ಬಿಗ್ ಬಾಸ್ ಸ್ಪರ್ಧಿ ರಾಕೇಶ್ ಅಡಿಗ ಬಿಡುವಿನ ಸಮಯದಲ್ಲಿ ರ್‍ಯಾಪ್ (Rap) ಹಾಡುವ ಮೂಲಕ ತಮ್ಮ ಪ್ರತಿಭೆಯನ್ನು ತೋರಿಸಿದ್ದರು. ಈ ವೇಳೆ ಅವರ ರ್‍ಯಾಪ್ ಕೇಳಿದ ದೊಡ್ಮನೆ ಸ್ಪರ್ಧಿಗಳು ಖುಷಿಯಿಂದ ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದರು. ಆದರೆ ಬಿಗ್ ಬಾಸ್ (Bigg Boss) ಸ್ಪರ್ಧಿ ನಂದು (Nandhini) ಕೂಡ ರ್‍ಯಾಪ್ ಹಾಡು ಹಾಡಿದ್ದಾರೆ. ಇವರ ಹಾಡಿಗೆ ರೂಪೇಶ್ ಶೆಟ್ಟಿ (Ropesh Shetty) ಧ್ವನಿ ಗೂಡಿಸಿದ್ದಾರೆ. ಸದ್ಯ ಈ ಹಾಡನ್ನು ಕಲ್ಸರ್ ಸೂಪರ್ಟಿವಿ (Colors SuperTv) ತನ್ನ ಇನ್ಸ್ಟಾಗ್ರಾಂ (Instagram) ಖಾತೆಯಲ್ಲಿ ಹಂಚಿಕೊಂಡಿದೆ.
ಕಿಚ್ಚನ ನಿರೂಪಣೆಯಲ್ಲಿ ಮೂಡಿಬರುತ್ತಿರುವ ಬಿಗ್ ಬಾಸ್ ಕನ್ನಡ ಓಟಿಟಿ ಭಾರೀ ಕತೂಹಲತೆಯಿಂದ ಸಾಗುತ್ತಿದೆ. ಒಂದೊಂದು ವಿಶೇಷತೆಯುಳ್ಳ ಪ್ರತಿಭಾವಂತ ಸ್ಪರ್ಧಿಗಳು ಬಿಗ್ ಬಾಸ್ ಮನೆಯೊಳಕ್ಕೆ ಇದ್ದಾರೆ. ತಮಾಷೆ, ನಗು, ಅಳು ಹೀಗೆ ಸ್ಪರ್ಧಿಗಳು ದಿನ ಕಳೆಯುತ್ತಿದ್ದಾರೆ. ಅದರಂತೆಯೇ ಬಿಗ್ ಬಾಸ್ ಮನೆಯೊಳಕ್ಕೆ ನಟ ಮತ್ತು ರ್‍ಯಾಪ್ ಹಾಡುಗಾರ ರಾಕೇಶ್ ಅಡಿಗ ತನ್ನ ಕಾಲೇಜು ಜೀವನ ನೆನೆಸಿಕೊಂಡು ಬರೆದಿದ್ದ ರ್‍ಯಾಪ್ ಹಾಡನ್ನು ಬಿಗ್ ಬಾಸ್ ಸ್ಪರ್ಧಿಗಳ ಎದುರು ಹಾಡಿದ್ದಾರೆ. ಈ ಹಾಡು ಕೇಳುತ್ತಿದ್ದಂತೆಯೇ ಎಲ್ಲರೂ ಚೆನ್ನಾಗಿದೆ ಎಂದು ಚಪ್ಪಾಳೆ ತಟ್ಟಿದ್ದಾರೆ.
ಮತ್ತೋರ್ವ ಬಿಗ್ ಬಾಸ್ ಸ್ಪರ್ಧಿ ನಂದಿನಿ ಕೂಡ ನಾಯಿ ಮರಿ ನಾಯಿ ಮರಿ ಹಾಡಿಗೆ ರ್‍ಯಾಪ್ ಮಾಡಿದ್ದಾರೆ. ಇವರೊಂದಿಗೆ ನಟ ರೂಪೇಶ್ ಶೆಟ್ಟಿ ಕೂಡ ಧ್ವನಿಗೂಡಿಸಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗುತ್ತಿದೆ. ಸಾಮಾಜಿಕ ಜಾಲತಾಭದಲ್ಲಿ ನಂದು ಅಭಿಮಾನಿಗಳು ಹೆಚ್ಚುತ್ತಿದ್ದು, ಎಲ್ಲರೂ ನಂದು ಎಂದು ಕಾಮೆಂಟ್ ಬರೆಯುವ ಮೂಲಕ ಪ್ರೋತ್ಸಾಹಿಸುತ್ತಿದ್ದಾರೆ.
View this post on Instagram
View this post on Instagram
ಈಕೆಯ ಪೂರ್ನ ಹೆಸರು ನಂದಿನಿ. ಈಕೆ ಸಹ ಮೂಲತಃ ಬೆಂಗಳೂರಿನವರಾಗಿದ್ದು, ರೋಡೀಸ್ 2022ರ ವಿಜೇತರಾಗಿದ್ದಾರೆ. ಅಲ್ಲದೇ ಜಶ್ವಂತ್ ಮತ್ತು ನಂದಿನಿ ಸದ್ಯ ಡೇಟಿಂಗ್ ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿಯೇ ವಿದ್ಯಾಭ್ಯಾಸ ಮುಗಿಸಿರುವ ಇವರು ಚಿನಕುರಳಿ ನಂದು ಅಂತ ಫೇಮಸ್. 25 ವರ್ಷದ ನಂದಿನಿ ಡ್ಯಾನ್ಸರ್, ಫುಟ್ಬಾಲರ್, ಅಥ್ಲೆಟ್ ಹಾಗೂ ಫಿಟ್ನೆಸ್ ಮಾಡೆಲ್ ಕೂಡ ಹೌದು.
ನಂದಿಗೆ ಟ್ರಾವೆಲ್ ಮಾಡೋದು ಎಂದರೆ ಬಹಳ ಇಷ್ಟವಂತೆ. ಅದರಲ್ಲೂ ಬೈಕ್ ರೈಡ್ ಮಾಡೋದು, ಟ್ರೆಕ್ಕಿಂಗ್ ಮಾಡೋದು ಹವ್ಯಾಸವಂತೆ. ಸದ್ಯ ಬಿಗ್ಬಾಸ್ ಮನೆ ಒಳಗೆ ಈ ಜೋಡಿ ಕಾಲಿಟ್ಟಿದ್ದು, ಏನು ಮೋಡಿ ಮಾಡಲಿದ್ದಾರೆ ಎನ್ನುವುದನ್ನ ನೋಡಬೇಕಿದೆ.
ಫಿಟ್ನೆಸ್ ಮಾಡೆಲ್ ಜಶ್ವಂತ್ ಬೋಪಣ್ಣ
ಜಶ್ವಂತ್ ಬೋಪಣ್ಣ ಮೂಲತಃ ಫಿಟ್‌ನೆಸ್ ಮಾಡೆಲ್ ಮತ್ತು ಸೋಶಿಯಲ್ ಮೀಡಿಯಾ ಸ್ಟಾರ್. ಅವರು Instagram ಮತ್ತು ಇತರ ಸೋಷಿಯಲ್ ನೆಟ್ವರ್ಕಿಂಗ್ನಲ್ಲಿ ಬಹಳ ಜನಪ್ರಿಯರಾಗಿದ್ದಾರೆ. ಜಸ್ವಂತ್ ಅನೇಕ ಟೆಲಿವಿಶನ್ ಬ್ರ್ಯಾಂಡ್ಗಳ ಜೊತೆ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. 23 ವರ್ಷದ ಜಶ್ವಂತ್ ಬೋಪಣ್ಣ ಬೆಂಗಳೂರಿನಲ್ಲಿ ಜನಿಸಿದ್ದು, ಬೆಂಗಳೂರಿನ ದೆಹಲಿ ಪಬ್ಲಿಕ್ ಸ್ಕೂಲ್ ತಮ್ಮ ಶಾಲಾ ಶಿಕ್ಷಣವನ್ನು ಪಡೆದಿದ್ದಾರೆ. ನಂತರ ಬೆಂಗಳೂರಿನ ಕ್ರೈಸ್ಟ್ ವಿಶ್ವವಿದ್ಯಾಲಯದಿಂದ ಪದವಿ ಪಡೆದಿದ್ದಾರೆ.
ಜಶ್ವಂತ್ ತಮ್ಮ ವೃತ್ತಿಜೀವನವನ್ನು ಫಿಟ್ನೆಸ್ ತರಬೇತುದಾರ ಮತ್ತು ಫಿಟ್ನೆಸ್ ಮಾಡೆಲ್ ಆಗಿ ಪ್ರಾರಂಭಿಸಿ, ಇದೀಗ ಪ್ರಸಿದ್ದಿ ಪಡೆದಿದ್ದಾರೆ. ಅನೇಕರು ಇವರ ಬಳಿ ತರಬೇತಿ ಪಡೆಯುತ್ತಿದ್ದು, ಅನೇಕ ಜನರಿಗೆ ಸಹಾಯ ಮಾಡಿದ್ದಾರೆ. ಅಲ್ಲದೇ, ಸರಳವಾದ ಡ್ಯಾನ್ಸ್ ಸ್ಟೆಪ್ಸ್ ಮೂಲಕ ತೂಕ ಇಳಿಸಿಕೊಳ್ಳುವುದು ಹೇಗೆ ಎಂದು ಹೇಳಿಕೊಡುತ್ತಾರೆ.
MTV ರೋಡೀಸ್ ಸೀಸನ್ 18 ರಲ್ಲಿ ಭಾಗವಹಿಸಿದ್ದ ಜಶ್ವಂತ್, ರನ್ನರ್ ಅಪ್ ಆಗಿ ಹೊರ ಹೊಮ್ಮಿದ್ದಾರೆ. ಜಶ್ವಂತ್ ಕೇವಲ ಫಿಟ್ನೆಸ್ ಮಾಡೆಲ್ ಮಾತ್ರವಲ್ಲದೇ, ಅವರು ರಂಗಭೂಮಿ ಕಲಾವಿದರೂ ಹೌದು. ಅವರು ಸೋಷಿಯಲ್ ಮೀಡಿಯಾದಲ್ಲಿ ಬಹಳ ಆಕ್ಟೀವ್ ಇದ್ದು, ಸಾವಿರಾರು ಜನರು ಅವರನ್ನು ಫಾಲೋ ಮಾಡುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ