Sonu Gowda: ನಾನು ಸಿಗರೇಟ್ ಸೇದುತ್ತೇನೆ, ತಪ್ಪೇನು? ಬಿಗ್​ಬಾಸ್​ ಮನೆಯಲ್ಲಿ ಸೋನು ಗೌಡ ಪ್ರಶ್ನೆ

Bigg Boss Kannada OTT:  ಸೋನು ಗೌಡ ಬಿಗ್​ಬಾಸ್​ ಮನೆಗೆ ಎಂಟ್ರಿ  ಬಗ್ಗೆ ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆ ಹುಟ್ಟು ಹಾಕಿದ್ದು, ಕೆಲವರು ಇದನ್ನು ಟೀಕಿಸಿದ್ದಾರೆ. ಅವರನ್ನು ಆಯ್ಕೆ ಮಾಡಬಾರದಿತ್ತು ಎಂದು ಅಪಸ್ವರ ಎತ್ತಿದ್ದಾರೆ.

ಸೋನು ಗೌಡ

ಸೋನು ಗೌಡ

  • Share this:
ಸಾಮಾಜಿಕ ಜಾಲತಾಣ (Social Media) ಒಂದು ಮ್ಯಾಜಿಕ್​ (Magic) ಇದ್ದಂತೆ. ಇಲ್ಲಿ ಯಾವಾಗ ಏನೂ ಬೇಕಾದರು ಆಗಬಹುದು. ಯಾರೂ ಬೇಕಾದರು ಫೇಮಸ್​ ಆಗಬಹುದು. ಕೆಲವರು ಈ ಕಾರಣದಿಂದ ಹೆಸರುಗಳಿಸಿದರೆ, ಮತ್ತೊಬ್ಬರ ಹೆಸರನ್ನು ಹಾಳು ಮಾಡುವ ಶಕ್ತಿ ಈಗ ಇದಕ್ಕಿದೆ.  ಇಲ್ಲಿ ಯಾವುದೇ ವಿಚಾರ ವೈರಲ್ (Viral) ಆಗಲು ಹೆಚ್ಚಿನ ಸಮಯ ಬೇಕಿಲ್ಲ. ಇದೇ ರೀತಿ ಫೇಮಸ್​ ಆದವರು ಸೋನು ಶ್ರೀನಿವಾಸ್​ ಗೌಡ(Sonu Gowda). ಈ ಹೆಸರನ್ನು ಕೇಳಿರದವರು ಯಾರೂ ಇಲ್ಲ. ಟಿಕ್​ಟಾಕ್​ (TikTok) ಮೂಲಕ ಫೇಮಸ್​ ಆದ ಈ ನಟಿ, ಈಗ ಬಿಗ್​ಬಾಸ್​ (Biggboss) ಮನೆ ಒಳಗೆ ಪ್ರವೇಶ ಪಡೆದಿದ್ದಾರೆ. ಇದೀಗ ಮನೆ ಒಳಗೆ ಅವರ ಹೇಳಿರುವ ಒಂದು ಮಾತು ಫುಲ್ ವೈರಲ್ ಆಗಿದೆ.

ಅಪಸ್ವರ ಎತ್ತಿದ ಜನರು

ಸೋನು ಗೌಡ ಬಿಗ್​ಬಾಸ್​ ಮನೆಗೆ ಎಂಟ್ರಿ  ಬಗ್ಗೆ ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆ ಹುಟ್ಟು ಹಾಕಿದ್ದು, ಕೆಲವರು ಇದನ್ನು ಟೀಕಿಸಿದ್ದಾರೆ. ಅವರನ್ನು ಆಯ್ಕೆ ಮಾಡಬಾರದಿತ್ತು ಎಂದು ಅಪಸ್ವರ ಎತ್ತಿದ್ದಾರೆ. ಅಲ್ಲದೇ,ಮೊದಲ ವಾರವೆ ಅವರು ಮನೆಯಿಂದ ಹೊರ ಹೋಗುತ್ತಾರೆ ಎಂದೆಲ್ಲಾ ಕಾಮೆಂಟ್​ ಮಾಡುತ್ತಿದ್ದಾರೆ. ಈ ಎಲ್ಲಾ ಚರ್ಚೆ ನಡೆಯುತ್ತಿರುವಾಗ ಇತ್ತ ಸೋನು ಗೌಡ ಮನೆಯ ಒಳಗೆ ತಮ್ಮ ದರ್ಬಾರ್​ ಆರಂಭಿಸಿದ್ದಾರೆ. ನಮ್ಮ ನೇರ ನುಡಿಯ ಮೂಲಕ ಗಮನ ಸೆಳೆಯುತ್ತಿದ್ದಾರೆ.

ವೇದಿಕೆ ಮೇಲೆ ಎಂಟ್ರಿಕೊಟ್ಟಾಗಲೇ ನಾಯಿಯ ಹೆಸರಿನ ಬಗ್ಗೆ ಕಿಚ್ಚ ಸುದೀಪ್ ಕೇಳಿದಾಗ, ನಾನು ಬ್ರಿಝರ್​ ಕುಡಿಯುತ್ತಿದ್ದೆ, ಹಾಗಾಗಿ ನನ್ನ ನಾಯಿಗೆ ವಿಭಿನ್ನ ಹೆಸರನ್ನು ಇಡಬೇಕು ಎನ್ನುವ ಕಾರಣ ಈ ಹೆಸರನ್ನು ಇಟ್ಟಿದ್ದೇನೆ ಎಂದಿದ್ದಾರೆ. ಇನ್ನು ಮನೆಯ ಒಳಗೆ ಹೋದ ನಂತರ, ರೂಪೇಶ್​ ಶೆಟ್ಟಿ ಅವರ ಜೊತೆಗೆ ಮಾತನಾಡುವಾಗ ಸಿಗರೇಟ್​ ಸೇದುತ್ತೇನೆ ಎಂದಿದ್ದಾರೆ.




ಹೌದು, ಸೋನು ಗೌಡ, ಆರ್ಯವರ್ಧನ್ ಗುರೂಜಿ, ರೂಪೇಶ್​ ಶೆಟ್ಟಿ ಕುಳಿತು ಮಾತನಾಡುವಾಗ, ವಾಯ್ಸ್​ ವಿಚಾರದ ಬಗ್ಗೆ ಚರ್ಚೆ ಮಾಡುತ್ತಿದ್ದರು. ಆ ಸಮಯದಲ್ಲಿ ಸೋನು ರೂಪೇಶ್​ ಅವರದ್ದು ಬೇಸ್​ ವಾಯ್ಸ್​, ನನ್ನದು ಮೊದಲು ಹಾಗೆ ಇತ್ತು ಸ್ಮೋಕ್​ ಮಾಡಿದ ಕಾರಣ ಹಾಳಾಯಿತು ಎಂದಿದ್ದಾರೆ. ಆಗ ನಟ ರೂಪೇಶ್​, ನಾನು ಸ್ಮೋಕ್ ಮಾಡಲ್ಲ, ಎಂದಿದ್ದಾರೆ. ಅದಕ್ಕೆ ಸೋನು, ಸ್ಮೋಕ್ ಮಾಡುವುದಿಲ್ಲವಾ? ನಾನು ಮಾಡ್ತೀನಿ ಎನ್ನುವ ಹೇಳಿಕೆ ಕೊಟ್ಟಿದ್ದಾರೆ.

ನಾನು ಸಿಗರೇಟ್ ಸೇದುತ್ತೇನೆ ಎಂದ ಸೋನು

ಇಷ್ಟಕ್ಕೆ ಮುಗಿದಿಲ್ಲ, ಸಿಗರೇಟ್ ಸೇದುತ್ತೀರಾ ಎಂದು ರೂಪೇಶ್​ ಆಶ್ಚರ್ಯದಿಂದ ಕೇಳಿದಾಗ, ನಾನು ಸಿಗರೇಟ್ ಸೇದುತ್ತೇನೆ. ಅದರಲ್ಲಿ ತಪ್ಪೇನಿದೆ ಎಂದು ಪ್ರಶ್ನೆ ಮಾಡಿದ್ದಾರೆ. ಸದ್ಯ ಸೋನು ಅವರ ಈ ಮಾತು ಕೇಳಿ ಪ್ರೇಕ್ಷಕರಿಗೆ ಆಶ್ಚರ್ಯವಾಗಿದೆ.

ಇದನ್ನೂ ಓದಿ: ಒಂಟಿ ಮನೆಯಲ್ಲಿ 16 ಮಂದಿ ಲಾಕ್​, ಇಲ್ಲಿದೆ ನೋಡಿ ಫೋಟೋಸ್​




ಕಳೆದ ಬಾರಿ ಸಹ ಬಿಗ್​ಬಾಸ್​ ಆರಂಭವಾಗುವ ಸಮಯದಲ್ಲಿ ಟಿಕ್​ಟಾಕ್​ ಸ್ಟಾರ್​ ಸೋನು ಶ್ರೀನಿವಾಸ್​ ಗೌಡ ಬಿಗ್​ ಬಾಸ್​ ಮನೆಯೊಳಕ್ಕೆ ಹೋಗಲಿದ್ದಾರೆ ಎಂಬ ಮಾತುಗಳು ಕೇಳಿಬಂದಿತ್ತು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳು ನಡೆದಿತ್ತು. ಆದರೆ ಹೋಗಿರಲಿಲ್ಲ, ಈ ಬಾರಿ ಹೋಗಿದ್ದಾರೆ. ಟಿಕ್​ಟಾಕ್​ನಲ್ಲಿ ವೈರಲ್​ ಆಗಿದ್ದ ಸೋನು ಶ್ರೀನಿವಾಸ್​ ಗೌಡ ಆಗಾಗ ಟ್ರೋಲ್​ ಕೂಡ ಆಗುತ್ತಿದ್ದರು. ಹಿಂದೊಮ್ಮೆ ಕನ್ನಡಿಗರು ಬೆಳೆಸಲ್ಲ, ತುಳಿತಾರೆ ಎಂಬ ಮಾತು ಹೇಳಿ ಟ್ರೋಲ್​ ಆಗಿದ್ದರು.

ಇದನ್ನೂ ಓದಿ: ಬಿಗ್​ಬಾಸ್​ ಮನೆಗೆ ಹೋಗಿಲ್ಲ ಕಾಫಿನಾಡು ಚಂದು, ಕಾಯ್ತಿದ್ದ ಫ್ಯಾನ್ಸ್​ಗೆ ನಿರಾಸೆ

ಅನೇಕ ಆಲ್ಬಂ ಸಾಂಗ್​, ಜಾಹೀರಾತುಗಳಲ್ಲಿ ಸೋನು ಶ್ರೀನಿವಾಸ ಗೌಡ ಕಾಣಿಸಿಕೊಂಡಿದ್ದಾರೆ. ಕೆಲ ಕಿರುಚಿತ್ರಗಳಲ್ಲೂ ನಟಿಸಿದ್ದಾರೆ. ಕೆಲ ಕನ್ನಡ ಸಿನಿಮಾಗಳಲ್ಲೂ ನಟಿಸುವ ಚಾನ್ಸ್​ ಪಡೆದುಕೊಂಡಿದ್ದಾರೆ. ಕೆಲ ಬ್ರ್ಯಾಂಡ್​ಗಳ ಪ್ರಮೋಷನ್​ ವಿಡಿಯೋ ಮಾಡಿ ಹಣ ಸಂಪಾದಿಸುತ್ತಿದ್ದಾರೆ ಸೋನು ಶ್ರೀನಿವಾಸ್​ ಗೌಡ.
Published by:Sandhya M
First published: