news18-kannada Updated:September 11, 2020, 3:24 PM IST
ಬಿಗ್ ಬಾಸ್
Bigg Boss Kannada Season 8: ಕನ್ನಡದ ಹೆಸರಾಂತ ರಿಯಾಲಿಟಿ ಶೋ ಬಿಗ್ ಬಾಸ್ ಈ ಬಾರಿ ಇರಲ್ಲ ಎಂಬ ಸುದ್ದಿ ಕಿರುತೆರೆಯಲ್ಲಿ ಕೇಳಿಬರುತ್ತಿದೆ. ಕಿಚ್ಚ ಸುದೀಪ್ ನಿರೂಪಣೆಯಲ್ಲಿ ಕನ್ನಡದ ಬಿಗ್ ಬಾಸ್ ಕಾರ್ಯಕ್ರಮ ನಡೆಯುತ್ತಾ ಬಂದಿದೆ. ಈ ಬಾರಿಯ ಬಿಗ್ ಬಾಸ್ ಸೀಸನ್ 8 ಪ್ರಾರಂಭಕ್ಕೆ ಪ್ರೇಕ್ಷಕರು ಕಾದುಕುಳಿತ್ತಿದ್ದರು. ಆದರೀಗ ಕೇಳಿ ಬರುತ್ತಿರುವಂತೆ ಬಿಗ್ ಬಾಸ್ ಸೀಸನ್ 8 ಈ ಬಾರಿ ನಡೆಯಲ್ಲ ಎನ್ನಲಾಗುತ್ತಿದೆ.
ಕೊರೋನಾ ಎಲ್ಲಾ ಕ್ಷೇತ್ರಗಳಿಗೆ ಸಮಸ್ಯೆಯನ್ನು ತಂದೊಡ್ಡಿದೆ. ಕಿರುತೆರೆ, ಹಿರಿತೆರೆಗೂ ಸಮಸ್ಯೆಯನ್ನು ತಂದಿಟ್ಟಿದೆ. ಒಂದೆಡೆ ಶೂಟಿಂಗ್ ಇಲ್ಲ. ಮತ್ತೊಂದೆಡೆ ಸಿನಿಮಾಗಳು ಥಿಯೇಟರ್ನಲ್ಲಿ ರಿಲೀಸ್ ಆಗಲು ಕ್ಯೂನಲ್ಲಿ ನಿಂತಿದೆ. ಇಂತಹ ಸ್ಥಿತಿಗಳು ನಿರ್ಮಾಣವಾಗಿದೆ. ಆದರೂ ಕೆಲವು ಚಿತ್ರತಂಡಗಳು ನಿಧಾನವಾಗಿ ಶೂಟಿಂಗ್ ಶುರು ಮಾಡಿದೆ. ಅದರಂತೆ ಬಿಗ್ ಬಾಸ್ ಕೂಡ ಕನ್ನಡದ ಹೆಸರಾಂತ ರಿಯಾಲಿಟಿ ಶೋ. ಆಗಿದ್ದು, ಸೆಪ್ಟೆಂಬರ್ ತಿಂಗಳಿನಿಂದ ಪ್ರಾರಂಭವಾಗಬೇಕಾಗಿತ್ತು. ಆದರೆ ಕೊರೋನಾ ಕಾರಣದಿಂದಾಗಿ ತಡವಾಗಲಿದೆ ಎನ್ನಲಾಗುತ್ತಿದೆ.
ಹರಿದಾಡುತ್ತಿರುವ ಮಾಹಿತಿ ಪ್ರಕಾರ, ಕಿಚ್ಚನ ನಿರೂಪಣೆಯಲ್ಲಿ ಮೂಡಿಬರಬೇಕಾಗಿದ್ದ ಬಿಗ್ ಬಾಸ್ ಸೀಸನ್ 8 ಈ ಬಾರಿ ಕೊಂಚ ತಡವಾಗಿ ಬರಲಿದೆಯಂತೆ, ಅಂದರೆ ಆರು ತಿಂಗಳ ಹೆಚ್ಚಿನ ಸಮಯ ತೆಗೆದುಕೊಂಡು ಕಾರ್ಯಕ್ರಮ ಪ್ರಾರಂಭಿವಾಗಲಿದೆ ಎಂಬ ಮಾತುಗಳು ಕೇಳಿಬಂದಿದೆ.
ಹಿಂದಿಯಲ್ಲಿ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿದೆ. ಆನ್ಲೈನ್ ಮೂಲಕ ಸ್ಪರ್ಧಿಗಳ ಆಯ್ಕೆಯನ್ನು ಮಾಡಲಾಗಿದೆಯಂತೆ. ಇತ್ತೀಚೆಗೆ ಸಲ್ಮಾನ್ ಖಾನ್ ನಿರೂಪಣೆಯಲ್ಲಿ ಮೂಡಿ ಬರುತ್ತಿರುವ ಬಿಗ್ ಬಾಸ್ ಕಾರ್ಯಕ್ರಮದ ಪ್ರೋಮೋವನ್ನು ವಾಹಿನಿಯು ಬಿಡುಗಡೆ ಮಾಡಿತ್ತು.
Published by:
Harshith AS
First published:
September 11, 2020, 3:04 PM IST