HOME » NEWS » Entertainment » BIGG BOSS KANNADA 8 WHAT IS GOING BETWEEN PRASHANTH SAMBARGI AND DIVYA URUDUGA AE

Bigg Boss Kannada 8: ಪ್ರಶಾಂತ್​ ಸಂಬರಗಿ-ದಿವ್ಯಾ ನಡುವೆ ನಡೆಯುತ್ತಿರುವುದು ಏನು: ಏನಂತಿದ್ದಾರೆ ನೆಟ್ಟಿಗರು..!

BBK8: ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಇಂತಹದ್ದೇ ಒಂದು ವಿಷಯದಿಂದಾಗಿ ಸುದ್ದಿಯಲ್ಲಿದ್ದಾರೆ. ಹೌದು, ದಿವ್ಯಾ ಉರುಡುಗ ಹಾಗೂ ಪ್ರಶಾಂತ್​ ಸಂಬರಗಿ ಅವರ ನಡುವಿನ ಸಲುಗೆ ಹಾಗೂ ಕ್ಲೋಸ್​ನೆಸ್​ ನೋಡಿದ ನೆಟ್ಟಿಗರು ನಾನಾ ರೀತಿ ಚರ್ಚೆ ಮಾಡಲಾರಂಭಿಸಿದ್ದಾರೆ.

Anitha E | news18-kannada
Updated:March 2, 2021, 5:25 PM IST
Bigg Boss Kannada 8: ಪ್ರಶಾಂತ್​ ಸಂಬರಗಿ-ದಿವ್ಯಾ ನಡುವೆ ನಡೆಯುತ್ತಿರುವುದು ಏನು: ಏನಂತಿದ್ದಾರೆ ನೆಟ್ಟಿಗರು..!
ಪ್ರಶಾಂತ್​ ಸಂಬರಗಿ ಹಾಗೂ ದಿವ್ಯಾ ಉರುಡುಗ
  • Share this:
ಕನ್ನಡದ ರಿಯಾಲಿಟಿ ಶೋ ಬಿಗ್​ ಬಾಸ್ ಸೀಸನ್​ 8 ಫೆ. 28ರಿಂದ ಆರಂಭವಾಗಿದೆ. 17 ಮಂದಿ ಸ್ಪರ್ಧಿಗಳು ಈಗಾಗಲೇ ಬಿಗ್​ ಬಾಸ್​ ಮನೆಯಲ್ಲಿ ಎರಡು ದಿನ ಕಳೆದಿದ್ದಾರೆ. ಅದಾಗಲೇ ಮನೆಯಲ್ಲಿ ಮೊಲದ ಕ್ಯಾಪ್ಟನ್ಸಿಗಾಗಿ ಒಂದು ಟಾಕ್ಸ್​ನಲ್ಲೂ ಭಾಗಿಯಾಗಿದ್ದಾರೆ. ಬ್ರೋ ಗೌಡ ಟಾಸ್ಕ್​ನಲ್ಲಿ ವಿಜೇತರಾಗಿ ಬಿಗ್​ ಬಾಸ್​ 8ರ ಮೊದಲ ಕ್ಯಾಪ್ಟನ್​ ಆಗಿದ್ದಾರೆ. ಇನ್ನು ಇದೇ ಮನೆಯಲ್ಲಿ ವಿವಾದಗಳಿಂದ ಹೆಸರು ಮಾಡಿರುವ ಪ್ರಶಾಂತ್​ ಸಂಬರಗಿ ಸಹ ಸ್ಪರ್ಧಿಯಾಗಿದ್ದಾರೆ. ಸ್ಯಾಂಡಲ್​ವುಡ್​ ಡ್ರಗ್ಸ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟ್ವೀಟ್​ ಮಾಡುವ ಮೂಲಕ ಸುದ್ದಿಯಲ್ಲಿದ್ದ ಪ್ರಶಾಂತ್ ಸಂಬರಗಿ ಮೊದಲ ದಿನದಿಂದಲೇ ಬಿಗ್​ ಬಾಸ್​ ಮನೆಯಲ್ಲಿ ಸದ್ದು ಮಾಡೋಕೆ ಶುರು ಮಾಡಿದ್ದಾರೆ. ಪ್ರಶಾಂತ್​ ಸಂಬರಗಿ ಮಾಡಿದ ಕೆಲಸದಿಂದಾಗಿ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ಟ್ರೋಲ್​ ಆಗುತ್ತಿದ್ದಾರೆ. ​ 

ಕಾರ್ಪೊರೇಟ್​ ಕಂಪನಿಯಲ್ಲಿ ಕೆಲಸ ಮಾಡಿರುವ ಹಿನ್ನೆಲೆಯುಳ್ಳ ಪ್ರಶಾಂತ್​ ಸಂಬರಗಿ ಸ್ವಂತ ಉದ್ಯಮ ನಡೆಸಿಕೊಂಡು ಹೋಗುತ್ತಿದ್ದಾರೆ. ಆದರೆ, ಈಗ ಬಿಗ್ ಬಾಸ್​ ಮನೆ ಸೇರಿಕೊಂಡಿದ್ದಾರೆ. ಬಿಗ್​ ಬಾಸ್​ ಮನೆಯಲ್ಲಿ ಸ್ಪರ್ಧಿಗಳ ನಡುವೆ ಆತ್ಮೀಯತೆ ಹಾಗೂ ಬಾಂಧವ್ಯ ಬೆಳೆಯೋದು ಸಹಜ. ಅಂತೆಯೇ  ಕೋಪ-ಜಗಳವೂ ಈ ಬಿಗ್ ಬಾಸ್​ ಮನೆಯಲ್ಲಿ ಪ್ರತಿ ಸೀಸನ್​ನಲ್ಲೂ ಕಾಮನ್​.

bigg boss kannada 8, conetion between Divya and Prashanth Sambargi, bigg boss kannada 8 today promo highlights, divya uruduga and Prashanth Sambargi, Bigg Boss kannada Promo Today, ಬಿಗ್ ಬಾಸ್ ಕನ್ನಡ, ಬಿಗ್ ಬಾಸ್ ಕನ್ನಡ ಪ್ರೋಮೋ, ದಿವ್ಯಾ ಉರುಡುಗ ಮತ್ತು ಪ್ರಶಾಂತ್ ಸಂಬರ್ಗಿ, ದಿವ್ಯಾ ಮತ್ತು ಪ್ರಶಾಂತ್ ಸಂಬರ್ಗಿ ನಡುವಿನ ಕನೆಕ್ಷನ್ ಏನು, Bigg Boss Kannada 8 what is going between Prashanth Sambargi and Divya Uruduga ae
ಪ್ರಶಾಂತ್​ ಸಂಬರಗಿ ಹಾಗೂ ದಿವ್ಯಾ ಉರುಡುಗ


ಈಗ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಇಂತಹದ್ದೇ ಒಂದು ವಿಷಯದಿಂದಾಗಿ ಸುದ್ದಿಯಲ್ಲಿದ್ದಾರೆ. ಹೌದು, ದಿವ್ಯಾ ಉರುಡುಗ ಹಾಗೂ ಪ್ರಶಾಂತ್​ ಸಂಬರಗಿ ಅವರ ನಡುವಿನ ಸಲುಗೆ ಹಾಗೂ ಕ್ಲೋಸ್​ನೆಸ್​ ನೋಡಿದ ನೆಟ್ಟಿಗರು ನಾನಾ ರೀತಿ ಚರ್ಚೆ ಮಾಡಲಾರಂಭಿಸಿದ್ದಾರೆ.
ಬಿಗ್ ಬಾಸ್​ ಮನೆಗೆ ಎಂಟ್ರಿ ಕೊಟ್ಟ ಎರಡೇ ದಿನದಲ್ಲಿ ಸಂಬರಗಿ ಹಾಗೂ ದಿವ್ಯಾ ಅವರ ನಡುವೆ ಇಷ್ಟು ಆತ್ಮೀಯತೆ ಬೆಳೆಯಲು ಹೇಗೆ ಸಾಧ್ಯ, ಸಂಬರಗಿ ಸದಾ ದಿವ್ಯಾ ಹಿಂದೆ ಸುತ್ತುತ್ತಿರುತ್ತಾರೆ... ಬಿಗ್ ಬಾಸ್​ನಲ್ಲಿ ಪ್ರೇಮ್ ಕಹಾನಿ ಎಂದೆಲ್ಲ ನೆಟ್ಟಿಗರು ಈಗ ಈ ಜೋಡಿಯನ್ನು ಟ್ರೋಲ್​ ಮಾಡುತ್ತಿದ್ದಾರೆ.


ಇನ್ನು ಬಿಗ್​ ಬಾಸ್​ ಕಾರ್ಯಕ್ರಮದಲ್ಲಿ ಟಾಸ್ಕ್​ ಮುಗಿಸಿದ ನಂತರ ಪ್ರಶಾಂತ್​ ಸಂಬರಗಿ ದಿವ್ಯಾ ಉಡುಗುರ ಅವರನ್ನು ಎತ್ತಿಕೊಂಡು ಬಂದು ಪಕ್ಕದಲ್ಲಿ ಕೂರಿಸುತ್ತಾರೆ. ಸಾಲದಕ್ಕೆ ದಿವ್ಯಾ ಅವರೊಂದಿಗೆ ಕುಳಿತು ಕಾಲ ಕಳೆಯುತ್ತಾ ಅವರ ಕೈ ಹಿಡಿದು ಭವಿಷ್ಯ ಹೇಳುವ ಪ್ರಯತ್ನ ಸಹ ಮಾಡಿದ್ದಾರೆ. ಇವೆಲ್ಲವೂ ಟ್ರೋಲ್​ ಮಾಡಲು ಟ್ರೋಲಿಗರಿಗೆ ಅನುವು ಮಾಡಿಕೊಟ್ಟಿದೆ.

ಇದನ್ನೂ ಓದಿ: Shubha Poonja: ಬಿಗ್​ ಬಾಸ್​ ಮನೆಯಲ್ಲಿ ಕಣ್ಣೀರಿಟ್ಟು ತನ್ನನ್ನು ಜೋಕರ್​ಗೆ ಹೋಲಿಸಿಕೊಂಡ ಶುಭಾ ಪೂಂಜಾ..!

ಬಿಗ್​ ಬಾಸ್​ ಆರಂಭವಾಗಿ ಎರಡು ದಿನಗಳು ಕಳೆಯುತ್ತಿದ್ದಂತೆಯೇ ಮನೆಯಲ್ಲಿ ಟಾಸ್ಕ್​, ನಾಮಿನೇಷನ್​ ಜೊತೆಗೆ ಕೋಪ-ಪುಟ್ಟದಾದ ಮನಸ್ತಾಪ ಎಲ್ಲವೂ ಆರಂಭವಾಗಿದೆ. ಇನ್ನು ವಾರಾಂತ್ಯದಲ್ಲಿ ಯಾರು ಮನೆಯಿಂದ ಹೊರ ಹೋಗುತ್ತಾರೆ. ಯಾರು ಪ್ರೇಕ್ಷಕರನ್ನು ರಂಜಿಸಿ, ಮನೆಯಲ್ಲೇ ಉಳಿದುಕೊಳ್ಳುತ್ತಾರೆ ಅನ್ನೋದು ಮುಂದಿನ ದಿನಗಳಲ್ಲಿ ತಿಳಿಯಲಿದೆ. ಇನ್ನು ಈ ಸಲ ವೂಟ್​ ಆ್ಯಪ್​ನಲ್ಲಿ ಬಿಗ್​ ಬಾಸ್​ ಕಾರ್ಯಕ್ರಮವನ್ನು 24 ಗಂಟಗಳು ವೀಕ್ಷಿಸಬಹುದಾಗಿದೆ. ಅನ್​ಕಟ್ ಸೀನ್​ಗಳ ಜೊತೆಗೆ ರಾತ್ರಿ ಸಂಚಿಕೆಯಲ್ಲಿ ಪ್ರಸಾರವಾಗಲಿರುವ ವಿಷಯವನ್ನೂ ಮೊದಲೇ ನೋಡಬಹುದಾಗಿದೆ.
Published by: Anitha E
First published: March 2, 2021, 5:17 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories