ಹಿಂದಿಯ ಬಿಗ್ಬಾಸ್ ಸೀಸನ್ 14 ರಿಂದ ನಿರ್ಗಮಿಸಿದಾಗಿನಿಂದಲೂ ಗಾಯಕ ರಾಹುಲ್ ವೈದ್ಯ ಮತ್ತು ದಿಶಾ ಪರ್ಮಾರ್ ತಮ್ಮ ಪ್ರೀತಿಯ ಸಂಬಂಧವನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗುವ ಪ್ರಯತ್ನದಲ್ಲಿದ್ದಾರೆ. ಜನಪ್ರಿಯ ರಿಯಾಲಿಟಿ ಶೋ ಬಿಗ್ಬಾಸ್ ಮನೆಯಲ್ಲಿ ಈ ಜೋಡಿ ಲವ್ ಸ್ಟೋರಿ ಆರಂಭವಾಗಿದ್ದು. ಅಲ್ಲೇ ಪ್ರೇಮ ನಿವೇದನೆ ಮಾಡಿದ್ದ ರಾಹುಲ್ ಅವರ ವಿವಾಹ ಪ್ರಸ್ತಾಪ ದಿಶಾ ಅವರ ಬದುಕಲ್ಲಿ ಹೊಸ ಬದಲಾವಣೆ ತಂದಿದೆ. ಅಂದಿನಿಂದಲೂ ಈ ಜೋಡಿಯ ಬಗ್ಗೆ ಸಾಕಷ್ಟು ವಿಷಯಗಳು ಹರಿದಾಡುತ್ತಿದ್ದವು. ಆದರೆ ಈಗ ಆ ಎಲ್ಲ ಅಂತೆ ಕಂತೆಗಳಿಗೆ ತೆರೆ ಬಿದಿದ್ದೆ. ಈ ಜೋಡಿಯ ವಿವಾಹದ ಬಗ್ಗೆ ಅಧಿಕೃತವಾಗಿ ಮಾಹಿತಿ ಹೊರಬಿದ್ದಿದೆ. ಇನ್ನೇನು ಇವರು ನವದಾಂಪತ್ಯಕ್ಕೆ ಕಾಲಿಡುವ ಕಾತರದಲ್ಲಿದ್ದಾರೆ.
ಹಿಂದಿ ಬಿಗ್ಬಾಸ್ 14 ನೇ ಆವೃತ್ತಿಯಲ್ಲಿ ತಮ್ಮ ಪ್ರೀತಿಯ ಬಗ್ಗೆ ಎಲ್ಲರ ಮುಂದೆ ಹೇಳಿಕೊಂಡಿದ್ದ ರಾಹುಲ್ ವೈದ್ಯ ಮತ್ತು ದಿಶಾ ಪರ್ಮಾರ್ ಮೇಲೆಯೇ ಎಲ್ಲರ ಚಿತ್ತವಿದೆ. ತೀರಾ ಇತ್ತೀಚಿನ ಬೆಳವಣಿಗೆಯ ಪ್ರಕಾರ ಈ ಜೋಡಿ ಮುಂದಿನ ಮೂರು ಅಥವಾ ನಾಲ್ಕು ತಿಂಗಳಲ್ಲಿ ಹಸೆಮಣೆ ಏರಲು ಸಜ್ಜಾಗಿದ್ದಾರಂತೆ.
View this post on Instagram
ಇದನ್ನೂ ಓದಿ: ಸ್ಯಾಂಡಲ್ವುಡ್ನ ಹಿರಿಯ ನಟ-ರಂಗಭೂಮಿ ಕಲಾವಿದ ರಾಜಾರಾಂ ನಿಧನ
ಅಲ್ಲದೇ ಈ ಜೋಡಿಯೂ ಸಾಕಷ್ಟು ತಾಳ್ಮೆಯನ್ನು ಹೊಂದಿದ್ದು, ಯಾವುದೇ ಗಡಿಬಿಡಿ ಇಲ್ಲದೆ ಮದುವೆಯಾಗಲು ಬಯಸುತ್ತಾರಂತೆ. ಈಗಾಗಲೇ ಸಾಕಷ್ಟು ದೊಡ್ಡ ದೊಡ್ಡ ಮದುವೆಗಳಲ್ಲಿ ಪ್ರದರ್ಶನ ನೀಡಿರುವುದರಿಂದ ವೈಭವದ ಮದುವೆಗಿಂತಲೂ ಸರಳ ಮದುವೆಗೆ ಆದ್ಯತೆ ನೀಡುವುದಾಗಿಯೂ ತಿಳಿಸಿದ್ದಾರೆ. ಅನ್ಯೋನ್ಯತೆ ಬಹಳ ಮುಖ್ಯ ಎಂದಿರುವ ಮಾಜಿ ಇಂಡಿಯನ್ ಐಡಲ್ ಸ್ಪರ್ಧಿ ರಾಹುಲ್, ಆ ನಂತರ ಎಲ್ಲರಿಗೂ ಒಂದು ಕಾರ್ಯಕ್ರಮ ಆಯೋಜಿಸುವುದಾಗಿ ತಿಳಿಸಿದ್ದಾರೆ.
View this post on Instagram
ಇನ್ನೂ ಈ ಪ್ರೋಮೋ ನೋಡುವಾಗ ದಿಶಾ ಕಣ್ಣಲ್ಲಿ ನೀರು ಜಿನುಗಿತ್ತು. ಆಕೆ ಮೂಕ ವಿಸ್ಮಿತರಾಗಿದ್ದರು. ಅಲ್ಲದೇ ದಿಶಾಗೆ ಏನು ಬೇಕು? ಏನು ಬೇಡ! ಎನ್ನುವುದರ ಅರಿವು ಚೆನ್ನಾಗಿತ್ತು. ಆದ್ದರಿಂದ ರಾಹುಲ್ ಅವರು ಮದುವೆ ವಿಷಯ ಪ್ರಸ್ತಾಪಿಸಿದಾಗ ಆ ಬಗ್ಗೆ ಯಾವುದೇ ಸಂದೇಹಗಳು ಆಕೆಗೆ ಇರಲಿಲ್ಲ. ಒಂದು ವಾರದ ಬಳಿಕ ರಾಹುಲ್ ಬಿಗ್ಬಾಸ್ನಿಂದ ಹೊರ ಬಂದ ಮೇಲೆ ಈ ಜೋಡಿ ಮದುವೆಯ ಬಗ್ಗೆ ಆಲೋಚನೆ ಮಾಡಲು ಸಾಧ್ಯವಾಯಿತು ಎಂದು ತಿಳಿಸಿದ್ದಾರೆ.
ಈ ಹಿಂದೆ ರಾಹುಲ್ ವೈದ್ಯ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದಕ್ಕೆ ಕಾರಣ ಬಾಲಿವುಡ್ ಬಾದಷಾ ಶಾರುಖ್ ಖಾನ್ ಪುತ್ರ ಆರ್ಯನ್ ನಮ್ರತೆ ಮತ್ತು ತಾಳ್ಮೆಯನ್ನು ಬಿಗ್ ಬಾಸ್ 14 ರನ್ನರ್ ಅಪ್ ರಾಹುಲ್ ವೈದ್ಯ ಹೊಗಳಿದ್ದರು.
ಆರ್ಯನ್ ನನ್ನು ಕ್ಲಬ್ವೊಂದರಲ್ಲಿ ಭೇಟಿಯಾಗಿದ್ದನ್ನು ರಾಹುಲ್ ನೆನಪಿಸಿಕೊಂಡಿದ್ದರು. ಆರ್ಯನ್ ತಮ್ಮ ಗೆಳೆಯರೊಬ್ಬರ ಜನ್ಮದಿನದಂದು ಆತನನ್ನು ಭೇಟಿಯಾಗಲು ಅಲ್ಲಿಗೆ ಬಂದಿದ್ದರು. ಆದರೆ, ಸೆಕ್ಯುರಿಟಿ ಗಾರ್ಡ್ಗಳು ಆರ್ಯನ್ ಅವರನ್ನು ಒಳಬಿಡಲು ನಿರಾಕರಿಸಿದ್ದರು. ಇದಕ್ಕೆ ಕಾರಣ ಗೊತ್ತಿಲ್ಲ. ಆದರೆ ಅಲ್ಲಿ ತಾಳ್ಮೆಯಿಂದ ಕಾಯುತ್ತಿದ್ದ ಆರ್ಯನ್ ತಾನು ಶಾರುಖ್ ಅವರ ಮಗನೊಂದು ಎಲ್ಲಿಯೂ ಹೇಳಿಕೊಳ್ಳಲಿಲ್ಲ ಎಂದು ರಾಹುಲ್ ವೈದ್ಯ ನೆನಪಿಸಿಕೊಂಡಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ