Bigg Boss 8 Last Episode: ಬಿಗ್​ ಬಾಸ್​ ಮನೆಯಿಂದ ಹೊರ ಬರುವ ಮುನ್ನ ಕಣ್ಣೀರಿಟ್ಟ ಸ್ಪರ್ಧಿಗಳು: ಈ ದಿನ ಪ್ರಸಾರವಾಗಲಿದೆ ಕೊನೆಯ ಎಪಿಸೋಡ್​

ಕೆಲವೇ ಗಂಟೆಗಳ ಹಿಂದೆಯಷ್ಟೆ ಒಂದು ಹೊಸ ಪ್ರೊಮೊ ಪೋಸ್ಟ್​ ಮಾಡಲಾಗಿದೆ. ಇದರಲ್ಲಿ ಬಿಗ್  ಬಾಸ್ ಸೀಸನ್​ 8ರ ಫಿನಾಲೆ ಎಪಿಸೋಡ್​ಗಳ ಪ್ರಸಾರ ಯಾವಾಗ ಎಂದು ತಿಳಿಸಲಾಗಿದೆ.

ಬಿಗ್​ ಬಾಸ್​ ಸೀಸನ್​ 8

ಬಿಗ್​ ಬಾಸ್​ ಸೀಸನ್​ 8

  • Share this:
ಕನ್ನಡದ ಕಿರುತೆಯಲ್ಲಿ ಪ್ರಸಾರವಾಗುವ ರಿಯಾಲಿಟಿ ಶೋ ಬಿಗ್​ ಬಾಸ್​ ಸೀಸನ್​​ 8 ಕೊನೆಗೊಳ್ಳಲು 29 ದಿನಗಳು ಬಾಕಿ ಇತ್ತು. ಆಗಲೇ ಕಾರ್ಯಕ್ರಮ ಅರ್ಧಕ್ಕೆ ಕೊನೆಗೊಳ್ಳಿದೆ ಅನ್ನೋ ಸುದ್ದಿ ಹೊರ ಬಿದ್ದಿತ್ತು. ಕಿಚ್ಚ ಸುದೀಪ್​ ಅವರ ನಿರೂಪಣೆಯಲ್ಲಿ ಮೂಡಿಬರುತ್ತಿದ್ದ ಕಾರ್ಯಕ್ರಮ ಕೊರೋನಾ ಕಾರಣದಿಂದ ರದ್ದಾಗಿದೆ. ಮಾತ್ರವಲ್ಲದೆ ಈ ವಿಚಾರ ವೀಕ್ಷಕರಿಗೆ ನಿರಾಸೆ ಮೂಡಿಸಿದೆ. ಕೊರೋನಾ ಆರ್ಭದ ನಡುವೆಯೂ ಬಿಗ್​ ಬಾಸ್​ ಸೀಸನ್​ 8 ಪ್ರಸಾರವಾಗುತ್ತಿತ್ತು. ಯಾವುದೇ ಅಡ್ಡಿ ಆತಂಕ ಇಲ್ಲದೆ ಕಾರ್ಯಕ್ರಮವನ್ನು ಎಲ್ಲ ರೀತಿಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ನಡೆಸಿಕೊಂಡು ಹೋಗಲಾಗುತ್ತಿತ್ತು. ಆದರೆ ಕೊರೋನಾ ಎರಡನೇ ಆರಂಭವಾದಾಗಿನಿಂದ ಸೋಂಕಿತರ ಸಂಖ್ಯೆ ಹಾಗೂ ಸಾವಿನ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಇದೇ ಕಾರಣದಿಂದ ಇಂದಿನಿಂದ ಮತ್ತೆ ಸಂಪೂರ್ಣ ಲಾಕ್​ಡೌನ್​ ಮಾಡಲಾಗಿದೆ.

ಕೊರೋನಾ ಲಾಕ್​ಡೌನ್​ನಿಂದಾಗಿ ಸದ್ಯಕ್ಕೆ ಚಿತ್ರೀಕರಣಕ್ಕೆ ಬ್ರೇಕ್​ ಬಿದ್ದಿದೆ. ಇದೇ ಕಾರಣದಿಂದಾಗಿ ಬಿಗ್​ ಬಾಸ್​ ಸೀಸನ್​ 8ನ್ನೂ ಅರ್ಧಕ್ಕೆ ನಿಲ್ಲಿಸಲಾಗಿದೆ. ಹೀಗೆಂದು ಕಲರ್ಸ್​ ಕನ್ನಡದ ಬ್ಯುಸಿನೆಸ್​ ಹೆಡ್​ ಪರಮೇಶ್ವರ್​ ಗುಂಡ್ಕಲ್​ ಸಾಮಾಜಿಕ ಜಾಲತಾಣದ ಮೂಲಕ ಶನಿವಾರ ತಿಳಿಸಿದ್ದರು.
ಬಿಗ್ ಬಾಸ್ ಶುರುವಾಗಿ ಇವತ್ತಿಗೆ ಎಪ್ಪತ್ತೊಂದನೇ ದಿನ. ಪಿಸಿಆರ್​ನಲ್ಲಿ ನಿಂತು ಈ ಮನೇಲಿರೋ ಹನ್ನೊಂದು ಜನ ಓಡಾಡುತ್ತಿರುವುದನ್ನು ನೋಡಿದಾಗ ಒಂದಕ್ಕಿಂತ ಹೆಚ್ಚು ಭಾವನೆಗಳು ಒಂದೇ ಸಲಕ್ಕೆ ಬಂದು ಮನಸ್ಸಿಗೆ ವಿಚಿತ್ರವಾದ ತಳಮಳ. ಹೊರಗಡೆ ಎದುರಾಗಿರುವ ಕಷ್ಟದ ಸವಾಲು ಗೊತ್ತಿಲ್ಲದೇ ಒಳಗಡೆ ಇರುವವರೆಲ್ಲ ಖುಷಿಯಾಗಿದ್ದಾರೆ. ಐಸೋಲೇಷನ್​ನಲ್ಲಿ ಇರುವುದರಿಂದ ಸುರಕ್ಷಿತವಾಗಿಯೂ ಇದ್ದಾರೆ. ಎಲ್ಲರಿಗೂ ಹೊರಗಡೆ ಆಗಿರುವ ಬೆಳವಣಿಗೆ ತಿಳಿಸಿ ನಾಳೆ ಹೊರಗಡೆ ಕರೆಯುತ್ತಿದ್ದೇವೆ. ಅನಂತರ ಅವರನ್ನು ಮತ್ತು ತಂಡವನ್ನು ಸುರಕ್ಷಿತವಾಗಿ ಮನೆಗೆ ಕಳುಹಿಸಲು ವ್ಯವಸ್ಥೆ ಆಗುತ್ತಿದೆ. ನೂರಾರು ದಿನಗಳ ಕೆಲಸ. ನೂರಾರು ಜನರ ಕೆಲಸ. ಎಲ್ಲವನ್ನೂ ಪಕ್ಕಕ್ಕಿಟ್ಟು ಶ್ರದ್ಧೆಯಿಂದ ಕೆಲಸ ಮಾಡಿದ ಒಂದು ತಂಡದ ಕನಸು ಅರ್ಧಕ್ಕೇ ನಿಂತಿದೆ. ಕಷ್ಟದ ತೀರ್ಮಾನವಾದರೂ ಸಮಾಧಾನ ಕೊಟ್ಟ ತೀರ್ಮಾನ ಎಂದು ಕಾರ್ಯಕ್ರಮ ರದ್ದಾದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು ಪರಮೇಶ್ವರ್​ ಗುಂಡ್ಕಲ್.

ಇದನ್ನೂ ಓದಿ: ಕನ್ನಡದಲ್ಲಿ ಸೂಪರ್​ ಹಿಟ್​ ಹಾಡುಗಳನ್ನು ಬರೆದ ಖ್ಯಾತ ಗೀತೆ ರಚನೆಕಾರ ಶ್ರೀರಂಗ ನಿಧನ..!

ಮನಸ್ಸು ಭಾರವಾಗಿದೆ. ಈ ಶೋ ನಿಲ್ಲುತ್ತಿದೆ ಅಂತಲ್ಲ. ಹೊರಗಡೆ ಗಾಳಿಯಲ್ಲಿ ಓಡಾಡುತ್ತಿರುವ ಕಣ್ಣಿಗೆ ಕಾಣದ ಅನಿಶ್ಚಿತತೆಯಿಂದ ಇನ್ನಿಲ್ಲದ ಕಳವಳ. ಎಲ್ಲರಿಗೂ ಈ ಕಳವಳಕ್ಕೊಂದು ಉತ್ತರ ಬೇಗ ಸಿಗಲಿ. ಸುರಕ್ಷಿತವಾಗಿರಿ ಎಂದೂ ಸಹ ಬರೆದುಕೊಂಡಿದ್ದಾರೆ.
ಇನ್ನು , ಕಳೆದ ಎರಡು ವಾರಾಂತ್ಯಗಳಿಂದ ಸುದೀಪ್​ ಅವರು ನಿರೂಪಣೆ ಮಾಡುತ್ತಿಲ್ಲ ಅನಾರೋಗ್ಯದಿಂದ ಅವರು ಚಿತ್ರೀಕರಣಕ್ಕೆ ಹಾಜರಾಗಲಿಲ್ಲ. ಸುದೀಪ್​ ಅವರನ್ನು ನೋಡಲು ಕಾಯುತ್ತಿದ್ದ ಅಭಿಮಾನಿಗಳಿಗೂ ನಿರಾಸೆಯಾಗಿದೆ. ಇನ್ನು ನಿನ್ನೆ ಅಂದರೆ ಭಾನುವಾರ ಕಡೆಯ ಸಂಚಿಕೆ ಹೇಗೆಲ್ಲ ಇರಬಹುದು ಹಾಗೂ ಸುದೀಪ್​ ಅವರು ಬಂದಿರುತ್ತಾರಾ ಎಂದು ಸಾಕಷ್ಟು ಮಂದಿ ಬಿಗ್​ ಬಾಸ್​ ನೋಡಲು ಕಾತರದಿಂದ ಕಾಯುತ್ತಿದ್ದರು. ಆದರೆ ನಿನ್ನೆ ಸುದೀಪ್​ ಅವರಾಗಲಿ, ಕೊನೆಯ ಸಂಚಿಕೆ ಎಂದು ಹೇಳಿಕೊಳ್ಳುವಂತಹ ಎಪಿಸೋಡ್​ ಆಗಲಿ ಪ್ರಸಾರವಾಗಲಿಲ್ಲ.

ಇದನ್ನೂ ಓದಿ: Bigg Boss 8: ಬಿಗ್​ ಬಾಸ್​ ಮನೆಯಿಂದ ಹೊರ ಹೋಗುವ ವಿಷಯ ತಿಳಿಯದ ಶುಭಾ ಪೂಂಜಾ ಒಂದು ಚೀಲ ಮಾನಿವ ಹಣ್ಣು ಬೇಕೆಂದಿದ್ದರು..!

ಕೆಲವೇ ಗಂಟೆಗಳ ಹಿಂದೆಯಷ್ಟೆ ಒಂದು ಹೊಸ ಪ್ರೋಮೋ ಪೋಸ್ಟ್​ ಮಾಡಲಾಗಿದೆ. ಇದರಲ್ಲಿ ಬಿಗ್  ಬಾಸ್ ಸೀಸನ್​ 8ರ ಫಿನಾಲೆ ಎಪಿಸೋಡ್​ಗಳ ಪ್ರಸಾರ ಯಾವಾಗ ಎಂದು ತಿಳಿಸಲಾಗಿದೆ.
ಎಲ್ಲರ ನಿರೀಕ್ಷೆ ಹಾಗೂ ಊಹೆಯಂತೆಯೇ ಕನ್ನಡದ  ಬಿಗ್​ ಬಾಸ್​ ಸೀಸನ್​ 8ಕ್ಕೆ ವಿಶೇಷವಾಗಿ ತೆರೆ ಎಳೆಯಲಾಗಿದೆ. ಈಗಾಗಲೇ ಈ ಎಪಿಸೋಡ್​ಗಳ ಚಿತ್ರೀಕರಣ ಮುಗಿದಿದ್ದು, ಮಂಗಳವಾರ ಹಾಗೂ ಬುಧವಾರ ರಾತ್ರಿ 7-30ಕ್ಕೆ ಕೊನೆಯ ಎಪಿಸೋಡ್​ಗಳು ಪ್ರಸಾರವಾಗಲಿವೆ.

ಇದನ್ನೂ ಓದಿ: Shruthi Krishna: ಅಪ್ಪ-ಅಮ್ಮಂದಿರ ಅಪರೂಪದ ಫೋಟೋ ಹಂಚಿಕೊಂಡ ನಟಿ ಶ್ರುತಿ..!

ಈ ಪ್ರೋಮೋದಲ್ಲಿ ಮನೆಯ ಸ್ಪರ್ಧಿಗಳಿಗೆ ಹೊರ ಜಗತ್ತಿನಲ್ಲಿ ನಡೆಯುತ್ತಿರುವ ವಿದ್ಯಾಮಾನಗಳ ಬಗ್ಗೆ ವಿಡಿಯೋ ತೋರಿಸಲಾಗುತ್ತದೆ. ನಂತರ ಹೆಚ್ಚುತ್ತಿರುವ ಕೊರೋನಾ ಸೋಂಕಿತರ ಸಂಖ್ಯೆಯಿಂದಾಗಿ ರಾಜ್ಯದಲ್ಲಿ ಲಾಕ್​ಡೌನ್​ ಮಾಡಿರುವ ಬಗ್ಗೆಯೂ ಸ್ಪರ್ಧಿಗಳಿಗೆ ತಿಳಿಸಲಾಗುತ್ತದೆ. ಸ್ಪರ್ಧಿಗಳು ಕಣ್ಣೀರಿಡುತ್ತಾ ಮನೆಯಿಂದ ಹೊರ ನಡೆಯುತ್ತಾರೆ. ಆದರೆ ಈ ಈ ಸಂಚಿಕೆಗಳಲ್ಲಿ ಕಿಚ್ಚ ಸುದೀಪ್​ ಅವರ ಝಲಕ್​ ಎಲ್ಲೂ ಕಾಣಿಸುವುದಿಲ್ಲ. ಅಷ್ಟಕ್ಕೂ ಸುದೀಪ್​ ಅವರು ಕೊನೆಯ ಎಪಿಸೋಡ್​ಗಳಲ್ಲಿ ಕಾಣಿಸಿಕೊಳ್ಳುತ್ತಾರಾ ಅಥವಾ ಇಲ್ಲವಾ ಅನ್ನೋದು ಇನ್ನೂ ಬಹಿರಂಗವಾಗಿಲ್ಲ.


ಇನ್ನು ಸೀಸನ್​ 8ರ ಬಿಗ್​ ಬಾಸ್​ ಮನೆಗೆ 16 ಸ್ಪರ್ಧಿಗಳು ಒಳಗೆ ಹೋಗಿದ್ದರು. ಅದರಲ್ಲಿ ಚಂದ್ರಕಲಾ, ಧನುಶ್ರೀ, ಗೀತಾ, ನಿರ್ಮಲಾ, ರಾಜೀವ್​, ಶಂಕರ್​ ಅಶ್ವಥ್​, ವಿಶ್ವನಾಥ್​ ಹಾವೇರಿ ಎಲಿಮಿನೇಟ್​ ಆಗಿ ಹೊರಬಂದಿದ್ದಾರೆ. ಆ ಬಳಿಕ ವೈಷ್ಣವಿ, ರಘು, ಅರವಿಂದ್​, ಮಂಜು ಪಾವಗಡ, ಶುಭಾ ಪೂಂಜಾ, ದಿವ್ಯಾ ಸುರೇಶ್​, ನಿಧಿ ಸುಬ್ಬಯ್ಯ, ಪ್ರಶಾಂತ್​ ಸಂಬರಗಿ, ಶಮಂತ್​ ಮನೆಯೊಳಕ್ಕಿದ್ದರು. ನಂತರ ಪ್ರಿಯಾಂಕಾ ಮತ್ತು ಚಕ್ರವರ್ತಿ ಚಂದ್ರಚೂಡ್​ ವೈಲ್ಡ್​ ಕಾರ್ಡ್​ ಮೂಲಕ ಉಳಿದ ಸ್ಪರ್ಧಿಗಳ ಜೊತೆಗೆ ಸೇರಿದರು​. ಆದರೀಗ ಇವರೆಲ್ಲರು ಮನೆಯಿಂದ ಹೊರಬರುತ್ತಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ದಿವ್ಯಾ ಉರುಡುಗ ಅವರು ಅನಾರೋಗ್ಯ ಕಾರಣದಿಂದ ಹೊರಬಂದಿದ್ದರು.
Published by:Anitha E
First published: