• Home
  • »
  • News
  • »
  • entertainment
  • »
  • Bigg Boss Kannada 9: ಬಾಲ್ಯದಲ್ಲಿಯೇ ಆತ್ಮಹತ್ಯೆಗೆ ಯತ್ನಿಸಿದ್ರು ಬಿಗ್​ಬಾಸ್​ನ ಈ ಸ್ಪರ್ಧಿ

Bigg Boss Kannada 9: ಬಾಲ್ಯದಲ್ಲಿಯೇ ಆತ್ಮಹತ್ಯೆಗೆ ಯತ್ನಿಸಿದ್ರು ಬಿಗ್​ಬಾಸ್​ನ ಈ ಸ್ಪರ್ಧಿ

ಸೈಕ್ ನವಾಜ್ ಬಿಗ್ ಬಾಸ್-09 ಎಂಟ್ರಿ

ಸೈಕ್ ನವಾಜ್ ಬಿಗ್ ಬಾಸ್-09 ಎಂಟ್ರಿ

ಬಿಗ್​ ಬಾಸ್ ಮನೆಯೊಳಗಿರುವ ಅತ್ಯಂತ ಕಿರಿಯ ಸ್ಪರ್ಧಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು ಎನ್ನುವುದು ನಿಮಗೆ ಗೊತ್ತಾ? ಇವರು ಈಗಲೂ ಬೆಳಗಿನ ತಿಂಡಿ ತಿನ್ನಲ್ಲ! ಇದರ ಹಿಂದಿದೆ ನೋವಿನ ಕಥೆ

  • Share this:

ಬಿಗ್​ ಬಾಸ್ ಸೀಸನ್ 9 ಶುರುವಾಗಿದೆ. 18 ಸ್ಪರ್ಧಿಗಳು ಮನೆಯೊಳಗೆ ಸೇರಿಕೊಂಡಿದ್ದು ಈಗ ಫುಲ್ ಆಟ ಶುರುವಾಗಿದೆ. ಬಿಗ್​ಬಾಸ್ ಮನೆಗೆ ಎಂಟ್ರಿ ಕೊಟ್ಟ ಅತ್ಯಂತ ಕಿರಿಯ ಸ್ಪರ್ಧಿಗಳಲ್ಲಿ ನವಾಝ್ ಒಬ್ಬರು. ಹೌದು ನವಾಝ್ ಸೋಷಿಯಲ್ ಮಿಡಿಯಾದಲ್ಲಿ ತುಂಬಾ ಫೇಮಸ್. ಅವರಂತೆಯೇ ವಿಭಿನ್ನ ಬ್ಯಾಗ್ರೌಂಡ್​ನ 18 ಜನ ಸ್ಪರ್ಧಿಗಳಿದ್ದಾರೆ.  ಸೈಕ್ (Saik Nawaz)ಅಂದ್ರೆ ಅಂತಿಂತ ಸೈಕೋ ಅಲ್ಲ. ಮಾತಿಗೆ ನಿಂತರೇ ಸೈಕೋ ನವಾಜ್ ಹೆಸರು ಬಂದೇ ಬಿಡುತ್ತದೆ. ಅಷ್ಟು ಫೇಮಸ್ ಆಗಿರೊ ಸೈಕೋ ನವಾಜ್ ಬೇರೆ ಏನೂ ಮಾಡಲೇ ಇಲ್ಲ. ಮಾಡಿರೊದು ಕೇವಲ ಡೈಲಾಗ್ ಹೊಡೆಯೋದು. ಅದು ಅಲ್ಲಿ ಇಲ್ಲಿ ಅಲ್ಲವೇ ಅಲ್ಲ. ಸಿನಿಮಾ ನೋಡಿ ಬಂದು ಥಿಯೇಟರ್ (Theater)​ ಹೊರಗಡೆನೇ ಚಾನೆಲ್ ಗಳ ಮೈಕ್ ಮುಂದೆ ನಿಂತು ಡೈಲಾಗ್ ಹೊಡೆದಿದ್ದೇ ಬಂತು. ಅಲ್ಲಿಂದಲೇ ಈಗ ನೇರವಾಗಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಾಗಿದೆ.


ಸೈಕ್ ನವಾಜ್ ಸೂಪರ್ ಡೈಲಾಗ್-ಕಿಚ್ಚ ಕೂಡ ಫುಲ್ ಬೋಲ್ಡ್


ಸೈಕ್ ನವಾಜ್ ನಿಜಕ್ಕೂ ಸೂಪರ್ ಡೈಲಾಗ್ ಹೊಡೀತಾನೇ. ಈತನ ಪ್ರತಿಭೆ ಏನೂ ಅಂತ ಯಾರಾದರೂ ಕೇಳಿದ್ರೆ ಸಾಕು. ಈತನ ಕಥೆ ಕೇವಲ ಡೈಲಾಗ್ ಗೆ ಮಾತ್ರ ನಿಂತು ಬಿಡುತ್ತದೆ. ಇಂತಹ ವಿಚಿತ್ರ ಮಾತುಗಾರನಿಗೆ ಅವನ ಈ ಮಾತುಗಳೇ ಈಗ ಬಿಗ್ ಮನೆಗೆ ಎಂಟ್ರಿ ಕೊಡಿಸಿದೆ. ಆದರೆ ಈ ಯುವಕನ ಬ್ಯಾಗ್ರೌಂಡ್ ಸ್ಟೋರಿ ನಿಮಗೆ ಗೊತ್ತೇ?


ಮನೆ ಬಾಡಿಗೆ ಕೊಡೋಕೆ 1000 ರೂ. ಇರಲಿಲ್ಲ


ಬೆಂಗಳೂರಿನಲ್ಲಿಯೇ ಹುಟ್ಟಿ ಬೆಳೆದ ನವಾಝ್​​ಗೆ ಬಡತನ ಬಾಲ್ಯದಿಂದಲೂ ಸ್ನೇಹಿತನಂತೆ ಜೊತೆಗೆ ಇತ್ತು. ಬಿಟ್ಟು ಹೋಗಲೇ ಇಲ್ಲ. ಮನೆ ಬಾಡಿಗೆ ಕೊಡೋಕೆ 1000 ರೂಪಾಯಿ ಇಲ್ಲದಿದ್ದಾಗ, ಓನರ್ ಬರುವ ಟೈಮ್‌ಗೆ ಮನೆಗೆ ಬೀಗ ಹಾಕ್ತಿದ್ರಂತೆ ನವಾಝ್ ಕುಟುಂಬ. ಬಾಡಿಗೆ ಕಟ್ಟದ ಕಾರಣ ನವಾಜ್ ಕುಟುಂಬವನ್ನ ಮನೆ ಓನರ್ ಆಚೆ ಹಾಕಿದ್ದರು ಎಂಬುದು ಹಿಂದಿನ ಕಥೆ.




ಇದನ್ನೂ ಓದಿ: Big Boss Season-9: ಬಿಗ್ ಬಾಸ್ ಮನೆಯಲ್ಲಿ ಸೈಕ್ ನವಾಜ್ ಎಂಟ್ರಿ- ಇನ್ನು ಇಲ್ಲಿ ಶುರು ಆಗುತ್ತೆ ಸೈಕಿಕ್ ಆಟ


ಇವರು ನೋ ಬ್ರೇಕ್​ಫಾಸ್ಟ್ ನವಾಜ್


ಬಡತನದಿಂದಾಗಿ ನವಾಜ್ ಮನೆಯಲ್ಲಿ ಬೆಳಗ್ಗೆ ಹೊತ್ತು ತಿಂಡಿ ತಿನ್ನಲ್ಲ. ಬಾಲ್ಯದಿಂದ ಉಪವಾಸ ಇದ್ದೂ ಇದ್ದೂ ಈಗಲೂ ಅವರಿಗೆ ಬೆಳಗ್ಗೆ ಹೊತ್ತು ತಿಂಡಿ ತಿನ್ನುವ ಅಭ್ಯಾಸವೇ ಇಲ್ಲ. ವಿದ್ಯಾಭ್ಯಾಸ ವಿಚಾರಕ್ಕೆ ಬಂದರೆ ತೀರಾ ಕಳಪೆಯಲ್ಲ ನವಾಝ್. ಚೆನ್ನಾಗಿಯೇ ಓದಿಕೊಂಡಿದ್ದರು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕನ್ನಡದಲ್ಲಿ 88 ಅಂಕ ಪಡೆದಿದ್ದರೆ ಗಣಿತದಲ್ಲಿ ಫೇಲ್ ಆಗ್ತೀನಿ ಎಂಬ ಭಯದಿಂದ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದರಂತೆ. ಫೇಲ್ ಆಗ್ಬಾರ್ದು ಅಂತ ಪೇಪರ್ ಕೊನೆಯಲ್ಲಿ ‘ಪಾಸ್ ಮಾಡಿ’ ಅಂತ ಶಿಕ್ಷಕರಿಗೆ ಮನವಿ ಮಾಡಿದ್ದರು ಎನ್ನಲಾಗಿದೆ. ಅಂತೂ ಇಂತೂ ನವಾಝ್ ಪಾಸ್ ಆಗಿದ್ದಾರೆ.


ಬಿಗ್ ಬಾಸ್ ಮನೆಗೆ ಸೈಕ್ ನವಾಜ್ ಎಂಟ್ರಿ


ಬಿಗ್ ಬಾಸ್ ಗೆ ಹೋಗ್ತಿರೋದು ನನ್ನ ಪುಣ್ಯ ಎಂದ ಸೈಕ್ ನವಾಝ್


ಸೈಕ್ ನವಾಜ್ ನೀವು ಬಿಗ್ ಬಾಸ್ ಮನೆಗೆ ಬಂದಿದ್ದೀರಾ, ಹೇಗೆ ಅನಿಸುತ್ತದೆ ಅಂತ ಕೇಳಿದ್ರೆ, ಇದು ಪುಣ್ಯ ಸಾರ್, ಮತ್ತೇನೂ ಇಲ್ಲ ಅಂತಲೇ ಸೈಕ್ ನವಾಜ್ ಹೇಳಿದ್ದಾನೆ. ಸೈಕ್ ಅಂತಲೇ ಯಾಕೆ ಕರೆಯುತ್ತಾರೆ ಅಂತ ಕೇಳಿದ್ರೆ, ಎಲ್ಲರೂ ಹಾಗೆ ಹೇಳೋದು ಸರ್ ಅಂತಲೇ ನವಾಜ್ ಹೇಳಿ ಮಾತು ಮುಗಿಸುತ್ತಾನೆ.


ಇದನ್ನೂ ಓದಿ: BBK Season 9: ಬಿಗ್‍ಬಾಸ್ ಮನೆಯಲ್ಲಿ ಮೊದಲ ದಿನವೇ 12 ಜನ ನಾಮಿನೇಟ್, 100 ದಿನದ ಕನಸು ಹೊತ್ತವರಿಗೆ ಶಾಕ್!


ಸೈಕ್ ನವಾಜ್ ಬಿಗ್ ಬಾಸ್ ಎಂಟ್ರಿ ಹೇಗಿತ್ತು ಗೊತ್ತೇ?
ಇಂತಹ ಸೈಕ್ ನವಾಜ್ ಬಿಗ್ ಬಾಸ್-ಸೀಸನ್ 09 ರ ಆಟಕ್ಕಾಗಿಯೇ ಬಿಗ್ ಮನೆಗೆ ಎಂಟ್ರಿ ಕೊಟ್ಟು ಬಿಟ್ಟಿದ್ದಾನೆ. ಆದರೆ ವೇದಿಕೆ ಮೇಲೆ ಬಂದ ಈ ಸೈಕ್ ನವಾಜ್ ನಾರ್ಮಲ್ ಆಗಿಯೇ ಇದ್ದನು. ಸೈಕ್ ರೀತಿ ಏನೂ ಆಡಲಿಲ್ಲ.

Published by:Divya D
First published: