ಕನ್ನಡ ಕಿರುತೆರೆ ನಟಿ (Actress) ಸಾನ್ಯಾ ಐಯ್ಯರ್ (Sanya Iyer) ಅವರು ಬಿಗ್ಬಾಸ್ (Bigg Boss) ಕನ್ನಡ ಸೀಸನ್ 9ಕ್ಕೆ ಬಂದು ಫೇಮಸ್ ಆಗಿದ್ದಾರೆ. ಕನ್ನಡ ಬಿಗ್ಬಾಸ್ ಒಟಿಟಿ ಸೀಸನ್ನಲ್ಲಿ ಸ್ಪರ್ಧಿಸಿದ ನಟಿ ಆಮೇಲೆ ಬಿಗ್ಬಾಸ್ ಸೀಸನ್ 9ಕ್ಕೂ ಎಂಟ್ರಿ ಕೊಟ್ಟು ಎಲ್ಲರ ಮನಸು ಗೆದ್ದಿದ್ದಾರೆ. ನಟಿ ಸಾನ್ಯಾ ಐಯ್ಯರ್ ಅವರು ಪುಟ್ಟಗೌರಿ ಮದುವೆ ಧಾರಾವಾಹಿಯಲ್ಲಿ ಪುಟ್ಟಗೌರಿಯ ಬಾಲ್ಯದ ಪಾತ್ರವನ್ನು ಮಾಡಿ ಕನ್ನಡ ಕಿರುತೆರೆ ಪ್ರೇಕ್ಷಕರ ಮನಸು ಗೆದ್ದಿದ್ದರು. ಇದೀಗ ನಟಿ ರಿಯಾಲಿಟಿ ಶೋ (Reality show) ಮೂಲಕ ಮನೆ ಮಾತಾಗಿದ್ದಾರೆ.
ಪುತ್ತೂರು ಕಂಬಳದಲ್ಲಿ ಸಾನ್ಯಾ ಐಯ್ಯರ್
ಸಾನ್ಯಾ ಐಯ್ಯರ್ ಪುತ್ತೂರು ಕಂಬಳದಲ್ಲಿ ಭಾಗವಹಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ನಟಿ ಭಾಗವಹಿಸಿ ಕಂಬಳವನ್ನು ನೋಡಿ ಸಭಿಕರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಅವರ ಅಭಿಮಾನಿಗಳ ಸೆಲ್ಫಿಗೂ ಪೋಸ್ ಕೊಟ್ಟಿದ್ದಾರೆ.
ಶಾರ್ಟ್ ವಿಡಿಯೋ
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಾನ್ಯಾ ಅವರು ಈಗ ಕಂಬಳದ ಒಂದು ವಿಡಿಯೋವನ್ನು ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿದ್ದಾರೆ. ಇದರಲ್ಲಿ ನಟಿ ಪುತ್ತೂರಿಗೆ ಬಂದು ಇಳಿಯುವಲ್ಲಿಂದ ಕಾರ್ಯಕ್ರಮದ ಕಿರು ನೋಟ, ಅಲ್ಲಿಂದ ತೆರಳುವ ತನಕ ಎಲ್ಲವನ್ನೂ ಶಾರ್ಟ್ ಆಗಿ ತೋರಿಸಲಾಗಿದೆ.
View this post on Instagram
ನೀಲಿ ಬಣ್ಣದ ಸೀರೆ ಉಟ್ಟಿದ್ದ ಸಾನ್ಯಾ
ಸಿಲ್ವರ್ ಕಲರ್ ಬಾರ್ಡರ್ನ ನೀಲಿ ಸೀರೆ ಉಟ್ಟಿದ್ದರು ಸಾನ್ಯಾ. ಇದಕ್ಕೆ ಸಿಲ್ವರ್ ಕಲರ್ ಬ್ಲೌಸ್ ಧರಿಸಿದ್ದರು. ಕೂದಲು ಫ್ರಿಯಾಗಿ ಬಿಟ್ಟು ಸ್ಟೈಲಿಷ್ ಆಗಿ ಕಾಣಿಸಿದ್ದಾರೆ. ನಟಿ ಬಿಗ್ಬಾಸ್ ಮೂಲಕ ಅಪಾರ ಅಭಿಮಾನಿಗಳನ್ನು ಗಳಿಸಿದ್ದು ಬಹಳಷ್ಟು ಸೆಲ್ಫಿಗೆ ಮುಗಿಬೀಳುತ್ತ ಇದ್ದದ್ದು ಕಂಡುಬಂತು.
ನಟಿಯ ವಿಡಿಯೋಗೆ 9 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದೆ. 230ಕ್ಕೂ ಹೆಚ್ಚು ಜನರು ವಿಡಿಯೋವನ್ನು ನೋಡಿ ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: Sanya Iyer: ಕಂಬಳ ನೋಡಲು ಬಂದ ಸಾನ್ಯಾ ಐಯ್ಯರ್ ಕೈ ಹಿಡಿದೆಳೆದ ಅಭಿಮಾನಿ!
ಅಭಿಮಾನಿಯಿಂದ ಕಿರಿಕ್
ಕರಾವಳಿಯ ಪುತ್ತೂರಿನಲ್ಲಿ ನಡೆಯುತ್ತಿರುವ ಕಂಬಳದಲ್ಲಿ ಬಿಗ್ಬಾಸ್ ಖ್ಯಾತಿಯ ನಟಿ ಸಾನ್ಯಾ ಐಯ್ಯರ್ ಅವರ ಕೈ ಹಿಡಿದು ಎಳೆದ ಘಟನೆ ನಡೆದಿದೆ. ಪುತ್ತೂರು ಕಂಬಳದಲ್ಲಿ ಕಿರುತೆರೆ ನಟಿಗೆ ಅಭಿಮಾನಿಯ ಕಿರಿಕ್ ಈಗ ವೈರಲ್ ಆಗಿದೆ. ಸೆಲ್ಫಿ ತೆಗೆದುಕೊಳ್ಳುವ ನೆಪದಲ್ಲಿ ಕಿರುತೆರೆ ನಟಿಯ ಕೈಯನ್ನು ಬಂದು ಹಿಡಿದುಕೊಂಡಿದ್ದಾನೆ ಅಭಿಮಾನಿ. ಪುತ್ತೂರು ಕೋಟಿ-ಚೆನ್ನಯ ಕಂಬಳಕ್ಕೆ ಅತಿಥಿಯಾಗಿ ಆಗಮಿಸಿದ್ದ ಸಾನ್ಯಾ ಐಯ್ಯರ್ ಚೆನ್ನಾಗಿ ಭಾಷಣವನ್ನೂ ಮಾಡಿದ್ದರು. ಅವರನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿದ್ದರು.
ಕೈ ಹಿಡಿದು ಎಳೆದ ಅಭಿಮಾನಿ
ನಟಿ ಭಾಷಣ ಮಾಡುತ್ತಿದ್ದ ಸಮಯದಲ್ಲಿ ಐ ಲವ್ ಯೂ ಎಂದು ಹೇಳಿ ಕಿರುಚುತ್ತಿದ್ದ ಅಭಿಮಾನಿ ಬಳಿಕ ವೇದಿಕೆಯಿಂದ ಇಳಿದ ನಟಿಯ ಕೈ ಹಿಡಿದಿದ್ದಾನೆ. ಈ ದಿಢೀರ್ ಘಟನೆಯಿಂದ ನಟಿ ಮುಜುಗರಕ್ಕೊಳಗಾಗಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ