Bigg Boss 8: ಬಕೆಟ್​ ಅಂತ ಕರೆಸಿಕೊಂಡಿದ್ದ ಶಮಂತ್​ ಕೈಗೆ ಚೊಂಬು ಕೊಟ್ಟ ರಘು ಗೌಡ..!

ಶಮಂತ್ ಅವರು ಮನೆಯಲ್ಲಿ ಎಲ್ಲರ ಬಳಿ ಚೆನ್ನಾಗಿರುವ ಪ್ರಯತ್ನದಲ್ಲಿ ಬಕೆಟ್​ ಹಿಡಿಯುತ್ತಿದ್ದಾರೆ ಅಂತ ಅವರನ್ನು ಬಕೆಟ್ ಎಂದು ಕರೆಯಲಾಗಿತ್ತು. ಇದರ ಬೆನ್ನಲ್ಲೇ ಈಗ ಮತ್ತೆ ಶಮಂತ್​ಗೆ ಇದೇ ಕಾರಣಕ್ಕೆ ಚೊಂಬನ್ನು ಕೊಡಲಾಗಿದೆ. ಆದರೆ ಅದನ್ನು ಕೊಟ್ಟಿದ್ದು, ಬ್ರೊ ಗೌಡ ಅವರ ಸ್ನೇಹಿತ ರಘು ಗೌಡ.

ಬಿಗ್​ ಬಾಸ್​ ಮನೆಯಲ್ಲಿ ಚೊಂಬು ಟಾಸ್ಕ್​

ಬಿಗ್​ ಬಾಸ್​ ಮನೆಯಲ್ಲಿ ಚೊಂಬು ಟಾಸ್ಕ್​

  • Share this:
ಬಿಗ್ ಬಾಸ್​ ಮನೆಯಲ್ಲಿ ಇವತ್ತು ಸ್ನೇಹಿತರಾಗಿದ್ದವರು ಇನ್ನೊಂದು ಕ್ಷಣದಲ್ಲಿ ಎದುರಾಳಿಗಳಾಗಿರುತ್ತಾರೆ. ಕ್ಷಣ ಕ್ಷಣಕ್ಕೂ ಸ್ಪರ್ಧಿಗಳ ವರ್ತನೆಯಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತಿವೆ. ಈ ಹಿಂದೆ ಅಂದರೆ ಮೊದಲ ಸೀಸನ್​ನಲ್ಲಿ ಯಾರೂ ಹೆಚ್ಚಾಗಿ ಮುಂದೆ ನೇರವಾಗಿ ಮಾತನಾಡುತ್ತಿರಲಿಲ್ಲ. ಆದರೆ ಸೆಕೆಂಡ್ ಇನ್ನಿಂಗ್ಸ್​ನಲ್ಲಿ ನೇರ ಮಾತು ಹಾಗೂ ಮನಸ್ಸಿನಲ್ಲಿ ಅನ್ನಿಸಿದ್ದನ್ನು ಹೇಳಿಕೊಳ್ಳುವ ಪರಿಸ್ಥಿತಿ ಎದುರಾಗುತ್ತಿದೆ. ಅದರಲ್ಲೂ ಅಂತಹ ಪರಿಸ್ಥಿತಿಯನ್ನು ಬಿಗ್ ​ಬಾಸ್​ ಸೃಷ್ಟಿಸುತ್ತಿದ್ದಾರೆ. ಈ ಮನೆಯಲ್ಲಿ ಯಾರೂ ಸ್ನೇಹಿತರಲ್ಲ, ಯಾರೂ ವಿರೋಧಿಗಳಲ್ಲ. ಎಲ್ಲರೂ ತಮ್ಮ ತಮ್ಮ ಆಟವಾಡಲು ಬಂದಿರುವ ಸ್ಪರ್ಧಿಗಳು ಅನ್ನೋದು ಪ್ರತಿಯೊಬ್ಬರಿಗೂ ಅರಿವಾಗಿದೆ. ಬಿಗ್ ಬಾಸ್​ ಮನೆಯಲ್ಲಿ ಶಮಂತ್​, ನಿಧಿ, ಶುಭಾ ಪೂಂಜಾ  ಹಾಗೂ ರಘು ಮೊದಲ ಸೀಸನ್​ನಂತೆಯೇ ಈಗಳೂ ಇದ್ದಾರೆ. ಉಳಿದವರು ಮಾತ್ರ ಕೊಂಚ ಆಟದಲ್ಲಿ ಹಾಗೂ ವರ್ತನೆಯಲ್ಲಿ ಬದಲಾವಣೆ ಮಾಡಿಕೊಂಡಿದ್ದಾರೆ. 

ನಿನ್ನೆ ಕುರ್ಚಿ ಪಾಲಿಟಿಕ್ಸ್​ ಟಾಸ್ಕ್​ ಸಮಯದಲ್ಲಿ ಬಿಗ್ ಬಾಸ್​ ಮನೆಯಲ್ಲಿ ಎಲ್ಲರೂ ಕುಳಿತು ತಮಾಷೆ ಮಾಡುವಾಗ ಶಮಂತ್ ಅವರನ್ನು ಇತರ ಸ್ಪರ್ಧಿಗಳು ಟಾರ್ಗೆಟ್​ ಮಾಡಿ ಅವರಿಗೆ ಬಕೆಟ್​ ಅಂತ ಹೆಸರು ಕೊಟ್ಟರು. ಅದಕ್ಕೂ ಕಾರಣ ಇತ್ತು. ಶಮಂತ್​ ಅವರು ಎಂದಿನಂತೆ ಎಲ್ಲರ ಬಳಿ ಚೆನ್ನಾಗಿ ಇರುವ ಕಾರಣಕ್ಕೆ ಮತ್ತೆ ಪ್ರಿಯಾಂಕಾ, ನಿಧಿ, ದಿವ್ಯಾ ಸುರೇಶ್ ಹಾಗೂ ಪ್ರಶಾಂತ್ ಸಂಬರಗಿ ಅವರನ್ನುಹೊಗಳುವುದನ್ನು ಮುಂದುವರೆಸಿದ್ದರು. ಇದೇ ಕಾರಣಕ್ಕೆ ಶಮಂತ್​ ಅವರನ್ನು ಬಕೆಟ್​ ಅಂತ ಕರೆದಿದ್ದರು ಮನೆಯ ಸ್ಪರ್ಧಿಗಳು.
ಇನ್ನು ಈಗಷ್ಟೆ ಆರಂಭವಾಗಿರುವ ವಾರದ ಕತೆ ಕಿಚ್ಚನ ಜತೆ ಸಂಚಿಕೆಯಲ್ಲಿ ಮನೆಯ ಸ್ಪರ್ಧಿಗಳಿಗೆ ಒಂದು ಚೊಂಬನ್ನು ನೀಡಲಾಗಿತ್ತು. ಮೊದಲು ಆ ಚೊಂಬು ರಘು ಅವರ ಕೈ ಸೇರಿತ್ತು. ಅದನ್ನು ರಘು ಅವರು ಶಮಂತ್​ಗೆ ನೀಡುತ್ತಾರೆ. ಕಾರಣ ಶಮಂತ್ ಇನ್ನು ಸಹ ಎಲ್ಲರನ್ನು ಒಲೈಸುತ್ತಾ ಒಳ್ಳೆಯವನಾಗುವ ವರ್ತನೆ ಇನ್ನೂ ಬಿಟ್ಟಿಲ್ಲ. ಈ ಕಾರಣಕ್ಕೆ ಶಮಂತ್​ಗೆ ಚೊಂಬು ಕೊಡುತ್ತಿರುವುದಾಗಿ ರಘು ಕಾರಣ ನೀಡಿದ್ದರು.

ಇದನ್ನೂ ಓದಿ: ಶಾರುಖ್​ ಖಾನ್-ನಯನತಾರಾ ಜತೆ ತೆರೆ ಹಂಚಿಕೊಳ್ಳಲಿರುವ ಕಿಚ್ಚ ಸುದೀಪ್​..!

ಇನ್ನು ಈ ಚೊಂಬು ಕೊನೆಯದಾಗಿ ಯಾರ ಬಳಿ ಉಳಿಯುತ್ತದೆಯೋ ಅವರ ಇಡೀ ವಾರ ತಮ್ಮೊಂದಿಗೆ ಆ ಚೊಂಬನ್ನು ಎಲ್ಲಿ ಹೋದರೂ ತೆಗೆದುಕೊಂಡು ಹೋಗಬೇಕು ಅನ್ನೋದು ಬಿಗ್ ಬಾಸ್​ ಹೇಳಿದ್ದರು. ರಘು ಅವರಿಂದ ಶಮಂತ್, ಶಮಂತ್​ರಿಂದ ಚಕ್ರವರ್ತಿ, ಚಕ್ರವರ್ತಿ ಅವರು ಅದನ್ನು ಪ್ರಿಯಾಂಕಾಗೆ ಕೊಟ್ಟರು. ಅದಕ್ಕೆ ಕಾರಣ ಶಮಂತ್​ ಹಾಗೂ ಪ್ರಿಯಾಂಕಾ ಅವರ ನಡುವೆ ಈಗ ಆಗಿರುವ ಬಾಂಡಿಂಗ್ ಕೃತಕ ಅನ್ನೋದು.

ಇದನ್ನೂ ಓದಿ: Uday Kiran Birth Anniversary: ದುರಂತ ನಾಯಕ ಉದಯ್​ ಕಿರಣ್​ ಸಾವಿಗೆ ಕಾರಣವಾಯ್ತಾ ಆ ಒಂದು ಘಟನೆ..!

ಇನ್ನು ಪ್ರಿಯಾಂಕಾ ಅವರು ಈ ಚೊಂಬನ್ನು ಮುಂದೆ ವರ್ಗಾಯಿಸಿದ್ದು, ಚೊಂಬನ್ನು ವರ್ಗಾಯಿಸುವ ಆಟ ತುಂಬಾ ಸಮಯದವರೆಗೆ ಮುಂದುವರೆದಿತ್ತು. ಈ ಚೊಂಬನ್ನು ವರ್ಗಾಯಿಸುವಾಗ ನಿಧಿ ಸುಬ್ಬಯ್ಯ ಅವರು ಪ್ರಶಾಂತ್​ ಅವನನ್ನು ಡರ್​ಪೋಕ್​ ಹಾಗೂ ಛತ್ರಿ ಹಿಡಿಯುತ್ತಾರೆ ಅಂತ ಆರೋಪಿಸಿದ್ದಾರೆ. ಇದೇ ಮಾತನ್ನು ದಿವ್ಯಾ ಸುರೇಶ್ ಸಹ ಪ್ರಶಾಂತ್ ಅವರ ಬಗ್ಗೆ ಹೇಳಿದ್ದಾರೆ. ಎಲ್ಲರ ಬಳಿ ಹೋದ ಚೊಂಬು ಕಡೆಗೆ ಶಮಂತ್​ ಅವರ ಬಳಿಗೇ ಬಂದಿದೆ. ಹೀಗಾಗಿ ಬಿಗ್ ಬಾಸ್​ ಹೇಳುವವರೆಗೂ ಶಮಂತ್ ಅವರು ಈ ಚೊಂಬನ್ನು ಇಡೀ ಮನೆಯಲ್ಲಿ ಎಲ್ಲ ಕಡೆ ಚೊಂಬನ್ನು ಹಿಡಿದುಕೊಂಡೇ ಓಡಾಡಬೇಕು. ಶೌಚಾಲಯಕ್ಕೆ ಹೋಗುವಾಗ ಅದನ್ನು ಕಟ್ಟೆಯ ಮೇಲೆ ಇಟ್ಟು ಹೋಗಬಹುದಷ್ಟೆ.
Published by:Anitha E
First published: