Arjun Ramesh: ನಟನೆ, ರಾಜಕೀಯದಿಂದ ಈಗ ಬಿಗ್​ಬಾಸ್​ಗೆ ಬಂದ ಅರ್ಜುನ್ - ಟ್ರೋಫಿ ಗೆಲ್ತಾರಾ ನಟ?

Bigg Boss Kannada OTT: ಅರ್ಜುನ್​ ಪ್ರಕಾರ ನಟನೆಯಿಂದ ಸಿಕ್ಕ ಜನಪ್ರಿಯತೆಯನ್ನು ಸಾಮಾಜಿಕ ಕೆಲಸದಲ್ಲಿ ಬಳಸಿಕೊಳ್ಳಬೇಕು, ಹಾಗಾಗಿ ಅವರಿಗೆ ರಾಜಕೀಯದಲ್ಲಿ ಸಹ ಆಸಕ್ತಿ ಇದ್ದು, ಪುರಸಭೆ ಸದಸ್ಯರಾಗಿದ್ದಾರೆ. 

ಅರ್ಜುನ್ ರಮೇಶ್​

ಅರ್ಜುನ್ ರಮೇಶ್​

  • Share this:
ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ (Big Boss OTT) ಈ ಬಾರಿ ಓಟಿಟಿ ಪ್ಲಾಟ್​ಫಾರ್ಮ್​ನಲ್ಲಿ ಪ್ರಸಾರವಾಗ್ತಿದೆ. ಈ ರಿಯಾಲಿಟಿ ಶೋಗೆ (Reality Show)  ಈಗಾಗಲೇ ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದಾರೆ. ಅದರಂತೆ ಬಿಗ್ ಬಾಸ್ ಓಟಿಟಿಯಲ್ಲಿ ಕಾಣಿಸಿಕೊಳ್ಳುವ ಸ್ಪರ್ಧಿಗಳು ಯಾರೆಲ್ಲಾ ಎಂಬ ಕುತೂಹಲಕ್ಕೆ  ತೆರೆ ಬಿದ್ದಿದೆ. 13ನೇ ಸ್ಪರ್ಧಿಯಾಗಿ ಕಿರುತೆರೆ ನಟ ಅರ್ಜುನ್ ರಮೇಶ್​ (Arjun Ramesh)  ಎಂಟ್ರಿಯಾಗಿದ್ದು, ಧಾರಾವಾಹಿ ಪ್ರಿಯರಿಗೆ ಇವರೆಂದರೆ ಬಹಳ ಅಚ್ಚುಮೆಚ್ಚು. ಈ ನಟನ ಜರ್ನಿ ಬಗ್ಗೆ ಇಲ್ಲಿದೆ ಕೆಲ ಮಾಹಿತಿ.

ಕಿರುತೆರೆಯಲ್ಲಿ ಬ್ಯುಸಿ ಇರುವ ನಟ

ಇಂತಿ ನಿಮ್ಮ ಆಶಾ ಎನ್ನುವ ಪ್ರಸಿದ್ದ ಧಾರಾವಾಹಿಯಲ್ಲಿ ಇತ್ತೀಚೆಗೆ  ಕಾಣಿಸಿಕೊಂಡಿದ್ದ ಅರ್ಜುನ್ ಅವರು ನಟ ಮಾತ್ರವಲ್ಲದೇ, ರಾಜಕಾರಣಿಯೂ ಹೌದು. ಇನ್ನು ಇವರು ಮಹಾಕಾಳಿ, ಶನಿ ಧಾರಾವಾಹಿಯಲ್ಲಿ ಶಿವನ ಪಾತ್ರ ಮಾಡಿ ಪ್ರಖ್ಯಾತಿ ಗಳಿಸಿದ್ದು, ತಮ್ಮ ನಟನೆಯ ಮೂಲಕ ಜನರಿಗೆ ಹತ್ತಿರವಾಗಿದ್ದಾರೆ. ಮತ್ತೊಂದು ಮುಖ್ಯ ವಿಚಾರ ಎಂದರೆ ಈ ಮೊದಲ ನಟನಿಗೆ ಶಿವನ ಮೇಲೆ ಹೆಚ್ಚು ನಂಬಿಕೆ ಇರಲಿಲ್ಲವಂತೆ. ಆದರೆ ಶಿವನ ಪಾತ್ರ ಅವರಿಗೆ ಹೆಸರು ತಂದು ಕೊಟ್ಟಿದೆ. ಅಷ್ಟೇ ಅಲ್ಲದೇ ಧಾರವಾಹಿ ನೋಡುವ ಅದೆಷ್ಟೋ ಜನರು ಅರ್ಜುನ್‌ ಅವರ ಕಾಲಿಗೆ ಬೀಳಲು ಬರುತ್ತಿದ್ದರಂತೆ. ಹಾಗಾಗಿ ಶಿವನ ಪಾತ್ರ ಮಾಡಿದ ನಂತರ, ಅದರ ಮಹತ್ವ ಅರಿತು  ಅರ್ಜುನ್ ಶಿವನ ಭಕ್ತರಾದರಂತೆ.
ಕನ್ನಡದ ಅತಿ ಪ್ರಸಿದ್ದ ಧಾರಾವಾಹಿ ಅಗ್ನಿಸಾಕ್ಷಿಯಲ್ಲಿಯೂ ಸಹ ಅರ್ಜುನ್ ಅವರು ಶೌರ್ಯ ಎಂಬ ಪಾತ್ರ ಮಾಡಿ ಜನರ ಗಮನ ಸೆಳೆದಿದ್ದರು. ನಂತರ ನಾಗಿಣಿ ಧಾರಾವಾಹಿಯಲ್ಲಿ ಅರ್ಜುನ್ ಅವರು ರುದ್ರ ಪಾತ್ರ ಮಾಡಿ ಕಿರುತೆರೆಯಲ್ಲಿ ಹೆಸರುಗಳಿಸಿದ್ದಾರೆ. ಇನ್ನು ಅರ್ಜುನ್ ಕಿರುತೆರೆ ಮಾತ್ರವಲ್ಲದೇ ಹಿರಿತೆರೆಯಲ್ಲಿ ಸಹ ನಟಿಸಿದ್ದಾರೆ.

ಇದನ್ನೂ ಓದಿ: ಖುಷಿ ಖುಷಿಯಾಗಿ ಬಿಗ್​ ಬಾಸ್​ ಮನೆಗೆ ಚೈತ್ರ ಹಳ್ಳಿಕೇರಿ ಎಂಟ್ರಿ
ನಟ ಮಾತ್ರವಲ್ಲದೇ ರಾಜಕಾರಣಿಯೂ ಹೌದು

ಸ್ಯಾಂಡಲ್​ವುಡ್​ನಲ್ಲಿ ಡೈನಾಮಿಕ್ ಪ್ರಿನ್ಸ್  ಪ್ರಜ್ವಲ್ ದೇವರಾಜ್ ಅಭಿನಯದ ಜೆಂಟಲ್‌ಮ್ಯಾನ್ ಸಿನಿಮಾದಲ್ಲಿ ಅರ್ಜುನ್ ನಟಿಸಿದ್ದರು. ಅಲ್ಲದೇ, ಪ್ರಿಯಾಂಕಾ ಚಿಂಚೋಳಿ ನಟನೆಯ 'ಕೌಟಿಲ್ಯ' ಚಿತ್ರದಲ್ಲಿ ಅರ್ಜುನ್ ರಮೇಶ್ ಹೀರೋ ಆಗಿ ನಟಿಸುತ್ತಿದ್ದಾರೆ. ಇನ್ನು ಅರ್ಜುನ್​ ಪ್ರಕಾರ ನಟನೆಯಿಂದ ಸಿಕ್ಕ ಜನಪ್ರಿಯತೆಯನ್ನು ಸಾಮಾಜಿಕ ಕೆಲಸದಲ್ಲಿ ಬಳಸಿಕೊಳ್ಳಬೇಕು, ಹಾಗಾಗಿ ಅವರಿಗೆ ರಾಜಕೀಯದಲ್ಲಿ ಸಹ ಆಸಕ್ತಿ ಇದ್ದು, ಪುರಸಭೆ ಸದಸ್ಯರಾಗಿದ್ದಾರೆ.

ಇದನ್ನೂ ಓದಿ: ಮಲೆನಾಡ ಸುಂದರಿ ಸ್ಫೂರ್ತಿಗೆ ಸಿಗುತ್ತಾ ಬಿಗ್​ಬಾಸ್​ ಮನೆ ಒಳಗೆ ಕೀರ್ತಿ? ನಟಿಯ ಲೈಫ್​ ಜರ್ನಿ ಇಲ್ಲಿದೆ

ಪ್ರತಿ ಬಾರಿಯೂ ಬಿಗ್​ ಬಾಸ್​ ಮನೆ ಅದ್ದೂರಿಯಾಗಿರುತ್ತದೆ. ಹಲವು ವಿಶೇಷತೆಗಳಿಂದ ಈ ಮನೆ ಕೂಡಿರುತ್ತದೆ. ಐಷಾರಾಮಿ ಮನೆಯಲ್ಲಿ ಸ್ಪರ್ಧಿಗಳು ಈ ಬಾರಿ 6 ವಾರಗಳ ಕಾಲ ಇರುತ್ತಾರೆ. ಹಾಗಾದರೆ ಈ ಬಾರಿ ಮನೆ ಹೇಗಿರಲಿದೆ ಎಂಬ ಕುತೂಹಲಕ್ಕೆ ಇದೀಗ ತೆರೆಬಿದ್ದಿದೆ.  ಈ ಬಾರಿ ಆರ್ಯವರ್ಧನ್​ ಗುರೂಜಿ, ಸೋನು ಗೌಡ, ಸ್ಫೂರ್ತಿ ಗೌಡ, ನಂದು-ಜಸ್ವಂತ್​, ಚೈತ್ರಾ ಹಳ್ಳಿಕೇರಿ , ಅಕ್ಷತಾ ಕುಕ್ಕಿ, ಕಿರಣ್ ಯೋಗೇಶ್ವರ್, ಜಯಶ್ರೀ ಆರಾಧ್ಯ, ಲೋಕೇಶ್, ಸೋಮಣ್ಣ, ರಾಕೇಶ್ ಅಡಿಗ, ಸಾನ್ಯಾ, ಉದಯ್ ಸೂರ್ಯ ಮತ್ತು ರೂಪೇಶ್​ ಶೆಟ್ಟಿ ಬಿಗ್​ಬಾಸ್​ ಮನೆಗೆ ಎಂಟ್ರಿಯಾಗಿದ್ದಾರೆ.
Published by:Sandhya M
First published: