Bigg Boss 8 Elimination: ಬಿಗ್ ಬಾಸ್​ ಮನೆಯಿಂದ ಹೊರ ಹೋಗುತ್ತಾ ಚಕ್ರವರ್ತಿಗೆ ಶಾಕ್​ ಕೊಟ್ಟ ಪ್ರಿಯಾಂಕಾ ತಿಮ್ಮೇಶ್

Bigg Boss Kannada Season 8: ವೈಷ್ಣವಿ, ಶುಭಾ ಪೂಂಜಾ ಪ್ರಿಯಾಂಕಾ ತಿಮ್ಮೇಶ್​ ಹಾಗೂ ಪ್ರಶಾಂತ್ ಅವರು ಈ ವಾರ ಮನೆಯಿಂದ ಹೊರ ಹೋಗಲು ನಾಮಿನೇಟ್​ ಆಗಿದ್ದರು. ಇವರಲ್ಲಿ ಪ್ರಿಯಾಂಕಾ ಇಂದು ಎವಿಕ್ಟ್ ಆಗಿದ್ದು, ಮನೆಯಿಂದ ಹೊರ ಹೋಗುವ ಮುನ್ನ ಚಕ್ರವರ್ತಿ ಚಂದ್ರಚೂಡ ಅವರಿಗೆ ಶಾಕ್​ ಕೊಟ್ಟಿದ್ದಾರೆ.

ಪ್ರಿಯಾಂಕಾ ತಿಮ್ಮೇಶ್​ ಹಾಗೂ ಚಕ್ರವರ್ತಿ ಚಂದ್ರಚೂಡ

ಪ್ರಿಯಾಂಕಾ ತಿಮ್ಮೇಶ್​ ಹಾಗೂ ಚಕ್ರವರ್ತಿ ಚಂದ್ರಚೂಡ

  • Share this:
ಬಿಗ್ ಬಾಸ್​ ಸೀಸನ್​ 8ರ ಸೆಕೆಂಡ್​ ಇನ್ನಿಂಗ್ಸ್​ನ ಮೂರನೇ ಎಲಿಮಿನೇಷನ್​ ಇಂದು ನಡೆದಿದೆ. ಮೊದಲ ಎವಿಕ್ಷನ್​ನಲ್ಲಿ ನಿಧಿ ಸುಬ್ಬಯ್ಯ. ನಿಧಿ ನಂತರ ರಘು ಗೌಡ ಮನೆಯಿಂದ ಹೊರ ನಡೆದರು. ಮೂರನೇ ವಾರ ಅಂದರೆ ಇವತ್ತು ಪ್ರಿಯಾಂಕಾ ತಿಮ್ಮೇಶ್​ ಅವರು ಮನೆಯಿಂದ ಹೊರ ನಡೆದಿದ್ದಾರೆ. ವೈಲ್ಡ್​ ಕಾರ್ಡ್​ ಮೂಲಕ ಬಿಗ್ ಬಾಸ್​ ಸೀಸನ್​ ಒಂದರಲ್ಲೇ ಮನೆಗೆ ಎಂಟ್ರಿ ಕೊಟ್ಟಿದ್ದ ಪ್ರಿಯಾಂಕಾ ತಿಮ್ಮೇಶ್​ 54 ದಿನಗಳು ಕಾಲ ಮನೆಯಲ್ಲಿ ಕಳೆದಿದ್ದಾರೆ. 54 ದಿನಗಳ ಜರ್ನಿ ಇಂದಿಗೆ ಕೊನೆಯಾಗಿದ್ದು, ಪ್ರಿಯಾಂಕಾ ತಿಮ್ಮೇಶ್​  ಅವರು ಮನೆಯಿಂದ ಹೊರ ಹೋಗುವ ಮುನ್ನ ಚಕ್ರವರ್ತಿ ಚಂದ್ರಚೂಡ ಅವರಿಗೆ ಶಾಕ್​ ಕೊಟ್ಟಿದ್ದಾರೆ. 

ವೈಷ್ಣವಿ ನಿನ್ನೆಯೇ ಹೆಚ್ಚು ಮತಗಳನ್ನು ಪಡೆಯುವ ಮೂಲಕ ಸೇಫ್​ ಆಗಿದ್ದರು,. ಇನ್ನು ಪ್ರಶಾಂತ್ ಸಂಬರಗಿ ಹಾಗೂ ಶುಭಾ ಪೂಂಜಾ ಅವರಿಗೆ ತಮ್ಮದೇ ಆದ ಅಭಿಮಾನಿ ಬಳಗವಿದೆ. ಶುಭಾ ಎಂದಿನಂತೆ ತುಂಟಾಟದ ವರ್ತನೆಯಿಂಧ ರಂಜಿಸುತ್ತಿರುತ್ತಾರೆ. ಪ್ರಶಾಂತ್​ ಸಂಬರಗಿ ಅವರ ವರ್ತನೆಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಅವರು ಈ ಇಡೀ ವಾರ ಮನೆಯಲ್ಲಿ ಜಗಳವಾಡಿಲ್ಲ. ಯಾವುದೇ ವಿವಾದಕ್ಕೆ ಕಾರಣರಾಗಲಿಲ್ಲ. ಜೊತೆಗೆ ಬೇರೆ ಸ್ಪರ್ಧಿಗಳ ಜೊತೆ ಬೆರೆಯುತ್ತಿದ್ದಾರೆ. ಈ ಕಾರಣದಿಂದಾಗಿ ಈ ಸಲ ಪ್ರಿಯಾಂಕಾ ಅವರಿಗೆ ಕಡಿಮೆ ಮತ ಬಿದ್ದಿದೆ ಎನ್ನಲಾಗುತ್ತಿದೆ.


ಬಿಗ್ ಬಾಸ್​ ಫಿನಾಲೆ ಹತ್ತಿರ ಬರುತ್ತಿದ್ದಂತೆಯೇ ಮನೆಯಲ್ಲಿ ಸ್ಪರ್ಧೆ ಸೀರಿಯಸ್​ ಆಗುತ್ತಿದೆ. ಮನೆಯ ಒಳಗಿನ ಹಾಗೂ ಹೊರಗಿರುವ ವೀಕ್ಷಕರ ಲೆಕ್ಕಾಚಾರ ಸಹ ಜೋರಾಗಿದೆ. ಹೀಗಿರುವಾಗಲೇ ಮನೆಯಲ್ಲಿರುವ ಸ್ಪರ್ಧಿಗಳ ಸಂಖ್ಯೆ ಸಹ ವಾರದಿಂದ ವಾರಕ್ಕೆ ಕಡಿಮೆಯಾಗುತ್ತಿದೆ. ನಾಮಿನೇಟ್​ ಆಗಿರುವವರಲ್ಲಿ ಯಾರು ಹೊರಗೆ ಹೋಗಲಿದ್ದಾರೆ ಎಂದು ಊಹಿಸಲೂ ಸಾಧ್ಯವಾಗುತ್ತಿಲ್ಲ.

ಇದನ್ನೂ ಓದಿ: Bigg Boss Kannada Season 8: ವೈಷ್ಣವಿ ಗೌಡಗಿಂತ ದಿವ್ಯಾ ಸುರೇಶ್​ ಬೆಟರ್​ ಎಂದಿದ್ದೇಕೆ ಕಿಚ್ಚ ಸುದೀಪ್​..!

ಈ ಕುರಿತಾಗಿಯೇ ಎಲಿಮಿನೇಷನ್ ಪ್ರಕ್ರಿಯೆ ನಡೆಯುವ ಮೊದಲು ಪ್ರಶಾಂತ್ ಹಾಗೂ ಶುಭಾ ಪೂಂಜಾ ಮಾತನಾಡಿಕೊಂಡಿದ್ದರು. ನಿಧಿ ಹಾಗೂ ರಘು ಸ್ಟ್ರಾಂಗ್​ ಕಂಟೆಸ್ಟೆಂಟ್​ಗಳಾಗಿದ್ದರು. ಅವರೇ ಮನೆಯಿಂದ ಹೊರ ಹೋದ ನಂತರ ನನಗೂ ಭಯ ಶುರುವಾಗಿದೆ ಎಂದು ಪ್ರಶಾಂತ್ ಹೇಳಿದರೆ, ಈ ಸಲ ನಾನೇ ಮನೆಯಿಂದ ಹೊರ ಹೋಗುದು ಅಂತ ಶುಭಾ ಪೂಂಜಾ ಹೇಳಿಕೊಂಡಿದ್ದರು. ಆದರೆ ಚಕ್ರವರ್ತಿ ಮಾತ್ರ ಈ ಸಲ ಪ್ರಿಯಾಂಕಾ ಮನೆಯಿಂದ ಹೋಗುತ್ತಾರೆ ಎಂದಿದ್ದರು.

ಚಕ್ರವರ್ತಿಗೆ ಶಾಕ್​ ಕೊಟ್ಟ ಪ್ರಿಯಾಂಕಾ ತಿಮ್ಮೇಶ್​

ಎಂದಿನಂತರ ಮನೆಯಿಂದ ಹೊರ ಹೋಗುವ ಸ್ಪರ್ಧಿಗಳಿಗೆ ಕೊಡುವ ವಿಶೇಷ ಅಧಿಕಾರ ಇವತ್ತು ಪ್ರಿಯಾಂಕಾ ತಿಮ್ಮೇಶ್ ಅವರಿಗೂ ಸಿಕ್ಕಿತ್ತು. ಆ ಅಧಿಕಾರ ಅಂದರೆ ಮನೆಯಿಂದ ಹೊರ ಹೋಗುವ ಮುನ್ನ ಮುಂದಿನ ವಾರ ಮನೆಯಿಂದ ಹೊರ ಗೋಗಲು ಒಬ್ಬ ಸ್ಪರ್ಧಿಯನ್ನು ನಾಮಿನೇಟ್ ಮಾಡುವುದು. ಎಲ್ಲರು ಅಂದುಕೊಂಡಿದ್ದಂತೆಯೇ ಪ್ರಿಯಾಂಕಾ ತಿಮ್ಮೇಶ್ ಚಕ್ರವರ್ತಿ ಚಂದ್ರಚೂಡ ಅವರನ್ನೇ ನೇರವಾಗಿ ನಾಮಿನೇಟ್​ ಮಾಡಿದ್ದಾರೆ. ಈ ನಾಮಿನೇಷನ್​ನಿಂದಾಗಿ ಚಕ್ರವರ್ತಿ ಅವರಿಗೆ ಶಾಕ್​ ಆಗಿದೆ. ಆದರೆ ಪ್ರಶಾಂತ್​  ಇದು ಆಗುತ್ತೆ ಅಂತ ಮೊದಲೇ ತಿಳಿದಿತ್ತು ಅಲ್ವಾ. ಅದಕ್ಕೆ ಬೇಸರ ಮಾಡಿಕೊಳ್ಳಬಾರದು ಎಂದು ಚಕ್ರವರ್ತಿಗೆ ಸಮಾಧಾನ ಮಾಡಿದ್ದಾರೆ.

ಚಕ್ರವರ್ತಿ ಅವರು ಎಂದಿನಂತೆ ಪ್ರಿಯಾಂಕಾ ಮನೆಯಿಂದ ಹೊರ ನಡೆಯುತ್ತಿದ್ದಂತೆಯೇ ಅವರ ಬಗ್ಗೆ ಮಾತನಾಡಲು ಆರಂಭಿಸಿದ್ದಾರೆ. ಪ್ರಿಯಾಂಕಾ ಅವರ ಮಾತು ಯಾರಿಗೂ ಅರ್ಥವಾಗುತ್ತಿರಲಿಲ್ಲ ಅಲ್ವಾ. ಎಲ್ಲರೂ ಅವರು ಮಾತನಾಡುವಾಗ ಕಷ್ಟಪಟ್ಟು ಅರ್ಥ ಮಾಡಿಕೊಳ್ಳುತ್ತಿದ್ದರು ಎಂದೆಲ್ಲ ಟೀಕಿಸಲು ಆರಂಭಿಸಿದ್ದಾರೆ ಚಕ್ರವರ್ತಿ.

ಇದನ್ನೂ ಓದಿ: Bigg Boss Kannada season 8: ಶುಭಾ ಪೂಂಜಾ ಮಾಡಿದ ದೋಸೆ ತಿಂದ ಕಾಗೆ ಮತ್ತೆ ಹಾರಲೇ ಇಲ್ವಂತೆ..! 

ಬಿಗ್ ಬಾಸ್​ ಮನೆಯಿಂದ ತೆಗೆದುಕೊಂಡು ಹೋಗುತ್ತಿರುವ ಒಂದು ಒಳ್ಳೆಯ ವಿಷಯ ಅಂದ್ರೆ ದಿವ್ಯಾ ಸುರೇಶ್ ಅವರ ಸ್ನೇಹ ಹಾಗೂ ಸುದೀಪ್​ ಅವರೊಂದಿಗೆ ಮಾತನಾಡಿದ್ದು ಅಂತ ಸಂತಸ ವ್ಯಕ್ತಪಡಿಸಿದ್ದಾರೆ ಪ್ರಿಯಾಂಕಾ.

ಅರ್ಜುನ್ ಗೌಡ ಹಾಗೂ ಶುಗರ್ ಲೆಸ್​ ಸಿನಿಮಾ ರಿಲೀಸ್​ಗೆ ರೆಡಿ ಇದೆ. ಈ ಸಿನಿಮಾ ಹೆಚ್ಚು ಜನರನ್ನು ತಲುಪಲಿ ಹಾಗೂ  ಮತ್ತಷ್ಟು ಒಳ್ಳೆಯ ಸಿನಿಮಾಗಳಿಗೆ ಸಹಿ ಮಾಡುವ ಆಶಯವಿದೆ ಎಂದಿದ್ದಾರೆ.
Published by:Anitha E
First published: