• Home
  • »
  • News
  • »
  • entertainment
  • »
  • Chandrashekhar Death-Pratham: ರೇಣುಕಾಚಾರ್ಯ ಸಹೋದರನ ಪುತ್ರ ಚಂದ್ರು ಡ್ಯಾನ್ಸ್ ವಿಡಿಯೋ ಹಂಚಿಕೊಂಡ ಪ್ರಥಮ್!

Chandrashekhar Death-Pratham: ರೇಣುಕಾಚಾರ್ಯ ಸಹೋದರನ ಪುತ್ರ ಚಂದ್ರು ಡ್ಯಾನ್ಸ್ ವಿಡಿಯೋ ಹಂಚಿಕೊಂಡ ಪ್ರಥಮ್!

ಶಾಸಕ ರೇಣುಕಾಚಾರ್ಯ ಅವರ ಸಹೋದರನ ಪುತ್ರ ಚಂದ್ರಶೇಖರ್ ಮೃತಪಟ್ಟಿದ್ದು ಅವರ ಹಳೆ ವಿಡಿಯೋವನ್ನು ಬಿಗ್​ ಬಾಸ್ ಖ್ಯಾತಿಯ ಪ್ರಥಮ್ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

ಶಾಸಕ ರೇಣುಕಾಚಾರ್ಯ ಅವರ ಸಹೋದರನ ಪುತ್ರ ಚಂದ್ರಶೇಖರ್ ಮೃತಪಟ್ಟಿದ್ದು ಅವರ ಹಳೆ ವಿಡಿಯೋವನ್ನು ಬಿಗ್​ ಬಾಸ್ ಖ್ಯಾತಿಯ ಪ್ರಥಮ್ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

ಶಾಸಕ ರೇಣುಕಾಚಾರ್ಯ ಅವರ ಸಹೋದರನ ಪುತ್ರ ಚಂದ್ರಶೇಖರ್ ಮೃತಪಟ್ಟಿದ್ದು ಅವರ ಹಳೆ ವಿಡಿಯೋವನ್ನು ಬಿಗ್​ ಬಾಸ್ ಖ್ಯಾತಿಯ ಪ್ರಥಮ್ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

  • News18 Kannada
  • Last Updated :
  • Bangalore, India
  • Share this:

ರಾಜ್ಯದಲ್ಲಿ ಎಂ.ಪಿ ರೇಣುಕಾಚಾರ್ಯ (MP Renukacharya) ಅವರ ಸಹೋದರನ ಪುತ್ರ ಚಂದ್ರಶೇಖರ್ (Chandrashekhar) ಸಾವು ಭಾರೀ ಚರ್ಚೆಯಾಗುತ್ತಿದೆ. ಭಾನುವಾರ ಕಾಣೆಯಾಗಿದ್ದ ಚಂದ್ರಶೇಖರ್ ಕಾರು (Car) ಕೂಡಾ ಕಾಣೆಯಾಗಿತ್ತು. ಕಾರು ಸಮೇತ ಕಾಣದಾಗಿದ್ದ ಚಂದ್ರಶೇಖರ್ ಅವರನ್ನು ಹುಡುಕುವ ಕೆಲಸ ಕೂಡಾ ವೇಗವಾಗಿ ನಡೆದಿದ್ದು. ದುರದೃಷ್ಟವಶಾತ್ ಚಂದ್ರಶೇಖರ್ ಅವರ ಮೃತದೇಹ ಅವರ ಕಾರಿನ ಒಳಗೆ ನಾಲೆಯೊಳಗೆ ಬಿದ್ದಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸಹೋದರನ ಪುತ್ರ ಕಾಣೆಯಾದಾಗಿನಿಂದ ಶೋಕದಲ್ಲಿದ್ದ ರೇಣುಕಾಚಾರ್ಯ ಅವರು ಸುದ್ದಿ ತಿಳಿದು ಕಣ್ಣೀರಿಟ್ಟಿದ್ದರು. ಇದೀಗ ಚಂದ್ರಶೇಖರ್ ಅವರ ಹಳೆಯ ವಿಡಿಯೋ  (Video) ಒಂದನ್ನು ಬಿಗ್ ಬಾಸ್ ಖ್ಯಾತಿಯ ಪ್ರಥಮ್ (Pratham) ಶೇರ್ ಮಾಡಿದ್ದಾರೆ. ಫೇಸ್​​ಬುಕ್​​ನಲ್ಲಿ ಚಂದ್ರ ಶೇಖರ್ ಡ್ಯಾನ್ಸ್ (Dance) ಮಾಡುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ.


ಜಾನಪದ ನೃತ್ಯದ ವಿಡಿಯೋ


ವೈಟ್ ಶರ್ಟ್ ಧರಿಸಿದ ಚಂದ್ರಶೇಖರ್ ರಸ್ತೆಯಲ್ಲಿಯೇ ಜಾನಪತ ನೃತ್ಯ ಕಲಾವಿದರ ಮಧ್ಯೆ ನಿಂತು ಡ್ಯಾನ್ಸ್ ಮಾಡುವುದನ್ನು ವಿಡಿಯೋದಲ್ಲಿ ಕಾಣಬಹುದು. ಫುಲ್ ಜೋಶ್​​ನಲ್ಲಿ ಹೆಜ್ಜೆ ಹಾಕಿದ ಅವರ ವಿಡಿಯೋವನ್ನು ಪ್ರಥಮ್ ಫೇಸ್​​ಬುಕ್​​ನಲ್ಲಿ ಪೋಸ್ಟ್ ಮಾಡಿದ್ದಾರೆ.


ಪೋಸ್ಟ್​​ನಲ್ಲಿ ಬರೆದಿದ್ದೇನು?


ತೀವ್ರ ದುಃಖವಾಗಿದೆ! ಈ ಚೈತನ್ಯ, ಉಲ್ಲಾಸ ಮತ್ತೆ ನೋಡೋಕಾಗಲ್ವಲ್ಲ ಅಂತ!
ಇನ್ನು ರೇಣುಕಾಚಾರ್ಯ ಸರ್ ಕುಟುಂಬದ ಪರಿಸ್ಥಿತಿ ಹೇಗಿರಬೇಡ? ಈಶ್ವರ ನಿಮ್ಮ ಆತ್ಮಕ್ಕೆ ಮುಕ್ತಿ ನೀಡಲಿ ಚಂದ್ರು! ಎಂದು ಪ್ರಥಮ್ ತಾವು ಪೋಸ್ಟ್ ಮಾಡಿದ ವಿಡಿಯೋಗೆ ಕ್ಯಾಪ್ಶನ್ ಕೊಟ್ಟಿದ್ದಾರೆ.
ವಿಡಿಯೋ ಈಗ ವೈರಲ್


ಚಂದ್ರು ಸಾವಿನ ಸುದ್ದಿ ಎಲ್ಲೆಡೆ ಚರ್ಚೆಯಲ್ಲಿರುವ ಸಂದರ್ಭ ಈ ವಿಡಿಯೋ ನೋಡಿದ ಜನರು ಭಾವುಕರಾಗಿದ್ದಾರೆ. ವಿಡಿಯೋ ಸುಮಾರು 37 ಸಾವಿರಕ್ಕೂ ಹೆಚ್ಚು ವ್ಯೂಸ್ ಗಳಿಸಿದ್ದು ಎರಡೂವರೆ ಸಾವಿರಕ್ಕೂ ಹೆಚ್ಚು ಮಂದಿ ರಿಯಾಕ್ಟ್ ಮಾಡಿದ್ದಾರೆ.


ಇದನ್ನೂ ಓದಿ: Chandrashekhar Death: ಮಣ್ಣಲ್ಲಿ ಮಣ್ಣಾದ ಚಂದ್ರಶೇಖರ್​; ತನಿಖೆಯಿಂದ ಹೊರ ಬರಬೇಕಿದೆ ಸಾವಿನ ಸತ್ಯ!


ಪ್ರಥಮ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದು ಬಹುತೇಕ ಎಲ್ಲ ವಿಚಾರಗಳ ಬಗ್ಗೆ ರಿಯಾಕ್ಟ್ ಮಾಡುತ್ತಾರೆ. ಹೆಚ್ಚು ಚರ್ಚೆಗೊಳಗಾದ ವಿಚಾರಗಳ ಬಗ್ಗೆ ಪ್ರಥಮ್ ವಿಡಿಯೋ ಅಥವಾ ಪೋಸ್ಟ್ ಶೇರ್ ಮಾಡುತ್ತಾರೆ. ಬಹಳಷ್ಟು ಸಲ ಥ್ರೋಬ್ಯಾಕ್ ಫೊಟೊ, ಘಟನೆಗಳನ್ನು ತಮ್ಮ ಫಾಲೋವರ್ಸ್ ಜೊತೆ ಶೇರ್ ಮಾಡಿಕೊಳ್ಳುತ್ತಾರೆ. ಈಗ ಚಂದ್ರಶೇಖರ್ ಸಾವಿನ ನಂತರ ಪ್ರಥಮ್ ಇಂಥದ್ದೊಂದು ಪೋಸ್ಟ್ ಹಾಕಿದ್ದಾರೆ.


bjp mla mp renukacharya brother son chandrashekhar missing mrq
ಶಾಸಕ ರೇಣುಕಾಚಾರ್ಯ ಕಣ್ಣೀರು


ಕೊಲೆಯೋ ಎಂಬ ಅನುಮಾನ


ರೇಣುಕಾಚಾರ್ಯ ತಮ್ಮನ ಮಗ ಚಂದ್ರಶೇಖರ್​ ಅವರನ್ನು ಕೊಲೆ ಮಾಡಲಾಗಿದೆ ಎಂಬ ಅನುಮಾನ ಮೂಡಿದೆ. ಚಂದ್ರಶೇಖರ್​​ ಶವ ಕೈಕಾಲುಗಳನ್ನು ಹಗ್ಗದಲ್ಲಿ ಕಟ್ಟಿ ಕಾರಿನಲ್ಲಿ ಮಲಗಿಸಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆದ್ದರಿಂದ ಪೊಲೀಸರು ಕೊಲೆ ಮಾಡಿದ್ದಾರೆ ಎನ್ನಲಾದ ಆರೋಪಿಗಳ ಬಗ್ಗೆ ಮಾಹಿತಿ ಕಲೆ ಹಾಕುತ್ತಿರುವುದಾಗಿ ತಿಳಿದುಬಂದಿದೆ. ಚಂದ್ರಶೇಖರ್ ಗೌರಿ ಗದ್ದೆ ಆಶ್ರಮದಿಂದ ಎಲ್ಲೆಲ್ಲಿಗೆ ಭೇಟಿ ಕೊಟ್ಟಿದ್ದರು ಎನ್ನುವ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ.


ಇದನ್ನೂ ಓದಿ: Chandrashekar Death: ಆಶ್ರಮಕ್ಕೆ ಬಂದ ಚಂದ್ರಶೇಖರ್​ಗೆ ವಿನಯ್​ ಗುರೂಜಿ ಹೇಳಿದ್ದೇನು? ಸಾವಿನ ಬಗ್ಗೆ ಸುಳಿವು ಕೊಟ್ಟಿದ್ರಾ ಅವಧೂತರು?


ಅಕ್ಟೋಬರ್ 30ರಿಂದ ನಾಪತ್ತೆಯಾಗದ್ದ ಹೊನ್ನಾಳಿ ಶಾಸಕ ಎಂ. ಪಿ. ರೇಣುಕಾಚಾರ್ಯ ತಮ್ಮನ ಮಗ ಚಂದ್ರಶೇಖರ್ ಶವವಾಗಿ ಪತ್ತೆಯಾಗಿದ್ದರು. ಹೊನ್ನಾಳಿ ಮತ್ತು ನ್ಯಾಮತಿ ಮಧ್ಯದಲ್ಲಿರುವ ಕಡದ ಕಟ್ಟೆ ಬಳಿಯ ಭದ್ರಾ ನಾಲೆಯಲ್ಲಿ ಕಾರ್ ಸಮೇತ 24 ವರ್ಷ ವಯಸ್ಸಿನ ಚಂದ್ರಶೇಖರ್ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮಗ ಮರಳಿ ಬರುತ್ತಾನೆ ಎಂಬ ನಿರೀಕ್ಷೆಯಲ್ಲಿದ್ದ ಕುಟುಂಬಕ್ಕೆ ಸಾವಿನ ಸುದ್ದಿ ಆಘಾತ ನೀಡಿದೆ.

Published by:Divya D
First published: