Bigg Boss Kannada 8: ಎಲಿಮಿನೇಶನ್ ಪ್ರಕ್ರಿಯೆಗೆ ಟ್ವಿಸ್ಟ್​ ಕೊಟ್ಟ ಬಿಗ್ ಬಾಸ್​

ಈ ವಾರ ಮನೆಯಿಂದ ಹೊರ ಹೋಗಲು ನಿಧಿ ಸುಬ್ಬಯ್ಯ, ಪ್ರಿಯಾಂಕಾ ತಿಮ್ಮೇಶ್, ಪ್ರಶಾಂತ್​ ಸಂಬರಗಿ, ಚಕ್ರವರ್ತಿ ಚಂದ್ರಚೂಡ, ಮಂಜು ಪಾವಗಡ, ದಿವ್ಯಾ ಸುರೇಶ್​ ಹಾಗೂ ರಘು ಮನೆಯಿಂದ ಹೊರ ಹೋಗಲು ಈ ವಾರ ನಾಮಿನೇಟ್​ ಆಗಿದ್ದಾರೆ.

ಕನ್ನಡದ ರಿಯಾಲಿಟಿ ಶೋ  ಬಿಗ್​ ಬಾಸ್​ ಸೀಸನ್​ 8ರ ಸೆಕೆಂಡ್​ ಇನ್ನಿಂಗ್ಸ್​ನ ಸೂಪರ್ ಸಂಡೆ​

ಕನ್ನಡದ ರಿಯಾಲಿಟಿ ಶೋ  ಬಿಗ್​ ಬಾಸ್​ ಸೀಸನ್​ 8ರ ಸೆಕೆಂಡ್​ ಇನ್ನಿಂಗ್ಸ್​ನ ಸೂಪರ್ ಸಂಡೆ​

  • Share this:
ಬಿಗ್​ ಬಾಸ್​ ಸೀಸನ್​ 8ರ ಸೆಕೆಂಡ್ ಇನ್ನಿಂಗ್ಸ್​ನ ಮೊದಲ ಸೂಪರ್​ ಸಂಡೆ ಸಂಚಿಕೆ ಪ್ರಸಾರವಾಗುತ್ತಿದೆ. ಸುದೀಪ್​ ಸೂಪರ್​ ಲುಕ್ಸ್​ನಲ್ಲಿ ಕಿರುತೆರೆ ಮೇಲೆ ಎಂಟ್ರಿ ಕೊಟ್ಟಿದ್ದಾರೆ. ಬಿಗ್ ಬಾಸ್​ ವೀಕ್ಷಕರಿಗೆ ಸೂಪರ್​ ಸಂಡೆ ಸಂಚಿಕೆಯ ಆರಂಭದಲ್ಲೇ ವೀಕ್ಷಕರಿಗೆ ಕಾದಿತ್ತು ಶಾಕ್​. ಈ ವಾರ ಯಾರು ಬಿಗ್ ಬಾಸ್​ ಮನೆಯಿಂದ ಹೊರ ಹೋಗಲಿದ್ದಾರೆ ಎಂದು ಕಾಯಲಾಗುತ್ತಿತ್ತು. ನಿನ್ನೆಯೇ ನಡೆಯಬೇಕಿದ್ದ ಎಲಿಮಿನೇಶನ್​ ಪ್ರಕ್ರಿಯೆಯನ್ನು ಭಾನುವಾರ ಅಂದರೆ ಇವತ್ತಿಗೆ ಮುಂದೂಡಲಾಗಿತ್ತಯ. ಸುದೀಪ್​ ನಿರೂಪಣೆ ಆರಂಭಿಸುತ್ತಿದ್ದಂತೆಯೇ ಎಲಿಮಿನೇಶನ್​ ಪ್ರಕ್ರಿಯೆಗೆ ಕೊಟ್ಟಿರುವ ದೊಡ್ಡ ಟ್ವಿಸ್ಟ್​ ಬಗ್ಗೆ ಪ್ರಕಟಿಸಿದ್ದಾರೆ. ಇದರ ಜೊತೆಗೆ ಇಂದಿನ ಸಂಚಿಕೆಯಲ್ಲಿ ಯಾವೆಲ್ಲ ತಿರುವು ಹಾಗೂ ಸ್ಪರ್ಧಿಗಳಿಗೆ ಯಾವೆಲ್ಲ ರೀತಿ ಆಟವಾಡಿಸಲು ತಯಾರಿ ನಡೆಸಲಾಗಿದೆ ಎಂದೂ ಸುದೀಪ್​ ವಿವರಿಸಿದ್ದಾರೆ. ಅಷ್ಟಕ್ಕೂ ಸುದೀಪ್ ಕೊಟ್ಟ ಆ ಶಾಕಿಂಗ್ ಸುದ್ದಿ ಏನು ಗೊತ್ತಾ..?

ಒಂದು ಕಡೆ ಪ್ರತಿ ಶನಿವಾರ ಹಾಗೂ ಭಾನುವಾರ ವೀಕ್ಷಕರು ಕಿರುತೆರೆಯಲ್ಲಿ ಸುದೀಪ್​ ಅವರನ್ನು ನೋಡಲು ತುಂಬಾ ಜನ ಕಾಯುತ್ತಿರುತ್ತಾರೆ. ಇದರ ನಡುವೆ ಬಿಗ್ ಬಾಸ್​ ಮನೆಯಿಂದ ಹೊರ ಹೋಗುವ ಸ್ಪರ್ಧಿ ಯಾರು ಅಂತ ನೋಡಲು ಕಾತರರಾಗಿರುತ್ತಾರೆ.
ಈ ವಾರ ಮನೆಯಿಂದ ಹೊರ ಹೋಗಲು ನಿಧಿ ಸುಬ್ಬಯ್ಯ, ಪ್ರಿಯಾಂಕಾ ತಿಮ್ಮೇಶ್, ಪ್ರಶಾಂತ್​ ಸಂಬರಗಿ, ಚಕ್ರವರ್ತಿ ಚಂದ್ರಚೂಡ, ಮಂಜು ಪಾವಗಡ, ದಿವ್ಯಾ ಸುರೇಶ್​ ಹಾಗೂ ರಘು ಮನೆಯಿಂದ ಹೊರ ಹೋಗಲು ಈ ವಾರ ನಾಮಿನೇಟ್​ ಆಗಿದ್ದಾರೆ.

ಇದನ್ನೂ ಓದಿ: ಬಿಗ್ ಬಾಸ್​ ಮನೆಯಲ್ಲಿ ಇದ್ದರೂ ಇಲ್ಲದಂತಾದ ಪ್ರಶಾಂತ್ ಸಂಬರಗಿ: ಎಲಿಮಿನೇಟ್​ ಆದ್ರ ಟೀ ಮಾಸ್ಟರ್​..!

ಆದರೆ, ಈ ಸಲ ಬಿಗ್ ಬಾಸ್​ ಮನೆಯಲ್ಲಿ ವಾರಾಂತ್ಯದಲ್ಲಿ ನಡೆಯಲಿರುವ ಎಲಿಮಿನೇಶನ್​ ಪ್ರಕ್ರಿಯೆಗೆ ಟ್ವಿಸ್ಟ್​ ಸಿಕ್ಕಿದೆ. ಹೌದು, ಈ ವಾರ ಎಲಿಮಿನೇಶನ್​ ಪ್ರಕ್ರಿಯೆ ಇಲ್ಲವಂತೆ. ಹೀಗಾಗಿ ಯಾರೂ ಸಹ ಮನೆಯಿಂದ ಹೊರ ಹೋಗುತ್ತಿಲ್ಲ. ಈ ನಾಮಿನೇಶನ್​ ಮುಂದಿನ ವಾರಕ್ಕೆ ಮುಂದುವರೆಯಲಿದೆ.

ಮನೆಯ ಕ್ಯಾಪ್ಟನ್​ ಆದ ಮಂಜು ಪಾವಗಡ

ಬಿಗ್ ಬಾಸ್​ ಕನ್ನಡ ಸೀಸನ್​ 8ರ ಸೆಕೆಂಡ್​ ಇನ್ನಿಂಗ್ಸ್​ನ ಮೊದಲ ವಾರದಲ್ಲಿ ಕ್ಯಾಪ್ಟನ್ಸಿ ಟಾಸ್ಕ್​ ನಡೆದಿದೆ. ಈ ಟಾಸ್ಕ್​ನಲ್ಲಿ ಮತ್ತೆ ಹುಡುಗರೇ ಮೇಲುಗೈ ಸಾಧಿಸಿದ್ದಾರೆ. ಈ ಸಲವೂ ಯಾವೊಬ್ಬ ಹುಡುಗಿಯೂ ಕ್ಯಾಪ್ಟನ್​ ಆಗಿ ಆಯ್ಕೆಯಾಗಿಲ್ಲ. ಮಂಜು ಪಾವಗಡ ಕ್ಯಾಪ್ಟನ್​ ಆಗಿ ಆಯ್ಕೆಯಾಗಿದ್ದಾರೆ.


ಒಬ್ಬರೇ ವಿನ್ಯಾಸಕರ ಬಳಿ ಡ್ರೆಸ್​ ಡಿಸೈನ್​ ಮಾಡಿಸುತ್ತಿರುವ ಅರ್ವಿಯಾ

ಅರವಿಂದ್​ ಹಾಗೂ ದಿವ್ಯಾ ಉರುಡುಗ ಇಬ್ಬರೂ ಒಬ್ಬರೇ ವಸ್ತ್ರ ವಿನ್ಯಾಸಕರ ಬಳಿ ತಮ್ಮ ಡ್ರೆಸ್​ಗಳ ಡಿಸೈನ್ ಮಾಡಿಸಿದ್ದಾರಂತೆ. ಈ ಬಗ್ಗೆ ಸುದೀಪ್​ ಅವರೇ ಅರ್ವಿಯಾ ಬಳಿ ಕೇಳಿದ್ದಾರೆ. ಇಲ್ಲಿಯವರೆಗೂ ಈ ವಿಷಯ ಯಾರಿಗೂ ತಿಳಿದಿರಲಿಲ್ಲ. ಇನ್ನು ಈ ವಾರ ಯಾರದ್ದು ಬೆಸ್ಟ್​ ಡ್ರೆಸ್ಡ್​ ಅಂತ ಕೇಳಿದ್ದಕ್ಕೆ ದಿವ್ಯಾ ಉರುಡುಗ ಅರವಿಂದ್​ ಹಾಗೂ ಅರವಿಂದ್​ ದಿವ್ಯಾ ಉರುಡುಗ ಅವರ ಹೆಸರನ್ನೇ ತೆಗೆದುಕೊಂಡಿದ್ದಾರೆ.

ಬಿಗ್ ಬಾಸ್​ 8ರ ಸೆಕೆಂಡ್​ ಇನ್ನಿಂಗ್ಸ್​ನಲ್ಲಿ ದಿವ್ಯಾ ಉರುಡುಗ ಹಾಗೂ ಅರವಿಂದ್​ ಉಳಿದುಕೊಂಡರೆ, ಇಬ್ಬರಲ್ಲಿ ಯಾರಾದರೂ ಒಬ್ಬರು ಉಳಿದುಕೊಂಡು ಒಬ್ಬರು ಮನೆಗೆ ಹೋಗುವಂತೆ ಹೇಳಿ, ನಿರ್ಧಾರ ನಿಮಗೆ ಬಿಟ್ಟರೆ ನಿಮ್ಮ ನಿರ್ಧಾರ ಏನಿರುತ್ತದೆ ಅಂತ ಸುದೀಪ್​ ಪ್ರಶ್ನೆ ಕೇಳುತ್ತಾರೆ. ಅದಕ್ಕೆ ಉತ್ತರಿಸಲು ಹಿಂಜರಿಯುವ ದಿವ್ಯಾ ಉರುಡುಗ, ಸ್ವಲ್ಪ ಸಮಯದ ನಂತರ ನಾನೇ ಉಳಿದುಕೊಂಡು ಅರವಿಂದ್​ ಅವರನ್ನು ಹೋಗಲು ಹೇಳುತ್ತೇನೆ ಎಂದಿದ್ದಾರೆ.

ಇದನ್ನೂ ಓದಿ: Bigg Boss 8: ಅರವಿಂದ್​ಗಾಗಿ ಆಟವನ್ನು ಬಿಡುವುದಿಲ್ಲ ಎಂದ ದಿವ್ಯಾ ಉರುಡುಗ: ಅರವಿಂದ್​ ಪ್ರತಿಕ್ರಿಯೆ ಬೇರೆನೇ ಆಗಿತ್ತು...!

ಆದರೆ ಅರವಿಂದ್ ಮಾತ್ರ ದಿವ್ಯಾ ಅವರನ್ನು ಬಿಗ್ ಬಾಸ್​ ಮನೆಯಲ್ಲಿ ಇರುವಂತೆ ತಾನೇ ಹೊರಗೆ ಹೋಗುವುದಾಗಿ ಹೇಳಿದ್ದಾರೆ.ಆಟದ ವಿಷಯಕ್ಕೆ ಬಂದಾಗ ಎದುರಾಳಿಯಾಗಿ ಅರವಿಂದ್​ ಇದ್ದರೆ ಅವರನ್ನು ತಾನು ಪ್ರತಿಸ್ಪರ್ಧಿಯಾಗಿಯೇ ನೋಡುತ್ತೇನೆ ಎಂದಿದ್ದಾರೆ ದಿವ್ಯಾ ಉರುಡುಗ.ಇನ್ನು ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಅರವಿಂದ್​ ನಾನು ಸೋಲುತ್ತೇನೆ, ಆದರೆ ಆಟ ಬಿಟ್ಟುಕೊಡುವುದಿಲ್ಲ ಎಂದಿದ್ದಾರೆ.

ಇದೇ ಪ್ರಶ್ನೆಯನ್ನು ಅರವಿಂದ್ ಕೆ ಪಿ ಅವರಿಗೆ ಕೇಳಿದಾಗ ಅವರು ಯೋಚಿಸದೆಯೇ ದಿವ್ಯಾ ಬಿಗ್ ಬಾಸ್​ ಮನೆಯಲ್ಲೇ ಇರಲಿ, ನಾನು ಹೊರಗೆ ಹೋಗುತ್ತೇನೆ ಎಂದಿದ್ದಾರೆ. ಸುದೀಪ್​ ಅವರ ಪ್ರಶ್ನೆಗೆ ದಿವ್ಯಾ ಉರುಡುಗ ಕೊಟ್ಟ ಉತ್ತರದಿಂದ ಈ ಜೋಡಿಯ ನಡುವಿನ ಸಂಬಂಧದಲ್ಲಿ ಏನಾದರೂ ಬದಲಾವಣೆ ಕಾಣಬಹುದಾ ಅನ್ನೋ ಅನುಮಾನ ಈಗ ಕೆಲವರನ್ನು ಕಾಡಲಾರಂಭಿಸಿದೆ.
Published by:Anitha E
First published: