೆ ಗಂಡನ ಮನೆಯವರಿಂದಲೇ ಆದ ಮೋಸ, ಹಿಂಸೆ ಒಂದೆಡೆಯಾದರೆ, ಸ್ಫೂರ್ತಿ ಗೌಡ ಅವರಿಗೆ ಅಮ್ಮನ ಸಾವಿನಿಂದ ಉಂಟಾದ ನೋವು ಜೊತೆ ಅದರಿಂದ ಅಂಟಿಕೊಂಡ ಕಳಂಕ. ಹೀಗೆ  ಒಬ್ಬರ ಬದುಕಿನಲ್ಲೂ ಒಂದೊಂದು ನೋವಿದ್ದು, ಪ್ರೇಕ್ಷಕರ ಮುಂದೆ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಹುಡುಗರ ಹಾರ್ಟ್‌ಗೆ ಕಿಚ್ಚಿಡುತ್ತಿದ್ದ ಉರ್ಫಿಗೆ ಈಗ ಅನಾರೋಗ್ಯವಂತೆ! ಬೇಗ ಹುಷಾರಾಗಿ ಅಂತಿದ್ದಾರೆ ಫ್ಯಾನ್ಸ್

ಮೊದಲ ಓಟಿಟಿ ಸೀಸನ್​

ನಿನ್ನೆ ಸಂಜೆ 7 ಗಂಟೆಯಿಂದ ಬಿಗ್​ ಬಾಸ್​ ಆರಂಭವಾಗಿದೆ. ನೀವು ವೂಟ್​ ನಲ್ಲಿ ನೇರಪ್ರಸಾರ ನೋಡಬಹುದು. ವಿಶೇಷ ಎಂಬಂತೆ ಈ ಬಾರಿ ಬಿಗ್​ ಬಾಸ್​ ಓಟಿಟಿ 42 ದಿನಗಳ ಕಾಲ ನಡೆಯಲಿದೆ. ಅಲ್ಲದೇ ಇದು 24/7 ಲೈವ್​ ಇರಲಿದ್ದು, ಇನ್ನಷ್ಟು ಮನೋರಂಜನೆಯನ್ನು ನೀಡಲಿದೆಯಂತೆ. ಜೊತೆಗೆ ಬಿಗ್​ ಬಾಸ್​ ನಲ್ಲಿ ಸೀಕ್ರೇಟ್​ ರೂಂ ಸಹ ಇರುವುದಿಲ್ಲ ಮತ್ತು ಇಲ್ಲಿ ಕೊನೆಯಲ್ಲಿ ಉಳಿಯುವ ಟಾಪ್​ ಸ್ಪರ್ಧಿಗಳು ಬಿಗ್​ ಬಾಸ್​ ಸೀಸನ್​ 9ರಲ್ಲಿ ಮತ್ತೆ ಭಾಗವಹಿಸಲಿದ್ದಾರಂತೆ.
ಇದನ್ನೂ ಓದಿ: ನಟನೆ, ರಾಜಕೀಯದಿಂದ ಈಗ ಬಿಗ್​ಬಾಸ್​ಗೆ ಬಂದ ಅರ್ಜುನ್ - ಟ್ರೋಫಿ ಗೆಲ್ತಾರಾ ನಟ?

ಪ್ರತಿ ಬಾರಿಯೂ ಬಿಗ್​ ಬಾಸ್​ ಮನೆ ಅದ್ದೂರಿಯಾಗಿರುತ್ತದೆ. ಹಲವು ವಿಶೇಷತೆಗಳಿಂದ ಈ ಮನೆ ಕೂಡಿರುತ್ತದೆ. ಐಷಾರಾಮಿ ಮನೆಯಲ್ಲಿ ಸ್ಪರ್ಧಿಗಳು ಈ ಬಾರಿ 6 ವಾರಗಳ ಕಾಲ ಇರುತ್ತಾರೆ. ಹಾಗಾದರೆ ಈ ಬಾರಿ ಮನೆ ಹೇಗಿರಲಿದೆ ಎಂಬ ಕುತೂಹಲಕ್ಕೆ ಇದೀಗ ತೆರೆಬಿದ್ದಿದೆ.  ಈ ಬಾರಿ ಆರ್ಯವರ್ಧನ್​ ಗುರೂಜಿ, ಸೋನು ಗೌಡ, ಸ್ಫೂರ್ತಿ ಗೌಡ, ನಂದು-ಜಸ್ವಂತ್​, ಚೈತ್ರಾ ಹಳ್ಳಿಕೇರಿ , ಅಕ್ಷತಾ ಕುಕ್ಕಿ, ಕಿರಣ್ ಯೋಗೇಶ್ವರ್, ಜಯಶ್ರೀ ಆರಾಧ್ಯ, ಲೋಕೇಶ್, ಸೋಮಣ್ಣ, ರಾಕೇಶ್ ಅಡಿಗ, ಸಾನ್ಯಾ, ಉದಯ್ ಸೂರ್ಯ ಮತ್ತು ರೂಪೇಶ್​ ಶೆಟ್ಟಿ ಬಿಗ್​ಬಾಸ್​ ಮನೆಗೆ ಎಂಟ್ರಿಯಾಗಿದ್ದಾರೆ.
Published by:Sandhya M
First published: