Niveditha Gowda: ಗಂಡನ ಜೊತೆ ಸುಕ್ಕ ಪಾರ್ಟಿ ಮಾಡಿದ ನಿವೇದಿತಾ ಗೌಡ, ಹೇಗಿತ್ತು ಗೊತ್ತಾ?

Niveditha Gowda: ಬಿಗ್​ಬಾಸ್ ಖ್ಯಾತಿಯ ನಿವೇದಿತಾ ಗೌಡ ಗಂಡನ ಜೊತೆ ಸುಕ್ಕ ಪಾರ್ಟಿ ಮಾಡಿದ್ದಾರೆ. ಏನೆಂದು ತಿಳಿಯೋ ಕುತೂಹಲ ಇದೆಯಾ? ಈ ಸುದ್ದಿ ನೋಡಿ.

ನಿವೇದಿತಾ ಗೌಡ

ನಿವೇದಿತಾ ಗೌಡ

  • Share this:
cಕಿರುತೆರೆಯಲ್ಲಿ ಮಿಂಚುತ್ತಿರುವ ನಿವೇದಿತಾ ಗೌಡ (Niveditha Gowda) ಈಗ ಸೋಷಿಯಲ್ ಮೀಡಿಯಾದಲ್ಲಿಯೂ (Social Media) ಮಿಂಚುತ್ತಿದ್ದಾರೆ. ಬಿಗ್​ಬಾಸ್  (Bigg boss) ಮನೆಗೆ ಬರುವ ಮೊದಲೇ ಸೋಷಿಯಲ್ ಮಿಡಿಯಾದಲ್ಲಿ  ಸಖತ್ ಫೇಮಸ್ ಆಗಿದ್ದ ನಿವೇದಿತಾ ಗೌಡಗೆ ಈಗ ಇನ್ನಷ್ಟು ಅಭಿಮಾನಿಗಳಿದ್ದಾರೆ. ಇನ್​ಸ್ಟಾಗ್ರಾಮ್​ನಲ್ಲಿ ಆ್ಯಕ್ಟಿವ್ ಆಗಿರುವ ನಿವೇದಿತಾ ಗೌಡ ಆಗಾಗ ತಮ್ಮ ಫೋಟೋ, ವಿಡಿಯೋಗಳನ್ನು ಅಭಿಮಾನಿಗಳೊಂದಿಗೆ ಶೇರ್ ಮಾಡುತ್ತಲೇ ಇರುತ್ತಾರೆ. ಇದೀಗ ನಟಿ ಸುಕ್ಕ ಪಾರ್ಟಿ ಮಾಡಿರುವ ವಿಡಿಯೋ ವೈರಲ್ (Viral) ಆಗಿದೆ. ಬೆಟ್ಟದ ಮೇಲೆ ಸ್ನೇಹಿತರ ಜೊತೆ ಗಂಡ ಚಂದನ್ ಶೆಟ್ಟಿ (Chandan Shetty) ಅವರನ್ನೂ ಸೇರಿಸಿಕೊಂಡು ನಿವಿ ಪಾರ್ಟಿ (Party) ಮಾಡಿದ್ದಾರೆ.

ನಿವೇದಿತಾ ಪಾರ್ಟಿ ಬಗ್ಗೆ ನಿಮಗೆ ಕುತೂಹಲ ಇದೆಯಾ? ಬೆಟ್ಟದ ಮೇಲೆ ಮಾಡಿರೋ ಸುಕ್ಕ ಪಾರ್ಟಿ ಹೇಗಿರುತ್ತೆ ಗೊತ್ತಾ? ಇದುವೇ ನಿವಿ ಕುರಿತು ಲೇಟೆಸ್ಟ್ ಅಪ್ಡೇಟ್.

ಕನ್ನಡ ಬಿಗ್​ಬಾಸ್ ಮೂಲಕ ಕನ್ನಡ ಜನರಿಗೆ ಮಾತ್ರವಲ್ಲದೆ ಬೇರೆ ರಾಜ್ಯಗಳಲ್ಲಿಯೂ ಅಭಿಮಾನಿಗಳನ್ನು ಗಳಿಸಿದ ನಿವೇದಿತಾ ಗೌಡ ಸಹ ಸ್ಪರ್ಧಿ ಚಂದನ್ ಶೆಟ್ಟಿ ಅವರನ್ನೇ ಪ್ರೀತಿಸಿ ಮದುವೆಯಾಗಿದ್ದು ಎಲ್ಲರಿಗೂ ಗೊತ್ತು. ಈಗ ಈ ಜೋಡಿ ತಮ್ಮ ಮೆರಿಟಲ್ ಲೈಫ್ ಎಂಜಾಯ್ ಮಾಡುತ್ತಿದ್ದಾರೆ. ಆಗಾಗ ಫನ್ನಿ, ಜಾಲಿಯಾಗಿರೋ ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ.

ಸುಕ್ಕ ಪಾರ್ಟಿ ಸಾಂಗ್​​ಗೆ ಸಖತ್ ಸ್ಟೆಪ್

ಚಂದನ್ ಶೆಟ್ಟಿ ಅವರ ಫೇಮಸ್ ಸುಕ್ಕ ಪಾರ್ಟಿ ಸಾಂಗ್ ಹಾಕಿ ರೀಲ್ಸ್ ಮಾಡಿದ್ದಾರೆ ನಿವೇದಿತಾ ಗೌಡ. ತನ್ನ ಸ್ನೇಹಿತರ ಬಳಗದ ಜೊತೆ ಬೆಟ್ಟದ ಮೇಲೆ ನಿವೇದಿತಾ ಗೌಡ ಗಂಡನನ್ನೂ ಸೇರಿಸಿಕೊಂಡು ಸುಕ್ಕ ಪಾರ್ಟಿ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಈ ವಿಡಿಯೋವನ್ನು ಅವರ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡು ಅವರ ಅಭಿಮಾನಿಗಳೊಂದಿಗೆ ಶೇರ್ ಮಾಡಿದ್ದಾರೆ.






ಸುಂದರವಾದ ಪ್ರಕೃತಿ ಹಿನ್ನೆಲೆ ಇರುವ ಸ್ಥಳದಲ್ಲಿ ಬೆಟ್ಟದ ಮೇಲೆ ಹೋಗಿ ಹೆಜ್ಜೆ ಹಾಕಿದ ನಿವೇದಿತಾ ಗೌಡ ಫುಲ್ ಜಾಲಿ ಮೂಡ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ವಿಡಿಯೋಗೆ ನೆಟ್ಟಿಗರಿಂದಲೂ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ.

ಇದನ್ನೂ ಓದಿ: Niveditha Gowda: ಮತ್ತೆ ಟ್ರೋಲ್ ಆದ ನಿವೇದಿತಾ ಗೌಡ, ಯಾಕಮ್ಮ ಸರಿ ಹೇಳೋಕೆ ಏನು ಅಂತಿದ್ದಾರೆ ಫ್ಯಾನ್ಸ್​

97 ಸಾವಿರ ಲೈಕ್ಸ್

ವಿಡಿಯೋ ಶೇರ್ ಮಾಡಿದ ಬರೀ ಮೂರು ದಿನದಲ್ಲಿ ನಿವೇದಿತಾ ಗೌಡ ಅವರ ವಿಡಿಯೋಗೆ 97 ಸಾವಿರ ಜನರು ಲೈಕ್ಸ್ ಮಾಡಿದ್ದಾರೆ. 127ಕ್ಕೂ ಹೆಚ್ಚು ಮಂದಿ ಕಮೆಂಟ್ ಮಾಡಿ ಸೂಪರ್ ಎಂದಿದ್ದಾರೆ. ನಿಮ್ಮ ಗ್ಯಾಂಗ್​ಗೆ ನಮ್ಮನ್ನೂ ಸೇರಿಸ್ಕೊಳ್ರಾಪ್ಪಾ ಎಂದಿದ್ದಾರೆ ಅಭಿಮಾನಿಗಳು.

ಇದನ್ನೂ ಓದಿ: Niveditha Gowda: ಮಿಸೆಸ್​ ಇಂಡಿಯಾ ಪ್ರಶಸ್ತಿ ಮುಡಿಗೇರಿಸಿಕೊಂಡ ನಿವೇದಿತಾ ಗೌಡ, ಜನರ ಫೇವರೇಟ್​ ಅಂತೆ ಗೊಂಬೆ

ರೀಲ್ಸ್ ಮಾಡೋದ್ರಲ್ಲಿ ಬ್ಯುಸಿ ನಿವೇದಿತಾ

ನಿವೇದಿತಾ ಗೌಡ ಇನ್​ಸ್ಟಾಗ್ರಾಮ್​ನಲ್ಲಿ ಬರುವ ಯಾವುದೇ ಟ್ರೆಂಡ್​ಗಳನ್ನು ಕೂಡಾ ಮಿಸ್ ಮಾಡುವುದಿಲ್ಲ. ಪ್ರತಿಬಾರಿ ನಿವೇದಿತಾ ಟ್ರೆಂಡಿಂಗ್ ರೀಲ್ಸ್​ಗೆ ಹೆಜ್ಜೆ ಹಾಕುತ್ತಿದ್ದು ಯಾವುದೇ ಭಾಷೆಯ ಹಾಡು, ಆಡಿಯೋ ಕ್ಲಿಪ್ ವೈರಲ್ ಆದಾಗಲೂ ಅವರು ತಪ್ಪದೆ ರೀಲ್ಸ್ ಮಾಡಿ ಶೇರ್ ಮಾಡುತ್ತಾರೆ.

1.5 ಮಿಲಿಯನ್ ಫಾಲೋವರ್ಸ್

ಸದ್ಯ ನಿವೇದಿತಾ ಗೌಡ ಅವರು ಸದ್ಯ ಇನ್ಸ್ಟಾಗ್ರಾಮ್​ನಲ್ಲಿ ಸುಮಾರು 1.5 ಮಿಲಿಯನ್ ಫಾಲೋವರ್ಸ್​ಗಳನ್ನು ಹೊಂದಿದ್ದಾರೆ. ನಿವೇದಿತಾ ಅವರು ಈವರೆಗೂ 1428 ಪೋಸ್ಟ್​​ಗಳನ್ನು ಮಾಡಿದ್ದಾರೆ. ಬಹುತೇಕ ಎಲ್ಲ ದಿನವೂ ನಿವೇದಿತಾ ವಿಡಿಯೋಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುವುದರಿಂದ ಅವರ ಫಾಲೋವರ್ಸ್ ಸಂಖ್ಯೆ ಹೆಚ್ಚುತ್ತಲೇ ಇದೆ.



ನೆಟ್ಟಿಗರ ಪ್ರೀತಿಯ ನಿವಿ

ನಿವೇದಿತಾ ಗೌಡ ಈಗ ಕನ್ನಡಿಗರು ಮಾತ್ರವಲ್ಲದೆ ಎಲ್ಲೆಡೆಯಿಂದ ವಿಶೇಷ ಅಭಿಮಾನಿಗಳನ್ನು ಹೊಂದಿದ್ದಾರೆ. ದಿನನಿತ್ಯ ಚಂದದ ರೀಲ್ಸ್ ವಿಡಿಯೋಗಳನ್ನು ಮಾಡುವ ನಟಿ ಅವುಗಳನ್ನು ಅಭಿಮಾನಿಗಳೊಂದಿಗೆ ಶೇರ್ ಮಾಡುತ್ತಾರೆ. ಅಭಿಮಾನಿಗಳು ಸಹ ನಿವಿ ಅವರ ಸೂಪರ್ ಕ್ಯೂಟ್ ವಿಡಿಯೋಗಳನ್ನು ಎಂಜಾಯ್ ಮಾಡುತ್ತಾರೆ.
Published by:Divya D
First published: