Bigg Boss Kannada: ಬಿಗ್ಬಾಸ್ ಕನ್ನಡ ಸದ್ಯದಲ್ಲೇ ಪ್ರಾರಂಭ; ಯಾವಾಗ? ಯಾರೆಲ್ಲಾ ಸ್ಪರ್ಧಿಗಳು? ಇಲ್ಲಿದೆ ಮಾಹಿತಿ.
Bigg Boss Kannada Season 8: ಕಲರ್ಸ್ ಕನ್ನಡದ ಬಿಸಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ತಮ್ಮ ಫೇಸ್ಬುಕ್ ಖಾತೆಯಲ್ಲಿ ಕಿಚ್ಚ ಸುದೀಪ್ ಜೊತೆಗೆ ಮಾತನಾಡುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದು, ಬಿಗ್ ಬಾಸ್ ಹೊಸ ಸೀಸನ್ ಪ್ರಾರಂಭ ಹಂತದಲ್ಲಿದೆ ಎಂದು ಬರೆದುಕೊಂಡಿದ್ದಾರೆ.
news18-kannada Updated:November 25, 2020, 8:36 AM IST

ಕಿಚ್ಚ ಸುದೀಪ್
- News18 Kannada
- Last Updated: November 25, 2020, 8:36 AM IST
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ ಬಾಸ್ ಈ ಬಾರಿ ನಡೆಯುತ್ತೋ ಇಲ್ಲವೋ ಎಂಬ ಗೊಂದಲದಲ್ಲಿತ್ತು. ಮಹಾಮಾರಿ ಕೊರೋನಾ ಆ ರೀತಿ ಸ್ಥಿತಿಯನ್ನು ನಿರ್ಮಾಣ ಮಾಡಿತ್ತು. ಪ್ರೇಕ್ಷರಲ್ಲೂ ಇಂತಹ ಪ್ರಶ್ನೆ ಮನೆ ಮಾಡಿತ್ತು. ಆದರೀಗ ಅವರೆಲ್ಲರ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಬಿಗ್ ಬಾಸ್ ಸೀಸನ್ 8 ತಯಾರಿ ಪ್ರಗತಿಯಲ್ಲಿದೆ. ಹೌದು. ಕಲರ್ಸ್ ಕನ್ನಡದ ಬಿಸಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ತಮ್ಮ ಫೇಸ್ಬುಕ್ ಖಾತೆಯಲ್ಲಿ ಕಿಚ್ಚ ಸುದೀಪ್ ಜೊತೆಗೆ ಮಾತನಾಡುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದು, ಬಿಗ್ ಬಾಸ್ ಹೊಸ ಸೀಸನ್ ಪ್ರಾರಂಭ ಹಂತದಲ್ಲಿದೆ ಎಂದು ಬರೆದುಕೊಂಡಿದ್ದಾರೆ. ಆ ಮೂಲಕ ಪ್ರೇಕ್ಷಕರಿಗೆ ಕಿಚ್ಚ ನಿರೂಪಣೆಯ ಬಿಗ್ಬಾಸ್ ಸೀಸನ್ 8 ನಡೆಯಲಿದೆ ಎಂಬುದನ್ನು ಮನದಟ್ಟು ಮಾಡಿದ್ದಾರೆ.
ತೆಲುಗು, ತಮಿಳು, ಹಿಂದಿ ಬಿಗ್ಬಾಸ್ ಶೋಗಳು ಆರಂಭಗೊಂಡಿದ್ದು, ಪ್ರೇಕ್ಷಕರನ್ನು ಮನರಂಜಿಸುತ್ತಿದೆ. ಕೊರೋನಾ ಮಧ್ಯೆ ಸರಿಯಾದ ಕ್ರಮಗಳನ್ನು ಕೈಗೊಂಡು ಮತ್ತು ಸುರಕ್ಷಿತವಾಗಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಸದ್ಯದಲ್ಲಿ ಕನ್ನಡದಲ್ಲೂ ಬಿಗ್ಬಾಸ್ ಶೋ ಆರಂಭವಾಗಲಿದೆ. ಆದರೆ ಯಾವಾಗ ಎಂಬುದರ ಬಗ್ಗೆ ತಿಳಿದುಬರಬೇಕಷ್ಟೆ. ಕಳೆದ ಬಿಗ್ ಬಾಸ್ ಸೀಸನ್- 7ನಲ್ಲಿ ಶೈನ್ ಶೆಟ್ಟಿ, ಪತ್ರಕರ್ತ ರವಿ ಬೆಳಗೆರೆ, ಭೂಮಿ ಶೆಟ್ಟಿ, ದೀಪಿಕಾ ದಾಸ್, ಕಿಶನ್, ಕುರಿ ಪ್ರತಾಪ್, ವಾಸುಕಿ ವೈಭವ್, ಹರೀಶ್ ರಾಜ್, ಪ್ರಿಯಾಂಕ ಚಂದ್ರಿಕಾ, ಚಂದನ್ ಆಚಾರ್, ಚಂದನಾ ಅನಂತಕೃಷ್ಣ, ಚೈತ್ರಾ ಕೊಟ್ಟೂರು, ರಾಜು ತಾಳಿಕೋಟೆ,ರಕ್ಷಾ ಸೋಮಶೇಖರ್, ರಾಜು ತಾಳಿಕೋಟೆ, ಪೃಥ್ವಿ, ಜೈ ಜಗದೀಶ್, ದುನಿಯಾ ರಶ್ಮಿ, ಚೈತ್ರಾ ವಾಸುದೇವ್, ಗುರುಲಿಂಗ ಸ್ವಾಮಿ ಮನೆಯೋಕ್ಕೆ ಹೋಗಿದ್ದರು.
ಅದರಲ್ಲಿ ಶೈನ್ ಶೆಟ್ಟಿ ವಿಜೇತರಾಗಿ ಹೊರಹೊಮ್ಮಿದರೆ, ಕುರಿ ಪ್ರತಾಪ್ ರನ್ನಪ್ ಅಪ್ ಆದರು. ಆದರೆ ಈ ಮುಂಬರುವ ಸೀಸನ್ 8ರಲ್ಲಿ ಯಾರು ಮನೆಯೊಳಕ್ಕೆ ಹೋಗಲಿದ್ದಾರೆ ಎಂದು ಕಾದುನೋಡಬೇಕಿದೆ.
ತೆಲುಗು, ತಮಿಳು, ಹಿಂದಿ ಬಿಗ್ಬಾಸ್ ಶೋಗಳು ಆರಂಭಗೊಂಡಿದ್ದು, ಪ್ರೇಕ್ಷಕರನ್ನು ಮನರಂಜಿಸುತ್ತಿದೆ. ಕೊರೋನಾ ಮಧ್ಯೆ ಸರಿಯಾದ ಕ್ರಮಗಳನ್ನು ಕೈಗೊಂಡು ಮತ್ತು ಸುರಕ್ಷಿತವಾಗಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಸದ್ಯದಲ್ಲಿ ಕನ್ನಡದಲ್ಲೂ ಬಿಗ್ಬಾಸ್ ಶೋ ಆರಂಭವಾಗಲಿದೆ. ಆದರೆ ಯಾವಾಗ ಎಂಬುದರ ಬಗ್ಗೆ ತಿಳಿದುಬರಬೇಕಷ್ಟೆ.
New season of Bigg Boss Kannada is under construction!
Posted by Parameshwar Gundkal on Monday, November 23, 2020