• Home
  • »
  • News
  • »
  • entertainment
  • »
  • Bigg Boss House: ಬಿಗ್ ಬಾಸ್ ಮನೆಯಲ್ಲೊಂದು ಈರುಳ್ಳಿ ಕಥೆ! ಗದ್ದಲವೋ ಗದ್ದಲ!

Bigg Boss House: ಬಿಗ್ ಬಾಸ್ ಮನೆಯಲ್ಲೊಂದು ಈರುಳ್ಳಿ ಕಥೆ! ಗದ್ದಲವೋ ಗದ್ದಲ!

ಬಿಗ್ ಬಾಸ್ ಮನೆಯಲ್ಲಿ ಸದ್ದು-ಗದ್ದಲ-ಬೇಸರ

ಬಿಗ್ ಬಾಸ್ ಮನೆಯಲ್ಲಿ ಸದ್ದು-ಗದ್ದಲ-ಬೇಸರ

ನಾನೇ ತಪ್ಪು ಮಾಡಿದೆ. ನನ್ನಿಂದ ತಪ್ಪಾಗಿದೆ. ಮಂಡಿಯೂರಿ ನಾನು ಕ್ಷಮೆ ಕೇಳುತ್ತೇನೆ. ಬಿಗ್ ಬಾಸ್ ಸಾರಿ ಸಾರಿ. ಹೀಗೆ ರೂಪೇಶ್ ರಾಜಣ್ಣ ಹೇಳಿದ್ಯಾಕೆ?

  • News18 Kannada
  • Last Updated :
  • Bangalore [Bangalore], India
  • Share this:

ಬಿಗ್ ಬಾಸ್ (Bigg Boss House) ಹೌಸ್​ನಲ್ಲಿ ರೂಪೇಶ್ ರಾಜಣ್ಣ ಮತ್ತು ಪ್ರಶಾಂತ್ ಸಂಬರ್ಗಿ ಸದ್ದು ಗದ್ದಲ ಮುಂದುವರೆದಿದೆ. ಸಣ್ಣ-ಸಣ್ಣ ವಿಷಯಕ್ಕೂ ಇವರ ಜಗಳ ನಿಲ್ಲುತ್ತಲೇ ಇಲ್ಲ. ಈ ಮಧ್ಯೆ ಒಂದು ಈರುಳ್ಳಿ ಕಥೆ ಇಲ್ಲವೇ ಒಂದು ಆಮ್ಲೆಟ್ ಕಥೆ ಬಲು ಸದ್ದು ಮಾಡಿದೆ.ಇಡೀ ಮನೆ ಈ ಒಂದು ವಿಷಯಕ್ಕಾಗಿಯೇ (Disturb)ಡಿಸ್ಟರ್ಬ್​ ಆಗಿದೆ. ಹೌದು, ನೇರವಾಗಿ ಈ ವಿಷಯಕ್ಕೆ ಸಂಬಂಧಿಸಿದಂತೆ ರೂಪೇಶ್ ರಾಜಣ್ಣ ಕಾರಣ ಆಗಿದ್ದಾರೆ. ಆರ್ಯವರ್ಧನ್ ಕೂಡ ಇದರಲ್ಲಿ ಭಾಗಿ ಆಗಿದ್ದಾರೆ. ಅರುಣ್ (Arun Sagar) ಸಾಗರ್ ಬಂದು ರೂಪೇಶ್ (Rupesh Rajanna) ರಾಜಣ್ಣಗೆ ಬುದ್ದಿ ಹೇಳಿದ್ದು ಇದೆ. ಆದರೂ ಆಮ್ಲೆಟ್ ಕಥೆ ಮುಗಿಯಲಿಲ್ಲ. ಅದರ ಇನ್ನಷ್ಟು ವಿವರಣೆ ಇಲ್ಲಿದೆ.


ಬಿಗ್ ಬಾಸ್ ಮನೆಯಲ್ಲಿ ಸದ್ದು-ಗದ್ದಲ-ಬೇಸರ


ಬಿಗ್ ಬಾಸ್ ಮನೆ ಆಟ ತೀವ್ರ ಆಗಿದೆ. ಮನೆಯ ಸದಸ್ಯರ ಸಂಖ್ಯೆ ವಾರ ವಾರಕ್ಕೂ ಕಡಿಮೆ ಆಗುತ್ತಿದೆ. ಜೋಡಿ ಹಕ್ಕಿಯಂತೆ ಇದ್ದ ರೂಪೇಶ್ ಮತ್ತು ಸಾನ್ಯಾ ಜೋಡಿ ದೂರ ಆಗಿದೆ.


ಸಾನ್ಯಾ ಮನೆಯಿಂದ ಹೊರಗೆ ಬಂದಿದ್ದಾರೆ. ರೂಪೇಶ್ ಶೆಟ್ಟಿ, ಐ ಮಿಸ್ ಯು ಅಂತಲೇ ಹಣೆಗೆ ಪಟ್ಟಿಕಟ್ಟಿಕೊಂಡು ಮನೆ ತುಂಬ ಓಡಾಡುತ್ತಿದ್ದಾರೆ. ಇದರ ಮಧ್ಯೆ ಇನ್ನೂ ಒಂದು ಸತ್ಯದ ದರ್ಶನವನ್ನೂ ಬಿಗ್ ಬಾಸ್ ಮನೆಯ ಸದಸ್ಯರಿಗೆ ಬಿಗ್ ಬಾಸ್ ಮಾಡಿಸಿದ್ದಾರೆ.


ಯಾರು ಈರುಳ್ಳಿ ಕಟ್ ಮಾಡ್ಬೇಕು-ಯಾರು ಮಾಡಬಾರದು?


ಬಿಗ್ ಬಾಸ್ ಮನೆಯಲ್ಲಿ ಒಂದು ರೂಲ್ ಇದೆ. ಇದರ ಬಗ್ಗೆ ಎಲ್ಲರಿಗೂ ಗೊತ್ತಿದೆ. ಅದನ್ನ ಎಲ್ಲರೂ ಫಾಲೋ ಕೂಡ ಮಾಡಿದ್ದಾರೆ. ರೂಪೇಶ್ ರಾಜಣ್ಣ ಕೂಡ ಅದನ್ನ ಫಾಲೋ ಮಾಡಿದ್ದಾರೆ. ಆದರೂ ಕೂಡ ರೂಪೇಶ್ ರಾಜಣ್ಣ ಎಡವಿದ್ದಾರೆ.


ಬಿಗ್ ಬಾಸ್ ಮನೆಯಲ್ಲಿ ಯಾರು ಜೈಲು ಸೇರ್ತಾರೋ ಅವರೇ ಈರುಳ್ಳಿ ಮತ್ತು ಮೆಣಸಿನಕಾಯಿ ಕತ್ತರಿಸಬೇಕು. ಇದು ಗೊತ್ತಿದ್ದರೂ ಸಹ ಆರ್ಯವರ್ಧನ್ ಈರುಳ್ಳಿ ಮತ್ತು ಮೆಣಸಿನಕಾಯಿ ಕಟ್ ಮಾಡಿ ಆಮ್ಲೆಟ್ ಮಾಡಿದ್ದಾರೆ.


Big Boss house Contestant Rupesh Rajanna Request Big Boss
ನಾನು ಹೊಸಬ ನನಗೆ ಗೊತ್ತಾಗಲಿಲ್ಲ-ರೂಪೇಶ್ ರಾಜಣ್ಣ


ಆಮ್ಲೆಟ್​​-ರೂಪೇಶ್​ ರಾಜಣ್ಣ-ಆರ್ಯವರ್ಧನ್
ರೂಪೇಶ್ ರಾಜಣ್ಣ ಬೇಸರದಲ್ಲಿಯೇ ಇದ್ದರು. ಅದೇನ್ ಆಯಿತೋ ಏನೋ. ರೂಪೇಶ್ ರಾಜಣ್ಣರಿಗೆ ಆಮ್ಲೆಟ್ ತಿನ್ನುವ ಆಸೆ ಆಗಿದೆ. ಅದನ್ನ ಗೌರವಿಸಿದ ಆರ್ಯವರ್ಧನ್ ತಾವೇ ಈರುಳ್ಳಿ ಕತ್ತರಿಸಿದ ಆಮ್ಲೆಟ್ ಮಾಡಿಕೊಟ್ಟಿದ್ದಾರೆ. ಅಷ್ಟೇ ನೋಡಿ


ಈ ವಿಷಯಕ್ಕೆ ಬಿಗ್ ಬಾಸ್ ಶಿಕ್ಷೆ ಕೊಟ್ಟೇ ಬಿಟ್ಟರು. ಪ್ರಶಾಂತ್ ಸಂಬರ್ಗಿ ಕ್ಯಾಪ್ಟನ್ ಆಗಿದ್ದೇ ತಡ, ಈ ಒಂದು ಶಿಕ್ಷೆಯನ್ನ ಓದಿ ಹೇಳಿಯೇ ಬಿಟ್ಟರು. ಆರ್ಯವರ್ಧನ್ ರೂಲ್ ಬ್ರೇಕ್ ಮಾಡಿ ಈರುಳ್ಳಿ-ಮೆಣಸಿನಕಾಯಿ ಕಟ್ ಮಾಡಿದ್ದಾರೆ.


ಇದನ್ನೂ ಓದಿ: BBK Season 09: ಸಿಂಗಲ್ಲಾಗಿ ಇರಬೇಕು ಅನ್ಕೊಂಡಿದ್ದ ನನ್ನ ಸಾನ್ಯಾ ಬದಲಾಯಿಸಿದ್ಲು; ಗಳಗಳನೆ ಅತ್ತ ರೂಪೇಶ್ ಶೆಟ್ಟಿ


ಹಾಗಾಗಿಯೇ ಮನೆಯಲ್ಲಿರೋ ಈರುಳ್ಳಿ-ಮೆಣಸಿನಕಾಯಿ ವಾಪಸ್ ಸ್ಟೋರ್​ ರೂಮ್​ಗೆ ಕೊಡಬೇಕು ಅಂತಲೇ ಹೇಳಿ ಎಲ್ಲವನ್ನೂ ತೆಗೆದುಕೊಂಡು ಹೋಗಿಯೇ ಬಿಟ್ಟರು.
ಇದರಿಂದ ಆರ್ಯವರ್ಧನ್ ಬೇಸರಗೊಂಡರು. ರೂಪೇಶ್ ರಾಜಣ್ಣ ಆಗ ಏನೂ ಹೇಳಲಿಲ್ಲ. ಮನೆಯ ಸದಸ್ಯರೆಲ್ಲ ತಮ್ಮದೇ ರೀತಿ ವಿರೋಧ ಮಾಡಿದ್ಮೇಲೆ ರಿಯಾಕ್ಟ್ ಮಾಡಿದರು.


ನಾನು ಹೊಸಬ ನನಗೆ ಗೊತ್ತಾಗಲಿಲ್ಲ-ರೂಪೇಶ್ ರಾಜಣ್ಣ


ನನಗೆ ಬೇಸರ ಆಗಿತ್ತು. ನಾನೇ ಆಮ್ಲೆಟ್ ಮಾಡಲು ಹೇಳಿದೆ. ಆರ್ಯವರ್ಧನ್ ತಾವೇ ಈರುಳ್ಳಿ ಕಟ್ ಮಾಡಿದರು. ಆಮ್ಲೆಟ್ ಮಾಡಿಕೊಟ್ಟರು. ಆದರೆ ಈರುಳ್ಳಿ-ಮೆಣಸಿನಕಾಯಿಯನ್ನ ಜೈಲು ಸೇರಿದವ್ರು ಕಟ್ ಮಾಡ್ಬೇಕು ಅನ್ನೋದು ತಿಳಿಯಲೇ ಇಲ್ಲ. ನಾನು ಹೊಸಬ ನನಗೆ ಗೊತ್ತಾಗಲೇ ಇಲ್ಲ ಎಂದು ರೂಪೇಶ್ ರಾಜಣ್ಣ ಹೇಳಿದರು.


Big Boss house Contestant Rupesh Rajanna Request Big Boss
ಮಂಡಿಯೂರಿ ಬಿಗ್ ಬಾಸ್​ಗೆ ಸಾರಿ ಕೇಳಿದ ರೂಪೇಶ್ ರಾಜಣ್ಣ


ಇದನ್ನ ಕೇಳಿದ ಕೂಡಲೇ ಅರುಣ್ ಸಾಗರ್ ಗರಂ ಆದರು. ಮನೆಗೆ ಬಂದು ಇಷ್ಟು ವಾರ ಆಗಿದೆ. ಹೊಸಬರು ಅಂದ್ರೆ ಹೇಗ್ರಿ? ನಿಮ್ಮಿಂದ ತಪ್ಪಾಗಿದೆ. ಅದನ್ನ ಒಪ್ಪಿಕೊಳ್ಳಿ ಅಷ್ಟೆ. ಕಳಪೆ ಪಟ್ಟ ಪಡೆದು ಜೈಲು ಸೇರಿದಾಗ ನೀವೂ ಈರುಳ್ಳಿ ಕಟ್ ಮಾಡಿಲ್ವೇ ಅಂತಲೂ ಪ್ರಶ್ನೆ ಹಾಕಿದರು.


ಮಂಡಿಯೂರಿ ಬಿಗ್ ಬಾಸ್​ಗೆ ಸಾರಿ ಕೇಳಿದ ರೂಪೇಶ್ ರಾಜಣ್ಣ


ರೂಪೇಶ್ ರಾಜಣ್ಣ ಮತ್ತು ಆರ್ಯವರ್ಧನ್ ಮಾತಿಗೆ ಮಾತು ಬೆಳೆಯಿತು. ನನ್ನಿಂದ ತಪ್ಪಾಗಿದೆ ಅಂತಲೇ ಆರ್ಯವರ್ಧನ್​ಗೆ ಹೇಳಿದರು. ಆದರೆ ಆರ್ಯವರ್ಧನ್ ಹೀಗೆ ಹೇಳಿದ್ರೆ ಸರಿ ಹೋಗುತ್ತದೆಯೇ? ಬಿಗ್ ಬಾಸ್​​ಗೆ ಹೇಳಿ ಈರುಳ್ಳಿ ಮೆಣಸಿನಕಾಯಿ ತರಿಸಿಕೊಡಿ ಅಂತಲೇ ಆರ್ಯವರ್ಧನ್ ಆವಾಜ್ ಹಾಕಿದರು.


ಇದನ್ನೂ ಓದಿ: Radhika Narayan: ಆ ನಾಯಕ ನಟ ತುಂಬಾ ಕಂಫರ್ಟ್! ರಂಗಿತರಂಗ ನಟಿ ಹೀಗೆ ಹೇಳಿದ್ದು ಯಾರಿಗೆ?


ಆಗಲೇ ಬಿಗ್ ಬಾಸ್ ಮನೆಯ ಕ್ಯಾಮೆರಾಮುಂದೆ ರೂಪೇಶ್ ರಾಜಣ್ಣ ಮಂಡಿಯೂರಿದರು. ನನ್ನಿಂದ ತಪ್ಪಾಗಿದೆ. ದಯವಿಟ್ಟು ಈರುಳ್ಳಿ ಮತ್ತು ಮೆಣಸಿನಕಾಯಿ ವಾಪಸ್ ಕಳಿಸಿ ಅಂತಲೇ ಕೇಳಿಕೊಂಡರು.


ಇಲ್ಲಿಂದ ರೂಪೇಶ್ ರಾಜಣ್ಣ, ತಪ್ಪು ಮಾಡಿದೆ ಅನ್ನೋ ಫೀಲ್​ ನಲ್ಲಿಯೆ ಇದ್ದರು. ಆದರೆ ಪ್ರಶಾಂತ್ ಸಂಬರ್ಗಿ ಇದೇ ರಾಜಣ್ಣನಿಗೆ ಕೂಲ್ ಆಗಿರಿ ಎಲ್ಲರೂ ಕ್ಷಮಿಸಿದ್ದಾರೆ. ಮನಸ್ಸಿನಲ್ಲಿ ಈ ಹೊರೆ ಇಟ್ಟುಕೊಂಡು ಓಡಾಡಬೇಡಿ. ಕೂಲ್ ಆಗಿ ಇರಿ ಎಂದು ಬುದ್ದಿ ಹೇಳಿದರು.

First published: