ಕಲರ್ಸ್ ಕನ್ನಡ (colors Kannada) ವಾಹಿನಿ ವಿಭಿನ್ನ ಧಾರಾವಾಹಿಗಳ (serial) ಮೂಲಕ ಜನರ ಮನಗೆದ್ದಿದೆ. ಕೇವಲ ಧಾರಾವಾಹಿ ಮಾತ್ರವಲ್ಲದೆ, ರಿಯಾಲಿಟಿ ಶೋಗಳು ಸಹ ಜನರಿಗೆ ಬಹಳ ಇಷ್ಟವಾಗಿದೆ. ರಾಜ – ರಾಣಿ, ಗಿಚ್ಚ ಗಿಲಿಗಿಲಿ, ನಮ್ಮಮ್ಮ ಸೂಪರ್ ಸ್ಟಾರ್ ಹೀಗೆ ವಿಭಿನ್ನ ಕಾರ್ಯಕ್ರಮಗಳನ್ನು ಜನರಿಗೆ ನೀಡಿದೆ. ಆದರೆ ಮತ್ತೊಂದು ವಿಶೆಷ ಕಾರ್ಯಕ್ರಮ ಬಿಗ್ಬಾಸ್ (Bigg Boss) ಯಾವಾಗ ಆರಂಭವಾಗುತ್ತದೆ ಎಂಬುದಕ್ಕೆ ಮಾತ್ರ ಇದುವರೆಗೆ ಉತ್ತರ ಸಿಕ್ಕಿಲ್ಲ. ಆದರೆ ಇದೀಗ ಹೊಸ ಅಪ್ಡೇಟ್ ಬಂದಿದೆ.
ಬಿಗ್ಬಾಸ್ ಓಟಿಟಿ ಆರಂಭಿಸಲಿದೆಯಂತೆ ವಾಹಿನಿ
ಭಾರತೀಯ ಕಿರುತೆರೆಯಲ್ಲಿ ಬಿಗ್ಬಾಸ್ ಹವಾ ಜೋರಾಗಿದೆ. ಈಗಾಗಲೇ ಹಿಂದಿಯಲ್ಲಿ ಬಹಳಷ್ಟು ಸೀಸನ್ ಆಗಿ ಹೋಗಿದೆ, ತೆಲುಗಿನಲ್ಲಿ ಸಹ ಒಳ್ಳೆಯ ಕ್ರೇಜ್ ಇದೆ. ಇದೀಗ ಕನ್ನಡದಲ್ಲಿ ಬಿಗ್ಬಾಸ್ 9 ಸದ್ಯದಲ್ಲಿಯೇ ಪ್ರಾರಂಭವಾಗುತ್ತದೆ ಎಂಬ ಮಾತು ಕೇಳಿ ಬಂದಿದೆ. ಕನ್ನಡದಲ್ಲಿ ನಟ ಕಿಚ್ಚ ಸುದೀಪ್ ನಿರೂಪಣೆಯ ಬಿಗ್ಬಾಸ್ ರಿಯಾಲಿಟಿ ಶೋ ಕಾರ್ಯಕ್ರಮ ಸೀಸನ್ 8 ಮುಗಿದು 9ರತ್ತ ಕಾಲಿಟ್ಟಿದೆ.
ಪ್ರತಿ ವರ್ಷದಂತೆ ಈ ಬಾರಿಯೂ ಬಾರಿ ನಿರೀಕ್ಷೆಯನ್ನು ಮೂಡಿಸಿದೆ. ವೀಕ್ಷಕರಲ್ಲಂತೂ ಬಿಗ್ಬಾಸ್ ಸೀಸನ್ 9 ಬಗ್ಗೆ ಕುತೂಹಲ ಮನೆಮಾಡಿದ್ದು, ಯಾರೆಲ್ಲಾ ಮನೆಯೊಳಕ್ಕೆ ಕಾಲಿಡಲಿದ್ದಾರೆ ಎಂಬ ಪ್ರಶ್ನೆ ಕಾಡತೊಡಗಿದೆ. ಮಾತ್ರವಲ್ಲದೆ, ಈ ಬಾರಿಯ ಬಿಗ್ಬಾಸ್ ಹೇಗಿರಲಿದೆ? ಸ್ಪರ್ಧಿಗಳೆಷ್ಟು? ಮುಂತಾದ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಕಾಯುತ್ತಿದ್ದಾರೆ. ಆದರೆ ಈ ಬಾರಿ ಮತ್ತೊಂದು ವಿಶೇಷ ಸುದ್ದಿ ಪ್ರೇಕ್ಷಕರಿಗಾಗಿ ಕಾಯುತ್ತಿದೆ. ಅದು ಬಿಗ್ಬಾಸ್ ಓಟಿಟಿ.
ಇದನ್ನೂ ಓದಿ: ಪ್ಯಾಂಟ್ ಹಾಕಿ, ಬಟನ್ ಹಾಕೋದು ಮರೆತಳು! ಏನಪ್ಪಾ ಇವ್ಳ ಟಾರ್ಚರ್- ಬಿಟ್ಬಿಡಮ್ಮಾ ತಾಯಿ ಎಂದ ನೆಟ್ಟಿಗರು
ಹೌದು, ಈಗಾಗಲೇ ಹಿಂದಿಯಲ್ಲಿ ಬಿಗ್ಬಾಸ್ ಓಟಿಟಿ ಸೀಸನ್ 1 ಬಹಳ ಪ್ರಸಿದ್ದಿ ಪಡೆದಿದೆ. ಬಾಲಿವುಡ್ ನಿರ್ದೇಶಕ ಹಾಗೂ ನಿರ್ಮಾಪಕ ಕರಣ್ ಜೋಹರ್ ನಡೆಸಿಕೊಟ್ಟಿದ್ದ ಈ ಶೋ ಜನರಿಗೆ ಇಷ್ಟವಾಗಿತ್ತು. ಅದೇ ರೀತಿ ಈ ಬಾರಿ ಕನ್ನಡದಲ್ಲಿ ಸಹ ಮಾಡುವ ಆಲೋಚನೆಯಲ್ಲಿ ವಾಹಿನಿ ಇದೆಯಂತೆ. ಈ ಬಾರಿ ರೆಗ್ಯುಲರ್ ಬಿಗ್ ಬಾಸ್ ಕಾರ್ಯಕ್ರಮದ ಜೊತೆ ಮಿನಿ ಬಿಗ್ಬಾಸ್ ಮಾಡುವ ಸಾಧ್ಯತೆ ಇದ್ದು, ಒಂದು ಟಿವಿಯಲ್ಲಿ ಬಂದರೆ, ಮತ್ತೊಂದು ಓಟಿಟಿಯಲ್ಲಿ ಎನ್ನಲಾಗುತ್ತಿದೆ.
ಕಿಚ್ಚನ ನಿರೂಪಣೆ
ಇನ್ನು ಹಿಂದಿ ಬಿಗ್ಬಾಸ್ನಲ್ಲಿ ಓಟಿಟಿಯಲ್ಲಿ ಭಾಗವಹಿಸಿದ್ದ ಸಲ್ಮಾನ್ ಖಾನ್ ನಡೆಸಿಕೊಡುವ ಬಿಗ್ಬಾಸ್ ಶೋಗೆ ಹೋಗಲು ಅವಕಾಶ ನೀಡಲಾಗಿತ್ತು. ಹಾಗೆಯೇ ಇಲ್ಲಿ ಸಹ ಇಬ್ಬರಿಗೆ ರೆಗ್ಯುಲರ್ ಬಿಗ್ಬಾಸ್ಗೆ ಹೋಗಲು ಅವಕಾಶ ನೀಡಲಾಗುತ್ತದೆ. ಇನ್ನು ಮೂಲಗಳ ಪ್ರಕಾರ ಕಿಚ್ಚ ಸುದೀಪ್ ಈ ಎರಡು ಬಿಗ್ಬಾಸ್ ಕಾರ್ಯಕ್ರಮದ ನಿರೂಪಣೆ ಮಾಡಲಿದ್ದಾರೆ.
ಈಗಾಗಲೇ ಬಿಗ್ಬಾಸ್ಗೆ ಸ್ಪರ್ಧಿಗಳ ಹುಡುಕಾಟ ಆರಂಭವಾಗಿದ್ದು, ಮಿನಿ ಬಿಗ್ಬಾಸ್ಗೆ ಬಹಳ ವಿಶೇಷ ಅತಿಥಿಗಳು ಇರುತ್ತಾರೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ವಾಹಿನಿ ಇನ್ನೂ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಕಳೆದ ಬಾರಿ ಬಿಗ್ಬಾಸ್ 8 ಕೊರೊನಾ ಕಾರಣದಿಂದ ಅರ್ಧಕ್ಕೆ ನಿಂತು ಮತ್ತೆ ಆರಂಭವಾಗಿತ್ತು.
ಇದನ್ನೂ ಓದಿ: ಗಾರ್ಗಿ ಸಿನಿಮಾದ ರಿಲೀಸ್ ಡೇಟ್ ಅನೌನ್ಸ್, ಸಾಯಿ ಪಲ್ಲವಿಗೆ ಸಾಥ್ ನೀಡಿದ ರಕ್ಷಿತ್ ಶೆಟ್ಟಿ
ಹೌದು, ಕೊರೋನಾ ಎರಡನೇ ಅಲೆ ಆರಂಭವಾದಾಗಿನಿಂದ ಸೋಂಕಿತರ ಸಂಖ್ಯೆ ಹಾಗೂ ಸಾವಿನ ಪ್ರಮಾಣದಲ್ಲಿ ಏರಿಕೆಯಾಗುತ್ತಿತ್ತು. ಈ ಕಾರಣದಿಂದ ರಾಜ್ಯದಲ್ಲಿ ಮತ್ತೆ ಸಂಪೂರ್ಣ ಲಾಕ್ಡೌನ್ ಜಾರಿಗೆ ತರಲಾಯಿತು. ಈ ವೇಳೆ ಶೂಟಿಂಗ್ ಮಾಡಲು ನಿಷೇಧ ಹೇರಿದ ಹಿನ್ನಲೆಯಲ್ಲಿ ಕಾರ್ಯಕ್ರಮಕ್ಕೆ ತೆರೆ ಎಳೆಯಲಾಗಿತ್ತು. ಆದರೆ ಮತ್ತೆ ಅದನ್ನು ಆರಂಭಿಸಿ ಪೂರ್ಣಗೊಳಿಸಲಾಗಿತ್ತು. ಈ ಬಾರಿ ಜನರಿಗೆ ಈ ಕಾರ್ಯಕ್ರಮದ ಮೇಲೆ ನಿರೀಕ್ಷೆ ಹೆಚ್ಚಿದ್ದು, ಏನು ವಿಶೇಷ ಇರಬಹುದು ಎಂಬುದನ್ನ ಖಾದು ನೋಡಬೇಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ