57 ಕ್ಯಾಮೆರಾಗಳು, 20 ಸ್ಪರ್ಧಿಗಳು ಸ್ಪರ್ಧಿಗಳು, ಐದು ದ್ವಾರಗಳು... 120 ದಿನಗಳ ಭರ್ಜರಿ ಪ್ರಯಾಣ ಈಗ ಕೊನೆಯಾಗಿದೆ. 17 ವಾರಗಳ ಕಾಲ ನಡೆದ 72 ದಿನಗಳ ಮೊದಲ ಇನ್ನಿಂಗ್ಸ್ ಹಾಗೂ 48 ದಿನಗಳ ಸೆಕೆಂಡ್ ಇನ್ನಿಂಗ್ಸ್ ಜರ್ನಿಗೆ ಇಂದು ಅದ್ದೂರಿಗೆ ತೆರೆ ಎಳೆಯಲಾಗಿದೆ. ರಿಯಾಲಿಟಿ ಶೋಗಳ ಇತಿಹಾಸದಲ್ಲೇ ಮೊದಲ ಬಾರಿಗೆ ಅರ್ಧಕ್ಕೆ ನಿಂತಿದ್ದ ಬಿಗ್ ಬಾಸ್ ಕನ್ನಡ ಸೀಸನ್ 8ರ (Bigg Boss Kannada Season 8) ಕಾರ್ಯಕ್ರಮ ಮತ್ತೆ ಆರಂಭವಾಯಿತು. ಕೊರೋನಾ ಎರಡನೇ ಅಲೆಯಿಂದಾಗಿ ಬಿಗ್ ಬಾಸ್ ಸೀಸನ್ 8ರ ಫಿನಾಲೆ ನಡೆಯುತ್ತೋ ಅಥವಾ ಇಲ್ಲವೋ ಅನ್ನೋ ಪ್ರಶ್ನೆ ಕಾಡುತ್ತಿದ್ದರೂ ಎಲ್ಲರ ಪರಿಶ್ರಮದಿಂದ ಇಂದು ಈ ಜರ್ನಿ ಕೊನೆಯಗೂ ಗುರಿ ಮುಟ್ಟಿದೆ. ಮೊದಲಿಗೆ ಟಾಪ್ 3ಯಲ್ಲಿದ್ದ ದಿವ್ಯಾ ಉರುಡುಗ ಅವರು ಈ ಸೀಸನ್ನ ಕೊನೆಯ ಎಲಿಮಿನೇಷನ್ನಲ್ಲಿ ಎವಿಕ್ಟ್ ಆಗಿ ಮನೆಯಿಂದ ಹೊರ ಬಂದರು. ಇಂದು ನಡೆದ ಫಿನಾಲೆಯಲ್ಲಿ 11 ಲಕ್ಷದ 61 ಸಾವಿರದ 205 ಮತಗಳನ್ನು ಪಡೆದು 3ನೇ ಸ್ಥಾನ ಪಡೆದು ದಿವ್ಯಾ ಉರುಡುಗ ಆಟದಿಂದ ಹೊರ ಬಂದರು.
ಎಂದಿನಂತೆ ನಿರೂಪಕ ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ಮನೆಯೊಳಗೆ ಹೋಗಿ ಇಬ್ಬರು ಫೈನಲಿಸ್ಟ್ಗಳಾದ ಮಂಜು ಪಾವಗಡ ಹಾಗೂ ಅರವಿಂದ್ ಕೆ.ಪಿ ಅವರನ್ನು ವೇದಿಕೆಗೆ ಕರೆ ತಂದರು. ಕಿಚ್ಚನ ಜೊತೆ ಇಬ್ಬರೂ ಫೈನಲಿಸ್ಟ್ಗಳು ವೇದಿಕೆ ಕಾಲಿಡುತ್ತಿದ್ದಂತೆಯೇ ನೆರೆದಿದ್ದವರಲ್ಲಿ ಕಾತರ ಹೆಚ್ಚಾಯಿತು. ವಿನ್ನರ್ ಯಾರೆಂದು ಹೇಳುವ ಮೊದಲು ಸುದೀಪ್ ಅವರು ಇತರೆ ಸ್ಪರ್ಧಿಗಳನ್ನು ಯಾರು ಜಯಗಳಿಸಬೇಕೆಂಬುದು ನಿಮ್ಮ ಇಷ್ಟ ಎನ್ನುತ್ತಾರೆ. ಆಗ ಶಮಂತ್ ಹಾಗೂ ದಿವ್ಯಾ ಉರುಡುಗ ಅವರನ್ನು ಹೊರತು ಪಡಿಸಿ ಉಳಿದವರೆಲ್ಲ ಮಂಜು ಅವರೇ ಗೆಲ್ಲಬೇಕು ಎಂದು. ಅದರಲ್ಲೂ ಮಂಜು ಅವರಿಗೆ ಹೆಜ್ಜೆ ಹೆಜ್ಜೆಗೂ ನಿಂದಿಸಿ, ಚುಚ್ಚು ಮಾತುಗಳನ್ನಾಡಿದ ಚಕ್ರವರ್ತಿ ಹಾಗೂ ಪ್ರಶಾಂತ್ ಅವರೂ ಮಂಜು ಗೆಲ್ಲಬೇಕು ಎಂದರು.
120 ದಿನಗಳ ಕುತೂಹಲಕ್ಕೆ ಇಂದು ತೆರೆ ಬಿದ್ದಿದೆ. ಬಿಗ್ ಬಾಸ್ ಸೀಸನ್ 8ರ ಫಿನಾಲೆ ನಡೆದಿದ್ದು, ಅಂತಿಮವಾಗಿ ಹಳ್ಳಿ ಹುಡುಗ ಮಂಜು ಪಾವಗಡ ವಿಜೇತರಾಗಿ ಟ್ರೋಫಿ ಕೈಯಲ್ಲಿ ಹಿಡಿದಿದ್ದಾರೆ. ಕೊನೆಯವರೆಗೂ ಟಫ್ ಫೈಟ್ ಕೊಟ್ಟ ಬೈಕರ್ ಅರವಿಂದ್ ಕೆ. ಪಿ ಅವರು ರನ್ನರ್ ಅಪ್ ಆಗಿದ್ದಾರೆ. ವಿಜೇತರ ಹೆಸರನ್ನು ಪ್ರಕಟಿಸುವ ಮೊದಲು ಯಾರು ಯಾವ ಕಡೆ ನಿಲ್ಲಬೇಕು ಎಂದು ಟಾಸ್ ಮಾಡುವ ಮೂಲಕ ಫೈನಲಿಸ್ಟ್ಗಳಿಗೆ ಆಯ್ಕೆ ಮಾಡುವ ಅವಕಾಶ ನೀಡಲಾಗಿದ್ದು ವಿಶೇಷ.
View this post on Instagram
ಮಂಜು ಪಾವಗಡ ಇಂದು ಬಿಗ್ ಬಾಸ್ ಫಿನಾಲೆ ವೇದಿಕೆಯಲ್ಲಿ ನಿಲ್ಲಲು ಕಾರಣ ಮಜಾ ಭಾರತ. ಅದಕ್ಕೆ ತನ್ನ ಈ ಗೆಲುವನ್ನು ಮಜಾ ಭಾರತಕ್ಕೆ ಸಮರ್ಪಿಸಿದ್ದಾರೆ ಮಂಜು.ಇನ್ನು ಬಿಗ್ ಬಾಸ್ ಸೀಸನ್ 8ರ ವಿನ್ನರ್ ಟ್ರೋಫಿಯನ್ನು ಮಂಜು ಹಿಡಿದರೆ, ಸುದೀಪ್ ಅವರು ತಾವು ತೊಟ್ಟಿದ್ದ ಜಾಕರಟ್ ಅನ್ನು ಅರವಿಂದ್ ಅವರಿಗೆ ತೊಡಿಸುವ ಮೂಲಕ ಗೌರವ ಸಲ್ಲಿಸಿದ್ದಾರೆ. ಇದು ನಾನು ಅರವಿಂದ್ಗೆ ಕೊಡುತ್ತಿರುವ ಟ್ರೋಫಿ ಎಂದು ಸಂತಸ ವ್ಯಕ್ತಪಡಿಸಿದ್ದಾರೆ ಸುದೀಪ್.
View this post on Instagram
ಬಿಗ್ ಬಾಸ್ನಲ್ಲಿ ಮಂಜು ವಿಜಯ ಮಾಲೆ ಧರಿಸುವ ಮೂಲಕ 53 ಲಕ್ಷ ಬಹುಮಾನ ಗೆದ್ದರೆ, ಅರವಿಂದ್ ಕೆ ಪಿ ಅವರು ರನ್ನರ್ ಅಪ್ ಆಗುವ ಮೂಲಕ 11 ಲಕ್ಷ ಪಡೆದುಕೊಂಡಿದ್ದಾರೆ. ಇದರ ಜೊತೆಗೆ ಅರವಿಂದ್ ಅವರು ಬಿಗ್ ಬಾಸ್ ಮನೆಯಲ್ಲಿ ಕೊನೆಯ ವಾರ ಕೊಟ್ಟಿದ್ದ ಟಾಸ್ಕ್ನಲ್ಲಿ ಹೆಚ್ಚು ಅಂಕಗಳನ್ನು ಗಳಿಸುವ ಮೂಲಕ 2 ಲಕ್ಷ ನಗದು ಬಹುಮಾನ ಸಹ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: Bigg Boss Kannada 8: ಸೋನು ನಿಗಮ್ ಹಾಡಿದ್ದ ಹಾಡಿಗೆ ಕತ್ತರಿ ಹಾಕಿಸಿ ಸ್ನೇಹಿತನಿಗೆ ಅವಕಾಶ ಕೊಡಿಸಿದ್ದ ಸುದೀಪ್..!
ಇನ್ನು ಈ ಸೀಸನ್ನಲ್ಲಿ ಮೊದಲಿನಿಂದಲೂ ಫಿನಾಲೆಯಲ್ಲಿ ಸುದೀಪ್ ಅವರ ಪಕ್ಕದಲ್ಲಿ ನಿಲ್ಲುವ ಸ್ಪರ್ಧಿಗಳು ಎಂದು ಮಂಜು ಪಾವಗಡ, ವೈಷ್ಣವಿ ಹಾಗೂ ಅರವಿಂದ್ ಅವರ ಹೆಸರುಗಳು ಹೆಚ್ಚಾಗಿ ಕೇಳಿ ಬರುತ್ತಿತ್ತು. ಆದರೆ ನಾಲ್ಕನೇ ಸ್ಥಾನ ಪಡೆದು ವೈಷ್ಣವಿ ಅವರು ನಿನ್ನೆಯ ಸಂಚಿಕೆಯಲ್ಲಿ ಮನೆಯಿಂದ ಹೊರ ಬರುತ್ತಿದ್ದಂತೆಯೇ ಎಲ್ಲರೂ ಶಾಕ್ನಲ್ಲಿದ್ದರು. ಇನ್ನು ಅರವಿಂದ್ ಹಾಗೂ ಮಂಜು ಪಾವಗಡ ನಡುವೆ ನೆಕ್ ಟು ನೆಕ್ ಫೈಟ್ ಇತ್ತು.
View this post on Instagram
ಇದನ್ನೂ ಓದಿ: Bigg Boss Kannada 8: ದಿವ್ಯಾ ಉರುಡುಗ ಕೈ ಹಿಡಿಯಲಿಲ್ಲ ಅದೃಷ್ಟ: ಅರವಿಂದ್ ಜತೆಗಿನ ಸ್ನೇಹವೇ ಮುಳುವಾಯಿತಾ..!
ಜೊತೆಗೆ ದಿವ್ಯಾ ಉರುಡುಗ ಅವರಿಗೆ ಟಾಸ್ಕ್ ವಿಷಯದಲ್ಲಿ ಫೇವ ಮಾಡುವರ್ ಮೂಲಕ ಇತರ ಸ್ಪರ್ಧಿಗಳಿಗೆ ಮೋಸ ಮಾಡಿದ್ದರು ಅನ್ನೋ ಆರೋಪ ಸಹ ಅರವಿಂದ್ ಅವರ ಮೇಲಿದೆ. ನಾಮಿನೇಷನ್ ವಿಷಯ ಬಂದಾಗ ಪ್ರತಿ ಸಲವ ದಿವ್ಯಾ ಉರುಡುಗ ಹಾಗೂ ಅರವಿಂದ್ ಕೆ. ಪಿ ಅವರು ಮಂಜು ಅವರನ್ನು ಟಾರ್ಗೆಟ್ ಮಾಡಿಕೊಂಡು ನಾಮಿನೇಟ್ ಮಾಡುತ್ತಿದ್ದರು. ಈ ಎಲ್ಲ ವಿಷಯಗಳಿಂದಾಗಿ ಅರವಿಂದ್ ಕೆ ಪಿ ಅವರಿಗೆ ಹಿನ್ನಡೆಯಾಗಿರಬಹುದು ಎಂದು ಹೇಳಲಾಗಿತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ