Viral Video: ಜಿಂಗಲಕ ಲಕ ಗುರೂಜಿಗೆ ಮೇಕಪ್​ ಮಾಡಿಕೊಳ್ಳುವ ಬಯಕೆ! ಹೊಸ ಅವತಾರ ನೋಡಿದ್ರಾ

ನಂಬರ್ ಅಂದ್ರೆ ನಾನು​, ನಾನು ಅಂದ್ರೆ ನಂಬರ್ ಎಂದು ಭವಿಷ್ಯ ಹೇಳುವ ಆರ್ಯವರ್ಧನ್​ ಗುರೂಜಿ ಬಿಗ್​ ಬಾಸ್​ ಮನೆಯಲ್ಲಿ ಎಲ್ಲರೊಂದಿಗೆ ಬೆರೆತುಕೊಂಡು ಭಿನ್ನವಾಗಿ ಆಡುತ್ತಿದ್ದಾರೆ. ಅದರಲ್ಲೂ ಆಲೋಚಿಸಿ ಹೆಜ್ಜೆ ಇಡುತ್ತಿದ್ದಾರೆ. ಈ ಬಾರಿಯ ಟ್ರೋಪಿಯನ್ನು ನಾನೇ ಗೆಲ್ಲಬೇಕು ಎಂಬ ಮನದಾಸೆಯಲ್ಲಿ ಗುರೂಜಿ ನೋಡಿಕೊಂಡು ಹೆಜ್ಜೆ ಹಾಕುತ್ತಿದ್ದಾರೆ.

ಜಯಶ್ರೀ - ಆರ್ಯವರ್ಧನ್​ ಗುರೂಜಿ

ಜಯಶ್ರೀ - ಆರ್ಯವರ್ಧನ್​ ಗುರೂಜಿ

  • Share this:
    ಬಾದ್​ ಶಾ ಕಿಚ್ಚನ (Sudeep)ನಿರೂಪಣೆಯಲ್ಲಿ ಮೂಡಿಬರುತ್ತಿರುವ ಬಿಗ್​ ಬಾಸ್ (Bigg Boss)​ ಕಾರ್ಯಕ್ರಮ ಭಾರೀ ಕುತೂಹಲತೆಯಿಂದ ಸಾಗುತ್ತಿದೆ. ಆದರೆ ಈ ಬಾರಿ ಹೊಸ ಪ್ರಯತ್ನವೆಂಬಂತೆ ಓಟಿಟಿಯಲ್ಲಿ (OTT) ಕಾರ್ಯಕ್ರಮ ಪ್ರಸಾರವಾಗುತ್ತಿದೆ. 16 ಸ್ಪರ್ಧಿಗಳು ಮನೆಯೊಳಗಿದ್ದು, ಒಬ್ಬರಿಗಿಂತ ಮತ್ತೊಬ್ಬರು ವಿಭಿನ್ನವಾಗಿ ಕಾಣಿಸಿಕೊಳ್ಳಲು ಬಯಸುತ್ತಿದ್ದಾರೆ. ವಾರದ ಎಲಿಮಿನೇಟ್​ ಪ್ರಕ್ರೀಯೆ ಹತ್ತಿರಬರುತ್ತಿತ್ತು. ಪ್ರತಿ ಸ್ಪರ್ಧಿಗಳ ಚಲನವಲನಗಳು ಭಿನ್ನವಾಗಿದೆ. ಅದರಂತೆ ಬಿಗ್​ ಬಾಸ್​ ಮನೆ ಸೇರಿರುವ ಆರ್ಯವರ್ಧನ್​ ಗುರೂಜಿ (Aryaverdhan) ಕೂಡ ಉಳಿದ ಸ್ಪರ್ಧಿಗಳಿಗೆ ಪ್ರತಿಸ್ಪರ್ಧೆ ನೀಡುತ್ತಿದ್ದಾರೆ. ಇತ್ತೀಚೆಗೆ ದೆವ್ವಕ್ಕೆ ಲೈನ್​ ಹೊಡೆಯುವ ಮೂಲಕ ವೀಕ್ಷಕರನ್ನು ನಗಿಸಿದ್ದ ಈ ಗುರೂಜಿ ಇದೀಗ ಮುಖಕ್ಕೆ ಮೇಕಪ್​ (Makeup), ಕಣ್ಣಿಗೆ ಕಾಜಲ್​, ತುಟಿಗೆ ಟಿಪ್​ಸ್ಟಿಕ್​ ಹಾಕುವ ಮೂಲಕ ಭಿನ್ನವಾಗಿ ಕಾಣಲು ಬಯಸಿದ್ದಾರೆ. ಸದ್ಯ ಅವರು ಮೇಕಪ್​ ಮಾಡಿರುವ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral)​ ಆಗುತ್ತಿದೆ.

    ನಂಬರ್ ಅಂದ್ರೆ ನಾನು​, ನಾನು ಅಂದ್ರೆ ನಂಬರ್ ಎಂದು ಭವಿಷ್ಯ ಹೇಳುವ ಆರ್ಯವರ್ಧನ್​ ಗುರೂಜಿ ಬಿಗ್​ ಬಾಸ್​ ಮನೆಯಲ್ಲಿ ಎಲ್ಲರೊಂದಿಗೆ ಬೆರೆತುಕೊಂಡು ಭಿನ್ನವಾಗಿ ಆಡುತ್ತಿದ್ದಾರೆ. ಅದರಲ್ಲೂ ಆಲೋಚಿಸಿ ಹೆಜ್ಜೆ ಇಡುತ್ತಿದ್ದಾರೆ. ಈ ಬಾರಿಯ ಟ್ರೋಪಿಯನ್ನು ನಾನೇ ಗೆಲ್ಲಬೇಕು ಎಂಬ ಮನದಾಸೆಯಲ್ಲಿ ಗುರೂಜಿ ನೋಡಿಕೊಂಡು ಹೆಜ್ಜೆ ಹಾಕುತ್ತಿದ್ದಾರೆ. ಹೀಗೆ ಬಿಗ್​ ಬಾಸ್​ ಮನೆಯ ಹೊರಾಂಗಣದಲ್ಲಿರುವಾಗ ಮೇಕಪ್​ ಹಚ್ಚಿಕೊಳ್ಳುವ ಬಯಕೆಯನ್ನು ತೋರ್ಪಡಿಸಿಕೊಂಡಿದ್ದಾರೆ. ಈ ವೇಳೆ ಹಿರಿಯ ಕಲಾವಿದೆ ಮಾರಿಮುತ್ತು ಅವರ ಮೊಮ್ಮಗಳು ಜಯಶ್ರೀ ಅವರು ಆರ್ಯವರ್ಧನ್​ ಗುರೂಜಿಗೆ ಮೇಕಪ್​ ಮಾಡಿದ್ದಾರೆ.

    ಜಯಶ್ರೀ ಅವರ ಸಹಾಯದಿಂದ ಕಣ್ಣಿಗೆ ಕಾಜಲ್​, ಮುಖಕ್ಕೆ ಮೇಕಪ್​, ತುಟಿಗೆ ಲಿಪ್​ಸ್ಟಿಕ್​​ ಹಾಕಿಕೊಂಡಿದ್ದಾರೆ. ಬಳಿಕ ತುಟಿಗೆ ಹಚ್ಚಿರುವ ಮೇಕಪ್​ ಕೊಂಚ ಜಾಸ್ತಿಯಾದಂತೆ ಗುರೂಜಿಗೆ ಕಂಡಿದೆ. ಕೂಡಲೇ ಉಜ್ಜಲು ಪ್ರಯತ್ನಿಸಿದ್ದಾರೆ. ಈ ವೇಳೆ ಹತ್ತಿರವಿದ್ದ ಸ್ಪರ್ಧಿ ಸೋಮಣ್ಣ ಮಾಚಿವಾಡ ಅವರು ಗುರೂಜಿಗೆ ಹಾಗೆಯೇ ಇರಲಿ ತೆಗೆಯಬೇಡಿ ಎಂದು ಹೇಳಿದ್ದಾರೆ. ಕನ್ನಡಿ ನೋಡಿದ ಗುರೂಜಿ ಜಯಶ್ರೀ ಅವರ ಬಳಿ, ‘‘ಇಷ್ಟೇನಾ ಮೇಕಪ್​ ಕರ್ರಗೆ ಕಾಣಿಸ್ತಾ ಇದ್ದೇನೆ, ಬೆಳ್ಳಗೆ ಮಾಡಿ‘‘ ಎಂದಿದ್ದಾರೆ.

    ಕಲರ್ಸ್​ ಸೂಪರ್​ಟಿವಿ ಈ ವಿಡಿಯೋವನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಅನೇಕರು ಈ ವಿಡಿಯೋ ಕಂಡು ಕಾಮೆಂಟ್​ ಮಾಡಿದ್ದಾರೆ.

    ಇದನ್ನೂ ಓದಿ: Tourist Spots: ಕೆಲಸದ ಒತ್ತಡದಿಂದ ಬ್ರೇಕ್​ ಬೇಕಾ? ಹಾಗಾದ್ರೆ ಈ ಪ್ಲೇಸ್​ಗಳಿಗೆ ಟ್ರಿಪ್ ಹೋಗಿ

    ವಿನ್ನರ್​ ಯಾರು ಅಂತ ಭವಿಷ್ಯ ನುಡಿದಿದ್ರು!

    ಬಿಗ್​ ಬಾಸ್​ ವೇದಿಕೆ ಮೂಲಕ ದೊಡ್ಮನೆಗೆ ಪ್ರವೇಶ ಪಡೆದ ಆರ್ಯವರ್ಧನ್​ ಗುರೂಜಿ, ಬಿಗ್​ ಬಾಸ್​ ಒಟಿಟಿ ವೇದಿಕೆಗೆ ಮೇಲೆ ತಮ್ಮ ನಂಬರ್ ಭವಿಷ್ಯ ಹೇಳಿದ್ದರು. ಈ ಬಾರಿ ಯಾರು ಬಿಗ್​ ಬಾಸ್​ ವಿನ್​ ಆಗಿಲಿದ್ದಾರೆ ಎಂದು ಹೇಳಿದ್ದರು. ಆರ್ಯವರ್ಧನ್​ ಗುರೂಜಿ ಪ್ರಕಾರ 3, 5, 6 ನಂಬರ್‌ನ ಸ್ಪರ್ಧಿಗಳು ಈ ಸಲ ಬಿಗ್​ ಬಾಸ್​ ಒಟಿಟಿ ವಿನ್ನರ್ ಆಗುತ್ತಾರೆ ಎಂದು ಭವಿಷ್ಯ ನುಡಿದಿದ್ದರು.






    ಇದನ್ನೂ ಓದಿ: Gaalipata 2: ಭಟ್ರು ಜೊತೆ ಗಣಿ ಬಿಟ್ಟ ಗಾಳಿಪಟ-2 ಸೂಪರ್​ ಹಿಟ್​; ಮೊದಲ ದಿನವೇ ಬಾಕ್ಸ್​ ಆಫೀಸ್​ನಲ್ಲಿ ಭರ್ಜರಿ ಕಲೆಕ್ಷನ್​

    ಜಿಂಗಲಕಾ ಲಕಾ ಗುರೂಜಿ ಅಂತಾನೇ ಫೇಮಸ್​

    ಐಪಿಎಲ್​ ಬಂದ ತಕ್ಷಣ ಆರ್ಯವರ್ಧನ್​ ಗುರೂಜಿ ಅವರನ್ನು ಟಿವಿ ಮಾಧ್ಯಮ ಕರೆಸಿಕೊಳ್ಳುತ್ತಿತ್ತು. ಇದರ ಮೂಲಕ ಭವಿಷ್ಯ ಕೇಳುತ್ತಿದ್ರು. ಅದರಲ್ಲೂ ಆರ್​ಸಿಬಿ ಟ್ರೋಪಿ ಗೆಲ್ಲುತ್ತಾ ಎಂಬ ಪ್ರಶ್ನೆಗೆ ಹಲವಾರು ಭಾರಿ ಗುರೂಜಿ ಉತ್ತರಿಸಿದ್ರು. ಹೀಗೆ ಆರ್ಯವರ್ಧನ್​ ಗುರೂಜಿ ಫೇಮಸ್​ ಆಗಿದ್ದರು.

    ವೇಗವಾಗಿ ಮಾತನಾಡುವ ಆರ್ಯವರ್ಧನ್​ ಗುರೂಜಿ ಸಾಕಷ್ಟು ಜನರಿಗೆ ಭವಿಷ್ಯ ನುಡಿದಿದ್ದಾರೆ. ಹಲವಾರು ಜನರು ಇವರ ಮಾತು ಮತ್ತು ಭವಿಷ್ಯವನ್ನು ಕೇಳಿದ್ದಾರೆ. ಇದರ ಜಿಂಗಲಕಾ ಲಕಾ ಎಂಬ ಡೈಲಾಗ್​ ಇಂದಿಗೂ ಫೇಮಸ್​ ಆಗಿದೆ. ಟ್ರೋಲ್​ ಪೇಜ್​ಗಳು ಆಗಾಗ ಈ ತುಣುಕನ್ನು ವೈರಲ್​ ಮಾಡುತ್ತಿರುತ್ತವೆ.
    Published by:Harshith AS
    First published: