Bigg Boss OTT: ಬಿಗ್​ಬಾಸ್​ ​ಮನೆ ಒಳಗೆ ರೋಡೀಸ್​ ಜೋಡಿ, ಜಶ್ವಂತ್ - ನಂದು ಮಾಡ್ತಾರಾ ಮೋಡಿ?

Bigg Boss Kannada OTT: Instagram ​ನಲ್ಲಿ ಬಹಳ ಜನಪ್ರಿಯರಾಗಿದ್ದಾರೆ. ಜಸ್ವಂತ್ ಅನೇಕ ಟೆಲಿವಿಶನ್ ಬ್ರ್ಯಾಂಡ್​ಗಳ ಜೊತೆ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

ಜಶ್ವಂತ್ ಮತ್ತು ನಂದು

ಜಶ್ವಂತ್ ಮತ್ತು ನಂದು

  • Share this:
ಬಿಗ್ ಬಾಸ್​ ಒಟಿಟಿ’ (Bigg Boss OTT) ಭರ್ಜರಿಯಾಗಿ ಆರಂಭವಾಗಿದ್ದು, ವಿಭಿನ್ನ ಪ್ರತಿಭೆಗಳು ಮನೆಯೊಳಗೆ ಲಾಕ್​ ಆಗುತ್ತಿದ್ದಾರೆ. ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ (Big Boss OTT) ಈ ಬಾರಿ ಒಟಿಟಿ ಪ್ಲಾಟ್​ಫಾರ್ಮ್​ನಲ್ಲಿ ಪ್ರಸಾರವಾಗಲಿದೆ. ಈ ರಿಯಾಲಿಟಿ ಶೋಗೆ ಈಗಾಗಲೇ ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದಾರೆ. ಅದರಂತೆ ಬಿಗ್ ಬಾಸ್ ಒಟಿಟಿಯಲ್ಲಿ ಕಾಣಿಸಿಕೊಳ್ಳುವ ಸ್ಪರ್ಧಿಗಳು ಯಾರೆಲ್ಲಾ ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ. ಈ ಕಾರ್ಯಕ್ರಮದ 15ನೇ ಸ್ಪರ್ಧಿಯಾಗಿ ಜಶ್ವಂತ್ ಬೋಪಣ್ಣ ಮತ್ತು ನಂದಿನಿ ಮನೆ ಒಳಗೆ ಹೋಗಿದ್ದಾರೆ.

ಫಿಟ್ನೆಸ್​ ಮಾಡೆಲ್​ ಜಶ್ವಂತ್ ಬೋಪಣ್ಣ

ಜಶ್ವಂತ್ ಬೋಪಣ್ಣ ಮೂಲತಃ ಫಿಟ್‌ನೆಸ್ ಮಾಡೆಲ್ ಮತ್ತು ಸೋಶಿಯಲ್ ಮೀಡಿಯಾ ಸ್ಟಾರ್. ಅವರು Instagram ಮತ್ತು ಇತರ ಸೋಷಿಯಲ್​ ನೆಟ್‌ವರ್ಕಿಂಗ್​ನಲ್ಲಿ ಬಹಳ ಜನಪ್ರಿಯರಾಗಿದ್ದಾರೆ. ಜಸ್ವಂತ್ ಅನೇಕ ಟೆಲಿವಿಶನ್ ಬ್ರ್ಯಾಂಡ್​ಗಳ ಜೊತೆ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. 23 ವರ್ಷದ ಜಶ್ವಂತ್ ಬೋಪಣ್ಣ ಬೆಂಗಳೂರಿನಲ್ಲಿ ಜನಿಸಿದ್ದು, ಬೆಂಗಳೂರಿನ ದೆಹಲಿ ಪಬ್ಲಿಕ್ ಸ್ಕೂಲ್ ತಮ್ಮ ಶಾಲಾ ಶಿಕ್ಷಣವನ್ನು ಪಡೆದಿದ್ದಾರೆ. ನಂತರ ಬೆಂಗಳೂರಿನ ಕ್ರೈಸ್ಟ್ ವಿಶ್ವವಿದ್ಯಾಲಯದಿಂದ ಪದವಿ ಪಡೆದಿದ್ದಾರೆ.

ಜಶ್ವಂತ್ ತಮ್ಮ ವೃತ್ತಿಜೀವನವನ್ನು ಫಿಟ್ನೆಸ್ ತರಬೇತುದಾರ ಮತ್ತು ಫಿಟ್ನೆಸ್ ಮಾಡೆಲ್ ಆಗಿ ಪ್ರಾರಂಭಿಸಿ, ಇದೀಗ ಪ್ರಸಿದ್ದಿ ಪಡೆದಿದ್ದಾರೆ. ಅನೇಕರು ಇವರ ಬಳಿ ತರಬೇತಿ ಪಡೆಯುತ್ತಿದ್ದು, ಅನೇಕ ಜನರಿಗೆ ಸಹಾಯ ಮಾಡಿದ್ದಾರೆ. ಅಲ್ಲದೇ, ಸರಳವಾದ ಡ್ಯಾನ್ಸ್ ಸ್ಟೆಪ್ಸ್ ಮೂಲಕ ತೂಕ ಇಳಿಸಿಕೊಳ್ಳುವುದು ಹೇಗೆ ಎಂದು ಹೇಳಿಕೊಡುತ್ತಾರೆ.

MTV ರೋಡೀಸ್ ಸೀಸನ್ 18 ರಲ್ಲಿ ಭಾಗವಹಿಸಿದ್ದ ಜಶ್ವಂತ್, ರನ್ನರ್ ಅಪ್​ ಆಗಿ ಹೊರ ಹೊಮ್ಮಿದ್ದಾರೆ.  ಜಶ್ವಂತ್ ಕೇವಲ ಫಿಟ್ನೆಸ್​ ಮಾಡೆಲ್​ ಮಾತ್ರವಲ್ಲದೇ, ಅವರು ರಂಗಭೂಮಿ ಕಲಾವಿದರೂ ಹೌದು. ಅವರು ಸೋಷಿಯಲ್ ಮೀಡಿಯಾದಲ್ಲಿ ಬಹಳ ಆಕ್ಟೀವ್ ಇದ್ದು, ಸಾವಿರಾರು ಜನರು ಅವರನ್ನು ಫಾಲೋ ಮಾಡುತ್ತಿದ್ದಾರೆ.
View this post on Instagram


A post shared by Nandu (@nandu_ofl)


ಚಿನಕುರಳಿ ನಂದು ಬಿಗ್​ಬಾಸ್ ಮನೆಗೆ ಎಂಟ್ರಿ

ಇನ್ನು ಮತ್ತೊಬ್ಬ ಸ್ಪರ್ಧಿ ನಂದಿನಿ ಸಹ ಮೂಲತಃ ಬೆಂಗಳೂರಿನವರಾಗಿದ್ದು, ರೋಡೀಸ್​ 2022ರ ವಿಜೇತರಾಗಿದ್ದಾರೆ. ಅಲ್ಲದೇ ಜಶ್ವಂತ್ ಮತ್ತು ನಂದಿನಿ ಸದ್ಯ ಡೇಟಿಂಗ್ ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿಯೇ ವಿದ್ಯಾಭ್ಯಾಸ ಮುಗಿಸಿರುವ ಇವರು ಚಿನಕುರಳಿ ನಂದು ಅಂತ ಫೇಮಸ್​. 25 ವರ್ಷದ ನಂದಿನಿ ಡ್ಯಾನ್ಸರ್​, ಫುಟ್​ಬಾಲರ್, ಅಥ್ಲೆಟ್​ ಹಾಗೂ ಫಿಟ್​ನೆಸ್​ ಮಾಡೆಲ್​ ಕೂಡ ಹೌದು.

ಇದನ್ನೂ ಓದಿ: ಮಲೆನಾಡ ಸುಂದರಿ ಸ್ಫೂರ್ತಿಗೆ ಸಿಗುತ್ತಾ ಬಿಗ್​ಬಾಸ್​ ಮನೆ ಒಳಗೆ ಕೀರ್ತಿ? ನಟಿಯ ಲೈಫ್​ ಜರ್ನಿ ಇಲ್ಲಿದೆ
View this post on Instagram


A post shared by Nandu (@nandu_ofl)


ನಂದಿಗೆ ಟ್ರಾವೆಲ್​ ಮಾಡೋದು ಎಂದರೆ ಬಹಳ ಇಷ್ಟವಂತೆ. ಅದರಲ್ಲೂ ಬೈಕ್​ ರೈಡ್​ ಮಾಡೋದು, ಟ್ರೆಕ್ಕಿಂಗ್ ಮಾಡೋದು ಹವ್ಯಾಸವಂತೆ. ಸದ್ಯ ಬಿಗ್​ಬಾಸ್​ ಮನೆ ಒಳಗೆ ಈ ಜೋಡಿ ಕಾಲಿಟ್ಟಿದ್ದು, ಏನು ಮೋಡಿ ಮಾಡಲಿದ್ದಾರೆ ಎನ್ನುವುದನ್ನ ನೋಡಬೇಕಿದೆ.

ಇದನ್ನೂ ಓದಿ: ನಟನೆ, ರಾಜಕೀಯದಿಂದ ಈಗ ಬಿಗ್​ಬಾಸ್​ಗೆ ಬಂದ ಅರ್ಜುನ್ - ಟ್ರೋಫಿ ಗೆಲ್ತಾರಾ ನಟ?

ಪ್ರತಿ ಬಾರಿಯೂ ಬಿಗ್​ ಬಾಸ್​ ಮನೆ ಅದ್ದೂರಿಯಾಗಿರುತ್ತದೆ. ಹಲವು ವಿಶೇಷತೆಗಳಿಂದ ಈ ಮನೆ ಕೂಡಿರುತ್ತದೆ. ಐಷಾರಾಮಿ ಮನೆಯಲ್ಲಿ ಸ್ಪರ್ಧಿಗಳು ಈ ಬಾರಿ 6 ವಾರಗಳ ಕಾಲ ಇರುತ್ತಾರೆ. ಹಾಗಾದರೆ ಈ ಬಾರಿ ಮನೆ ಹೇಗಿರಲಿದೆ ಎಂಬ ಕುತೂಹಲಕ್ಕೆ ಇದೀಗ ತೆರೆಬಿದ್ದಿದೆ.  ಈ ಬಾರಿ ಆರ್ಯವರ್ಧನ್​ ಗುರೂಜಿ, ಸೋನು ಗೌಡ, ಸ್ಫೂರ್ತಿ ಗೌಡ, ನಂದು-ಜಸ್ವಂತ್​, ಚೈತ್ರಾ ಹಳ್ಳಿಕೇರಿ , ಅಕ್ಷತಾ ಕುಕ್ಕಿ, ಕಿರಣ್ ಯೋಗೇಶ್ವರ್, ಜಯಶ್ರೀ ಆರಾಧ್ಯ, ಲೋಕೇಶ್, ಸೋಮಣ್ಣ, ರಾಕೇಶ್ ಅಡಿಗ, ಸಾನ್ಯಾ, ಉದಯ್ ಸೂರ್ಯ ಮತ್ತು ರೂಪೇಶ್​ ಶೆಟ್ಟಿ ಬಿಗ್​ಬಾಸ್​ ಮನೆಗೆ ಎಂಟ್ರಿಯಾಗಿದ್ದಾರೆ.
Published by:Sandhya M
First published: